Mangalore, CM Siddaramaiah, Dinesh gundu rao: ಸರ್ಕಾರ ಬೀಳಿಸಲು ತನಿಖಾ ಸಂಸ್ಥೆಗಳನ್ನ ದುರುಪಯೋಗ ಮಾಡ್ತಿದಾರೆ, ಸಿದ್ದರಾಮಯ್ಯರನ್ನು ಹೇಗಾದ್ರು ಒಳಗೆ ಹಾಕಬೇಕು ಅನ್ಕೊಂಡಿದ್ದಾರೆ ; ದಿನೇಶ್ ಗುಂಡೂರಾವ್ ವಾಗ್ದಾಳಿ

02-08-24 05:56 pm       Mangalore Correspondent   ಕರಾವಳಿ

ಕೇಂದ್ರ ಸರ್ಕಾರ ಐಟಿ, ಇಡಿ ಎಲ್ಲವನ್ನೂ ದುರುಪಯೋಗ ಪಡಿಸಿಕೊಳ್ತಾ ಇದೆ. ಸರ್ಕಾರ ಬೀಳಿಸಲು ತನಿಖಾ ಸಂಸ್ಥೆಗಳನ್ನ ಬಳಸಲಾಗ್ತಿದೆ. ದೇಶದ ಅನೇಕ ರಾಜ್ಯಗಳಲ್ಲಿ ಇಂಥ ಎಮರ್ಜೆನ್ಸಿ ಇದೆ. 95% ಇಡಿ, ಐಟಿ ದಾಳಿಗಳು ಈ ದೇಶದಲ್ಲಿ ವಿರೋಧ ಪಕ್ಷದ ನಾಯಕರ ಮೇಲೆ ಆಗಿದೆ.

ಮಂಗಳೂರು, ಆಗಸ್ಟ್ 2: ಕೇಂದ್ರ ಸರ್ಕಾರ ಐಟಿ, ಇಡಿ ಎಲ್ಲವನ್ನೂ ದುರುಪಯೋಗ ಪಡಿಸಿಕೊಳ್ತಾ ಇದೆ. ಸರ್ಕಾರ ಬೀಳಿಸಲು ತನಿಖಾ ಸಂಸ್ಥೆಗಳನ್ನ ಬಳಸಲಾಗ್ತಿದೆ. ದೇಶದ ಅನೇಕ ರಾಜ್ಯಗಳಲ್ಲಿ ಇಂಥ ಎಮರ್ಜೆನ್ಸಿ ಇದೆ. 95% ಇಡಿ, ಐಟಿ ದಾಳಿಗಳು ಈ ದೇಶದಲ್ಲಿ ವಿರೋಧ ಪಕ್ಷದ ನಾಯಕರ ಮೇಲೆ ಆಗಿದೆ. ಸಿದ್ದರಾಮಯ್ಯನವರನ್ನು ಇವರಿಗೆ ಹೇಗಾದ್ರೂ ಒಳಗೆ ಹಾಕಬೇಕು ಅಂತ ಏನೇನೋ ಮಾಡುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.‌

ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರು ನೋಟಿಸ್ ಕೊಟ್ಟ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು, ಅಬ್ರಹಾಂ ಹಿನ್ನೆಲೆ ನಿಮಗೆ ಗೊತ್ತಿದೆ, ಅವರಿಗೆ ಸುಪ್ರೀಂ ಕೋರ್ಟ್ ಕೂಡ 20 ಲಕ್ಷ ದಂಡ ಹಾಕಿತ್ತು. ರಾಜ್ಯಪಾಲರು ದೂರು ಪಡೆದ ಕೆಲವೇ ಗಂಟೆಗಳಲ್ಲಿ  ನೊಟೀಸ್ ಮಾಡಿದ್ದಾರೆ. ಯಾವುದೇ ಕಾನೂನು ತಜ್ಞರ ಜೊತೆಗೂ ಅವರು ಚರ್ಚೆ ಮಾಡಿಲ್ಲ.‌ ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡ್ತಿದಾರೆ. 

ಕಾನೂನು ಪ್ರಕಾರ ಸಿದ್ದರಾಮಯ್ಯ ಏನು ತಪ್ಪು ಮಾಡಿದ್ದಾರೆ ತೋರಿಸಲಿ. ಸಿದ್ದರಾಮಯ್ಯ ಅವರು ಕಳೆದುಕೊಂಡ ಭೂಮಿ ವಾಪಸ್ ಪಡೆದಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಅವರಲ್ಲಿ ತಪ್ಪೇನಾಗಿದೆ ಅಂತ ತೋರಿಸಲಿ. ಅಧಿಕಾರ ದುರುಪಯೋಗ ಮಾಡಿರುವುದು ಹೇಗೆ ಅಂತ ತೋರಿಸಲಿ. ಮೈಸೂರು ಮುಡಾದಲ್ಲಿ ಎಲ್ಲಾ ರಾಜಕೀಯ ನಾಯಕರು ಇದ್ದ ಸಮಿತಿ ಇತ್ತು.‌ ಆಗಲೂ ಅನೇಕ ಜನರಿಗೆ ಇವರು ಭೂಮಿ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರದಲ್ಲೇ ಈ ಹಂಚಿಕೆ ಆಗಿದೆ. ಈಗ ಇವರೇ ಪಾದಯಾತ್ರೆ ನಡೆಸುತ್ತಾರಂದ್ರೆ ಏನು ನೈತಿಕತೆ ಇದೆ? ಯಡಿಯೂರಪ್ಪ ಮೇಲೆ ಪೋಕ್ಸೋ ಕೇಸ್ ನಡೀತಾ ಇದೆ. ವಿಜಯೇಂದ್ರ ಮೇಲೂ ಕೇಸ್ ಇದೆ, ಹೀಗಿರುವಾಗ ಇವರಿಗೆ ಏನ್ ನೈತಿಕತೆ ಇದೆ. ಹಾಗಾಗಿ ನಾವು ಕೂಡ ಇದಕ್ಕೆ ಎಲ್ಲಾ ಕಡೆ ಉತ್ತರ ಕೊಡ್ತೇವೆ ಎಂದು ಹೇಳಿದರು. 

ಮಳೆಹಾನಿ ಪರಿಹಾರ ಕೊಡಲು ಇವರಲ್ಲಿ ಹಣ ಇಲ್ಲ ಎಂಬ ಆರ್‌. ಅಶೋಕ್ ಟೀಕೆಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಅಶೋಕ್ ಬಾಯಿಗೆ ಬಂದಾಗೆ ಮಾತನಾಡ್ತಾರೆ, ನಾವು ಎಲ್ಲಾ ಹಣ ಸೇರಿಸಿ ಹಾನಿಯಾದ ಮನೆಗಳನ್ನ ಕಟ್ಟಿಕೊಡ್ತೀವಿ. ರಾಜ್ಯ ಹಾಗೂ ಕೇಂದ್ರದ ಪರಿಹಾರ ಸೇರಿಸಿ ಹಾನಿಯಾದ ಮನೆಗಳಿಗೆ 50 ಸಾವಿರ ಕೊಡ್ತಾ ಇದೀವಿ. ಅವರು ಕೊಟ್ಟ 5 ಲಕ್ಷದ ಯೋಜನೆಯಲ್ಲಿ ಭಾರೀ ಅವ್ಯವಹಾರ ಆಗಿದೆ. ನಮ್ಮ ಸರ್ಕಾರ ಅ ಯೋಜನೆ ತೆಗೆದು ಬೇರೆ ಯೋಜನೆ ತಂದಿದ್ದೇವೆ.‌ ಇದೆಲ್ಲಾ ನಾವು ಇವರ ದುರುಪಯೋಗ ನೋಡಿ ಮಾಡಿರೋದು. ಕೆಲವರು ಸಣ್ಣಪುಟ್ಟ ಡ್ಯಾಮೇಜ್ ಗೆ 5 ಲಕ್ಷ ಪಡೆದಿದ್ದೂ ಇದೆ.‌ ಆರ್.ಅಶೋಕ್ ಗೆ ಬಹುಶಃ ಅದೆಲ್ಲಾ ಗೊತ್ತಿಲ್ಲ ಅನಿಸುತ್ತೆ ಎಂದು ಹೇಳಿದರು.‌

Mangalore They are planning to put CM Siddaramaiah to jail says Dinesh gundu rao in muda case.