Mangalore, Kadaba, School: ಕಡಬದಲ್ಲಿ ಏಕಾಏಕಿ ಶಾಲಾ ಕಟ್ಟಡ ಕುಸಿತ ; ಮಕ್ಕಳು ಊಟದ ಹೊತ್ತಿಗೆ ಹೊರಗಿದ್ದರಿಂದ ತಪ್ಪಿದ ಅನಾಹು

27-08-24 06:06 pm       Mangalore Correspondent   ಕರಾವಳಿ

ಸರ್ಕಾರಿ ಶಾಲೆಯ ಕಟ್ಟಡದ ಜೊತೆಗೆ ಮೇಲ್ಛಾವಣಿ ಕುಸಿದ ಘಟನೆ ಕಡಬ ತಾಲೂಕಿನ ಕುಂತೂರಿನಲ್ಲಿ ನಡೆದಿದ್ದು ಅದೃಷ್ಟವಶಾತ್ ಶಾಲಾ ಮಕ್ಕಳು ಹೊರಗಿದ್ದುದರಿಂದ ಅಪಾಯದಿಂದ ಬಚಾವಾಗಿದ್ದಾರೆ. 

ಪುತ್ತೂರು, ಆಗಸ್ಟ್‌ 27: ಸರ್ಕಾರಿ ಶಾಲೆಯ ಕಟ್ಟಡದ ಜೊತೆಗೆ ಮೇಲ್ಛಾವಣಿ ಕುಸಿದ ಘಟನೆ ಕಡಬ ತಾಲೂಕಿನ ಕುಂತೂರಿನಲ್ಲಿ ನಡೆದಿದ್ದು ಅದೃಷ್ಟವಶಾತ್ ಶಾಲಾ ಮಕ್ಕಳು ಹೊರಗಿದ್ದುದರಿಂದ ಅಪಾಯದಿಂದ ಬಚಾವಾಗಿದ್ದಾರೆ. 

ಘಟನೆಯಲ್ಲಿ ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ. ಶಾಲೆಯಲ್ಲಿ 180 ಮಕ್ಕಳು ಕಲಿಯುತ್ತಿದ್ದು ಮಧ್ಯಾಹ್ನ ಊಟ ಮಾಡಿ ಹೊರಗಡೆ ಆಡುತ್ತಿದ್ದಾಗ ಶಾಲಾ ಕಟ್ಟಡ ಕುಸಿದು ಬಿದ್ದಿದೆ.  ವಿದ್ಯಾರ್ಥಿಗಳು ಶಾಲೆಯ ಹೊರಗೆ ಇದ್ದಾಗಲೇ ಏಕಾಏಕಿ ಕುಸಿದ ಮೇಲ್ಚಾವಣಿ ಸಹಿತ ಒಂದು ಭಾಗದ ಗೋಡೆ ಕುಸಿದು ಬಿದ್ದಿದೆ.‌ 

ಸ್ಥಳಕ್ಕೆ‌ ಶಾಲಾ ವಿದ್ಯಾರ್ಥಿಗಳ ಪೋಷಕರು ದೌಡಾಯಿಸಿದ್ದು ಶಾಲೆಯ ಸ್ಥಿತಿಯನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಮಕ್ಕಳು ಶಾಲೆಯ ಹೊರಗೆ ಇದ್ದುದರಿಂದ ಭಾರೀ ಅನಾಹುತ ತಪ್ಪಿದೆ ಎನ್ನುವ ಮಾತು ಕೇಳಿಬಂದಿದೆ. ಸಾಮಾನ್ಯ ಪ್ರಮಾಣದ ಗಾಳಿಗೇ ಶಿಥಿಲ ಕಟ್ಟಡ ಕುಸಿದು ಬಿದ್ದಿದೆ ಎನ್ನುವ ಆರೋಪ ಉಂಟಾಗಿದೆ.

Mangalore Kadaba school roof collapses suddenly, big accident averted.