ಬ್ರೇಕಿಂಗ್ ನ್ಯೂಸ್
06-08-24 01:22 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 6: ಬಿಜೈ ನಿವಾಸಿ 18 ವರ್ಷದ ಹುಡುಗಿಯೊಬ್ಬಳು ದಿಢೀರ್ ಮನೆಯಿಂದ ಕಾಣೆಯಾಗಿದ್ದ ಬಗ್ಗೆ ಬರ್ಕೆ ಠಾಣೆಯಲ್ಲಿ ಜುಲೈ 30ರಂದು ದೂರು ದಾಖಲಾಗಿತ್ತು. ಪಬ್ ಜಿ ಆಟ ಆಡುತ್ತಿದ್ದವಳು ಮಟ ಮಟ ಮಧ್ಯಾಹ್ನ ಮನೆ ಬಿಟ್ಟು ಹೋಗಿದ್ದು ಮನೆಯವರನ್ನೂ ಆತಂಕಕ್ಕೆ ಈಡು ಮಾಡಿತ್ತು. ತನಿಖೆ ಮಾಡಿದ ಪೊಲೀಸರು ಆಕೆಯನ್ನು ಉಡುಪಿ ಜಿಲ್ಲೆಯ ಕಾರ್ಕಳದ ಮನೆಯೊಂದರಲ್ಲಿ ಪತ್ತೆ ಮಾಡಿದ್ದಾರೆ.
ಎಸ್ಸೆಸ್ಸೆಲ್ಸಿ ಮುಗಿಸಿ ಡಿಪ್ಲೊಮಾ ಸೇರಿದ್ದ ಕ್ಯಾಲಿಸ್ಟಾ ಫೆರಾವೋ ನಾಪತ್ತೆಯಾಗಿದ್ದ ಹುಡುಗಿ. ಬರ್ಕೆ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದಾಗ, ಬಿಜೈನಿಂದ ಆಟೋದಲ್ಲಿ ಕೆಎಸ್ಸಾರ್ಟಿಸಿಗೆ ಹೋಗಿರುವುದು ಕಂಡುಬಂದಿತ್ತು. ಆಕೆ ಮೊಬೈಲ್ ಒಯ್ದಿದ್ದರೂ, ಅದರಲ್ಲಿ ಸಿಮ್ ಇರಲಿಲ್ಲ. ಹುಡುಗಿ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಳು ಎಂಬ ಮಾಹಿತಿ ಪಡೆದ ಪೊಲೀಸರು ಇನ್ ಸ್ಟಾ ಗ್ರಾಮ್ ಗೆಳೆಯ- ಗೆಳತಿಯರ ಮಾಹಿತಿ ಸಂಗ್ರಹಿಸಿದ್ದರು. 3 ಸಾವಿರ ಇನ್ಸ್ ಟಾ ಗೆಳೆಯರ ಖಾತೆಗಳು ಮತ್ತು ಮೋಜಾ ಏಪ್ ಖಾತೆಯ ಪರಿಶೀಲನೆ ವೇಳೆ ಅನುಮಾನಾಸ್ಪದ ವ್ಯಕ್ತಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಈ ವೇಳೆ, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸೂರಜ್ ಪೂಜಾರಿ ಎಂಬ 23 ವರ್ಷದ ಯುವಕನ ಮಾಹಿತಿ ಪಡೆದು ಅಲ್ಲಿ ಪರಿಶೀಲನೆ ನಡೆಸಿದಾಗ, ಕಾಣೆಯಾದ ಹುಡುಗಿ ಅಲ್ಲಿರುವುದು ಪತ್ತೆಯಾಗಿದೆ. ಪೊಲೀಸರು ಇಬ್ಬರನ್ನೂ ಬರ್ಕೆ ಠಾಣೆಗೆ ಕರೆತಂದಿದ್ದು, ನಾವಿಬ್ಬರೂ ಪ್ರೀತಿಸುತ್ತಿರುವುದಾಗಿ ತಿಳಿಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಹುಡುಗಿ ಮಾನಸಿಕವಾಗಿ ನಿರ್ಧಾರ ತೆಗೆದುಕೊಳ್ಳಲು ಸಮರ್ಥಳಿಲ್ಲದೆ ಇರುವುದು ಕಂಡುಬಂದಿದೆ. ಆದರೆ ಹುಡುಗಿ ತಾನು ತಂದೆ, ತಾಯಿ ಜೊತೆಗೆ ಹೋಗುವುದಿಲ್ಲ ಎಂದು ತಿಳಿಸಿದ್ದರಿಂದ ಪೊಲೀಸರು ಸ್ವಾಧಾರ ಕೇಂದ್ರಕ್ಕೆ ಸೇರಿಸಿದ್ದಾರೆ.
An 18-year-old girl who was missing from bejai in Mangalore is now found in karkala with her boyfriend after love in Instagram. Barke police who has registered missing case have now found her in her boyfriends house.
12-09-26 05:56 pm
HK News Staffer
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
ಕಸ್ತೂರಿರಂಗನ್ ವರದಿ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶ...
11-09-26 05:50 pm
ಬ್ಯಾಂಕ್ ಸಾಲಕ್ಕೆ ಸೀಜ್ ಆದ ಆಯುರ್ವೇದ ಕಾಲೇಜು ; 4.5...
11-09-26 02:59 pm
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
12-09-26 01:10 pm
HK News Staffer
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
12-09-26 03:09 pm
HK News Staffer
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm