ಬ್ರೇಕಿಂಗ್ ನ್ಯೂಸ್
22-08-24 11:09 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 22: ಅಕ್ರಮ ಮರಳುಗಾರಿಕೆಯಿಂದಾಗಿ ಮಂಗಳೂರು ಉತ್ತರ ಕ್ಷೇತ್ರದ ಅಡ್ಡೂರು- ಪೊಳಲಿ ಸೇತುವೆ ಅಪಾಯಕ್ಕೀಡಾಗಿದೆ. ಅಡ್ಡೂರಲ್ಲಿ ಮಾತ್ರ ಸೇತುವೆ ಕೆಳಗೆ ಸ್ಯಾಂಡ್ ಮೈನಿಂಗ್ ತಡೆಯುವ ತಾಕತ್ತು ಜಿಲ್ಲಾಡಳಿತಕ್ಕೆ ಇಲ್ವಾ? ಎಂದು ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ.
ಸೇತುವೆ ಕೆಳಭಾಗದಲ್ಲಿ ಮರಳುಗಾರಿಕೆ ಮಾಡಿ ಸೇತುವೆ ಶಿಥಿಲವಾಗಿದೆ. ಜಿಲ್ಲಾಡಳಿತಕ್ಕೆ ಹಾಗು ಪೊಲೀಸರಿಗೆ ಅಕ್ರಮ ಮರಳುಗಾರಿಕೆ ಬಗ್ಗೆ ಹಲವಾರು ಮಂದಿ ದೂರು ನೀಡಿದ್ದರೂ ಈವರೆಗೆ ಕ್ರಮ ಆಗಿಲ್ಲ. ಶಿಥಿಲಗೊಂಡ ಸೇತುವೆ ಮೇಲೆ ವಾಹನ ಸಂಚಾರ ಬಂದ್ ಆದರೂ ಪುನಃ ಮರಳುಗಾರಿಕೆ ಆರಂಭ ಆಗಿದೆ. ಆ ಪ್ರದೇಶದಲ್ಲಿ ಮಿನಿ ಪಾಕಿಸ್ಥಾನ ನಿರ್ಮಾಣವಾಗಿದೆ. ಅಡ್ಡೂರಲ್ಲಿ ಮಾತ್ರ ಬ್ರಿಜ್ ಕೆಳಗೆ ಸ್ಯಾಂಡ್ ಮೈನಿಂಗ್ ತಡೆಯುವ ತಾಕತ್ತು ಜಿಲ್ಲಾಡಳಿತಕ್ಕೆ ಇಲ್ವಾ?
ಇಲ್ಲಿ ಅಕ್ರಮ ಮರಳುಗಾರಿಕೆ ನಿಲ್ಲದಿದ್ದರೆ ದೊಡ್ಡ ಸಮಸ್ಯೆ ಎಡೆ ಆಗಬಹುದು. ಸಾವಿರ ಕಂಪ್ಲೇಂಟ್ ಕೊಟ್ಟರೂ ಮೈನಿಂಗ್ ಸ್ಟಾಪ್ ಆಗಲ್ಲ ಏನರ್ಥ. ಹೊಸ ಬ್ರಿಜ್ ಬಂದ ಮೇಲೆ ಇದೇ ಮೈನಿಂಗ್ ಮುಂದುವರಿದರೆ ಮತ್ತದೇ ಸಮಸ್ಯೆಯಾಗತ್ತೆ. ಮರಳುಗಾರಿಕೆಗೆ ಲೈಸನ್ಸ್ ಇಲ್ಲದೆ ಮಾಡೋರನ್ನು ಯಾಕೆ ನಿಲ್ಲಿಸಲು ಆಗ್ತಿಲ್ಲ? ಈ ಅಕ್ರಮ ನಡೆಸುವವರಿಗೆ ಯಾರು ಬೆಂಬಲ ಮಾಡ್ತಿದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.
ಐವಾನ್ ವಿರುದ್ಧ ಕೋರ್ಟ್ ಹೋರಾಟ
ಐವಾನ್ ಡಿಸೋಜಾ ವಿರುದ್ಧ ಕೇಸು ಹಾಕಲು ಪೊಲೀಸರು ಧೈರ್ಯ ತೋರುತ್ತಿಲ್ಲ. ಹೀಗಾಗಿ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ನಮ್ಮ ಪೊಲೀಸರು ಅಸಹಾಯಕರಾಗಿದ್ದಾರೆ. ಕೇಳಿದ್ರೆ ಅನುಮತಿಗೆ ಕಾಯುತ್ತಿದ್ದೇವೆಂದು ಪೊಲೀಸರು ಹೇಳ್ತಿದ್ದಾರೆ. ಪೊಲೀಸರು ನಮಗೆ ತಾಕತ್ತಿಲ್ಲ ಎಂದು ಸರೆಂಡರ್ ಆಗಿ ಕೂತುಕೊಳ್ಳಲಿ. ಲೀಗಲ್ ಆಗಿ ನಾವು ಕೇಸು ಮುಂದುವರಿಸುತ್ತೇವೆ. ಹೈಕೋರ್ಟ್ ಹಿರಿಯ ನ್ಯಾಯವಾದಿಗಳ ಜೊತೆ ಚರ್ಚೆ ಮಾಡಿದ್ದು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ ತಿಳಿಸಿದ್ದಾರೆ.
Mangalore eAddur bridge damage is because of too much of sand mining says MLA Bharath Shetty. Why can’t the mangalore district administration take string action he added
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 05:39 pm
Mangalore Correspondent
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm