ಬ್ರೇಕಿಂಗ್ ನ್ಯೂಸ್
10-08-24 06:44 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್.10: ಕಡೆಗೂ ಆಕೆ ಮನಸ್ಸು ಬದಲಿಸಲೇ ಇಲ್ಲ. ಹಿಂದು ಸಂಘಟನೆಗಳು, ಆಕೆಯ ಹೆತ್ತವರು ಮಾಡಿದ ಪ್ರಯತ್ನಕ್ಕೆ ಫಲವೂ ಸಿಗಲಿಲ್ಲ. ಲವ್ ಜಿಹಾದ್ ಅಸ್ತ್ರಕ್ಕೆ ಬಲಿಯಾಗಿದ್ದಾಳೆಂದು ಹೇಳಲಾಗಿದ್ದ ಕಾಸರಗೋಡು ಜಿಲ್ಲೆಯ ವಿದ್ಯಾನಗರ ನಿವಾಸಿ ವಿಸ್ಮಯಾಳನ್ನು ನಟೋರಿಯಸ್ ರೌಡಿ ಮೊಹಮ್ಮದ್ ಅಶ್ಫಾಕ್ ಹಿಂದು ಸಂಘಟನೆಗಳ ವಿರೋಧ ಮಧ್ಯೆಯೇ ಮದುವೆಯಾಗಿದ್ದಾನೆ. ಆಮೂಲಕ ಹಿಂದು ಸಂಘಟನೆಗಳ ಲವ್ ಜಿಹಾದ್ ಆರೋಪಕ್ಕೆ ತಿರುಗೇಟು ನೀಡಿದ್ದಾನೆ.
ಮಂಗಳೂರಿನ ಶ್ರೀನಿವಾಸ್ ಕಾಲೇಜಿನಲ್ಲಿ ಬಿಸಿಎ ಕಲಿಯುತ್ತಿದ್ದ ಕಾಸರಗೋಡು ಮೂಲದ ಮಲಯಾಳಿ ಬಿಲ್ಲವ ಸಮುದಾಯದ ವಿದ್ಯಾರ್ಥಿನಿ ವಿಸ್ಮಯಾಳನ್ನು ಕಳೆದ ಜೂನ್ 30ರಂದು ಮೊಹಮ್ಮದ್ ಅಶ್ಫಾಕ್ ಎಂಬಾತ ಅಪಹರಿಸಿದ್ದ ಎಂದು ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಾಸರಗೋಡು ವಿದ್ಯಾನಗರ ನಿವಾಸಿ ವಿಸ್ಮಯಾ ತಂದೆ ವಿನೋದ್ ಅವರೇ ತನ್ನ ಮಗಳನ್ನು ಅಪಹರಿಸಿದ್ದಾನೆಂದು ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಮೊಹಮ್ಮದ್ ಅಶ್ಫಾಕ್ ಜೊತೆಗೆ ಕಾಸರಗೋಡಿನಲ್ಲೇ ಇದ್ದ ವಿಸ್ಮಯಾಳನ್ನು ಮಂಗಳೂರಿಗೆ ಕರೆತಂದು ಕೌನ್ಸಿಲಿಂಗ್ ಸೆಂಟರಿನಲ್ಲಿ ಇರಿಸಿದ್ದರು.



ಒಂದು ತಿಂಗಳ ಕೌನ್ಸೆಲಿಂಗ್ ಬಳಿಕ ಸ್ವಲ್ಪ ಮಟ್ಟಿಗೆ ಮನಸ್ಸು ಬದಲಿಸಿದ ರೀತಿಯಿದ್ದ ವಿಸ್ಮಯಾಳನ್ನು ಮನೆಯವರೇ ಕರೆದೊಯ್ದಿದ್ದು, ಸಂಬಂಧಿಕರ ಮನೆಯಲ್ಲಿ ಇರಿಸಿಕೊಂಡಿದ್ದರು. ಆದರೆ, ಇದರ ನಡುವೆಯೇ ಮೊಹಮ್ಮದ್ ಅಶ್ಫಾಕ್ ಕೇರಳ ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದಾನೆಂದು ಹೇಳಲಾಗುತ್ತಿದ್ದು, ತನ್ನ ಪತ್ನಿಯನ್ನು ಹುಡುಕಿ ಕೊಡುವಂತೆ ಪೊಲೀಸರಿಗೆ ಅರ್ಜಿ ಹಾಕಿದ್ದ. ಕೋರ್ಟ್ ಆದೇಶ ಪ್ರಕಾರ, ವಿದ್ಯಾನಗರ ಪೊಲೀಸರು ವಿಸ್ಮಯಾಳನ್ನು ಪತ್ತೆಹಚ್ಚಿ ಹೈಕೋರ್ಟಿಗೆ ಹಾಜರುಪಡಿಸಿದ್ದರು. ಹೈಕೋರ್ಟಿನಲ್ಲಿ ವಿಸ್ಮಯಾ, ತನ್ನ ಪ್ರಿಯಕರ ಮೊಹಮ್ಮದ್ ಅಶ್ಫಾಕ್ ನನ್ನು ನೋಡುತ್ತಿದ್ದಂತೆ ಆತನನ್ನೇ ಮದುವೆಯಾಗುತ್ತೇನೆ, ಹೆತ್ತವರ ಜೊತೆಗೆ ಹೋಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾಳೆ.
ಇದರಿಂದ ಹಿಂದು ಸಂಘಟನೆಗಳ ನಾಯಕರು ಶಾಕ್ ಆಗಿದ್ದು, ಮಂಗಳೂರಿನ ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್ ತಮ್ಮ ಪ್ರಯತ್ನಕ್ಕೆ ಫಲ ಸಿಗಲಿಲ್ಲ ಎಂದು ವಿಷಾದಿಸಿ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ಕ್ಷಮಿಸಿ ವಿನೋದ್ ಅವರೇ ನಮ್ಮ ಪ್ರಯತ್ನ ಕೈಗೂಡಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಮೊಹಮ್ಮದ್ ಅಶ್ಫಾಕ್ ಕೇರಳ ಹೈಕೋರ್ಟ್ ಅನುಮತಿಯೊಂದಿಗೆ ಯುವತಿಯನ್ನು ಮದುವೆಯಾಗಿರುವ ಫೋಟೋವನ್ನೂ ಷೇರ್ ಮಾಡಿದ್ದಾರೆ.
ಮಂಗಳೂರಿನಲ್ಲಿ ಅಪಹರಣ ಪ್ರಕರಣ ದಾಖಲಾದ ಬಳಿಕ ಮಾಧ್ಯಮದ ಮುಂದೆ ಬಂದಿದ್ದ ಯುವತಿಯ ತಂದೆ ವಿನೋದ್, ತನ್ನ ದಯನೀಯ ಸ್ಥಿತಿಯನ್ನು ಹೇಳಿ ಅಳುತ್ತಾ ಅಲವತ್ತುಕೊಂಡಿದ್ದರು. ಮೊಹಮ್ಮದ್ ಅಶ್ಫಾಕ್ ಮೇಲೆ ಕಾಸರಗೋಡಿನಲ್ಲೇ 15ಕ್ಕೂ ಹೆಚ್ಚು ಪ್ರಕರಣಗಳಿದ್ದು ಮೇಲಾಗಿ ನಟೋರಿಯಸ್ ರೌಡಿಶೀಟರ್ ಆಗಿದ್ದಾನೆ. ಜೊತೆಗೆ, ಆತನಿಗೆ ಈ ಹಿಂದೆಯೂ ಮದುವೆಯಾಗಿದ್ದು ಆಕೆಯನ್ನೂ ಅರ್ಧದಲ್ಲಿ ಬಿಟ್ಟಿದ್ದಾನೆ. ಮುಸ್ಲಿಮನೇ ಆಗಿದ್ದರೂ ಒಳ್ಳೆಯನಾಗಿದ್ದರೆ ನನಗೆ ಚಿಂತೆ ಇರಲಿಲ್ಲ. ಇಂಥವನೊಂದಿಗೆ ಮದುವೆಯಾದರೆ ನನ್ನ ಮಗಳ ಭವಿಷ್ಯ ಏನಾದೀತು ಅನ್ನೋದೇ ಚಿಂತೆ ಎಂದು ಹೇಳಿದ್ದರು.
ತಂದೆ ಗೋಗರೆದರೂ ಮನಸ್ಸು ಕರಗಲಿಲ್ಲ
ಸಣ್ಣಂದಿನಿಂದ ಕಷ್ಟಪಟ್ಟು ಬೆಳೆಸಿದ್ದೇನೆ, ಕಲಿಯುವುದಕ್ಕೆಂದು ಮಂಗಳೂರಿಗೆ ಕಳಿಸಿದ್ದೆ. ಶ್ರೀನಿವಾಸ ಕಾಲೇಜಿನಲ್ಲಿ ಎರಡನೇ ವರ್ಷಕ್ಕೆ ಫೀಸು ಕಟ್ಟಿಲ್ಲವೆಂದು ಮುಂದುವರಿಸಲು ಬಿಟ್ಟಿರಲಿಲ್ಲ. ಹಾಗಾಗಿ, ಮನೆಯಲ್ಲಿ ಇರೋದು ಬೇಡವೆಂದು ಕಾಸರಗೋಡಿನಲ್ಲಿ ಶಾಪ್ ಒಂದರಲ್ಲಿ ಕೆಲಸಕ್ಕೆ ತೆರಳುತ್ತಿದ್ದಳು. ಇದೇ ಸಂದರ್ಭದಲ್ಲಿ ಮೊಹಮ್ಮದ್ ಅಶ್ಫಾಕ್ ಬಲೆಗೆ ಬಿದ್ದಿದ್ದಳು. ಆನಂತರ, ಉಳ್ಳಾಲದ ಸಂಬಂಧಿಕರ ಮನೆಗೆ ತಂದಿರಿಸಿದ್ದಾಗಲೇ ಅಪಹರಿಸಿದ್ದ. ಆತ ಯಾವ ರೀತಿ ಬ್ರೇನ್ ವಾಷ್ ಮಾಡಿದ್ದಾನೋ ಗೊತ್ತಿಲ್ಲ. ಮಗಳು ನನ್ನ ಮಾತು ಕೇಳುತ್ತಿಲ್ಲ ಎಂದು ತಂದೆ ಗೋಗರೆದಿದ್ದರು. ತಾಯಿ, ತಂದೆ, ಸೋದರ, ಸಂಬಂಧಿಕರೆಲ್ಲ ಗೋಗರೆದರೂ ಆಕೆ ಕೇಳಲೇ ಇಲ್ಲ. ಕಡೆಗೂ ತಂದೆ, ತಾಯಿ ಜೊತೆಗಿನ ಸಂಬಂಧವನ್ನೇ ಕಡಿದು ರೌಡಿಯ ಜೊತೆಗೆ ತೆರಳಿದ್ದಾಳೆ. ಹಿಂದು- ಮುಸ್ಲಿಂ ಆದರೂ ಪ್ರಾಯ ಪ್ರಬುದ್ಧರಾದರೆ ಇಚ್ಚಿಸಿದವನ ಜೊತೆಗೆ ಮದುವೆ ಆಗಬಹುದು ಎನ್ನುವ ಭಾರತದ ಕಾನೂನು ಹುಡುಗ- ಹುಡುಗಿಯ ಹಿನ್ನೆಲೆ ಬದಿಗಿಟ್ಟು ಮದುವೆ ಸಂಬಂಧಕ್ಕೆ ಅಂಕಿತ ನೀಡುತ್ತದೆ.
Mangalore Love jihad case, girl from Mangalore finally marries muslim youth.
09-11-25 03:47 pm
Bangalore Correspondent
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 03:50 pm
Mangalore Correspondent
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm