Mangalore rain, School holiday, August 1st: ಬಾ ಮಳೆಯೇ ಈ ರೀತಿ ಬಾರದಿರು, ಭಯ ಮೂಡಿಸುವಂತೆ...! ನಿರಂತರ ಮಳೆಗೆ ಬೆಟ್ಟ ಸಾಲುಗಳ ಮಧ್ಯದ ಜನರಲ್ಲಿ ಭಯ, ಎರಡನೇ ದಿನವೂ ರಜೆ ಸಾರಿದ ಜಿಲ್ಲಾಧಿಕಾರಿ

31-07-24 10:39 pm       Mangalore Correspondent   ಕರಾವಳಿ

ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಆಗಸ್ಟ್ 1ರಂದು ಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಮಂಗಳೂರು, ಜುಲೈ 31: ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಆಗಸ್ಟ್ 1ರಂದು ಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನಿರಂತರ ಹನಿ ಕಟ್ಟದೆ ಸುರಿಯುತ್ತಿರುವ ಮಳೆಯಿಂದಾಗಿ ಬೆಟ್ಟ ಸಾಲುಗಳ ಮಧ್ಯದ ಜನರಲ್ಲಿ ವಯನಾಡ್ ಕುಸಿತದ ಬಳಿಕ ಭಯವೇ ಶುರುವಾಗಿಬಿಟ್ಟಿದೆ. ಜಿಲ್ಲಾಡಳಿತವೂ ಶಾಲೆ, ಕಾಲೇಜಿಗೆ ಹೋಗುವ ಮಕ್ಕಳು ಅಪಾಯಕ್ಕೆ ಸಿಲುಕದಿರಲಿ ಎಂದು ಎರಡನೇ ದಿನವೂ ರಜೆ ಸಾರಿಬಿಟ್ಟಿದೆ.

ಉಡುಪಿ ಜಿಲ್ಲೆಯಲ್ಲಿ ಬುಧವಾರ ಕಾಪು, ಉಡುಪಿ, ಕಾರ್ಕಳ, ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಮಾತ್ರ ರಜೆ ನೀಡಲಾಗಿತ್ತು. ಆಗಸ್ಟ್ 1ರಂದು ಇಡೀ ಜಿಲ್ಲೆಯಾದ್ಯಂತ ರಜೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಜುಲೈ 31ರಂದು ರೆಡ್ ಅಲರ್ಟ್ ಇದ್ದುದರಿಂದ ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

ಮಂಗಳವಾರದಿಂದ ನಿರಂತರ ಎನ್ನುವಂತೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ನೇತ್ರಾವತಿ, ಕುಮಾರಧಾರಾ, ಫಲ್ಗುಣಿ, ಸ್ವರ್ಣಾ ನದಿಗಳು ಉಕ್ಕಿ ಹರಿಯತೊಡಗಿವೆ. ಇದಲ್ಲದೆ, ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಮಳೆ ಹೆಚ್ಚಿರುವುದರಿಂದ ಪಶ್ಚಿಮದತ್ತ ಹರಿಯುವ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಇದರಿಂದಾಗಿ ಮುಂಜಾಗ್ರತಾ ಕ್ರಮವಾಗಿ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ರಜೆ ಮುಂದುವರಿಸಲಾಗಿದೆ.

ಬುಧವಾರ ಬೆಳಗ್ಗೆ 11 ಗಂಟೆ ವರೆಗೆ ಮಳೆ ಇರಲಿಲ್ಲ. ಮಳೆ ಸ್ವಲ್ಪ ಬಿಡುವು ನೀಡಿದೆ, ಜಿಲ್ಲಾಧಿಕಾರಿ ರಜೆ ಕೊಟ್ಟದ್ದು ವೇಸ್ಟ್ ಆಯಿತು ಅನ್ನುವ ಮಾತುಗಳು ಜನರ ಬಾಯಲ್ಲಿ ಕೇಳಿಬಂದಿದ್ದವು. ಆದರೆ ಆನಂತರ ಶುರುವಾದ ಮಳೆ ಮತ್ತೆ ನಿಂತಿಲ್ಲ. ಮಧ್ಯಾಹ್ನ ನಂತರವಂತೂ ನಿರಂತರ ಮಳೆಯಾಗಿದೆ. ಮಳೆ, ಶೀತ ಗಾಳಿಗೆ ಜನರಲ್ಲಿ ಥಂಟಿ ಹಿಡಿದಂತೆ ಚಳಿ ಆವರಿಸಿಕೊಂಡಿದೆ. ಹಠ ಕಟ್ಟಿದ ರೀತಿ ಮಳೆ ಸುರಿಯುತ್ತಿದ್ದು, ಬೆಟ್ಟ ಸಾಲುಗಳ ಮಧ್ಯದ ಜನ ವಯನಾಡ್ ರೀತಿ ಇಲ್ಲಿ ಆಗದಿರಲಿ ಎನ್ನುವ ಬೇಡಿಕೊಳ್ಳುತ್ತಿದ್ದಾರೆ.

Heavy rain in Mangalore, Holiday for schools in Mangalore  and Udupi districts on August 1st. The Dakshina Kannada and Udupi district administrations on Wednesday declared a holiday for educational institutions up to pre-university colleges on Thursday, in view of the anticipated very heavy rains as the IMD has issued a red alert for these areas.