Mangalore, Ramanath Rai, Harish Poonja MLA: ಗಾಂಧೀಜಿಗೆ ಅಪಮಾನಿಸಿದ್ದು ದೇಶದ್ರೋಹದ ಕೃತ್ಯ, ಹರೀಶ್ ಪೂಂಜಾ ಮೇಲೆ ಸುಮೊಟೋ ಕೇಸು ಹಾಕಬೇಕು, ಅಡ್ಜಸ್ಟ್ ಮೆಂಟ್ ರಾಜಕೀಯ ಈ ಜಿಲ್ಲೆಗೆ ಒಳ್ಳೆದಲ್ಲ ; ರಮಾನಾಥ ರೈ

17-08-24 03:31 pm       Mangalore Correspondent   ಕರಾವಳಿ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಹಾತ್ಮ ಗಾಂಧೀಜಿ ಅವರನ್ನು ಅಪಹಾಸ್ಯ ಮಾಡುವ ರೀತಿ ಮಾತಾಡಿದ್ದಾರೆ. ಅಹಿಂಸೆ, ಚರಕದಿಂದ ಸ್ವಾತಂತ್ರ್ಯ ಬಂದಿರೋದಲ್ಲ ಎನ್ನುವ ಮೂಲಕ ರಾಷ್ಟ್ರಪಿತನಿಗೆ ಅಪಮಾನ ಮಾಡಿದ್ದಾರೆ.

ಮಂಗಳೂರು, ಆಗಸ್ಟ್.17: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಹಾತ್ಮ ಗಾಂಧೀಜಿ ಅವರನ್ನು ಅಪಹಾಸ್ಯ ಮಾಡುವ ರೀತಿ ಮಾತಾಡಿದ್ದಾರೆ. ಅಹಿಂಸೆ, ಚರಕದಿಂದ ಸ್ವಾತಂತ್ರ್ಯ ಬಂದಿರೋದಲ್ಲ ಎನ್ನುವ ಮೂಲಕ ರಾಷ್ಟ್ರಪಿತನಿಗೆ ಅಪಮಾನ ಮಾಡಿದ್ದಾರೆ. ಇಡೀ ಜಗತ್ತಿನಲ್ಲಿ ಗಾಂಧೀಜಿಯವರ ತತ್ವಗಳನ್ನು ಮೆಚ್ಚಿ ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ. ಪ್ರಧಾನಿಯವರು ವಿದೇಶಕ್ಕೆ ಹೋಗಿ, ನಾನು ಗಾಂಧಿ ನಾಡಿನಿಂದ ಬಂದವ ಎಂದು ಹೇಳುತ್ತಾರೆ. ಅಂಥದ್ದರಲ್ಲಿ ಅದೇ ಪಕ್ಷದ ಶಾಸಕನೊಬ್ಬ ಸ್ವಾತಂತ್ರ್ಯ ಹೋರಾಟ ಮಾಡಿದ ವ್ಯಕ್ತಿಗೆ ಅಪಮಾನ ಮಾಡಿರುವುದ ಅಕ್ಷಮ್ಯ, ದೇಶದ್ರೋಹದ ಕೆಲಸ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ಸ್ವಾತಂತ್ರ್ಯ ದಿನದಂದು ತಹಸೀಲ್ದಾರ್, ಪೊಲೀಸರು ಇರುವಾಗಲೇ ಮಕ್ಕಳ ಎದುರಲ್ಲಿ ಶಾಸಕ ಈ ರೀತಿಯ ಹೇಳಿಕೆ ನೀಡಿದ್ದಾರೆ. ಚುನಾಯಿತ ಪ್ರತಿನಿಧಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರರನ್ನು ಅಪಮಾನಿಸುವುದು ಎಷ್ಟು ಸರಿ ಅಂತ ಜನರು ಪ್ರಶ್ನೆ ಮಾಡಬೇಕಾಗುತ್ತದೆ. ಅಲ್ಪಸಂಖ್ಯಾತರ ಹಿತ ಕಾಯೋದು ಆಯಾ ದೇಶದ ಧರ್ಮ. ಕೆನಡಾ, ಇಂಡೋನೇಶ್ಯಾದಲ್ಲಿ ಭಾರತದ ಬಹುದೊಡ್ಡ ಸಮುದಾಯ ಇದೆ. ರಾಷ್ಟ್ರಪಿತನಿಗೆ ಅವಮಾನ ಮಾಡಿರುವುದು ದೇಶದ್ರೋಹಕ್ಕೆ ಸಮನಾಗಿದ್ದು, ಶಾಸಕನ ವಿರುದ್ಧ ಪೊಲೀಸರು ಸುಮೊಟೋ ಕೇಸು ಮಾಡಬೇಕೆಂದು ಒತ್ತಾಯಿಸುತ್ತೇನೆ ಎಂದು ಹೇಳಿದರು.

Harish Poonja: ಪೊಲೀಸರಿಗೆ ಧಮ್ಕಿ ಪ್ರಕರಣ; ಶಾಸಕ ಹರೀಶ್‌ ಪೂಂಜಾ, 40 ಮಂದಿ ವಿರುದ್ಧ  ಚಾರ್ಜ್‌ಶೀಟ್‌ - Vistara News

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ ಇದೆ. ಈ ರೀತಿಯ ರಾಜಕೀಯ ಕೋಮು ಸೂಕ್ಷ್ಮ ದಕ್ಷಿಣ ಕನ್ನಡ ಜಿಲ್ಲೆಗೆ ಒಳ್ಳೆಯದಲ್ಲ ಎಂದು ರಮಾನಾಥ ರೈ ಹೇಳಿದರು. ಯಾರು ಒಳ ರಾಜಕೀಯ ಮಾಡುತ್ತಿದ್ದಾರೆ ಎಂದು ಕೇಳಿದ್ದಕ್ಕೆ, ನಾನು ಅದರ ಬಗ್ಗೆ ಹೆಚ್ಚೇನು ಹೇಳುವುದಿಲ್ಲ. ಸೂಚ್ಯವಾಗಿ ಹೇಳಿದ್ದೇನೆ ಎಂದರು. ಬೆಳ್ತಂಗಡಿ ಶಾಸಕರ ಬಗ್ಗೆ ನಿಮ್ಮವರೇ ಮೃದು ಧೋರಣೆ ತೋರಿಸಿದ್ದಾರಲ್ಲವೇ. ಬೆಳ್ತಂಗಡಿಯಲ್ಲೇ ಅವರ ಜೊತೆಗೆ ಕಾಂಗ್ರೆಸಿಗರು ಒಳ ಒಪ್ಪಂದ ಮಾಡಿಕೊಂಡವರಿದ್ದಾರೆ ಎಂದು ಕೇಳಿದಾಗ, ಎಲ್ಲದಕ್ಕೂ ಒಂದೇ ಉತ್ತರ ಎಂದು ಹೇಳಿದರು ರಮಾನಾಥ ರೈ. ಪೂಂಜಾಗೆ ಈ ರೀತಿ ಮಾತಾಡುವುದು ಒಂದು ಚಾಳಿಯಾಗಿದೆ. ಮತೀಯ ಸಾಮರಸ್ಯ ಆಗಬೇಕಂದ್ರೆ, ಇದಕ್ಕೆಲ್ಲ ಫುಲ್ ಸ್ಟಾಪ್ ಆಗಬೇಕು ಎಂದರು.

ರೌಡಿಶೀಟ್ ತೆರೆಯಬಲ್ಲ ವ್ಯಕ್ತಿ ಎಂಎಲ್ಎ

ಬೆಳ್ತಂಗಡಿಯ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಮಾತನಾಡಿ, ಹರೀಶ್ ಪೂಂಜಾಗೆ ಸ್ವಲ್ಪ ಬುದ್ಧಿ ಇದೆಯೆಂದು ತಿಳ್ಕೊಂಡಿದ್ದೆ. ಮೊನ್ನೆಯ ಭಾಷಣದಲ್ಲಿ ತಲೆಯಲ್ಲಿ ದ್ವೇಷದ ಲದ್ದಿ ಇದೆಯೆಂದು ತೋರಿಸಿದ್ದಾರೆ. ಅವರಾಡಿದ ಮಾತು ದೇಶಕ್ಕೆ, ಸ್ವಾತಂತ್ರ್ಯ ಹೋರಾಟಕ್ಕೆ ಅಪಮಾನ. ಬಿಜೆಪಿಯವರು ಇಷ್ಟೆಲ್ಲ ಮಾಡಿದರೂ ಒಬ್ಬ ಐಕಾನನ್ನು ಗುರುತಿಸಲು ಆಗಿಲ್ಲ. ಹಿಂದೆ ವಿವೇಕಾನಂದ, ಸರ್ದಾರ್ ಪಟೇಲ್, ಭಗತ್ ಸಿಂಗ್ ರನ್ನು ಹೇಳುತ್ತಿದ್ದರು. ಹರೀಶ್ ಪೂಂಜಾಗೆ ಸೈದ್ಧಾಂತಿಕ ಕ್ಲಾರಿಟಿ ಇಲ್ಲದ ಮನುಷ್ಯ. ತಹಸೀಲ್ದಾರ್, ಪೊಲೀಸರು ಇದ್ದಾಗಲೇ ಈ ರೀತಿ ಅಪಮಾನಕರವಾಗಿ, ದೇಶದ್ರೋಹಿ ರೀತಿ ಮಾತಾಡಿದ್ದು ನಾವು ಪೊಲೀಸ್ ದೂರು ಕೊಟ್ಟಿದ್ದೇವೆ. ಆತನ ಮೇಲೆ ಈಗಾಗಲೇ ಆರು ಕಡೆ ಕೇಸು ಇದೆ, ರೌಡಿಶೀಟ್ ತೆರೆಯಲು ಎಲ್ಲ ಅರ್ಹತೆಯುಳ್ಳ ವ್ಯಕ್ತಿ ಹರೀಶ್ ಪೂಂಜಾ ಎಂದು ವಾಗ್ದಾಳಿ ನಡೆಸಿದರು. ಶಶಿಧರ್ ಹೆಗ್ಡೆ, ಹರಿನಾಥ್, ಅಪ್ಪಿ, ಧರಣೇಂದ್ರ ಜೈನ್ ಮತ್ತಿತರರಿದ್ದರು.

Mangalore Police should register Sumoto case against MLA Harish poonja for his rude behaviour says Ramanath Rai. During the Independence Day celebration organized by the Beltangady taluk administration, Beltangady MLA Harish Poonja's speech has sparked controversy, with accusations that it threatened the unity, integrity, and sovereignty of the country.