ಬ್ರೇಕಿಂಗ್ ನ್ಯೂಸ್
23-08-24 05:20 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್.23: ಉಡುಪಿ ಜಿಲ್ಲೆಯ ಕಾರ್ಕಳ- ಪಡುಬಿದ್ರಿ ರಸ್ತೆಯ ಕಂಚಿನಡ್ಕದಲ್ಲಿ ಆರಂಭಿಸಲು ಉದ್ದೇಶಿಸಿದ್ದ ಟೋಲ್ ಸಂಗ್ರಹ ಕೇಂದ್ರಕ್ಕೆ ನೀಡಲಾದ ಕಾರ್ಯಾದೇಶವನ್ನು ರಾಜ್ಯ ಸರ್ಕಾರವು ತಾತ್ಕಾಲಿಕವಾಗಿ ಹಿಂಪಡೆದಿದ್ದು ಸದ್ಯಕ್ಕೆ ಟೋಲ್ ಕೇಂದ್ರ ಆರಂಭಿಸದಿರಲು ತೀರ್ಮಾನಿಸಿದೆ.
ಟೋಲ್ ಕೇಂದ್ರ ಸ್ಥಾಪನೆಗೆ ವ್ಯಾಪಕ ವಿರೋಧ ವ್ಯಕ್ತವಾದ ಕಾರಣ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು ಆಗಸ್ಟ್ 22ರಂದು ಉಡುಪಿ ಜಿಲ್ಲೆಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದರು. ಮರುದಿನ, ಆಗಸ್ಟ್ 23ರಂದು ಜನವಿರೋಧ ಪರಿಗಣಿಸಿ ಕಾರ್ಯಾದೇಶ ಹಿಂಪಡೆಯುವುದಾಗಿ ಆದೇಶ ಹೊರಡಿಸಿದ್ದಾರೆ.

ಕಾರ್ಕಳ - ಪಡುಬಿದ್ರಿ ರಾಜ್ಯ ಹೆದ್ದಾರಿಯ ಕಂಚಿನಡ್ಕದಲ್ಲಿ ಟೋಲ್ ಕೇಂದ್ರ ಆರಂಭಿಸುವುದನ್ನು ವಿರೋಧಿಸಿ ಆಗಸ್ಟ್ 24ರಂದು ರಸ್ತೆ ತಡೆದು ಪಕ್ಷಾತೀತ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೂ ಮನವರಿಕೆ ಮಾಡಲಾಗಿತ್ತು. ಖಾಸಗಿ ಬಸ್ ಮಾಲಕರು ಸೇರಿದಂತೆ ಎಲ್ಲ ವಿಭಾಗದಿಂದ ವಿರೋಧ ವ್ಯಕ್ತವಾಗಿತ್ತು. ಇದಲ್ಲದೆ, ಕಂಚಿನಡ್ಕದಿಂದ 7.50 ಕಿಮೀ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಜಮಾಡಿ ಟೋಲ್ ಇರುವುದರಿಂದ ಹೊಸ ಟೋಲ್ ಕೇಂದ್ರ ಸ್ಥಾಪಿಸಿದರೆ ಜನರಿಗೆ ಹೊರೆಯಾಗುತ್ತದೆ ಎಂಬ ಬಗ್ಗೆ ಸಚಿವರ ಗಮನಕ್ಕೆ ತರಲಾಗಿತ್ತು.
ಟೋಲ್ ಕೇಂದ್ರ ಸ್ಥಾಪನೆಗಾಗಿ ಭಾರತೀ ಕನ್ಸ್ ಟ್ರಕ್ಷನ್ ಕಂಪನಿಗೆ ಕೆಆರ್ ಡಿಸಿಎಲ್ ಮೂಲಕ ಕಾರ್ಯಾದೇಶ ನೀಡಲಾಗಿತ್ತು. ಆದರೆ ಸ್ಥಳದಲ್ಲಿ ಸರ್ವಿಸ್ ರಸ್ತೆಯಾಗಲೀ, ಶೌಚಾಲಯ ಇನ್ನಿತರ ವ್ಯವಸ್ಥೆಗಳನ್ನು ಮಾಡದೇ ಇರುವುದರಿಂದ ಸದ್ಯಕ್ಕೆ ಕಾರ್ಯಾದೇಶ ಹಿಂಪಡೆಯುವುದಾಗಿ ತನ್ನ ಆದೇಶ ಪತ್ರದಲ್ಲಿ ಸಚಿವ ಜಾರಕಿಹೊಳಿ ತಿಳಿಸಿದ್ದಾರೆ.
Padubidri Karkala Proposed Kanchinadkka toll gate temporarily cancelled after action Committee planned to hold protest. Kanchinadkka Toll Gate Virodhi Horata Samithi has planned to stage a protest against the government’s move to open a toll gate on the Padubidri-Karkala State Highway at Kanchinadkka in Udupi district on Saturday, August 24, according to its president Suhas Hegde Nandalike.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
11-07-26 09:29 pm
HK News Staffer
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
14-07-26 01:37 pm
HK News Staffer
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
14-07-26 02:43 pm
HK News Staffer
ಕಟ್ಟಡ ನಿರ್ಮಾಣ ಕೆಲಸಕ್ಕೆ ಬಾಂಗ್ಲಾನ್ನರ ಪೂರೈಕೆ ; ಪ...
14-07-26 01:01 pm
ಮಂಗಳೂರಿನಲ್ಲಿ 11 ಮಂದಿ ಬಾಂಗ್ಲಾನ್ನರ ಬಂಧನ ; ನಾಲ್ವ...
13-07-26 10:57 pm
ಈ ನ್ಯಾಯಾಲಯದಲ್ಲಿ ಜೂಜಾಡಬೇಡಿ! ಸೌಜನ್ಯ ಪ್ರಕರಣ ಬಳಸಿ...
13-07-26 09:48 pm
ಮಂಜನಾಡಿ ಭೂಕುಸಿತ ದುರಂತ ; ಅವೈಜ್ಞಾನಿಕ ರಸ್ತೆ ನಿರ್...
13-07-26 08:31 pm