ಬ್ರೇಕಿಂಗ್ ನ್ಯೂಸ್
31-08-24 02:36 pm Udupi Correspondent ಕರಾವಳಿ
ಉಡುಪಿ, ಆ 31: ಪಡುಬಿದ್ರಿ ಬೀಚ್‌ನಲ್ಲಿ ಬಿಕನಿ ಹಾಕಿ ಫೋಟೊ ತೆಗೆದುಕೊಳ್ಳುವಾಗ ಪೊಲೀಸರು ತಡೆದಿದ್ದಾರೆ ಎಂದು ಯುವತಿಯೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಖ್ಯಾತಿಶ್ರೀ ಹೆಸರಿನ ಇನ್‌ಸ್ಟಾಗ್ರಾಂ ಖಾತೆ ಹೊಂದಿರುವ ಯುವತಿ, ಬೀಚ್‌ನಲ್ಲಿ ಬಿಕನಿ ಹಾಕಿ ತೆಗೆದಿರುವ ಫೋಟೊವನ್ನೂ, ಇಬ್ಬರು ಪೊಲೀಸರು ಅವರ ಬಳಿ ಬರುತ್ತಿರುವ ಮತ್ತು ಬೀಚ್‌ನಲ್ಲಿ ಕುಳಿತಿದ್ದ ಕೆಲವರ ಫೋಟೊಗಳನ್ನೂ ಪೋಸ್ಟ್ ಮಾಡಿದ್ದಾರೆ.
‘ಪಡುಬಿದ್ರಿ ಬೀಚ್‌ನಲ್ಲಿ ಗಂಡ ನನ್ನ ಫೋಟೊ ತೆಗೆಯುತ್ತಿದ್ದರು. ಆಗ ಅಲ್ಲಿಗೆ ಇಬ್ಬರು ಪೊಲೀಸರು ಬಂದು ಬಿಕನಿ ಯಾಕೆ ಧರಿಸಿದ್ದೀರಿ. ಅದಕ್ಕೆ ಅನುಮತಿ ಇದೆಯಾ ಎಂದು ಪ್ರಶ್ನಿಸಿದರು’ ಎಂದು ಬರೆದುಕೊಂಡಿದ್ದಾರೆ.
‘ಬಿಕನಿ ಹಾಕಿಕೊಂಡು ಬೀಚ್‌ಗೆ ಬರೋದು ಕಾನೂನುಬದ್ಧ. ಅದಕ್ಕೆ ಯಾವುದೇ ಅನುಮತಿ ಬೇಡ ಎಂದು ನನ್ನ ಗಂಡ ಪೊಲೀಸರಿಗೆ ತಿಳಿಸಿದರು. ಆಗ ಪೊಲೀಸರು ದೂರದಲ್ಲಿ ಕುಳಿತಿದ್ದ ಗುಂಪೊಂದನ್ನು ತೋರಿಸಿ, ನೀವು ಬಟ್ಟೆ ಬದಲಾಯಿಸದಿದ್ದರೆ ಅವರು ನಿಮ್ಮ ಮೇಲೆ ಹಲ್ಲೆ ನಡೆಸಬಹುದು ಎಂದರು. ನನ್ನ ಹಕ್ಕುಗಳನ್ನು ರಕ್ಷಣೆ ಮಾಡಬೇಕಾದ ಪೊಲೀಸರು ಆ ರೀತಿ ವರ್ತಿಸಿದ್ದಾರೆ’ ಎಂದು ಯುವತಿ ಅಸಮಾಧಾನ ತೋಡಿಕೊಂಡಿದ್ದಾರೆ.
‘ನಾವು ಅಲ್ಲಿಂದ ನಮ್ಮ ರೂಮ್‌ಗೆ ಬಂದೆವು. ಅಲ್ಲಿಂದ ನೋಡಿದಾಗ ಪೊಲೀಸರು ಆ ರೌಡಿಗಳ ಜೊತೆಗೆ ಮಾತನಾಡುತ್ತಿದ್ದರು. ಆ ಸ್ಥಳ ಸುರಕ್ಷಿತವಲ್ಲ ಎಂದು ಅರಿತು ನಮ್ಮ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿ ಮುಂದಿನ ಗ್ರಾಮಕ್ಕೆ ಹೊರಟೆವು’ ಎಂದು ಯುವತಿ ಫೋಟೊದ ಮೇಲೆ ಬರೆದುಕೊಂಡಿದ್ದಾರೆ.
ವಸತಿ ಪ್ರದೇಶದಲ್ಲಿ ಫೋಟೊ ಶೂಟ್:
ಆರೋಪ ಮಾಡಿರುವ ದೆಹಲಿ ಮೂಲದ ಯುವತಿ ವಸತಿ ಪ್ರದೇಶದಲ್ಲಿರುವ ಕಡಲ ತೀರದಲ್ಲಿ ಸಂಜೆ ವೇಳೆ ಬಿಕನಿ ಹಾಕಿಕೊಂಡು ಫೋಟೊ ತೆಗೆಸಿಕೊಂಡಿದ್ದಾರೆ. ಆಗ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಹೋಗಿ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಅಲ್ಲಿಂದ ತೆರಳಬೇಕೆಂದು ಸೂಚಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಡುಬಿದ್ರಿಯ ಬ್ಲೂ ಫ್ಲಾಗ್ ಬೀಚ್‌ನಲ್ಲಿ ಇದೇ ಯುವತಿ ಬಿಕನಿ ಹಾಕಿ ಫೋಟೊ ಶೂಟ್ ಮಾಡಿದ್ದಾರೆ. ಅದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಸಾರ್ವಜನಿಕ ವಲಯದಲ್ಲಿರುವ ಸಮುದ್ರತೀರದಲ್ಲಿ ಫೋಟೊ ಶೂಟ್ ಮಾಡಿರುವುದರಿಂದ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದೂ ಪೊಲೀಸ್ ಮೂಲಗಳು ಹೇಳಿವೆ.
ಎಸ್ಪಿ ಹೇಳುವುದೇನು?
ಒಬ್ಬ ಯುವತಿ ಮತ್ತು ಯುವಕ ಪಡುಬಿದ್ರಿ ಬ್ಲೂಫಾಗ್ ಬೀಚ್‌ನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆಂದು ಪೊಲೀಸರಿಗೆ ಸಾರ್ವಜನಿಕರು ದೂರು ನೀಡಿದ್ದು, ಬೀಟ್ ಕರ್ತವ್ಯದಲ್ಲಿದ್ದ ಎಎಸ್‌ಐ ಮತ್ತು ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲಿರುವ ಯುವಕ ಮತ್ತು ಯುವತಿಯನ್ನು ಕರೆದು ಬ್ಲೂಫಾಗ್ ಬೀಚ್ ಮತ್ತು ವಸತಿ ಪ್ರದೇಶದ ಬಗ್ಗೆ ತಿಳಿವಳಿಕೆ ನೀಡಿ ಅವರನ್ನು ಅಲ್ಲಿಂದ ಕಳುಹಿಸಲಾಗಿದೆ. ಇಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಈ ಬಗ್ಗೆ ಯುವತಿಯನ್ನು ಸಂಪರ್ಕಿಸಿದ್ದು, ಅವರಿಗೆ ಯಾವುದೇ ದೂರುಗಳಿದ್ದಲ್ಲಿ ಮುಕ್ತವಾಗಿ ನೀಡಬಹುದಾಗಿ ಸೂಚಿಸಲಾಗಿದೆ. ಯುವತಿಯಿಂದ ದೂರು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಡಾ.ಅರುಣ್ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
Udupi bikini photoshoot of wife at padubidri beach sparks controversy, slam police on Instagram. A woman has alleged in a post on Instagram that police had stopped her from enjoying the beach while wearing a bikini at Padubidri.Khyati Shree, who identifies herself as a 'digital creator' on Instagram said "We were at Padubidri Beach in Udupi. We were having a good time. My husband was clicking my pictures. Out of nowhere two police officers arrived. They asked me why I am wearing a bikini and said where is the permit for clicking pictures.
20-09-25 02:59 pm
HK News Desk
Cm Siddaramaiah, Caste Survey: ಜಾತಿ ಸಮೀಕ್ಷೆ ಮ...
19-09-25 10:04 pm
Caste survey: ಜಾತಿ ಸಮೀಕ್ಷೆಗೆ ಸರ್ಕಾರದ ಸಚಿವರಿಂದ...
19-09-25 02:16 pm
ಮೋಸದಿಂದಲೇ ಕಣ್ರೀ ಬಿಜೆಪಿ ಚುನಾವಣೆ ಗೆದ್ದಿದೆ! ರಾಹು...
19-09-25 09:45 am
ಬೆಂಗಳೂರು ಗಬ್ಬೆದ್ದು ನಾರುತ್ತಿದೆ, ರಾಜಧಾನಿ ಈಗ ಗುಂ...
19-09-25 09:42 am
20-09-25 11:42 am
HK News Desk
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
20-09-25 06:39 pm
Mangalore Correspondent
Mangalore, Heart Attack: ಪ್ರತ್ಯೇಕ ಪ್ರಕರಣ ; ಮೂ...
20-09-25 02:31 pm
ಅಪಸ್ಮಾರ ಕಾಯಿಲೆ, ಕುಂಪಲದ ಹದಿಹರೆಯದ ಬ್ಯೂಟೀಷಿಯನ್ ಯ...
19-09-25 10:46 pm
ಕಟೀಲು ದೇಗುಲದಲ್ಲಿ ಸೇವಾ ದರ ಏಕಾಏಕಿ ದುಪ್ಪಟ್ಟು ; ಬ...
19-09-25 10:21 pm
ಧರ್ಮಸ್ಥಳ ಕೇಸ್ ; ಅನೇಕ ಶವಗಳನ್ನು ಹೂತಿದ್ದೆವು ಎಂದಿ...
19-09-25 09:59 pm
20-09-25 05:11 pm
Mangalore Correspondent
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm