ಬ್ರೇಕಿಂಗ್ ನ್ಯೂಸ್
01-09-24 07:11 pm Udupi Correspondent ಕರಾವಳಿ
ಉಡುಪಿ, ಸೆ 01: ಕುಟುಂಬ ಸಮೇತರಾಗಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ರಿಷಬ್ ಶೆಟ್ಟಿ ಮತ್ತು ಜ್ಯೂ. ಎನ್‌ಟಿಆರ್ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು.
ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದ ಸ್ಟಾರ್ ನಟರು ದೇವರ ದರ್ಶನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದರು.
ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವ ಮೊದಲು ರಿಷಬ್ ಶೆಟ್ಟಿ ಮತ್ತು ಎನ್.ಟಿ.ಆರ್ ಮಂಗಳೂರು ಏರ್‌ಪೋರ್ಟ್‌ನಲ್ಲಿ ಭೇಟಿಯಾಗಿದ್ದರು ಮತ್ತು ಡಿವೈನ್ ಸ್ಟಾರ್, ಟೈಗರ್‌ನನ್ನು ಸ್ವಾಗತಿಸಿದ್ದರು.
ಸೆ.2ರಂದು ನನ್ನ ತಾಯಿ ಹುಟ್ಟುಹಬ್ಬ ಇದೆ. ಅವರ ತವರು ಕುಂದಾಪುರಕ್ಕೆ ಬರಬೇಕೆಂಬ ಮಹಾದಾಸೆ ಇತ್ತು. ಮಗನಾಗಿ ಅವರ ಸಣ್ಣ ಆಸೆಯನ್ನು ಈಡೇರಿಸುವುದೇ ನನ್ನ ಭಾಗ್ಯ. ಅವರ ಹುಟ್ಟುಹಬ್ಬಕ್ಕೆ ಇದೇ ದೊಡ್ಡ ಗಿಫ್ಟ್. ಅಮ್ಮನನ್ನು ಕರೆದುಕೊಂಡು ಬಂದಿದ್ದು ಖುಷಿ ಆಯಿತು. ಜತೆಗೆ ಆಸೆ ಈಡೇರಿಸಿ ಎಂಬ ನೆಮ್ಮದಿ ಇದೆ ಎಂದು ಟಾಲಿವುಡ್ ನಟ ಜ್ಯೂ.ಎನ್‌ಟಿಆರ್ ತಿಳಿಸಿದರು.
ಅಮ್ಮ ಯಾವಾಗಲೂ ಶ್ರೀಕೃಷ್ಣನ ದರ್ಶನಕ್ಕಾಗಿ ಅವರ ತವರು ಮನೆಯಾದ ಕುಂದಾಪುರದಿಂದ ಉಡುಪಿಗೆ ಹೋಗುವಂತೆ ನನ್ನನ್ನು ಒತ್ತಾಯಿಸುತ್ತಿದ್ದರು. ಈಗ ಅವರ ಕನಸು ನನಸಾಗಿದೆ. ಸೆಪ್ಟೆಂಬರ್ 2 ರಂದು ಅವರ ಹುಟ್ಟುಹಬ್ಬ. ಅದಕ್ಕೂ ಮುಂಚೆಯೇ ಈ ಬಾರಿ ಗಿಫ್ಟ್ ಇದಾಗಿರಲಿದೆ ಎಂದಿದ್ದಾರೆ. ನಿರ್ಮಾಪಕ (ಹೊಂಬಾಳೆ ಫಿಲಂಸ್ ಮುಖ್ಯಸ್ಥ) ವಿಜಯ್ ಕಿರಗಂದುರ್ ಸರ್‌ಗೆ ಧನ್ಯವಾದಗಳು. ನನ್ನ ಗೆಳೆಯ ಪ್ರಶಾಂತ್ ನೀಲ್ ಅವರೊಂದಿಗೆ ಇಲ್ಲಿಗೆ ಬಂದಿರುವ ಬಗ್ಗೆ ಸಂತೋಷವಿದೆ. ಅಲ್ಲದೇ ನಟ ರಿಷಬ್ ಶೆಟ್ಟಿ ಅವರೂ ಸಹ ನಮ್ಮೊಂದಿಗೆ ಬಂದು ಈ ಸಂತೋಷದ ಕ್ಷಣಗಳನ್ನು ಇನ್ನಷ್ಟು ಸ್ಪೆಷಲ್ ಮಾಡಿದ್ರು ಎಂದು ಹೇಳಿದ್ದಾರೆ.
ಇನ್ನು ಜ್ಯೂನಿಯರ್ ಎನ್‌ಟಿಆರ್ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆ ನಟ. ಸದ್ಯ ಅವರು ದೇವರ ಎನ್ನುವ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಕೊರಟಾಲ ಶಿವ ಅವರು ನಿರ್ದೇಶನ ಮಾಡಿದ್ದಾರೆ. ಚಿತ್ರದ ನಾಯಕಿಯಾಗಿ ಜಾನ್ವಿ ಕಪೂರ್ ಅವರು ಅಭಿನಯಿಸುತ್ತಿದ್ದಾರೆ. ಸೆಪ್ಟೆಂಬರ್ 27 ರಂದು ಚಿತ್ರದ ಮೊದಲ ಭಾಗ ಭಾರತದಾದ್ಯಂತ ಬಿಡುಗಡೆ ಆಗಲಿದೆ.
Jr NTR and Rishab Shetty, along with filmmaker Prashanth Neel, were spotted in Mangaluru on Saturday. The trio, joined by Jr NTR’s family, visited a temple in Udupi to seek blessings.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 01:14 pm
Mangalore Correspondent
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm