ಬ್ರೇಕಿಂಗ್ ನ್ಯೂಸ್
28-08-24 09:42 pm Mangalore Correspondent ಕರಾವಳಿ
ಉಳ್ಳಾಲ, ಆ.28: ಚುನಾವಣೆ ವೇಳೆ ಪಟಾಕಿ ಸಿಡಿಸಿದರೂ ಬಿಜೆಪಿಗರ ವಿರುದ್ಧ ಕೇಸು ಜಡಿದು ಪೊಲೀಸ್ ಇಲಾಖೆಯನ್ನ ರಾಜ್ಯ ಕಾಂಗ್ರೆಸ್ ಸರಕಾರವು ದುರ್ಬಳಕೆ ಮಾಡುತ್ತಿದೆ. ಆದರೆ ದೇಶದ್ರೋಹದ ಹೇಳಿಕೆ ಕೊಟ್ಟ ಎಂಎಲ್ಸಿ ಐವನ್ ಡಿಸೋಜ ವಿರುದ್ಧ ನರಸತ್ತ ರಾಜ್ಯ ಕಾಂಗ್ರೆಸ್ ಸರಕಾರವು ಯಾವುದೇ ಕ್ರಮ ಕೈಗೊಂಡಿಲ್ಲ. ಐವನ್ ಅವರೇ ನಿಮಗೆ ತಾಕತ್ತಿದ್ದರೆ ಶಾಸಕ ವೇದವ್ಯಾಸ್ ಕಾಮತ್ ವಿರುದ್ಧ ರೌಡಿಶೀಟ್ ತೆರೆದು ನೋಡಿ. ನೀವು ಬಂದಿರುವ ಹಿಂಬಾಗಿಲಿನಿಂದಲೇ ನಿಮ್ಮನ್ನ ಓಡಿಸಲಿದ್ದೇವೆಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸವಾಲೆಸೆದಿದ್ದಾರೆ.
ಭಾರತೀಯ ಜನತಾ ಪಾರ್ಟಿ ಮಂಗಳೂರು ಮಂಡಲದ ಯುವಮೋರ್ಚಾ ನೇತೃತ್ವದಲ್ಲಿ ಐವನ್ ಡಿಸೋಜಾ ದೇಶದ್ರೋಹಿ ಹೇಳಿಕೆ ಹಾಗೂ ರಾಜ್ಯಪಾಲರ ವಿರುದ್ಧ ಅವ್ಯಾಚ್ಯ ಶಬ್ದಗಳನ್ನು ಬಳಸಿದರ ವಿರುದ್ಧ ಬುಧವಾರ ಸಂಜೆ ತೊಕ್ಕೊಟ್ಟು ಫ್ಲೈಓವರ್ ಕೆಳಗಡೆ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ನನ್ನ ಮೇಲೆ ಯಾವುದೇ ಕಳಂಕವಿಲ್ಲ, ನಾನೊಬ್ಬ ಆದರ್ಶನೆಂದು ಹೇಳ್ಕೊಂಡು ತಿರುಗುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಭ್ರಷ್ಟಾಚಾರದಲ್ಲಿ ನೇರ ಭಾಗಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಸಕನೇ ಜೈಲಿನಲ್ಲಿದ್ದರೂ ಮುಖ್ಯಮಂತ್ರಿಗಳು ಮಾತ್ರ ನಮ್ಮ ಸರಕಾರದಲ್ಲಿ ಭ್ರಷ್ಟಾಚಾರವೇ ನಡೆದಿಲ್ಲವೆಂದು ವಾದಿಸುತ್ತಾರೆ. ರಾಜ್ಯಪಾಲರು ಸಿದ್ಧರಾಮಯ್ಯರ ವಿರುದ್ಧ ತನಿಖೆಗಷ್ಟೆ ಆದೇಶ ನೀಡಿದ್ದರು. ಅಷ್ಟಕ್ಕೇ ಐವನ್ ಡಿಸೋಜ ಅವರು ಪರಿಶಿಷ್ಟ ಜಾತಿಯ ರಾಜ್ಯಪಾಲರ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿ ಸಾಂವಿಂಧಾನಿಕ ಹುದ್ದೆಗೆ ಅಪಚಾರ ಮಾಡಿದ್ದಾರೆ. ಬಿಜೆಪಿಯವರ ಹೋರಾಟಗಳಿಗೆ ಮಂಗಳೂರಿನಲ್ಲಿ ಕಾಂಗ್ರೆಸಿಗರು ಗಢ ಗಢ ಆಗಿದ್ದು ಅದಕ್ಕೆ ಇಲ್ಲಿ ಭಾರೀ ಪ್ರಮಾಣದಲ್ಲಿ ನಿಯೋಜಿಸಿರುವ ಪೊಲೀಸ್ ಸರ್ಪಗಾವಲೇ ನಿದರ್ಶನ. ನಾವು ಅಲ್ಪಸಂಖ್ಯಾತರ ಪರ ಎನ್ನುವ ಕಾಂಗ್ರೆಸಿಗರು ಪ್ರತಿಭಟನೆಗಳ ನೆಪದಲ್ಲಿ ಅಲ್ಪಸಂಖ್ಯಾತರ ಬಸ್ಸಿಗೆ ಕಲ್ಲೆಸೆದು ಮುಸ್ಲಿಂ ಮಹಿಳೆಯನ್ನ ಗಾಯಗೊಳಿಸುತ್ತಾರೆ.
ಐವಾನ್ ಡಿಸೋಜ ಅವರು ತನ್ನ ಮನೆಯೊಳಗೆ ಎರಡು ಕಲ್ಲಿಟ್ಟು ಅದನ್ನ ಬಿಜೆಪಿಗರು ಎಸೆದದ್ದೆಂದು ಹೇಳಿ ನಾಟಕ ಮಾಡುತ್ತಿದ್ದಾರೆ. ರಾಜ್ಯಪಾಲರ ವಿರುದ್ಧ ಅಸಂಬದ್ಧ ಹೇಳಿಕೆ ನೀಡದಂತೆ ಗೃಹಸಚಿವರೇ ಹೇಳಿದ್ದು, ರಾಜ್ಯಪಾಲರನ್ನ ಅವಮಾನಿಸಿ ದೇಶದ್ರೋಹದ ಹೇಳಿಕೆ ನೀಡಿದ್ದ ಐವಾನ್ ವಿರುದ್ಧ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸುವಂತೆ ಸತೀಶ್ ಕುಂಪಲ ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ರಾಜ್ಯ ಕಾಂಗ್ರೆಸ್ ಸರಕಾರದ ಪ್ರತಿನಿಧಿಗಳು ಭ್ರಷ್ಟಾಚಾರದಲ್ಲಿ ನಾ ಮುಂದು ತಾ ಮುಂದೆಂದು ಪೈಪೋಟಿಯಲ್ಲಿ ಬಿದ್ದಿದ್ದಾರೆ. ರಾಜ್ಯಪಾಲ ಹುದ್ದೆಗೆ ಸಾಂವಿಧಾನಿಕ ಗೌರವ ಇದೆ. ಅಂತಹ ರಾಜ್ಯಪಾಲರನ್ನ ಸಿದ್ಧರಾಮಯ್ಯರ ಚೇಲಾನಾಗಿರುವ ಐವಾನ್ ಡಿಸೋಜ ಏಕವಚನದಲ್ಲಿ ಅವಮಾನಿಸಿದ್ದು ಖಂಡನೀಯ. ಇಂಥವರನ್ನ ಪ್ರಶ್ನಿಸಿದರೆ ಬಿಜೆಪಿ ಶಾಸಕರ ಮೇಲೆಯೇ ಕೇಸು ಜಡಿಯುತ್ತಿದ್ದಾರೆ. ಮುಡಾ ಹಗರಣದಲ್ಲಿ ಭಾಗಿಯಾಗಿರುವ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ಕೊಡಬೇಕೆಂದು ಅವರು ಆಗ್ರಹಿಸಿದರು.
ಪ್ರತಿಭಟನೆ ವೇಳೆ ರಸ್ತೆ ತಡೆಯಲು ಯತ್ನಿಸಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಸೇರಿದಂತೆ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಬಿಜೆಪಿ ಮಂಗಳೂರು ಮಂಡಲದ ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ, ಜಿಲ್ಲಾ ವಕ್ತಾರರಾದ ಮೋಹನ್ ರಾಜ್ ಕೆ.ಆರ್, ಮುಖಂಡರಾದ ಟಿ.ಜಿ.ರಾಜಾರಾಮ್ ಭಟ್, ಯಶವಂತ ಅಮೀನ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ದಯಾನಂದ್ ತೊಕ್ಕೊಟ್ಟು, ಸುಜಿತ್ ಮಾಡೂರು, ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಮುರಳಿ ಕೊಣಾಜೆ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಧವಿ ಉಳ್ಳಾಲ್, ಪ್ರಮುಖರಾದ ಮನೋಜ್ ಆಚಾರ್ಯ, ಚಂದ್ರಶೇಖರ್ ಉಚ್ಚಿಲ್, ನಿಶಾನ್ ಪೂಜಾರಿ, ರಾಜೇಶ್ ಉಳ್ಳಾಲ್, ಜಯಶ್ರೀ ಕರ್ಕೇರ, ಸುಮನಾ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Mangalore Satish Kumpala slams Ivan Dsouza, challenges to file FIR on Vedavyas kamath if you have guts.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 05:39 pm
Mangalore Correspondent
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm