ಬ್ರೇಕಿಂಗ್ ನ್ಯೂಸ್
20-08-24 02:23 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 20: ಪಶ್ಚಿಮ ಬಂಗಾಳ ರೀತಿ ಇಡೀ ಕರ್ನಾಟಕದಲ್ಲಿ ದೊಂಬಿ, ಗಲಭೆ ಎಬ್ಬಿಸುವುದಕ್ಕಾಗಿ ಕಾಂಗ್ರೆಸ್ ನಾಯಕರು ದೊಡ್ಡ ಷಡ್ಯಂತ್ರ ಮಾಡುತ್ತಿದ್ದಾರೆ. ಬಾಂಗ್ಲಾದಲ್ಲಿ ಆದ ರೀತಿಯಲ್ಲೇ ರಾಜಭವನಕ್ಕೆ ನುಗ್ಗುತ್ತೇವೆ, ಓಡಿಸುತ್ತೇವೆ ಎನ್ನುವ ಮೂಲಕ ಭಯ ಮೂಡಿಸುವ ಕೆಲಸ ಮಾಡಿದ್ದಾರೆ. ಐವಾನ್ ಡಿಸೋಜ ಸೇರಿದಂತೆ ಹಲವು ನಾಯಕರು ಬಾಂಗ್ಲಾ ಹೆಸರೆತ್ತಿರುವುದು ದೇಶದಲ್ಲಿ ದೊಂಬಿ ಎಬ್ಬಿಸುವ ಕಾಂಗ್ರೆಸ್ ಅಜೆಂಡಾವನ್ನು ತೋರಿಸುತ್ತಿದೆ ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ.
ಮಂಗಳೂರಿನ ಮಹಾನಗರ ಪಾಲಿಕೆಯ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಈ ವಿಷಯದಲ್ಲಿ ಪೊಲೀಸರು ಯಾವ ರೀತಿ ವರ್ತಿಸುತ್ತಾರೆ ಎನ್ನುವುದು ಮುಖ್ಯ. ಆಡಳಿತ ಪಕ್ಷೀಯರು ಎಂದು ನಿರ್ಲಕ್ಷ್ಯ ವಹಿಸಿದರೆ ಮುಂದೆ ಬೇರೆ ಸಂಘಟನೆಗಳ ಕಾರ್ಯಕರ್ತರೂ ಇದೇ ರೀತಿ ವರ್ತಿಸುತ್ತಾರೆ. ಕಾಂಗ್ರೆಸ್ ಪ್ರತಿಭಟನೆಯಲ್ಲಿ ಬಸ್ಸಿಗೆ ಕಲ್ಲೆಸೆದು, ಟೈರ್ ಸುಟ್ಟು ನಾಗರಿಕ ಸಮಾಜ ಭಯ ಪಡುವಂತೆ ಮಾಡಿದ್ದಾರೆ. ಮುಖ್ಯಮಂತ್ರಿಗಿಂತಲೂ ಮೇಲಿನ ಸ್ಥಾನದಲ್ಲಿರುವ ರಾಜ್ಯಾಂಗದ ಸುಪ್ರೀಂ ಆಗಿರುವ ವ್ಯಕ್ತಿಯ ಮನೆಗೆ ನುಗ್ಗುತ್ತೇವೆ, ಬಾಂಗ್ಲಾ ರೀತಿಯಲ್ಲಿ ಓಡಿಸುತ್ತೇವೆ ಎನ್ನುವುದು ವ್ಯವಸ್ಥೆ ಮೇಲೆ ಒಡ್ಡಿರುವ ಬೆದರಿಕೆ.
