ಬ್ರೇಕಿಂಗ್ ನ್ಯೂಸ್
30-08-24 11:00 pm Mangalore Correspondent ಕರಾವಳಿ
ಪುತ್ತೂರು, ಆಗಸ್ಟ್ 30: ಉತ್ತರ ಭಾರತದ ಧಾರ್ಮಿಕ ಕ್ಷೇತ್ರಗಳಿಗೆ ಯಾತ್ರೆಗೆ ತೆರಳಿದ್ದಾಗ 30 ಮಂದಿಯ ತಂಡದಿಂದ ಬೇರ್ಪಟ್ಟಿದ್ದ ಪುತ್ತೂರಿನ ವ್ಯಕ್ತಿಯೋರ್ವರನ್ನು ರೈಲಿನಲ್ಲಿ ಅಪರಿಚಿತರ ತಂಡ ದೋಚಿದ ಘಟನೆ ನಡೆದಿದೆ.
ಬೆಟ್ಟಂಪಾಡಿ ಬಳಿಯ ಕಕ್ಕೂರು ನಿವಾಸಿ ಸುಬ್ರಹ್ಮಣ್ಯ ಭಟ್ (64) ಅವರಲ್ಲಿದ್ದ ಹಣ ಹಾಗೂ ಇತರ ವಸ್ತುಗಳನ್ನು ಅಪರಿಚಿತರು ದಿಲ್ಲಿಯಿಂದ ಅಯೋಧ್ಯೆಗೆ ತೆರಳುತ್ತಿದ್ದ ರೈಲಿನಲ್ಲಿ ದೋಚಿದ್ದು, ಈಗ ಸುರಕ್ಷಿತವಾಗಿ ಮನೆಗೆ ಬಂದಿದ್ದಾರೆ. ಇವರು ವಾರಾಣಸಿ, ಪ್ರಯಾಗ ಮತ್ತು ಗಯಾ ಕ್ಷೇತ್ರಗಳಿಗೆ 30 ಯಾತ್ರಿಗಳ ತಂಡದೊಂದಿಗೆ ತೆರಳಿದ್ದರು.
ಸುಬ್ರಹ್ಮಣ್ಯ ಭಟ್ ಮತ್ತು ಅವರ ಪತ್ನಿ ವೀಣಾ ಸೇರಿದಂತೆ ಜು. 29ರಂದು ಯಾತ್ರಿಗಳ ತಂಡವು ದಿಲ್ಲಿಗೆ ಹೊರಟು, ಜು.31ರಂದು ದಿಲ್ಲಿಯ ನಿಜಾಮುದ್ದೀನ್ ರೈಲು ನಿಲ್ದಾಣದಲ್ಲಿ ಇಳಿದಿತ್ತು. ಅಲ್ಲಿ ಊಟ ಮಾಡಲು ಹೊಟೇಲಿಗೆ ತೆರಳಿ, ಬಳಿಕ ರಿಕ್ಷಾದಲ್ಲಿ ರೈಲು ನಿಲ್ದಾಣಕ್ಕೆ ವಾಪಸು ಬರಬೇಕಿತ್ತು. ಅದರಂತೆ ಊಟ ಮುಗಿಸಿ ಐದಾರು ಆಟೋದಲ್ಲಿ 30 ಜನರು ಹೊರಟಿದ್ದರು.
ಸುಬ್ರಹ್ಮಣ್ಯ ಭಟ್ ಮತ್ತು ಅವರ ಪತ್ನಿ ಇದ್ದ ರಿಕ್ಷಾದಲ್ಲಿ ಮತ್ತೂ ಮೂವರಿದ್ದರು. ವೀಣಾ ಸಹಿತ ಇತರ ಮೂವರು ರಿಕ್ಷಾದಿಂದ ಇಳಿದು ನಿಲ್ದಾಣಕ್ಕೆ ಹೊರಟರೆ, ಸುಬ್ರಹ್ಮಣ್ಯ ಭಟ್ ಕೊನೆಯವರಾಗಿ ಇಳಿದರು. ಆದರೆ ರಿಕ್ಷಾ ಚಾಲಕ ಹೆಚ್ಚಿನ ಹಣಕ್ಕಾಗಿ ಒತ್ತಾಯಿಸಿದ. ಚಾಲಕನ ಜೊತೆಗೆ ಸ್ಥಳೀಯರು ಗುಂಪು ಸೇರಿ ಒತ್ತಾಯಿಸಿದ್ದು ಆತನಿಗೆ 300 ರೂ. ನೀಡಿ ಬರುಷ್ಟರಲ್ಲಿ ರೈಲು ಹೊರಟಿತ್ತು.
ಇದರಿಂದಾಗಿ ಸುಬ್ರಹ್ಮಣ್ಯ ಭಟ್ ಅಲ್ಲಿ ಉಳಿದಿದ್ದರು. ಇತ್ತ ಪತಿ ರೈಲಿನೊಳಗೆ ಇರಬಹುದು ಎಂದುಕೊಂಡು ವೀಣಾ ರೈಲು ಏರಿದ್ದರು. ರೈಲು ಹೊರಟ ಮೇಲೆ ಪತಿ ಇಲ್ಲದಿರುವುದು ಗಮನಕ್ಕೆ ಬಂದಿದ್ದು, ತಕ್ಷಣವೇ ಅವರಿಗೆ ಕರೆ ಮಾಡಿದ್ದರು. ಈ ವೇಳೆ ಸುಬ್ರಹ್ಮಣ್ಯ ಭಟ್ ತಾನು ಬಾಕಿ ಆಗಿರುವುದಾಗಿ ತಿಳಿಸಿದ್ದು, ಇನ್ನೊಂದು ರೈಲಿನಲ್ಲಿ ಬರುವುದಾಗಿ ಹೇಳಿದ್ದರು. ಬಳಿಕ ರಾತ್ರಿ 8.30ಕ್ಕೆ ರೈಲಿನಲ್ಲಿ ಅಯೋಧ್ಯೆಗೆ ತೆರಳಿದ್ದರು.
ರೈಲಿನ ಸಾಮಾನ್ಯ ಬೋಗಿಯಲ್ಲಿ ಕುಳಿತಿದ್ದ ಸುಬ್ರಹ್ಮಣ್ಯ ಭಟ್ಟರನ್ನು ಅಪರಿಚಿತನೋರ್ವ ಸ್ನೇಹದಿಂದ ಮಾತನಾಡಿಸಿದ್ದು ಆ.1ರಂದು ಮುಂಜಾನೆ 4ರ ಹೊತ್ತಿಗೆ ಶೌಚಾಲಯಕ್ಕೆ ಹೋಗಿ ಮರಳುವ ವೇಳೆ ಅದೇ ವ್ಯಕ್ತಿ ಹಣ, ಮೊಬೈಲ್, ಬಟ್ಟೆ ಬರೆ ಇದ್ದ ಲಗೇಜ್‌ನೊಂದಿಗೆ ಪರಾರಿಯಾಗಿದ್ದ. ಕಳವಾದ ವಸ್ತುಗಳ ಒಟ್ಟು ಮೌಲ್ಯ ಸುಮಾರು 20 ಸಾವಿರ ರೂ. ಆಗಿತ್ತು. ಬಳಿಕ ಅಯೋಧ್ಯೆಗೆ ತೆರಳದೆ ಅದರ ಹಿಂದಿನ ನಿಲ್ದಾಣದಲ್ಲಿ ಇಳಿದ ಭಟ್ಟರು, ಸ್ಥಳೀಯರೋರ್ವರ ಸಹಕಾರ ಪಡೆದು ಲಕ್ನೋ ರೈಲ್ವೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ಜೊತೆಗೇ ಇದ್ದು ಸ್ನೇಹದ ಮಾತನಾಡಿ ಮೊಬೈಲ್, ಹಣ ದೋಚಿ ಪರಾರಿಯಾಗಿದ್ದಾಗಿ ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ.
ಲಕ್ನೋದಿಂದ ಇನ್ನೊಂದು ರೈಲಿನ ಮೂಲಕ ಪ್ರತಾಪಗಡಕ್ಕೆ ಬಂದ ಅವರು, ಜೇಬಿನಲ್ಲಿದ್ದ ಸ್ವಲ್ಪ ಹಣದಲ್ಲಿ ಸಣ್ಣ ಮೊಬೈಲ್, ಸಿಮ್ ಖರೀದಿಸಿ ಕುಟುಂಬವನ್ನು ಸಂಪರ್ಕಿಸಿದರು. ಆ.1ರ ರಾತ್ರಿ 7ಕ್ಕೆ ದೂರವಾಣಿ ಮೂಲಕ ಪತ್ನಿಯನ್ನು ಸಂಪರ್ಕಿಸಿದ್ದರು. ಆದರೆ, ಅದಾಗಲೇ ಪತ್ನಿ ಅವರು ಆಯೋಧ್ಯೆ ತಲುಪಿದ್ದರು. ಸುಬ್ರಹ್ಮಣ್ಯ ಭಟ್ಟರು ಇವರ ತಂಡದಿಂದ ಪ್ರತ್ಯೇಕಗೊಂಡ ವಿಷಯ ಬೆಂಗಳೂರಿನಲ್ಲಿರುವ ಪುತ್ರಿಯ ಗಂಡನಿಗೆ ತಿಳಿದು, ಅವರು ಆ.2ರಂದು ಬೆಳಗ್ಗೆ ಪ್ರತಾಪಗಡಕ್ಕೆ ವಿಮಾನದಲ್ಲಿ ತೆರಳಿದ್ದಾರೆ. ಅಲ್ಲಿ ಮಾವನನ್ನು ಸಂಪರ್ಕಿಸಿ ಬಳಿಕ ಗಯಾ, ಕಾಶಿ ದರ್ಶನ ಮುಗಿಸಿ ವಿಮಾನದಲ್ಲಿಯೇ ಬೆಂಗಳೂರಿಗೆ ಮಗಳ ಮನೆಗೆ ಬಂದಿದ್ದಾರೆ. ಅಲ್ಲಿ ಎರಡು ದಿನ ಇದ್ದು ಬಳಿಕ ಊರಿಗೆ ಮರಳಿದ್ದಾರೆ.
A man from Puttur, who was separated from a group of 30 people while he was on a pilgrimage to religious places in north India, was robbed by an unidentified group on a train
20-09-25 02:59 pm
HK News Desk
Cm Siddaramaiah, Caste Survey: ಜಾತಿ ಸಮೀಕ್ಷೆ ಮ...
19-09-25 10:04 pm
Caste survey: ಜಾತಿ ಸಮೀಕ್ಷೆಗೆ ಸರ್ಕಾರದ ಸಚಿವರಿಂದ...
19-09-25 02:16 pm
ಮೋಸದಿಂದಲೇ ಕಣ್ರೀ ಬಿಜೆಪಿ ಚುನಾವಣೆ ಗೆದ್ದಿದೆ! ರಾಹು...
19-09-25 09:45 am
ಬೆಂಗಳೂರು ಗಬ್ಬೆದ್ದು ನಾರುತ್ತಿದೆ, ರಾಜಧಾನಿ ಈಗ ಗುಂ...
19-09-25 09:42 am
20-09-25 11:42 am
HK News Desk
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
20-09-25 06:39 pm
Mangalore Correspondent
Mangalore, Heart Attack: ಪ್ರತ್ಯೇಕ ಪ್ರಕರಣ ; ಮೂ...
20-09-25 02:31 pm
ಅಪಸ್ಮಾರ ಕಾಯಿಲೆ, ಕುಂಪಲದ ಹದಿಹರೆಯದ ಬ್ಯೂಟೀಷಿಯನ್ ಯ...
19-09-25 10:46 pm
ಕಟೀಲು ದೇಗುಲದಲ್ಲಿ ಸೇವಾ ದರ ಏಕಾಏಕಿ ದುಪ್ಪಟ್ಟು ; ಬ...
19-09-25 10:21 pm
ಧರ್ಮಸ್ಥಳ ಕೇಸ್ ; ಅನೇಕ ಶವಗಳನ್ನು ಹೂತಿದ್ದೆವು ಎಂದಿ...
19-09-25 09:59 pm
20-09-25 05:11 pm
Mangalore Correspondent
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm