ಬ್ರೇಕಿಂಗ್ ನ್ಯೂಸ್
15-08-24 01:59 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 15: ನಗರದ ನೆಹರು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು. ರಾಷ್ಟ್ರಪಿತ ಮಹತ್ಮಾ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪ ಅರ್ಪಿಸಿ ನಮನ ಸಲ್ಲಿಸಿದರು.
ಬಳಿಕ ಸ್ವಾತಂತ್ರ್ಯ ಸಂದೇಶ ನೀಡಿದ ಸಚಿವ ದಿನೇಶ್ ಗುಂಡೂರಾವ್, ನಮ್ಮ ನೆರೆಯ ಬಾಂಗ್ಲಾದೇಶದಲ್ಲಿ ಇತ್ತಿಚೆಗೆ ನಡೆದ ಘಟನೆಗಳ ಕುರಿತು ಆತಂಕ ವ್ಯಕ್ತಪಡಿಸಿದರು. ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳ ರಕ್ಷಣೆಗೆ ಕೇಂದ್ರ ಸರ್ಕಾರ ಅಂತರಾಷ್ಟ್ರೀಯ ಮಟ್ಟದ ಕ್ರಮಗಳನ್ನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಭಾರತ ಸೇರಿದಂತೆ ಜಗತ್ತಿನಾದ್ಯಂತ ಅಲ್ಪಸಂಖ್ಯಾತರ ರಕ್ಷಣೆ ಬಹುಸಂಖ್ಯಾತರ ಕರ್ತವ್ಯವಾಗಿದೆ ಎಂದು ಸ್ವಾತಂತ್ರ್ಯೋತ್ಸವದ ತಮ್ಮ ಭಾಷಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ವಾತಂತ್ರ್ಯೋತ್ತರ ಯುಗದಲ್ಲಿ ದೇಶ ಸಾಗಿ ಬಂದ ಪ್ರಗತಿಯ ಹಾದಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಸಚಿವರು, ಭಾರತೀಯತೆ ಎನ್ನುವ ಒಂದು ಬಂಧ ಎಲ್ಲ ಭಾಷೆ, ಸಂಸ್ಕೃತಿಯ ಜನಜೀವನವನ್ನ ಹಿಡಿದಿಟ್ಟಿದೆ ಎಂದರು. ಭಾರತ ಇಂದು ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿದೆ. ಕರ್ನಾಟಕದ ಸರ್ವಾಂಗೀಣ ಪ್ರಗತಿಯಲ್ಲಿ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆಗಳನ್ನಿಟ್ಟಿದೆ. ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಭಾರತದ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಹೊಸ ಇತಿಹಾಸವನ್ನ ಸೃಷ್ಟಿಸಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪೂರಕವಾಗಿ ಸ್ಪಂದಿಸುತ್ತ ಬಂದಿದೆ. ಪ್ರತಿ ತಿಂಗಳು 2000 ನೀಡುವ ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ 3.66 ಲಕ್ಷ ಮಹಿಳೆಯರು ನೊಂದಾಯಿಸಿಕೊಂಡಿದ್ದಾರೆ. 5.06 ಲಕ್ಷ ಫಲಾನುಭವಿಗಳು ಗೃಹಜ್ಯೋತಿ ಯೋಜನೆಯ ಲಾಭ ಪಡೆದಿದ್ದು, 369.87 ಕೋಟಿ ರೂಪಾಯಿಗಳನ್ನ ರಾಜ್ಯ ಸರ್ಕಾರ ಪಾವತಿಸಿದೆ. ಯುವನಿಧಿ ಯೋಜನೆಯಡಿ ಜಿಲ್ಲೆಯ 3153 ಯುವಕ, ಯುವತಿಯರಿಗೆ ಆರ್ಥಿಕ ನೆರವು ಲಭಿಸಿದೆ. ಶಕ್ತಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ 5.19 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ.
ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ 700 ಕಾಮಗಾರಿಗಳು ಮಂಜೂರಾಗಿದ್ದು, 531 ಕಾಮಗಾರಿಗಳು ಪೂರ್ಣಗೊಂಡಿವೆ. ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಜಿಲ್ಲೆಯ ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಭೂತ ಸೌಕರ್ಯ ಮತ್ತು ಉನ್ನತೀಕರಣಕ್ಕಾಗಿ 19 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯಡಿ 3534 ಜನರಿಗೆ ಉಚಿತ ಇಸಿಜಿ ನಡೆಸಲಾಗಿದ್ದು, 61 ಜನರಿಗೆ ಉನ್ನತ ಮಟ್ಟದ ಚಿಕಿತ್ಸೆ ಒದಗಿಸಲಾಗಿದೆ. ಅಂಗಾಂಗ ದಾನ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ಸ್ವಾತಂತ್ರ್ಯೋತ್ಸವ ದಿನವಾದ ಇಂದು ಅಂಗಾಂಗ ದಾನಿಗಳ ಕುಟುಂಬಗಳನ್ನ ಸನ್ಮಾನಿಸಿ ಗೌರವ ಸಲ್ಲಿಸಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ 130 ಕೋಟಿ ಅನುದಾನ ಒದಗಿಸಲಾಗಿದ್ದು, 320 ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ 2000 ಕೋಟಿ ಅನುದಾನ ಒದಗಿಸಲು ನಿಶ್ಚಯಿಸಲಾಗಿದ್ದು, ಮಂಗಳೂರು ಮಹಾನಗರ ಪಾಲಿಕೆಗೆ 200 ಕೋಟಿ ಅನುದಾನ ಹರಿದುಬರಲಿದೆ. ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಉಂಟಾದ ನೆರ ಪರಿಸ್ಥಿತಿಯನ್ನ ಸಮರ್ಪಕವಾಗಿ ನಿರ್ವಹಿಸಲಾಗಿದ್ದು, 1.21 ಕೋಟಿ ಪರಿಹಾರ ಪಾವತಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಐವಾನ್ ಡಿಸೋಜ, ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
2024 78th Independence Day celebrated with patriotic fervour in in Mangalore, Dinesh Gundu Rao hoists flag. The 78th Independence Day was celebrated here at Nehru Maidan in Mangaluru and in Udupi on Thursday. District in-charge minister Dinesh Gundu Rao hoisted the national flag and inspected the guard of honour.
12-09-24 10:41 pm
Bangalore Correspondent
MLA Pradeep Eshwar VS Sudhakar: ಸುಧಾಕರ್ ಒಬ್ಬ...
12-09-24 09:44 pm
Pilikula kamabala, Bangalore: ಪಿಲಿಕುಳ ಕಂಬಳಕ್ಕ...
12-09-24 09:13 pm
Parashuram Park, Sunil Kumar, Arun Shyam, Hig...
12-09-24 02:34 pm
ಉದ್ಯಮಿಯ ಕಂಪನಿ ಮೇಲೆ ದಾಳಿ, ಕಿಡ್ನಾಪ್ ಮಾಡಿ ಹಲ್ಲೆ...
11-09-24 10:11 pm
13-09-24 12:33 pm
HK News Desk
ಅಬಕಾರಿ ನೀತಿ ಹಗರಣ ; 6 ತಿಂಗಳ ಬಳಿಕ ಸಿಎಂ ಕೇಜ್ರಿವಾ...
13-09-24 12:24 pm
Sitaram Yechury death; 40 ವರ್ಷಗಳಿಂದ ದೇಶದ ರಾಜಕ...
12-09-24 09:12 pm
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಮನೆಯಲ್ಲಿ ಗಣೇಶ...
12-09-24 07:40 pm
ಅಮರಾವತಿಯಲ್ಲಿ ಡೆಡ್ಲಿ ರಸ್ತೆ ಗುಂಡಿ ; ಕಾಲುವೆಗೆ ಉರ...
11-09-24 04:13 pm
13-09-24 11:20 am
Mangalore Correspondent
Mangalore, St Antony bus, HK News: HK Impact:...
12-09-24 10:21 pm
VHP protest, Mangalore, Sharan Pumpwell: ಈದ್...
12-09-24 08:24 pm
Mangalore artist Zuber Khan kudla, MF Husain...
12-09-24 08:12 pm
House Collapsed, Bejai Mangalore: ಹಳೆ ಮನೆ ಕೆಡ...
12-09-24 04:57 pm
13-09-24 03:51 pm
HK News Desk
Mangalore, Vitla, Rape, Crime: ಅಪ್ರಾಪ್ತ ವಿದ್ಯ...
13-09-24 01:28 pm
Mangalore, City Bus, St Antony Travels: ಸಿಟಿ...
12-09-24 05:37 pm
Mandya Stone Pelting, Ganpati; ನಾಗಮಂಗಲದಲ್ಲಿ ಗ...
12-09-24 01:37 pm
Bangalore crime, Suicide: ಅಶ್ಲೀಲ ವಿಡಿಯೋ ತೋರಿಸ...
07-09-24 05:45 pm