ಇದನ್ನು ಕೇಳಿ ಪ್ರತಿಪಕ್ಷ ಬಿಜೆಪಿ ಕೈಕಟ್ಟಿ ಕೂರುವುದಕ್ಕೆ ಸಾಧ್ಯವಿಲ್ಲ. ಒಬ್ಬ ದಲಿತ ರಾಜ್ಯಪಾಲರನ್ನು ಮನೆಗೆ ನುಗ್ಗಿ ಓಡಿಸುತ್ತೇವೆಂದು ಬೆದರಿಕೆ ಹಾಕಿದ್ದಾರೆ, ಈ ಬಗ್ಗೆ ಯುವಮೋರ್ಚಾದಿಂದ ದೂರು ಕೊಟ್ಟಿದ್ದೇವೆ. ಪೊಲೀಸರು ಇನ್ನೂ ಕೇಸು ದಾಖಲು ಮಾಡಿಲ್ಲ. ಸುಮೋಟೊ ಕೇಸು ದಾಖಲು ಮಾಡಬಹುದಾದರೂ, ಸಿದ್ದರಾಮಯ್ಯ ಭಿಕ್ಷೆಯಲ್ಲಿ ಎಂಎಲ್ಸಿ ಆಗಿರುವ ಐವಾನ್ ಡಿಸೋಜ ಮುಖ್ಯಮಂತ್ರಿ ಕೃಪೆಯಿಂದ ಕೇಸು ಆಗದಂತೆ ಮಾಡುತ್ತಿದ್ದಾರೆ. ಬಸ್ಸಿಗೆ ಕಲ್ಲೆಸೆದಿದ್ದು ಮಹಾನಗರ ಪಾಲಿಕೆಯ ಒಬ್ಬ ನಾಮಿನೇಟೆಡ್ ಕಾರ್ಪೊರೇಟರ್. ಇನ್ನೊಬ್ಬ ಪಂಚಾಯತ್ ಮೆಂಬರ್. ಇವರು ಪೊಲೀಸ್ ಠಾಣೆಗೆ ಹೋಗಿ, ನಾವೇ ಮಾಡಿದ್ದು ಏನ್ಮಾಡ್ತೀರಿ ಅಂತ ಧಮ್ಕಿ ಹಾಕುತ್ತಾರೆ. ಇವರಿಗೆ ಕಾಂಕ್ರೀಟ್ ರೋಡಲ್ಲಿ ಕಲ್ಲೆಸೆಯಲು ಜಲ್ಲಿ ಕಲ್ಲು ಎಲ್ಲಿಂದ ಸಿಕ್ಕಿತು ಎನ್ನುವ ಬಗ್ಗೆ ತನಿಖೆಯಾಗಬೇಕು. ನಾಲ್ಕೈದು ಟೈರ್ ಗಳನ್ನು ತಂದು ಸುಡುವುದಕ್ಕೆ ಪೊಲೀಸರು ಅವಕಾಶ ಕೊಟ್ಟಿದ್ದು ಹೇಗೆ ಎಂದು ಭರತ್ ಶೆಟ್ಟಿ ಪ್ರಶ್ನೆ ಮಾಡಿದರು.
ಇಷ್ಟೊಂದು ಗಂಭೀರ ಪ್ರಕರಣದಲ್ಲಿ ಪೊಲೀಸರು ಮೌನ ವಹಿಸಿದರೆ, ಅವರ ಮೇಲಿನ ವಿಶ್ವಾಸ ಹೋಗುತ್ತದೆ. ಏನು ಮಾಡಿದರೂ ನಡೆಯುತ್ತೆ ಅನ್ನುವುದು ಬೆಂಚ್ ಮಾರ್ಕ್ ಆಗತ್ತೆ. ಇವರಿಗೆಲ್ಲ ಪೊಲೀಸರು ಪಾಠ ಕಲಿಸುವಂತೆ ಕೇಸು ಜಡಿಯಬೇಕು. ಇದೇ ಕೆಲಸವನ್ನು ಬೇರೆ ಪಕ್ಷದವರು ಮಾಡಿದರೆ ಸ್ಟೇಶನ್ ಬೇಲ್ ಕೊಡುತ್ತಾರೆಯೇ ಎಂದು ಪೊಲೀಸರಲ್ಲಿ ಕೇಳಬೇಕಾಗುತ್ತದೆ. ನಿನ್ನೆಯ ವರ್ತನೆ ನೋಡಿದರೆ, ಕಾಂಗ್ರೆಸಿಗರು ಪೂರ್ವ ನಿಯೋಜಿತ ರೀತಿಯಲ್ಲಿ ಗಲಭೆಗೆ ಯತ್ನ ಮಾಡಿರುವಂತೆ ತೋರುತ್ತಿದೆ. ಒಬ್ಬರು ಬಾಂಗ್ಲಾ ರೀತಿ ಮಾಡುತ್ತೇವೆಂದು ಭಾಷಣ ಬಿಗಿದ ಬೆನ್ನಲ್ಲೇ ಕಲ್ಲೆಸೆದು, ಟೈರ್ ಸುಟ್ಟು ಗೂಂಡಾ ಪ್ರವೃತ್ತಿ ತೋರಿದ್ದಾರೆ.
ಬಾಂಗ್ಲಾದಲ್ಲಿ ಹಿಂದುಗಳು ಮತ್ತು ಕ್ರೈಸ್ತರ ಮಾರಣ ಹೋಮ ಆಗಿದೆ. ಅಲ್ಲಿ ನರಮೇಧ ಆಗುತ್ತಿದ್ದಾಗ ಇವರಿಗೆ ಕಣ್ಣು ಕಾಣಿಸಿಲ್ಲ. ಇವರ ಸೆಲೆಕ್ಟಿವ್ ಸೆಕ್ಯುರಿಸಂ ತೋರಿಸಿ ಮೌನ ವಹಿಸಿದ್ದರು. ಆದರೆ ಈಗ ಎಲ್ಲ ಕಡೆಯೂ ಬಾಂಗ್ಲಾ ರೀತಿ ಮಾಡುತ್ತೇವೆ ಎನ್ನುವ ಹೇಳಿಕೆ ಬರುತ್ತಿದೆ. ಇದರಲ್ಲಿ ಕಾಂಗ್ರೆಸ್ ಮೇಲಿನ ನಾಯಕರ ಪ್ರೇರಣೆ ಇದೆಯೆಂದು ತೋರುತ್ತಾ ಇದೆ. ಇದನ್ನು ಖಂಡಿಸಿ ಮಂಗಳೂರು ಸೇರಿ ಇಡೀ ರಾಜ್ಯದಲ್ಲಿ ಆಗಸ್ಟ್ 22ರ ಗುರುವಾರ ಪ್ರತಿಭಟನೆ ಮಾಡಲಿದ್ದೇವೆ ಎಂದು ಭರತ್ ಶೆಟ್ಟಿ ಹೇಳಿದರು. ರಣದೀಪ್ ಕಾಂಚನ್, ಭರತ್ ಕೃಷ್ಣಾಪುರ ಮತ್ತಿತರರಿದ್ದರು.
Mangalore Bharath Shetty slams Ivan dsouza remarks Bangladesh like fate warning to Governor sparks row. Karnataka Congress leader Ivan D'Souza threatened Governor Thawar Chand Gehlot of facing a "Bangladesh-like fate" if he does not withdraw his order for probe against Chief Minister Siddaramaiah.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 11:07 pm
HK News Desk
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
28-07-25 10:41 pm
Mangalore Correspondent
Mangalore Remona Pereira, Golden Book of Wor...
28-07-25 09:40 pm
ಪಡ್ರೆ ಧೂಮಾವತಿ ಕ್ಷೇತ್ರಕ್ಕೆ ಅಪಪ್ರಚಾರ ಮಾಡುತ್ತಿರು...
28-07-25 05:39 pm
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
28-07-25 11:20 pm
Mangalore Correspondent
Mangalore Roshan Saldanha; Fraud Case, High c...
27-07-25 08:39 pm
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm