B K Hariprasad, Mangalore: ರಾಜ್ಯಪಾಲರು ಬಿಜೆಪಿ ಅಧ್ಯಕ್ಷರ ರೀತಿ ವರ್ತಿಸಿದ್ದಾರೆ, ವಾಮಮಾರ್ಗದಲ್ಲಿ ಸರ್ಕಾರ ಅಸ್ಥಿರಕ್ಕೆ ಯತ್ನಿಸಿದ್ದಾರೆ, ಯಡಿಯೂರಪ್ಪ ಕೇಸಿಗೂ ಇದಕ್ಕೂ ಅಜಗಜಾಂತರ ವ್ಯತ್ಯಾಸ ಇದೆ.. 

20-08-24 12:01 pm       Mangalore Correspondent   ಕರಾವಳಿ

ರಾಜ್ಯಪಾಲರು ಬಿಜೆಪಿ ಅಧ್ಯಕ್ಷರ ರೀತಿಯಲ್ಲಿ ವರ್ತಿಸಿದ್ದಾರೆ. ಈ ಹಿಂದೆ ರಾಜ್ಯ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಬಿಜೆಪಿ ಕೆಡವಲು ನೋಡಿತ್ತು.

ಮಂಗಳೂರು, ಆಗಸ್ಟ್‌.20: ರಾಜ್ಯಪಾಲರು ಬಿಜೆಪಿ ಅಧ್ಯಕ್ಷರ ರೀತಿಯಲ್ಲಿ ವರ್ತಿಸಿದ್ದಾರೆ. ಈ ಹಿಂದೆ ರಾಜ್ಯ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಬಿಜೆಪಿ ಕೆಡವಲು ನೋಡಿತ್ತು. ಈ ಬಾರಿ ಆಪರೇಶನ್ ಮಾಡುವುದು ಸಾಧ್ಯವಿಲ್ಲ ಎಂದರಿತು ವಾಮಮಾರ್ಗದಲ್ಲಿ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ರಾಜ್ಯಪಾಲರನ್ನು ರಾಜಕೀಯ ದುರುಪಯೋಗ ಮಾಡಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಮೊಸರಲ್ಲಿ ಕಲ್ಲು ಹುಡುಕುವ ಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಇದಕ್ಕಾಗಿ ರಾಜ್ಯಪಾಲರ ಮೂಲಕ ಅಧಿಕಾರ ದುರುಪಯೋಗ ಮಾಡಿದ್ದಾರೆ.‌ ರಾಜ್ಯಪಾಲರು ಸಾಂವಿಧಾನಿಕ ಚೌಕಟ್ಟಿನಲ್ಲಿ ರಾಜ್ಯಾಧಿಕಾರಕ್ಕೆ ಮುಖ್ಯಸ್ಥರು ಆಗಿದ್ದಾರೆ. ಆದರೆ ಈ ಪ್ರಕರಣದಲ್ಲಿ ಯಾರೋ ಒಬ್ಬ ದೂರು ನೀಡಿದ್ದನ್ನು ಪರಿಗಣಿಸಿ ಮೇಲ್ನೋಟಕ್ಕೆ ಮುಖ್ಯಮಂತ್ರಿ ವಿರುದ್ಧ ಅಧಿಕಾರ ದುರುಪಯೋಗ ಇಲ್ಲದಿದ್ದರೂ ತನಿಖೆಗೆ ಅನುಮತಿ ನೀಡಿದ್ದಾರೆ. ಇದೊಂದು ರಾಜ್ಯಪಾಲ ಗೆಹ್ಲೋಟ್ ಅವರು ಬಿಜೆಪಿಯವರ ಜೊತೆ ಸೇರಿ ಅಧಿಕಾರ ದುರುಪಯೋಗ ಮಾಡಿದ್ದಕ್ಕೆ ಸಾಕ್ಷಿಯಂತಿದೆ. 

BS Yediyurappa resigns as Chief Minister of Karnataka; says 'no pressure  from BJP high command' - BusinessToday

amit shah on manipur violence: Home Minister Amit Shah keeping close eye on  Manipur situation, taking regular inputs - The Economic Times

Karnataka: Siddaramaiah says it is up to high command to decide on CM post

ಯಡಿಯೂರಪ್ಪ ಪ್ರಕರಣಕ್ಕೂ ತುಂಬ ವ್ಯತ್ಯಾಸ ಇದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ 20 ಕೋಟಿ ರೂ. ವನ್ನು ಚೆಕ್ ನಲ್ಲಿ ಪಡೆದಿದ್ದರು. ಅದು ಕೋರ್ಟಿನಲ್ಲಿ ಸಾಬೀತಾಗಿದ್ದು ಜೈಲಿಗೆ ಹೋಗುವಂತಾಗಿತ್ತು. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅಧಿಕಾರ ದುರುಪಯೋಗ ನಡೆಸಿದ್ದಿಲ್ಲ. ಹಾಗೆ ನೋಡಿದರೆ ಶಿವರಾಜ್ ಸಿಂಗ್ ಚೌಹಾಣ್ ವ್ಯಾಪಂ ಹಗರಣದಲ್ಲಿ ಆರೋಪಿಯಾಗಿದ್ದರು. ಅಮಿತ್ ಷಾ ಅವರನ್ನು ಗಡೀಪಾರು ಮಾಡಿದ್ದನ್ನು ಸುಪ್ರೀಂ ಕೋರ್ಟ್ ಎತ್ತುಹಿಡಿದಿತ್ತು. ಅದನ್ನು ನಾವೂ ಪ್ರಶ್ನೆ ಮಾಡಿದರೆ, ಇವರು ಅಧಿಕಾರದಲ್ಲಿ ಮುಂದುವರಿಯುತ್ತಾರೆಯೇ ಎಂದು ಪ್ರಶ್ನಿಸಿದರು. 

Thawar Chand Gehlot is new Governor of Karnataka - Star of Mysore

ರಾಜ್ಯಪಾಲ ಗೆಹ್ಲೋಟ್ ದಲಿತ ಎಂಬ ಕಾರಣಕ್ಕೆ ಕಾಂಗ್ರೆಸ್ ಟಾರ್ಗೆಟ್ ಮಾಡಿದೆ ಎಂಬ ಬಿಜೆಪಿಗರ ಆರೋಪದ ಬಗ್ಗೆ ಕೇಳಿದ್ದಕ್ಕೆ, ದಲಿತರ ಬಗ್ಗೆ ಮೊಸಳೆ ಕಣ್ಣೀರು ಮಾತ್ರ ಹಾಕುತ್ತಾರೆ. ಅಷ್ಟು ಕಾಳಜಿ, ಪ್ರೀತಿ ಇದ್ದರೆ ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಫೋಟೊ ಇಟ್ಟುಕೊಂಡಿದ್ದಾರೆಯೇ ಎಂದು ಕೇಳಿದರು.  

ರಾಜ್ಯಪಾಲರ ವಿರುದ್ಧ ಕಾನೂನು ಕ್ರಮದ ಬಗ್ಗೆ ಕಾಂಗ್ರೆಸ್ ನಾಯಕರು ಒತ್ತಾಯ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ರಾಜ್ಯಪಾಲರದ್ದು ಸಾಂವಿಧಾನಿಕ ಹುದ್ದೆ. ಆ ಹುದ್ದೆಯ ಬಗ್ಗೆ ಗೌರವ ಇದೆ. ಅವರ ಈ ರೀತಿಯ ನಡೆಯನ್ನು ಮಾತ್ರ ವಿರೋಧಿಸುತ್ತೇವೆ. ಕಾನೂನು ಕ್ರಮ ಕೈಗೊಳ್ಳುವುದು ಸರಿಯಲ್ಲ ಅಂತ ನನ್ನ ಅಭಿಪ್ರಾಯ ಎಂದು ಬಿಕೆ ಹರಿಪ್ರಸಾದ್ ಹೇಳಿದರು.

BK Hariprasad slams governor for his behavior over Cm Siddaramaiah in Muda scam case.