ಬ್ರೇಕಿಂಗ್ ನ್ಯೂಸ್
28-08-24 10:11 pm Mangalore Correspondent ಕರಾವಳಿ
ಪುತ್ತೂರು, ಆಗಸ್ಟ್ 28: ರಾಹುಲ್ ಗಾಂಧಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ದಲಿತರಿಲ್ವಾ ಎಂದು ಕೇಳುತ್ತಿದ್ದಾನೆ. ಅಂಥ ವ್ಯಕ್ತಿಯನ್ನು ಮೆಚ್ಚಿಸಲು ಬಾಂಗ್ಲಾ ಬಗ್ಗೆ ಮಾತಾಡುತ್ತಿದ್ದಾರೆ. ಸಿದ್ದರಾಮಯ್ಯನ ಶಿಷ್ಯರಿಗೆಲ್ಲ ಬಾಂಗ್ಲಾ ಹೇಳಿಕೆ ಅಭ್ಯಾಸ ಆಗಿಹೋಗಿದೆ. ದೂರದ ಪ್ಯಾಲೆಸ್ತೀನ್, ಇಸ್ರೇಲಲ್ಲಿ ಬಾಂಬ್ ಬಿದ್ದಾಗ ಇವರು ಮೈಗೆ ಚೇಳು ಬಿದ್ದಂತೆ ಮಾಡುತ್ತಾರೆ. ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ದಾಳಿಯಾದಾಗ ಒಬ್ಬನೇ ಒಬ್ಬ ಕಾಂಗ್ರೆಸಿಗ ಮಾತಾಡಿಲ್ಲ. ನಮ್ಮ ಹಿಂದು ಹೆಣ್ಮಕ್ಕಳನ್ನು ಅತ್ಯಾಚಾರ ಮಾಡಿ ತೋಡಿಗೆ ಎಸೆಯುತ್ತಾರೆ. ಯಾಕೆ ಇವರು ತುಟಿ ತೆರೆಯೋದಿಲ್ಲ ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ.
ರಾಜ್ಯಪಾಲರ ಬಗ್ಗೆ ಅವಹೇಳನ ಮಾಡಿದ ಐವಾನ್ ಡಿಸೋಜ ವಿರುದ್ಧ ಪುತ್ತೂರಿನಲ್ಲಿ ನಡೆದ ಬಿಜೆಪಿ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಸಂಘರ್ಷದಿಂದ ಹುಟ್ಟಿದ ಸಂಘಟನೆ ಬಿಜೆಪಿ. ಮತ್ತೆ ನೀವು ಸಂಘರ್ಷಕ್ಕೆ ಅವಕಾಶ ಮಾಡಿ ಕೊಡಬೇಡಿ. ಹಾಗಾದಲ್ಲಿ ಅದರ ಪರಿಣಾಮಕ್ಕೆ ಕಾರಣರಾಗುತ್ತೀರಿ. ಸರಕಾರಿ ಅಧಿಕಾರಿಗಳು ನೆನಪಿಟ್ಟುಕೊಳ್ಳಿ, ಪುನಃ ನಮ್ಮ ಸರಕಾರ ಬರುತ್ತದೆ. ನಮ್ಮ ಬಾಯನ್ನು ಮುಚ್ಚಿಸುವ ಪ್ರಯತ್ನ ಮಾಡ್ತಿದೀರಿ. ನಿಮಗೆ ಸರಿಯಾದ ಉತ್ತರ ಕೊಡುತ್ತೇವೆ ಎಂದು ಹೇಳಿದರು.
ರಾಹುಲ್ ಗಾಂಧಿ ಬಗ್ಗೆ ಏನು ಮಾಡುತ್ತೇನೆಂದು ಹೇಳಿಲ್ಲ. ರಾಹುಲ್ ಮಾತಾಡುತ್ತಿದ್ದಾಗ ಯಾರಾದ್ರೂ ಬುದ್ಧಿ ಹೇಳಬೇಕಿತ್ತು ಅಂತಷ್ಟೇ ಹೇಳಿದ್ದೆ. ಈಗ ಇವರೆಲ್ಲ ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನು ರಾಜಭವನಕ್ಕೆ ನುಗ್ಗಿ ಓಡಿಸುತ್ತೇವೆಂದು ಮಾತಾಡುತ್ತಿದ್ದಾರೆ. ಆದರೆ ಪೊಲೀಸರಿಗೆ ಎಫ್ಐಆರ್ ಹಾಕಲು ಇನ್ನೂ ಸೆಕ್ಷನ್ ಸಿಕ್ಕಿಲ್ಲ. ಒಬ್ಬ ಪೊಲೀಸ್ ಅಧಿಕಾರಿಗೆ ರಾಜ್ಯಪಾಲರನ್ನು ಓಡಿಸುತ್ತೇವೆ ಎಂದಿದ್ದಕ್ಕೆ ಇಂಥ ಸೆಕ್ಷನ್ ಪ್ರಕಾರ ಅಪರಾಧ ಅಂತ ಮೆಸೇಜ್ ಮಾಡಿದ್ದೆ. ಆದರೆ ಆ ವ್ಯಕ್ತಿಯ ಪ್ರತಿಕ್ರಿಯೆ ಇಲ್ಲ. ಇದೇ ಪೊಲೀಸರು ನನ್ನ ಮೇಲೆ ನಡುರಾತ್ರಿಯಲ್ಲಿ ಕೇಸು ಹಾಕಿದ್ದರು. ಜೆರೋಸಾ ಶಾಲೆಯಲ್ಲಿ ನಾನು ಇಲ್ಲದಿದ್ದರೂ ಕೇಸು ಹಾಕಿದ್ದಾರೆ.
ಅದಕ್ಕೆ ಯಾವತ್ತೂ ಇವರಿಗೆ ಕಾನೂನು ಸಲಹೆ ಬೇಕಾಗಿರಲಿಲ್ಲ. ಈಗ ಕಾನೂನು ಸಲಹೆ ಕೇಳುತ್ತೇವೆ ಎನ್ನುತ್ತ ದಿನ ದೂಡುತ್ತಿದ್ದಾರೆ. ರಸ್ತೆ ತಡೆ ಮಾಡಿದರೆ ನಿಮ್ಮ ಮೇಲೆ ಕೇಸು ಹಾಕುತ್ತೇವೆಂದು ಬೆದರಿಸುತ್ತಿದ್ದಾರೆ. ನಿಮ್ಮ ಕೇಸುಗಳಿಗೆ ಬಾಯಿ ಮುಚ್ಚಿಕೊಂಡು ಕೂರುವ ಜಾಯಮಾನ ನಮ್ಮದಲ್ಲ. ಇದೇ ರೀತಿಯಾದರೆ ದೊಡ್ಡ ರೀತಿಯ ಹೋರಾಟವನ್ನು ನಿಮ್ಮ ಮನೆ ಮುಂದೆಯೇ ಮಾಡುತ್ತೇವೆ ಎಂದು ಪೊಲೀಸ್ ಅಧಿಕಾರಿಗಳಿಗೆ ಭರತ್ ಶೆಟ್ಟಿ ಎಚ್ಚರಿಕೆ ನೀಡಿದರು.
ಕೆಲವರು ನನ್ನ ಬಗ್ಗೆ ಭರತ್ ಶೆಟ್ಟಿ ಹುಚ್ಚ, ಅಜ್ಞಾನಿ ಅಂತ ಏನೇನೋ ಮಾತಾಡುತ್ತಿದ್ದಾರೆ. ಆಮೂಲಕ ಎಲ್ಲರೂ ಜಿಪಂ ಸದಸ್ಯರಾಗಲು ಟ್ರೈ ಮಾಡುತ್ತಿದ್ದಾರೆ. ಶಾಸಕ ಸ್ಥಾನಕ್ಕಂತೂ ಸಾಧ್ಯವಿಲ್ಲ. ವಿಧಾನಸೌಧ ಒಳಗಡೆ ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಿದವರ ಮೇಲೆ ಕೇಸು ದಾಖಲಿಸುತ್ತೇವೆ ಎನ್ನುವ ಧೈರ್ಯ ಇವರಿಗಿಲ್ಲ. ಹಿಂದು ಹೆಣ್ಮಕ್ಕಳ ಮೇಲೆ ಅತ್ಯಾಚಾರವಾದ್ರೆ ಆರೋಪಿಗಳ ಮೇಲೆ ಕ್ರಮ ಜರುಗಿಸುತ್ತೇವೆಂದು ಅಲ್ಲಿನ ಆರೋಪಿ ಹೆಸರನ್ನು ಹೇಳಲು ಧೈರ್ಯ ಇಲ್ಲ. ಕೃಷ್ಣ ಹೇಳುತ್ತಾನೆ, ಅಧರ್ಮದ ನಡೆಯಲ್ಲಿ ಯಾರಿದ್ದರೂ ಅವರ ವಿರುದ್ಧ ಯುದ್ಧ ಮಾಡಬೇಕೆಂದು. ಅದೇ ಹಾದಿಯನ್ನು ನಾವೀಗ ತುಳಿಯಬೇಕಾಗಿದೆ ಎಂದು ಭರತ್ ಶೆಟ್ಟಿ ಹೇಳಿದರು. ಬಿಜೆಪಿ ಮುಖಂಡ ಅರುಣ್ ಪುತ್ತಿಲ, ಸಂಜೀವ ಮಠಂದೂರು ಮತ್ತಿತರರು ಇದ್ದರು.
Mangalore MLA Bharath Shetty slams police department at Puttur, says they are searching for section to file case on Ivan Dsouza.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 05:39 pm
Mangalore Correspondent
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm