ಬ್ರೇಕಿಂಗ್ ನ್ಯೂಸ್
19-08-24 04:42 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್.19: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲು ರಾಜ್ಯಪಾಲರು ಅನುಮತಿ ನೀಡಿರುವ ವಿಚಾರವನ್ನು ಖಂಡಿಸಿ ಮತ್ತು ರಾಜ್ಯಪಾಲರ ರಾಜಿನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು ವಿಕೋಪಕ್ಕೆ ತಿರುಗಿದೆ. ಶಾಂತಿಯುತವಾಗಿಯೇ ಮುಗಿಯುತ್ತಿದ್ದ ಪ್ರತಿಭಟನೆ ಕಿಡಿಗೇಡಿಗಳ ಎಡವಟ್ಟಿನಿಂದಾಗಿ ಹಿಂಸೆಗೆ ತಿರುಗುವಂತಾಗಿದೆ.
ನಗರದ ನಾರಾಯಣ ಗುರು ಸರ್ಕಲ್ ನಿಂದ ಕಾಂಗ್ರೆಸ್ ಪ್ರಮುಖರು, ಕಾರ್ಯಕರ್ತರು ಕಾಲ್ನಡಿಗೆ ಮೂಲಕ ಲಾಲ್ ಬಾಗ್ ವರೆಗೆ ಬಂದು ಪ್ರತಿಭಟನಾ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಪ್ರಕಾಶ್ ರಾಠೋಡ್ ಭಾಷಣ ಮಾಡಿದ್ದು, ನಾವೆಲ್ಲ ಸಿದ್ದರಾಮಯ್ಯ ಪರ ಇದ್ದೇವೆ. ಗುರುವಾರ ಬೆಂಗಳೂರಿನಲ್ಲಿ ಶಾಸಕಾಂಗ ಸಭೆ ನಡೆಸಲಿದ್ದು, ಸಿದ್ದರಾಮಯ್ಯ ಪರವಾಗಿ ಒಗ್ಗಟ್ಟಿನ ದನಿ ಮೊಳಗಿಸುತ್ತೇವೆ ಎಂದು ಹೇಳಿದರು.
ಬಳಿಕ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ವೀರಾವೇಶದಿಂದ ಭಾಷಣ ಮಾಡಿದ್ದು, ರಾಜ್ಯಪಾಲರನ್ನು ಕಳ್ಳ, ಕುತಂತ್ರಿ, ಬಿಜೆಪಿ ಏಜಂಟ್ ಎಂದು ನಿಂದಿಸಿದರು. ಅಲ್ಲದೆ, ಸಿದ್ದರಾಮಯ್ಯ ಒಬ್ಬ ಹಿಂದುಳಿದ ವರ್ಗದಿಂದ ಬಂದ ಅತ್ಯಂತ ಶ್ರೇಷ್ಠ ಮುತ್ಸದ್ಧಿ. ಅವರನ್ನು ಕಳಂಕಿತರನ್ನಾಗಿ ಮಾಡುವುದು ಬಿಜೆಪಿ- ಜೆಡಿಎಸ್ ಹುನ್ನಾರ. ಆಮೂಲಕ ಅಧಿಕಾರ ಹಿಡಿಯಬಹುದು ಎನ್ನುವ ಹುನ್ನಾರ ನಡೆಸಿದ್ದಾರೆ. ಮತಿಗೆಟ್ಟ ರಾಜ್ಯಪಾಲರನ್ನು ರಾಷ್ಟ್ರಪತಿಗಳು ಕೂಡಲೇ ಹಿಂಪಡೆಯಬೇಕು. ಇಲ್ಲದೇ ಇದ್ದರೆ, ರಾಜ್ಯದಲ್ಲಿ ಬಾಂಗ್ಲಾದ ಸ್ಥಿತಿ ಮರುಕಳಿಸಲಿದೆ. ಬಾಂಗ್ಲಾ ಅಧ್ಯಕ್ಷರು ದೇಶ ಬಿಟ್ಟು ಓಡಿ ಹೋಗುವ ಸ್ಥಿತಿ ಹೇಗೆ ಬಂತೋ ಅದೇ ರೀತಿಯ ಸ್ಥಿತಿಯನ್ನು ನಾವು ಮಾಡುತ್ತೇವೆ. ರಾಜ್ಯಪಾಲರನ್ನು ಓಡಿಸಲು ಮುತ್ತಿಗೆ ಹಾಕುತ್ತೇವೆ. ರಾತ್ರೋರಾತ್ರಿ ರಾಜ್ಯಪಾಲರು ರಾಜ್ಯ ಬಿಟ್ಟು ಓಡಿಹೋಗುವ ಸ್ಥಿತಿ ಬರಲಿದೆ ಎಂದು ಹೇಳಿದರು.
ಆನಂತರ, ಮಾಜಿ ಸಚಿವ ರಮಾನಾಥ ರೈ, ಮಿಥುನ್ ರೈ ಭಾಷಣ ಮಾಡಿದ್ದಾರೆ. ಇಷ್ಟಾಗುತ್ತಲೇ ಇನಾಯತ್ ಆಲಿ ಮತ್ತು ಐವಾನ್ ಡಿಸೋಜ ನೇತೃತ್ವದಲ್ಲಿ ಒಂದಷ್ಟು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪಕ್ಕದ ರಸ್ತೆಗೆ ನುಗ್ಗಿ ವಾಹನಗಳ ಸಂಚಾರಕ್ಕೆ ತಡೆ ನಡೆಸಿದ್ದಾರೆ. ರಸ್ತೆಯಲ್ಲಿ ಕುಳಿತು ಬಿಜೆಪಿಗೆ ಧಿಕ್ಕಾರ ಘೋಷಣೆ ಕೂಗಿದ್ದಾರೆ. ಕಾರ್ಯಕರ್ತರನ್ನು ರಸ್ತೆಯಿಂದ ಎಬ್ಬಿಸುವ ಪ್ರಯತ್ನ ಪೊಲೀಸರಿಂದ ನಡೆಯುತ್ತಿದ್ದಾಗಲೇ, ಇನ್ನೊಂದು ಕಡೆ ಟೈರ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಪೊಲೀಸರು ಇರುವಾಗಲೇ ಬೆಂಕಿ ಹಚ್ಚಿದ್ದು, ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಸಿಪಿ ಸಿದ್ದಾರ್ಥ ಗೋಯಲ್ ನೀರು ತನ್ನಿ ಎಂದು ಪೊಲೀಸರಿಗೆ ಹೇಳುತ್ತಲೇ, ಜೀಪು ಒಳಗೆ ಕುಡಿಯಲು ಕ್ಯಾನಲ್ಲಿ ಇಟ್ಟಿದ್ದ ನೀರನ್ನು ಸುರಿದು ಬೆಂಕಿ ನಂದಿಸಿದ್ದಾರೆ.
ಇಷ್ಟಾಗುತ್ತಲೇ ರಸ್ತೆ ತಡೆ ನಡೆಸುತ್ತಿದ್ದ ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ಪ್ರತಿಭಟನಾ ಸಭೆಯಲ್ಲಿದ್ದವರು ಕೂಡ ಬಂದು ರಸ್ತೆಯಲ್ಲಿ ಕುಳಿತು ಮತ್ತೆ ರಸ್ತೆ ತಡೆಗೆ ಯತ್ನಿಸಿದ್ದಾರೆ. ಐವಾನ್ ಡಿಸೋಜ ಮತ್ತೆ ಅವರೊಂದಿಗೂ ಸೇರಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಒಂದು ಕಡೆಯ ರಸ್ತೆಯಲ್ಲಿ ವಾಹನಗಳನ್ನು ಬಿಡಲಾಗುತ್ತಿತ್ತು. 2 ನಂಬರಿನ ಸುರತ್ಕಲ್ ಜೋಕಟ್ಟೆ ಹೋಗುವ ರೂಟಿನ ಖಾಸಗಿ ಬಸ್ ರಸ್ತೆ ಮಧ್ಯೆ ನಿಂತಿದ್ದಾಗ, ಕಾರ್ಯಕರ್ತರ ನಡುವೆ ಇದ್ದ ಕಿಡಿಕೇಡಿಯೊಬ್ಬ ಬಸ್ಸಿನ ಮುಂದಿನ ಗಾಜಿಗೆ ಕಲ್ಲು ತೂರಿದ್ದು, ಗಾಜು ಒಡೆದು ಚೂರು ಚೂರಾಗಿ ಕೆಳಕ್ಕೆ ಬಿದ್ದಿದೆ. ಒಳಗೆ ಪ್ರಯಾಣಿಕರು ಹೆಚ್ಚಿರದೇ ಇದ್ದುದರಿಂದ ಯಾರಿಗೂ ಗಾಯಗಳಾಗಿಲ್ಲ.
ಆದರೆ, ಇದರಿಂದ ಸಿಟ್ಟಿಗೆದ್ದ ಬಸ್ಸಿನ ಸಿಬಂದಿ ಕೆಳಕ್ಕಿಳಿದು ಕಾಂಗ್ರೆಸ್ ಪ್ರಮುಖರ ಜೊತೆಗೆ ವಾಗ್ವಾದ ನಡೆಸಿದ್ದು ನಮ್ಮ ಬಸ್ಸೇ ನಿಮಗೆ ಸಿಕ್ಕಿದ್ದಾ ಎಂದು ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್ ನಾಯಕರು, ಚಿಂತೆ ಮಾಡಬೇಡಿ, ಅದನ್ನು ಸರಿ ಮಾಡಿಕೊಡುತ್ತೇವೆ ಎಂದು ಸಮಾಧಾನ ಮಾಡಿದ್ದಾರೆ. ಆನಂತರ, ಬಸ್ ಸಿಬಂದಿ ಬರ್ಕೆ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದಾರೆ. ಇಷ್ಟಾಗುತ್ತಲೇ ಎಲರ್ಟ್ ಆದ ಪೊಲೀಸರು ಎಲ್ಲರನ್ನು ಚದುರಿಸುವ ಯತ್ನ ಮಾಡಿದ್ದಾರೆ. ಆಡಳಿತ ಪಕ್ಷೀಯರದ್ದೇ ಪ್ರತಿಭಟನೆ ಎಂದು ಪೊಲೀಸರು ಸ್ವಲ್ಪ ನಿರ್ಲಕ್ಷ್ಯ ತಾಳಿದ್ದು ಅಲ್ಲಿಂದಲ್ಲಿಗೆ ಮುಗಿದು ಹೋಗುತ್ತಿದ್ದ ಪ್ರತಿಭಟನೆ ವಿಕೋಪಕ್ಕೆ ಹೋಗುವಷ್ಟರ ಮಟ್ಟಿಗೆ ಹೋಯಿತು.
Congress protest over Karnataka governor turns ugly, tyres on fire, stone pelted on bus in Mangalore. The protest rally took place in Mangaluru near Mangaluru City Corporation (MCC) office. Former minister Ramanath Rai, Puttur MLA Ashok Rai, district Congress president Harish Kumar, MLC Ivan D'Souza and many other leaders were a part of it.
20-09-25 02:59 pm
HK News Desk
Cm Siddaramaiah, Caste Survey: ಜಾತಿ ಸಮೀಕ್ಷೆ ಮ...
19-09-25 10:04 pm
Caste survey: ಜಾತಿ ಸಮೀಕ್ಷೆಗೆ ಸರ್ಕಾರದ ಸಚಿವರಿಂದ...
19-09-25 02:16 pm
ಮೋಸದಿಂದಲೇ ಕಣ್ರೀ ಬಿಜೆಪಿ ಚುನಾವಣೆ ಗೆದ್ದಿದೆ! ರಾಹು...
19-09-25 09:45 am
ಬೆಂಗಳೂರು ಗಬ್ಬೆದ್ದು ನಾರುತ್ತಿದೆ, ರಾಜಧಾನಿ ಈಗ ಗುಂ...
19-09-25 09:42 am
20-09-25 11:42 am
HK News Desk
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
20-09-25 08:46 pm
Mangalore Correspondent
ಜಾತಿ, ಶೈಕ್ಷಣಿಕ ಸಮೀಕ್ಷೆ ; 47 ಹಿಂದು ಉಪ ಜಾತಿಗಳಲ್...
20-09-25 08:29 pm
Mangalore Missing, Deralakatte: ದೇರಳಕಟ್ಟೆ ಮಸೀ...
20-09-25 06:39 pm
Mangalore, Heart Attack: ಪ್ರತ್ಯೇಕ ಪ್ರಕರಣ ; ಮೂ...
20-09-25 02:31 pm
ಅಪಸ್ಮಾರ ಕಾಯಿಲೆ, ಕುಂಪಲದ ಹದಿಹರೆಯದ ಬ್ಯೂಟೀಷಿಯನ್ ಯ...
19-09-25 10:46 pm
20-09-25 05:11 pm
Mangalore Correspondent
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm