Mangalore, Train, Railway station: ರೈಲು ಹೊರಡುತ್ತಿದ್ದಾಗ ಹತ್ತಲೆತ್ನಿಸಿ ಎಡವಿ ಬಿದ್ದ ಯುವಕ ; ಸಾವಿನ ದವಡೆಯಿಂದ ಪಾರು ಮಾಡಿದ ರೈಲ್ವೇ ಪೊಲೀಸ್

19-08-24 05:58 pm       Mangalore Correspondent   ಕರಾವಳಿ

ಯಾಣಿಕನೊಬ್ಬ ಚಲಿಸುತ್ತಿದ್ದ ರೈಲಿಗೆ ಹತ್ತಲು ಯತ್ನಿಸಿ ಎಡವಿ ಬಿದ್ದಿದ್ದು, ರೈಲ್ವೇ ಪೊಲೀಸರ ಸಕಾಲಿಕ ಪ್ರಯತ್ನದಿಂದ ರೈಲಿನಡಿಗೆ ಬೀಳುವುದರಿಂದ ಸ್ವಲ್ಪದರಲ್ಲಿ ಬಚಾವಾದ ಘಟನೆ ಪಡೀಲಿನ ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

ಮಂಗಳೂರು, ಆಗಸ್ಟ್.19: ಪ್ರಯಾಣಿಕನೊಬ್ಬ ಚಲಿಸುತ್ತಿದ್ದ ರೈಲಿಗೆ ಹತ್ತಲು ಯತ್ನಿಸಿ ಎಡವಿ ಬಿದ್ದಿದ್ದು, ರೈಲ್ವೇ ಪೊಲೀಸರ ಸಕಾಲಿಕ ಪ್ರಯತ್ನದಿಂದ ರೈಲಿನಡಿಗೆ ಬೀಳುವುದರಿಂದ ಸ್ವಲ್ಪದರಲ್ಲಿ ಬಚಾವಾದ ಘಟನೆ ಪಡೀಲಿನ ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

ಸೋಮವಾರ ಬೆಳಗ್ಗೆ 9.30ರ ಸುಮಾರಿಗೆ ನೇತ್ರಾವತಿ ಎಕ್ಸ್ ಪ್ರೆಸ್ ರೈಲು ಹೊರಡುತ್ತಿದ್ದಾಗ ಘಟನೆ ನಡೆದಿದೆ. ಪ್ಲಾಟ್ ಫಾರಂ ನಂಬರ್ 1ರಲ್ಲಿ ರೈಲು ಹೊರಡುತ್ತಿದ್ದಾಗ ಸಾಸಂಗ್ ಎಂಬ ಹೆಸರಿನ ಯುವಕನೊಬ್ಬ ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಓಡಿ ಬಂದಿದ್ದು, ರೈಲಿಗೆ ಹತ್ತಲು ಯತ್ನಿಸಿದ್ದಾನೆ.

ಆದರೆ ರೈಲಿನ ಬಾಗಿಲಿನ ಸರಳು ಕೈಗೆ ಸಿಗದೆ ಎಡೆಯಲ್ಲಿ ಸಿಲುಕಿಕೊಂಡಿದ್ದು, ಆಯತಪ್ಪಿ ಬಿದ್ದಿದ್ದಾನೆ. ಹಳಿಯಡಿಗೆ ಬೀಳುತ್ತಿದ್ದ ವ್ಯಕ್ತಿಯನ್ನು ಅಲ್ಲಿಯೇ ಕರ್ತವ್ಯದಲ್ಲಿದ್ದ ರೈಲ್ವೇ ಪೊಲೀಸ್ ವಿಭಾಗದ ಹೆಡ್ ಕಾನ್ಸ್ ಟೇಬಲ್ ರಾಘವನ್ ಎಳೆದು ಮೇಲಕ್ಕೆ ಹಾಕಿದ್ದಾರೆ. ಇದರಿಂದ ಯುವಕ ಸ್ವಲ್ಪದರಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾನೆ. ಯುವಕನನ್ನು ಸಾವಿನಿಂದ ಪಾರು ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Mangalore railway police miraculously saves youth after falling onto train tracks in India, video viral.