ಬ್ರೇಕಿಂಗ್ ನ್ಯೂಸ್
21-08-24 10:03 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 21: ಐವನ್ ಡಿಸೋಜರು ಬಾಂಗ್ಲಾ ರೀತಿಯ ಅರಾಜಕತೆ ಇಲ್ಲಿಯೂ ಆಗಬಾರದು, ಅಂಥ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ ವಿನಾ ಶಾಂತಿ ಕದಡುವ ಮಾತು ಆಡಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಟಿ ನಡೆಸಿದ ಸಂದರ್ಭ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬೆಳ್ತಂಗಡಿ ಶಾಸಕರು ಒಬ್ಬ ರೌಡಿಯ ಪರವಾಗಿ ಪೊಲೀಸ್ ಠಾಣೆಗೆ ನುಗ್ಗಿ ನಿನ್ನ ಅಪ್ಪನದ್ದು ಠಾಣೆಯಾ ಎಂದು ಪೊಲೀಸರಿಗೆ ಬೈದಿದ್ದಾರೆ. ಭರತ್ ಶೆಟ್ಟಿ ಅವರು ರಾಹುಲ್ ಗಾಂಧಿಯ ಕೆನ್ನೆಗೆ ಹೊಡೀಬೇಕು ಎಂದು ಹೇಳಿಲ್ವಾ.. ಬಿಜೆಪಿಯವರು ಸೆಕ್ಷನ್ ಇದ್ದರೂ ಮೆರವಣಿಗೆ ಮಾಡಿ, ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಆ ರೀತಿಯ ಲೆವೆಲ್ಲಿಗೆ ನಾವು ಹೋಗಿಲ್ಲ.
ಮೊನ್ನೆ ಬಸ್ಸಿಗೆ ಕಲ್ಲು ಎಸೆದಿದ್ದು ತಪ್ಪು. ಅದನ್ನು ಸಮರ್ಥನೆ ಮಾಡುವುದಿಲ್ಲ. ಸಾರ್ವಜನಿಕ ಆಸ್ತಿ ಹಾನಿ ಮಾಡುವುದನ್ನು ಮಾಡಬಾರದಿತ್ತು. ಅದಕ್ಕೆ ವಿಷಾದಿಸುತ್ತೇನೆ. ಅದರ ಬಗ್ಗೆ ಪ್ರಕರಣ ದಾಖಲಾಗಿದೆ, ನಾವೇನು ಕೇಸು ಹಿಂಪಡೆಯಬೇಕೆಂದು ಪ್ರತಿಭಟನೆ ಮಾಡಿಲ್ಲ. ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹರೀಶ್ ಕುಮಾರ್ ಹೇಳಿದರು.
ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಎಸ್ಐಟಿ ಎರಡನೇ ಬಾರಿಗೆ ರಾಜ್ಯಪಾಲರಲ್ಲಿ ಅನುಮತಿ ಕೇಳಿದೆ. ಅದಕ್ಕೆ ಕಾನೂನು ರೀತ್ಯ ಅನುಮತಿ ನೀಡಬೇಕು ಎಂದು ಹೇಳಿದ ಹರೀಶ್ ಕುಮಾರ್, ಸಿದ್ದರಾಮಯ್ಯ ಮೇಲೆ ಯಾರೋ ಖಾಸಗಿ ವ್ಯಕ್ತಿಗಳು ತನಿಖೆಗೆ ಅನುಮತಿ ಕೇಳಿದ್ದಾರೆ. ಕುಮಾರಸ್ವಾಮಿ ವಿರುದ್ಧ ಅಕ್ರಮ ಸಾಬೀತಾಗಿದ್ದಕ್ಕೆ ರಾಜ್ಯದ ಒಂದು ತನಿಖಾ ಸಂಸ್ಥೆ ರಾಜ್ಯಪಾಲರ ಬಳಿ ಹೋಗಿದೆ. ಈ ಹಿಂದೆ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ವಿರುದ್ಧವೂ ತನಿಖೆಗೆ ರಾಜ್ಯಪಾಲರ ಬಳಿಗೆ ದೂರು ಹೋಗಿತ್ತು. ರಾಜ್ಯಪಾಲರು ಯಾಕೆ ಅನುಮತಿ ನೀಡಿಲ್ಲ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಪ್ರಕರಣಕ್ಕೆ ಅಜಗಜಾಂತರ ವ್ಯತ್ಯಾಸ ಇದೆ. ಯಡಿಯೂರಪ್ಪ ಡಿನೋಟಿಫಿಕೇಶನ್ ಆದೇಶ ಮಾಡಿದ್ದಲ್ಲದೆ, 20 ಕೋಟಿ ಚೆಕ್ ಮೂಲಕ ಲಂಚ ಪಡೆದಿದ್ದರು. ಮುಡಾ ಸೈಟ್ ಕೊಡಿಸಿದ್ದು ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ. ಸೈಟ್ ಕೊಡುವಾಗ ಸಿದ್ದರಾಮಯ್ಯ ಮಂತ್ರಿಯಾಗಿರಲಿಲ್ಲ. ಇವರು ಪ್ರಭಾವ ಬೀರಿದ ಯಾವುದೇ ಆಧಾರ ಇಲ್ಲ. ಬಿಜೆಪಿಯವರು ಸಿದ್ದರಾಮಯ್ಯ ಅವರ ಇಮೇಜಿಗೆ ಧಕ್ಕೆ ತರುವುದಕ್ಕಾಗಿ ಆರೋಪ ಮಾಡುತ್ತಿದ್ದಾರೆ ವಿನಾ ಬೇರೇನೂ ಆಧಾರ ಇಲ್ಲ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಪದ್ಮರಾಜ್, ಎಂಜಿ ಹೆಗ್ಡೆ, ಇಬ್ರಾಹಿಂ ಕೋಡಿಜಾಲ್, ನೀರಜ್ ಪಾಲ್, ಶುಭೋದಯ ಆಳ್ವ ಮತ್ತಿತರರಿದ್ದರು.
ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ಕೊಡಿಜಾಲ್, ಜಿಲ್ಲಾ ಕಾಂಗ್ರೆಸ್ ಮುಖಂಡರು ಪದ್ಮರಾಜ್ ಆರ್ ಪೂಜಾರಿ, ಸಾಹುಲ್ ಹಮೀದ್ ಕೆ ಕೆ, ಎಂ ಜಿ ಹೆಗ್ಡೆ, ಸಬೀರ್ ಎಸ್, ವಿಸ್ವಾಶ್ ದಾಸ್ ಕುಮಾರ್, ವಿಕಾಸ್ ಶೆಟ್ಟಿ, ನಿರಾಜ್ ಚಂದ್ರಪಾಲ್, ಜಿತೇಂದ್ರ ಸುವರ್ಣ, ಪ್ರಕಾಶ್ ಆಳ್ವಿನ್, ಶುಭೋದಯ ಆಳ್ವಾ
ಜಿಲ್ಲಾಧ್ಯಕ್ಸರಾದ ಹರೀಶ್ ಕುಮಾರ್ ರವರ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
Ivan dsouza remarks is not like Belthangady MLA Harish poonja slams Congress Harish Kumar in Mangalore. Ivan has not gone to the level of Poonja who openly threatened cops he added.
14-01-25 03:36 pm
HK News Desk
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ; ಬಿಹಾರ ಮೂಲದ ಆರೋಪ...
13-01-25 10:48 am
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
15-01-25 12:09 pm
Mangaluru Correspondent
Mangalore News, Savayava Sante: ಫೆಬ್ರವರಿ ತಿಂಗ...
14-01-25 08:36 pm
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm