ಬ್ರೇಕಿಂಗ್ ನ್ಯೂಸ್
29-08-24 07:25 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 29: ಇಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಸಂಚರಿಸಲು ಅವಕಾಶ ನೀಡಿದ್ದನ್ನು ವಿರೋಧಿಸಿ ಆಟೋ ಚಾಲಕರು ಮಂಗಳೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಜ್ಯೋತಿ ವೃತ್ತದಿಂದ ಕ್ಲಾಕ್ ಟವರ್ ವರೆಗೆ ಮೆರವಣಿಗೆಯಲ್ಲಿ ಸಾಗಿದ ಆಟೋ ಚಾಲಕರು ಜಿಲ್ಲಾಧಿಕಾರಿ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದ್ದಾರೆ.
ಖಾಕಿ ಅಂಗಿ ಧರಿಸಿದ್ದ ನೂರಾರು ಚಾಲಕರು ತಮ್ಮ ಆಟೋಗಳನ್ನು ಬದಿಗಿಟ್ಟು ಮೆರವಣಿಗೆಯಲ್ಲಿ ಸಾಗಿದ್ದು, ಮಿನಿ ವಿಧಾನಸೌಧ ಮುಂಭಾಗದ ರಸ್ತೆಯಲ್ಲಿ ಪ್ರತಿಭಟನಾ ಸಭೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಮಾತನಾಡಿದ ಆಟೋ ಚಾಲಕರು, ಜಿಲ್ಲಾಧಿಕಾರಿ ತಾರತಮ್ಯ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ಇಲ್ಲದ ಕಾನೂನು ಇಲ್ಲಿ ಮಾತ್ರ ಯಾಕೆ ಜಾರಿಗೆ ತರುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬ ಆಟೋ ಚಾಲಕ ಮಾತನಾಡಿ, ಅಷ್ಟಕ್ಕೂ ನೀವು ಇಡೀ ಜಿಲ್ಲೆಯಲ್ಲಿ ಅವರಿಗೆ ಸಂಚರಿಸಲು ಅನುಮತಿ ನೀಡುವುದಕ್ಕೂ ಮುನ್ನ ನೀವು ಆರ್ ಟಿಓ ಸಭೆ ಕರೆಯಬಹುದಿತ್ತು. ನಮಗೂ ಮಾಹಿತಿ ಕೊಟ್ಟು ಈ ರೀತಿಯ ನಿರ್ಧಾರಕ್ಕೆ ಬರಬಹುದಿತ್ತು. ನಮ್ಮ ಅಹವಾಲನ್ನೂ ಕೇಳಬೇಕಿತ್ತಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಆಟೋ ಚಾಲಕರ ಪ್ರತಿಭಟನೆಗೆ ಸಿಐಟಿಯು ಬೆಂಬಲಿಸಿದ್ದು, ಪಕ್ಷದ ನಾಯಕ ಸುನಿಲ್ ಕುಮಾರ್ ಬಜಾಲ್ ಆಟೋ ಚಾಲಕರ ಪರವಾಗಿ ಮಾತನಾಡಿದರು. ಮಂಗಳೂರು ನಗರದಲ್ಲಿ 9 ಸಾವಿರ ಆಟೋ ಚಾಲಕರಿದ್ದು, ಏಕಾಏಕಿ ಇಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ಇಡೀ ಜಿಲ್ಲೆಯಲ್ಲಿ ಸಂಚರಿಸಲು ಪರವಾನಗಿ ಕೊಟ್ಟಿದ್ದೀರಿ. ಇದರಿಂದ ಬಡ ಪೆಟ್ರೋಲ್, ಸಿಎನ್ ಜಿ ಚಾಲಿತ ಆಟೋಗಳವರಿಗೆ ನಷ್ಟವಾಗಿದೆ. ಇಲೆಕ್ಟ್ರಿಕ್ ಹೊರತಾದ ಆಟೋಗಳಿಗೆ ಬಾಡಿಗೆ ಸಿಗುತ್ತಿಲ್ಲ. ಇವರು ಆಟೋ ಚಾಲನೆ ಬಿಟ್ಟು ಬೇರೆ ಉದ್ಯೋಗ ಮಾಡಬೇಕೇ.. ಎಂದು ಪ್ರಶ್ನಿಸಿದರು.
ಕೇಳಿದರೆ ಕೇಂದ್ರ ಸರಕಾರದ ನಿರ್ಧಾರ ಎಂದು ಹೇಳುತ್ತೀರಿ. ಬೇರೆಲ್ಲೂ ಇಲ್ಲದ ನೀತಿಯನ್ನು ಮಂಗಳೂರಿಗೆ ಮಾತ್ರ ಯಾಕೆ ಜಾರಿಗೆ ತರುತ್ತೀರಿ. ಉಡುಪಿ ಸೇರಿದಂತೆ ಆಸುಪಾಸಿನ ಬೇರೆ ಯಾವ ಜಿಲ್ಲೆಯಲ್ಲೂ ಇಲ್ಲ. ಮಂಗಳೂರು ಸ್ಮಾರ್ಟ್ ಸಿಟಿ ಅನ್ನುತ್ತೀರಿ. 350 ರಿಕ್ಷಾ ಪಾರ್ಕ್ ಇದ್ದುದನ್ನು 115ಕ್ಕೆ ಇಳಿಸಿದ್ದೀರಿ. ಏಕಾಏಕಿ ಪಾರ್ಕ್ ಗಳನ್ನು ಕಡಿತ ಮಾಡಿದರೆ ಆಟೋ ಚಾಲಕರು ಎಲ್ಲಿ ಹೋಗಬೇಕು. ಬಡಪಾಯಿ ಆಟೋ ಚಾಲಕರಿಗೆ ಮಾತ್ರ ನಿಮ್ಮ ನೀತಿಯೇ.. ಮಾಲಿನ್ಯ ನಿಯಂತ್ರಣ ಆಗುತ್ತೆ ಎಂದು ಇಲೆಕ್ಟ್ರಿಕ್ ರಿಕ್ಷಾ ತಂದಿದ್ದು ಅಂತಾದರೆ, ಇಲೆಕ್ಟ್ರಿಕ್ ಬಸ್ಗಳನ್ನೂ ಹಾಕಿ. ಅದನ್ನು ಯಾಕೆ ಮಾಡಲ್ಲ. ಬಸ್ಸಿಲ್ಲದ ರೂಟಿಗೆ ಕೆಎಸ್ಸಾರ್ಟಿಸಿ ಬಸ್ ಹಾಕಿ ಅಂದ್ರೆ ಹಾಕಲು ನಿಮಗೆ ಆಗಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ಆಟೋ ಚಾಲಕರೊಬ್ಬರು ಮಾತನಾಡಿ, ಈ ತಾರತಮ್ಯ ನೀತಿಯನ್ನು ಹಿಂಪಡೆಯಲೇಬೇಕು. ಇಲ್ಲಾಂದ್ರೆ ನಾವು ಮಹಾನಗರ ಪಾಲಿಕೆ ಕಚೇರಿಗೆ ನುಗ್ಗುತ್ತೇವೆ. ಈ ನೀತಿ ತಂದಿರುವುದರ ಹಿಂದೆ ನಿಮಗೆ ಸೂಟ್ ಕೇಸ್ ಬಂದಿರುವ ಶಂಕೆ ಇದೆ. ಅದೇ ಕಾರಣಕ್ಕೆ ಏಕಾಏಕಿ ಇಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕೊಟ್ಟಿದ್ದೀರಿ ಎಂದು ಹೇಳಿದರು. ಹೆಚ್ಚಿನ ಆಟೋಗಳು ಸ್ಥಗಿತವಾಗಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿತ್ತು.
Auto-rickshaw drivers held a protest under the leadership of their unions on Thursday August 29, objecting to the district administration’s decision to grant permission for electric auto-rickshaws to operate throughout Dakshina Kannada district.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 05:39 pm
Mangalore Correspondent
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm