ಬ್ರೇಕಿಂಗ್ ನ್ಯೂಸ್
05-08-24 09:49 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್.5: ತೀವ್ರ ವಿವಾದ, ಆಕ್ರೋಶಕ್ಕೆ ಕಾರಣವಾಗಿರುವ ಬೀದಿ ಬದಿ ವ್ಯಾಪಾರಸ್ಥರ ಮೇಲಿನ ಟೈಗರ್ ಕಾರ್ಯಾಚರಣೆಯನ್ನು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಿಲ್ಲುವುದಿಲ್ಲ. ಸಾರ್ವಜನಿಕರು, ಪಾಲಿಕೆಯ ವಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರ ಆಗ್ರಹದಂತೆ ಕಾರ್ಯಾಚರಣೆ ಮಾಡಲಾಗಿದೆ. ಆಹಾರ ಸುರಕ್ಷತೆ ನಿಮಯ ಪಾಲಿಸದೆ ಕಾರ್ಯ ನಿರ್ವಹಿಸುತ್ತಿರುವುದು ದಾಳಿ ವೇಳೆ ಪತ್ತೆಯಾಗಿದೆ ಎಂದವರು ಹೇಳಿದ್ದಾರೆ.
ಪಾಲಿಕೆ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಬೀದಿ ಬದಿ ವ್ಯಾಪಾರ ಮಾಡುವುದನ್ನು ನಾವು ವಿರೋಧಿಸುವುದಿಲ್ಲ. ಬಡತನದ ಬಗ್ಗೆಯೂ ನಮಗೆ ಗೊತ್ತಿದೆ. ಆದರೆ ಬೀದಿ ವ್ಯಾಪಾರವನ್ನು ಪಾಲಿಕೆಯ ನಿಮಯ ಪ್ರಕಾರವೇ ನಡೆಸಬೇಕು. ಪಾಲಿಕೆಯಿಂದ 18 ಅಂಶಗಳ ನಿಯಮಗಳನ್ನು ಮಾಡಲಾಗಿದ್ದು, ಅದಕ್ಕೆ ಬದ್ಧರಾಗಬೇಕು. ತಳ್ಳುಗಾಡಿಯಲ್ಲಿ ವ್ಯಾಪಾರ, ಕುಳಿತುಕೊಂಡು ವ್ಯಾಪಾರ, ಮೂಟೆ ಹೊತ್ತುಕೊಂಡು ತಿರುಗಾಡಿ ವ್ಯಾಪಾರ ಮಾಡುವುದು, ಈ ಮೂರು ರೀತಿಯ ವ್ಯಾಪಾರಕ್ಕೂ ಅವಕಾಶ ಇದೆ. ಆದರೆ, ಗೂಡಂಗಡಿ ರೀತಿ ಒಂದೇ ಕಡೆ ಝಂಡಾ ಊರುವುದಕ್ಕೆ ಅವಕಾಶ ಇಲ್ಲ. ಕಾರ್ಯಾಚರಣೆ ಸಂದರ್ಭದಲ್ಲಿ ಜಿರಳೆ, ಹೆಗ್ಗಣ, ಇಲಿಗಳ ರಾಶಿ ಕಂಡುಬಂದಿದ್ದು, ಅಲ್ಲಿನ ಸ್ಥಿತಿಯನ್ನು ಎತ್ತಿ ತೋರಿಸಿತ್ತು ಎಂದರು.
ಪ್ರಶ್ನೆಯೆಂದಕ್ಕೆ ಉತ್ತರಿಸಿದ ಮೇಯರ್ 667 ಮಂದಿಗೆ ಸ್ವನಿಧಿ ಯೋಜನೆಯಡಿ ಹತ್ತು ಸಾವಿರ ಸಾಲ ಕೊಟ್ಟಿದ್ದೇವೆ ಎಂದರು. ಸಾಲ ಕೊಟ್ಟಿದ್ದರೂ, ಅವರಿಗೆ ಬೀದಿ ವ್ಯಾಪಾರಕ್ಕೆ ಅವಕಾಶ ಕೊಟ್ಟಿಲ್ಲ ಯಾಕೆಂದು ಕೇಳಿದಾಗ, ಸಾಲ ಪಡೆದವರಲ್ಲಿ ಹತ್ತು ಮಂದಿ ಮಾತ್ರ ಗುರುತಿನ ಚೀಟಿ ಪಡೆದಿದ್ದಾರೆ. ಉಳಿದವರು ಬೇರೆ ಬೇರೆ ವಿಭಾಗದಲ್ಲಿ ಇದ್ದವರೂ ಇದ್ದಾರೆ. ತಿಂಡಿ ಬೇಯಿಸಿ ಮಾರಾಟ ಮಾಡುವವರೂ ಇದ್ದಾರೆ ಎಂದರು. 667 ಮಂದಿಗೆ ಸಾಲ ಕೊಟ್ಟಿದ್ದರೂ, ಅವರಲ್ಲಿ ಬೀದಿ ವ್ಯಾಪಾರಿಗಳಿಲ್ಲ ಎಂದಾಯಿತು ಎಂದು ಪತ್ರಕರ್ತರು ಪ್ರಶ್ನೆ ಹಾಕಿದಾಗ, ಮೇಯರ್ ಉತ್ತರಿಸಲಾಗದೆ ತಬ್ಬಿಬ್ಬಾದರು. ಸ್ವನಿಧಿ ಯೋಜನೆಯಡಿ ಬೀದಿ ವ್ಯಾಪಾರಿಯೆಂಬ ಐಡಿ ಇದ್ದರೆ ಮಾತ್ರ ಸಾಲ ಕೊಡುವುದಲ್ಲವೇ ಎಂದು ಕೇಳಿದ್ದಕ್ಕೂ ಉತ್ತರ ಇರಲಿಲ್ಲ. ಇಡೀ ಪಾಲಿಕೆ ವ್ಯಾಪ್ತಿಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಬೀದಿ ವ್ಯಾಪಾರಿಗಳಿದ್ದಾರೆ ಎಂದರು.
ಆಹಾರ ಸುರಕ್ಷತೆ ವಿಚಾರದಲ್ಲಿ ದಾಳಿ ಮಾಡುವುದಾದರೆ, ಎಲ್ಲ ಹೊಟೇಲ್, ಫಾಸ್ಟ್ ಫುಡ್ ಸೆಂಟರ್ ಗಳಿಗೂ ದಾಳಿ ನಡೆಸಬೇಕು, ಮಂಗಳೂರಿನ ಹೆಚ್ಚಿನ ಹೊಟೇಲ್ ಗಳಲ್ಲಿ ಸುರಕ್ಷತೆ ಇಲ್ಲ. ಫುಡ್ ಸೇಫ್ಟಿ ಇಲಾಖೆಯ ಪರವಾನಗಿಯೂ ಇಲ್ಲ ಎಂದು ಪತ್ರಕರ್ತರೊಬ್ಬರು ಪ್ರಶ್ನೆ ಮಾಡಿದರು. ಅಂತಹ ಹೊಟೇಲ್ ಗಳಿದ್ದರೆ ಮಾಹಿತಿ ಕೊಡಿ, ನಾವು ಜಿಲ್ಲಾ ಆರೋಗ್ಯ ಇಲಾಖೆಗೆ ಹೇಳಿ ದಾಳಿ ಮಾಡಿಸುತ್ತೇವೆ. ಹೊಟೇಲಿನವರು ಟ್ರೇಡ್ ಲೈಸನ್ಸ್ ಪಾಲಿಕೆಯಿಂದ ಪಡೆಯುತ್ತಾರೆ. ಆಹಾರ ಗುಣಮಟ್ಟದ ಬಗ್ಗೆ ಆಹಾರ ಇಲಾಖೆಯಿಂದ ಪಡೆಯುತ್ತಾರೆ ಎಂದರು.
ನಾವು ಬೀದಿ ವ್ಯಾಪಾರಿಗಳಿಗೆಂದೇ ವೆಂಡರ್ ಝೋನ್ ಮಾಡುವುದಕ್ಕೆ ರೆಡಿ ಇದ್ದೇವೆ. ಹಲವು ಸಮಯಗಳಿಂದ ಈ ಬಗ್ಗೆ ಬೀದಿ ವ್ಯಾಪಾರಿಗಳಿಗೆ ಹೇಳುತ್ತಿದ್ದೇವೆ ಎಂದು ಮೇಯರ್ ಹೇಳಿದಾಗ, ನೀವು ಈ ಮಾತನ್ನು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದೀರಿ, ಎಲ್ಲಿ ಮೂಲಸೌಕರ್ಯ ಮಾಡಿಕೊಟ್ಟಿದ್ದೀರಿ ಎಂದು ಪ್ರಶ್ನೆ ಹಾಕಿದಾಗ, ನಾವು ಉರ್ವಾದಲ್ಲಿ ಮಾಡಿಕೊಡಲು ರೆಡಿ ಇದ್ದೇವೆ. ಆದರೆ, 18 ಅಂಶಗಳ ನಿಮಯಗಳಿಗೆ ಸಹಿ ಹಾಕಬೇಕು. ನಾವು ಪ್ರತಿ ಬಾರಿ ಕೇಳಿದಾಗಲೂ ಸಹಿ ಹಾಕಲು ಹಿಂದೇಟು ಹಾಕುತ್ತಾರೆ, ಮತ್ತೆ ಹೇಗೆ ವೆಂಡರ್ ಝೋನ್ ಮಾಡುವುದು ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ನೀವು ಜನರು ಬರುವ ಸೂಕ್ತ ಜಾಗದಲ್ಲಿ ಮಾಡಬೇಕೇ ವಿನಾ ಎಲ್ಲೋ ಒಂದು ಕಡೆ ಮಾಡಿದರೆ, ವ್ಯಾಪಾರಿಗಳು ಬರುತ್ತಾರೆಯೇ ಎಂದು ಪತ್ರಕರ್ತರು ಪ್ರಶ್ನೆ ಹಾಕಿದರು. ಒಟ್ಟಿನಲ್ಲಿ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಕಡೆಯಿಂದ ತರಾಟೆಯ ಪ್ರಶ್ನೆಗಳೇ ಹೆಚ್ಚಿದ್ದವು. ಪಾಲಿಕೆಯ ಸಚೇಚಕ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಜೊತೆಗಿದ್ದರು.
Mangalore Mayor announces continued Operation Tiger against illegal street vendors in city. Addressing the media on Monday, August 5, the mayor said, "We have received numerous complaints about illegal petty shops through our phone-in program and council meetings.
09-11-25 03:47 pm
Bangalore Correspondent
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 03:50 pm
Mangalore Correspondent
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm