ಬ್ರೇಕಿಂಗ್ ನ್ಯೂಸ್
31-08-24 05:19 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್.31: ಪ್ರೀತಿ ಮಾಯೆ ಅಂತಾರೆ, ಪ್ರೀತಿಗೆ ಬಿದ್ದೋರು ಜಗತ್ತನ್ನೇ ಮರೆಯುತ್ತಾರೆ ಎನ್ನೋದನ್ನು ಕೇಳಿದ್ದೇವೆ. ಇಲ್ಲೊಬ್ಬಳು ಹುಡುಗಿ ಪ್ರೀತಿಯ ಬಲೆಗೆ ಬಿದ್ದು ಕೊನೆಗೆ ವಿದೇಶದಲ್ಲಿ ಉದ್ಯೋಗ ಸಿಕ್ಕಿದೆ ಎಂಬ ನೆಪ ಹೇಳಿ ಹೆತ್ತವರು, ಗೆಳತಿಯರನ್ನೆಲ್ಲ ಯಮಾರಿಸಿ ಅನ್ಯಕೋಮಿನ ಪ್ರಿಯಕರನ ಜೊತೆಗೆ ಪರಾರಿಯಾಗಲು ಯತ್ನಿಸಿದ್ದು ಪೊಲೀಸರ ಸಕಾಲಿಕ ಪ್ರಯತ್ನದಿಂದ ಸುರಕ್ಷಿತವಾಗಿ ಪತ್ತೆಯಾಗಿದ್ದಾಳೆ.
ಲವರ್ ಜೊತೆ ಎಸ್ಕೇಪ್ ಆಗುವುದಕ್ಕಾಗಿ ತನ್ನನ್ನು ನಂಬಿದ್ದ ಹೆತ್ತವರನ್ನೇ ಯುವತಿ ಮೋಸ ಮಾಡಿರುವುದು ಪ್ರಕರಣದಲ್ಲಿ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಲ್ಲಮೊಗ್ರದ ಯುವತಿ, ಸವಣೂರಿನ ಕಾಲೇಜಿನಲ್ಲಿ ಇದೇ ವರ್ಷ ಪಿಯುಸಿ ತೇರ್ಗಡೆಯಾಗಿದ್ದಳು. ಬಡತನದಲ್ಲಿಯೇ ಬೆಳೆದಿದ್ದ ಮಗಳಿಗೆ ವಿದೇಶದಲ್ಲಿ ಕೆಲಸ ಸಿಕ್ಕಿರುವ ಸುದ್ದಿಕೇಳಿ ಹೆತ್ತವರು ಸಂಭ್ರಮಿಸಿದ್ದರು. ಬೆಂಗಳೂರಿನಲ್ಲಿ ಇಬ್ಬರು ಗೆಳತಿಯರಿದ್ದಾರೆಂದು ಮನೆಯವರಿಗೆ ಹೇಳಿ, ಅವರ ಜೊತೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದಳು. ಏರ್ಪೋರ್ಟ್ ವರೆಗೆ ಗೆಳತಿಯರು ಜೊತೆಗೆ ತೆರಳಿದ್ದು ಅಲ್ಲಿ ಆಕೆಗೆ ಟಾಟಾ ಮಾಡಿ ಹಿಂತಿರುಗಿದ್ದರು ಎನ್ನಲಾಗಿದೆ.
ವಿದೇಶಕ್ಕೆ ತೆರಳುವ ನೆಪವೊಡ್ಡಿದ 18ರ ಯುವತಿ ಮನೆಯಲ್ಲಿ ಪೋಷಕರನ್ನು ನಂಬಿಸಿ ಆಗಸ್ಟ್ 25 ರಂದು ಮನೆ ಬಿಟ್ಟಿದ್ದಳು. ದೀಕ್ಷಾ ತಂದೆ, ತಾಯಿ ಅವಿದ್ಯಾವಂತರಾಗಿದ್ದು ಮಗಳು ಹೇಳಿದ್ದ ಕತೆಯನ್ನು ನಿಜವೆಂದೇ ನಂಬಿದ್ದರು. ಆದರೆ ಆಕೆಯನ್ನು ಕೆಲವರು ಬೆಂಗಳೂರು - ಧರ್ಮಸ್ಥಳ ಬಸ್ಸಿನಲ್ಲಿ ನೋಡಿದ್ದಾಗಿ ಹೇಳಿದ್ದರಿಂದ ಮನೆಯವರು ಅನುಮಾನಗೊಂಡಿದ್ದರು. ಅಲ್ಲದೆ, ಆಕೆಯ ಫೋನ್ ಕೂಡ ರಿಂಗ್ ಆಗುತ್ತಿದ್ದುದರಿಂದ ಸಂಶಯ ಬಲವಾಗಿತ್ತು. ಅನುಮಾನದಲ್ಲೇ ಸುಬ್ರಹ್ಮಣ್ಯ ಪೋಲಿಸರನ್ನು ಸಂಪರ್ಕಿಸಿದ್ದ ಹೆತ್ತವರು, ನಾಪತ್ತೆ ವಿಷಯ ತಿಳಿಸಿದ್ದರು. ಯುವತಿ ಮೊಬೈಲ್ ಲೊಕೇಷನ್ ನೋಡಿದಾಗ, ಬೆಂಗಳೂರಿನ ಹೊರವಲಯದಲ್ಲಿ ಇರುವ ಬಗ್ಗೆ ತಿಳಿದುಬಂದಿತ್ತು.
ಸುಬ್ರಹ್ಮಣ್ಯ ಪೊಲೀಸರ ಸಲಹೆಯಂತೆ ಬೆಂಗಳೂರಿಗೆ ತೆರಳಿದ ಯುವತಿ ಪೋಷಕರು ಉಪ್ಪಾರಪೇಟೆ ಪೋಲಿಸ್ ಠಾಣೆಯಲ್ಲಿ 28ರಂದು ದೂರು ನೀಡಿದ್ದರು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಪ್ಪಾರಪೇಟೆ ಪೋಲಿಸರು ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಸವಣೂರು ಮೂಲದ ಮುಸ್ಲಿಂ ಯುವಕ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲಸಕ್ಕಿದ್ದು ಆತನ ಜೊತೆಗೆ ಯುವತಿ ಪರಾರಿಯಾಗಲು ವಿದೇಶಿ ಉದ್ಯೋಗದ ಕತೆ ಕಟ್ಟಿದ್ದಳು ಎನ್ನುವ ಅಂಶ ಬಯಲಾಗಿದೆ. ಸದ್ಯಕ್ಕೆ ಯುವತಿಯನ್ನು ಸುಬ್ರಹ್ಮಣ್ಯ ಠಾಣೆಗೆ ಕರೆತಂದು ಮಾತುಕತೆ ನಡೆಸಲಾಗಿದೆ.
Mangalore Sullia Hindu Girl flees with muslim youth, both caught by police in Bangalore. Girl had stated that she has got a job abroad and flee with her muslim boy friend to Bangalore.
27-05-26 06:26 pm
HK News Staffer
ನಾಗಲಕ್ಷ್ಮಿಗೆ ಸುತ್ತಿಕೊಂಡ ಮತ್ತೊಂದು ವಿವಾದ ; ಉಡುಪ...
27-05-26 04:58 pm
ಡಿಕೆಗೆ ಪಟ್ಟ ; ಬಹುತೇಕ ಸಚಿವರಿಗೆ ಕೊಕ್- ಹೊಸಬರಿಗೆ...
27-05-26 01:41 pm
ರಾಜ್ಯ ರಾಜಕೀಯದಲ್ಲಿ ಭಾರೀ ಕ್ಲೈಮ್ಯಾಕ್ಸ್ ; ಸಿಎಂ ಸಿ...
26-05-26 11:03 pm
ದೈವಕ್ಕೆ ಅಪಮಾನ; ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ...
26-05-26 08:51 pm
27-05-26 09:17 pm
HK News Desk
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
27-05-26 12:29 pm
HK News Desk
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
ಎಂಆರ್ ಪಿಎಲ್ ಕೋಕ್ ಸಲ್ಫರ್ ಮಾಲಿನ್ಯ ; ಆರು ತಿಂಗಳಲ್...
25-05-26 09:57 pm
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
27-05-26 08:34 pm
HK News Staffer
ಉರ್ವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೇರಳಕ್ಕೆ...
27-05-26 07:56 pm
ಬೈಜುಸ್ ಸಂಸ್ಥಾಪಕ ರವೀಂದ್ರನ್ಗೆ ಭಾರೀ ಆಘಾತ ; ಜೈಲ...
27-05-26 01:30 pm
ಪ್ರಿಯಕರನ ಕಿರುಕುಳ ; ಮುಂಬೈನಲ್ಲಿ ರೇಡಿಯೋ ಜಾಕಿಯಾಗಿ...
27-05-26 12:42 pm
ಇಸ್ರೇಲ್ನಿಂದ ರಜೆ ಮೇಲೆ ಊರಿಗೆ ಬಂದವನ ದುರಂತ ಅಂತ್ಯ...
26-05-26 02:43 pm