ಬ್ರೇಕಿಂಗ್ ನ್ಯೂಸ್
02-09-24 08:36 pm Mangalore Correspondent ಕರಾವಳಿ
ಮಂಗಳೂರು, ಸೆ.2: ಕುಡ್ಲದ ಕುವರಿ, ತುಳು ಚಿತ್ರದ ಮೂಲಕ ಸಿನಿಮಾ ನಟಿಯಾಗಿ ಭಡ್ತಿ ಪಡೆದಿದ್ದ ಅಪ್ಪಟ ಕ್ಯಾಥೊಲಿಕ್ ಕ್ರಿಶ್ಚಿಯನ್ ಹುಡುಗಿ ಸೋನಲ್ ಮೊಂತೇರೊ ಈಗ ಸ್ಯಾಂಡಲ್ ವುಡ್ ಕುಟುಂಬ ಸೇರಿದ್ದಾರೆ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ಹೆಣ್ಣು ಮಗಳು ಸೋನಲ್ ಮೊಂತೇರೊ ಅವರನ್ನು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೆಸರಾಂತ ವಿಲನ್ ಆಗಿದ್ದ ದಿವಂಗತ ಸುಧೀರ್ ಅವರ ಪುತ್ರ, ಚಿತ್ರ ನಿರ್ದೇಶಕ ತರುಣ್ ಸುಧೀರ್ ವರಿಸಿದ್ದಾರೆ.
ಆಗಸ್ಟ್ 11ರಂದು ಬೆಂಗಳೂರಿನಲ್ಲಿ ಈ ಜೋಡಿಯ ಅದ್ದೂರಿ ಮದುವೆ ಸಂಭ್ರಮ ನಡೆದಿತ್ತು. ಇದೀಗ ಸೆ.1ರ ಭಾನುವಾರ ಮಂಗಳೂರಿನ ಕೋರ್ಡೆಲ್ ಚರ್ಚ್ ಮತ್ತು ಟಿಎಂಎ ಪೈ ಹಾಲ್ ನಲ್ಲಿ ಕ್ಯಾಥೊಲಿಕ್ ಕ್ರಿಶ್ಚಿಯನ್ ಸಂಪ್ರದಾಯದಂತೆ ಮತ್ತೊಮ್ಮೆ ಮದುವೆ ಕಾರ್ಯ ನಡೆದಿದೆ. ಮದುವೆಗೂ ಎರಡು ದಿನಗಳ ಹಿಂದೆ ರೋಸ್ ಕಾರ್ಯಕ್ರಮವೂ ನಡೆದಿದ್ದು, ಅರಿಶಿಣ ಮತ್ತು ಹಾಲನ್ನು ವಧೂವರರಿಗೆ ಧಾರೆ ಎರೆಯುವ ಸಂಪ್ರದಾಯದ ಫೋಟೋಗಳು ಸೋನಲ್ ಮೊಂತೇರೋ ಜಾಲತಾಣದಲ್ಲಿ ಇವೆ.
ಬೆಂಗಳೂರಿನಲ್ಲಿ ಈ ಮೊದಲೇ ಹಿಂದು ವಿಧಿಗಳ ಪ್ರಕಾರ ಮದುವೆ ಆಗಿರುವುದರಿಂದ ಭಾನುವಾರ ಕೋರ್ಡೆಲ್ ಚರ್ಚ್ ನಲ್ಲಿ ಹೆಚ್ಚಿನ ಸಂಪ್ರದಾಯ ಅನುಸರಿಸದೆ ಉಂಗುರ ಬದಲಾಯಿಸುವುದು, ಪ್ರತಿಜ್ಞಾ ವಿಧಿ ಬೋಧನೆ ಮಾತ್ರ ಇತ್ತಂತೆ. ಆನಂತರ, ಸಂಜೆಯ ವೇಳೆಗೆ ಲಾಲ್ ಬಾಗಿನ ಟಿಎಂಎ ಪೈ ಹಾಲ್ ನಲ್ಲಿ ತುಳು ಚಿತ್ರರಂಗದ ಕಲಾವಿದರು, ಮಂಗಳೂರಿನ ಗೆಳೆಯ- ಗೆಳತಿಯರಿಗೆ ಸೋನಲ್ ಮತ್ತು ತರುಣ್ ಸುಧೀರ್ ಪರವಾಗಿ ರಿಸೆಪ್ಶನ್ ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ಮಂದಿ ಪಾಲ್ಗೊಂಡು ಹೊಸ ಜೋಡಿಗೆ ಶುಭ ಹಾರೈಸಿದ್ದಾರೆ.






ಆಗ್ನೆಸ್ ನಲ್ಲಿ ಕಲಿತಿದ್ದ ಸೋನಲ್ ಮೊಂತೇರೋ
2013ರಲ್ಲಿ ಮಂಗಳೂರಿನ ಆಗ್ನೆಸ್ ಕಾಲೇಜಿನಲ್ಲಿ ಪಿಯುಸಿ ಪೂರೈಸಿದ್ದ ಸೋನಲ್ ಮೊಂತೇರೊ ಪಡೀಲ್ ನಿವಾಸಿಯಾಗಿದ್ದು, ತಾಯಿ ಜೊತೆಗೆ ನೆಲೆಸಿದ್ದರು. ತಂದೆ ಕೆಲವು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಒಬ್ಬ ಅಕ್ಕನಿಗೆ ಮದುವೆಯಾಗಿದ್ದು, ವಿದೇಶದಲ್ಲಿ ನೆಲೆಸಿದ್ದಾರೆ. ಪಿಯುಸಿ ಓದುತ್ತಿದ್ದ ಸೋನಲ್ ಓದಿನ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ತೊಡಗಿಸಿದ್ದರು. ಕಾಲೇಜಿನಲ್ಲಿರುವಾಗಲೇ ಮಾಡೆಲ್ ಆಗಿದ್ದಲ್ಲದೆ, ಮಿಸ್ ಬ್ಯೂಟಿಫುಲ್ ಸ್ಮೈಲ್ 2013 ಎನ್ನುವ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಇದರ ಬೆನ್ನಲ್ಲೇ ಜೆರೋಮ್ ಡಿಸೋಜ ಅವರ ನಾಚ್ ಕೊಂಕನ್ನಾತ್ ಹೆಸರಿನ ಆಲ್ಬಂ ಸಾಂಗ್ ನಲ್ಲಿ ಸೋನಲ್ ನಟಿಸಿದ್ದರು. ಇದು ಅವರಿಗೆ ಕರಾವಳಿಯಲ್ಲಿ ಸಾಕಷ್ಟು ಪ್ರಚಾರವನ್ನೂ ಕೊಟ್ಟಿತ್ತು.
ಚರಣ್ ಬೋಳೂರು ಅವರ ಎಬಿಸಿಡಿ ಹೆಸರಿನ ಮಾಡೆಲಿಂಗ್ ಟೀಮ್ ನಲ್ಲಿದ್ದರಿಂದ ಸಿನಿಮಾದ ಆಡಿಶನ್ ಅವಕಾಶ ಸಿಕ್ಕಿತ್ತು. 2015ರಲ್ಲಿ ತುಳು ಸಿನಿಮಾಗೆ ಎಂಟ್ರಿ ಪಡೆದಿದ್ದು, ಮೊದಲ ಸಿನಿಮಾ ಎಕ್ಕ ಸಕ್ಕ ರಿಲೀಸ್ ಆಗಿತ್ತು. ಸಾಮಾನ್ಯ ಕಾಮೆಡಿ ಫಿಲ್ಮ್ ಆಗಿದ್ದರೂ, ಸೋನಲ್ ಮೊಂತೇರೊ ಅವರಿಗೆ ಇದರಿಂದ ಭರ್ಜರಿ ಎಂಟ್ರಿ ಸಿಕ್ಕಿತ್ತು. ಆನಂತರ, 2016ರಲ್ಲಿ ಸೂರಜ್ ಶೆಟ್ಟಿ ನಿರ್ದೇಶನದ ಪಿಲಿಬೈಲ್ ಯಮುನಕ್ಕ ಚಿತ್ರ ಸೋನಲ್ ಮೊಂತೇರೊ ಅವರಿಗೆ ನಟಿಯಾಗಿ ಸ್ವಲ್ಪ ಮಟ್ಟಿಗೆ ಖ್ಯಾತಿ ದೊರಕಿಸಿತ್ತು. ಆನಂತರ, ಕನ್ನಡ ಚಿತ್ರರಂಗದಲ್ಲಿಯೂ ನಟಿಸಲು ಅವಕಾಶ ಸಿಕ್ಕಿದ್ದು, 2018ರಲ್ಲಿ ಅಭಿಸಾರಿಕೆ, ಎಂಎಲ್ಎ, ಮದುವೆ ದಿಬ್ಬಣ ಎಂಬ ಮೂರು ಚಿತ್ರಗಳು ಬಂದಿದ್ದವು.
2019ರಲ್ಲಿ ಯೋಗರಾಜ ಭಟ್ಟರ ಪಂಚತಂತ್ರ ಚಿತ್ರ ಹಿಟ್ ಆಗುವುದರೊಂದಿಗೆ ಸೋನಲ್ ಮೊಂತೇರೊಗೆ ಸ್ಯಾಂಡಲ್ ವುಡ್ಡಿನಲ್ಲಿ ಹೊಸ ಭಡ್ತಿ ಸಿಕ್ಕಂತಾಗಿತ್ತು. 2020ರಲ್ಲಿ ಡೆಮೋ ಪೀಸ್ ಅನ್ನುವ ಮತ್ತೊಂದು ಕನ್ನಡ ಚಿತ್ರ ರಿಲೀಸ್ ಆಗಿತ್ತು. 2021ರಲ್ಲಿ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ತೆರೆಕಂಡಿತ್ತು. ಈ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದರು. ಬಹುಕೋಟಿ ಬಜೆಟ್ಟಿನ ಈ ಚಿತ್ರ ಹೀರೋಯಿನ್ ಆಗಿದ್ದ ಸೋನಲ್ ಮೊಂತೇರೋಗೆ ದೊಡ್ಡ ಹೆಸರು ತಂದುಕೊಟ್ಟಿತ್ತು.
ಮದುವೆಗೆ ಸಲಹೆ ನೀಡಿದ್ದು ದರ್ಶನ್ ಅಂತೆ
ರಾಬರ್ಟ್ ಚಿತ್ರ ಹಿಟ್ ಆಗುತ್ತಿದ್ದಂತೆ ತರುಣ್ ಸುಧೀರ್ ಮತ್ತು ಸೋನಲ್ ನಡುವೆ ಸ್ವಲ್ಪ ಮಟ್ಟಿಗೆ ಟಚಿಂಗ್ ಟಚಿಂಗ್ ಶುರುವಾಗಿತ್ತು. ಇಷ್ಟರಲ್ಲಿಯೇ ನಟ ದರ್ಶನ್ ಎಂಟ್ರಿ ಕೊಟ್ಟಿದ್ದು, ಇವರ ಮದುವೆ ಪ್ರಸ್ತಾಪವನ್ನು ಸೋನಲ್ ಅವರ ತಾಯಿ ಬಳಿ ಪ್ರಸ್ತಾಪಿಸಿದ್ದಾರೆ ಎನ್ನಲಾಗುತ್ತಿದೆ. ಬೇರೆ ಹುಡುಗನನ್ನು ನೀವು ನೋಡಿಲ್ಲಾಂದ್ರೆ, ನಮ್ಮ ಹುಡ್ಗ ಇದ್ದಾನೆ, ಒಳ್ಳೆ ಹುಡ್ಗ ಎಂದು ಪ್ರಸ್ತಾಪ ಮಾಡಿದ್ದಾರೆ. ಅದರಂತೆ, ಈ ಜೋಡಿಯದ್ದು ಲವ್ ಕಂ ಎರೇಂಜ್ಡ್ ಮ್ಯಾರೇಜ್ ಆಗಿದೆ ಎನ್ನುವುದು ಅವರ ಹತ್ತಿರದವರ ಮಾತು. ಅದೇ ಕಾರಣಕ್ಕೆ ದರ್ಶನ್ ಜೈಲಿಗೆ ಹೋಗಿದ್ದರಿಂದ ತರುಣ್ ಸುಧೀರ್ ಮದುವೆ ಸಮಾರಂಭ ಮುಂದಕ್ಕೆ ಹಾಕುವ ಚಿಂತನೆಯಲ್ಲಿದ್ದರು. ಆದರೆ, ದರ್ಶನ್ ಅವರೇ ತನಗೆ ಬೇಗನೇ ಬೈಲ್ ಸಿಗಲ್ಲ, ನೀವು ಮದುವೆ ಮುಂದುವರಿಸಿ ಎಂದು ಸಲಹೆ ತರುಣ್ ಗೆ ನೀಡಿದ್ದರಂತೆ. ಅದರಂತೆ, ಮೊನ್ನೆ ಹಿಂದು ವಿಧಿ ಪ್ರಕಾರ, ಇದೀಗ ಕ್ರಿಶ್ಚಿಯನ್ ಸಂಪ್ರಾಯದಂತೆಯೂ ಮದುವೆ ನಡೆದಿದೆ. ಕನ್ನಡ ಚಿತ್ರರಂಗದಲ್ಲಿ ಬಿಝಿಯಾಗಿದ್ದರಿಂದ ಸೋನಲ್ ಮೊಂತೇರೊ ಕೆಲವು ವರ್ಷಗಳಿಂದ ತಾಯಿ ಜೊತೆಗೆ ಬೆಂಗಳೂರಿನಲ್ಲೇ ನೆಲೆಸಿದ್ದಾರೆ.
2022ರಲ್ಲಿ ಸಚಿವ ಜಮೀರ್ ಖಾನ್ ಅವರ ಪುತ್ರ ಜುನೈದ್ ನಟನೆಯ ಬನಾರಸ್ ಚಿತ್ರದಲ್ಲಿ ಸೋನಲ್ ಮೊಂತೇರೊ ನಾಯಕಿಯಾಗಿದ್ದರು. ಭಾರೀ ಬಜೆಟ್ಟಿನ ಈ ಚಿತ್ರದ ಬಳಿಕ ಜುನೈದ್ ಅವರನ್ನೇ ಸೋನಲ್ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯೂ ಹಬ್ಬಿತ್ತು. ಆನಂತರ, ಗರಡಿ, ಸುಗರ್ ಫ್ಯಾಕ್ಟರಿ ಎನ್ನುವ ಚಿತ್ರದಲ್ಲೂ ನಟಿಸಿದ್ದರು. ಸದ್ಯಕ್ಕೆ ಬುದ್ಧಿವಂತ ಮತ್ತು ಮಾರ್ಗರೆಟ್ ಲವರ್ ಆಫ್ ರಾಮಾಚಾರಿ ಎನ್ನುವ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದು, ಇನ್ನಷ್ಟೇ ಬಿಡುಗಡೆ ಆಗಬೇಕಿದೆ.
ನಟನೆ ಕೈಹಿಡಿಯಲಿಲ್ಲ, ನಿರ್ದೇಶನದಲ್ಲಿ ಹೆಸರು
ದಿವಂಗತ ನಟ ಸುಧೀರ್ ಮತ್ತು ಮಾಲತಿ ಸುಧೀರ್ ದಂಪತಿಯ ಪುತ್ರನಾದ ತರುಣ್ ಕಿಶೋರ್ ಸುಧೀರ್ ಬಾಲ್ಯ ನಟನಾಗಿಯೇ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಆನಂತರ, ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದ್ದು ನಿರ್ದೇಶನ. 2012ರಲ್ಲಿ ಇವರ ಕೋ ನಿರ್ದೇಶನದ ರೇಂಬೋ ಹೆಸರಿನ ಮೊದಲ ಚಿತ್ರ ಬಿಡುಗಡೆಯಾಗಿತ್ತು. 2017ರಲ್ಲಿ ಚೌಕ ಚಿತ್ರ ಹೆಚ್ಚು ಪ್ರಸಿದ್ಧಿ ಕೊಟ್ಟಿತ್ತು. 2021ರಲ್ಲಿ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಕಮರ್ಶಿಯಲ್ ಆಗಿ ಹೆಚ್ಚು ಗಳಿಕೆಯನ್ನೂ ಕೊಡಿಸಿತ್ತು. ಆನಂತರ, ಕಾಟೇರ ಚಿತ್ರವೂ ತರುಣ್ ಸುಧೀರ್ ಗೆ ