Mangalore Airport, Maravoor Bridge: ಮರವೂರು ಹಳೆ ಸೇತುವೆಗೆ ಮತ್ತೆ ಆತಂಕ ; ಸಂಚಾರ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಆದೇಶ 

08-08-24 03:36 pm       Mangalore Correspondent   ಕರಾವಳಿ

ಮಂಗಳೂರಿನಿಂದ ಕಟೀಲು - ಬಜ್ಪೆ ಸಂಪರ್ಕಿಸುವ ಮರವೂರು ಸೇತುವೆ ಅಪಾಯಕ್ಕೀಡಾಗಿದ್ದು ರಸ್ತೆಯ ಒಂದು ಭಾಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.‌

ಮಂಗಳೂರು, ಆಗಸ್ಟ್ 8: ಮಂಗಳೂರಿನಿಂದ ಕಟೀಲು - ಬಜ್ಪೆ ಸಂಪರ್ಕಿಸುವ ಮರವೂರು ಸೇತುವೆ ಅಪಾಯಕ್ಕೀಡಾಗಿದ್ದು ರಸ್ತೆಯ ಒಂದು ಭಾಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.‌

ಮರವೂರಿನ ಹಳೆ ಸೇತುವೆಯ ಎರಡನೇ ಪಿಲ್ಲರ್ ವೀಕ್ ಆಗಿದೆಯೆಂದು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗಳು ಮಾಹಿತಿ ನೀಡಿದ್ದರಿಂದ ಸೇತುವೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಮಾಡಿದ್ದಾರೆ.  

ಮಂಗಳೂರು ನಗರದಿಂದ ಬಜ್ಪೆ ಏರ್ಪೋರ್ಟ್ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು ಏಕಮುಖ ಸಂಚಾರಕ್ಕೆ ಅವಕಾಶ ಇದ್ದ ಸೇತುವೆಯಲ್ಲಿ ಸಂಪರ್ಕ ಕಡಿತ ಮಾಡಲಾಗಿದೆ. ಮರವೂರಿನಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ 1968ರಲ್ಲಿ ನಿರ್ಮಿಸಲಾಗಿದ್ದ ಹಳೆ ಸೇತುವೆ ಇದಾಗಿದ್ದು ವರ್ಷದ ಹಿಂದೆಯೂ ಇದೇ ರೀತಿ ಸಂಚಾರಕ್ಕೆ ತೊಡಕಾಗಿತ್ತು. ಸೇತುವೆಯ ಒಂದು ಭಾಗದಲ್ಲಿ ಬಿರುಕು ಬಿಟ್ಟಿದ್ದರಿಂದ ಸಂಚಾರ ಕಡಿತಗೊಳಿಸಿ ದುರಸ್ತಿಗೊಳಿಸಿದ ಬಳಿಕ ಮತ್ತೆ ಸಂಚಾರಕ್ಕೆ ಅನುವು ಮಾಡಲಾಗಿತ್ತು. 

ಈಗ ಪಕ್ಕದಲ್ಲಿ ನಿರ್ಮಿಸಿರುವ ಹೊಸ ಸೇತುವೆಯಲ್ಲೇ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಕಾರವಾರದಲ್ಲಿ ಕಾಳಿ ನದಿ ಸೇತುವೆ ಕುಸಿದ ಬಳಿಕ ಹಳೆ‌ ಸೇತುವೆಗಳ ಬಗ್ಗೆ ಜಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳು ನಿಗಾ ಇಟ್ಟಿದ್ದು ಅಪಾಯ ಹೆಚ್ಚಿರುವ ಸೇತುವೆಗಳನ್ನು ಗುರುತಿಸಿ ದುರಸ್ತಿಗೆ  ಮುಂದಾಗಿದ್ದಾರೆ.

Mangalore airport raod old maravoor bridge has been ordered to close by the DC after one of the pillars of the bridge is in danger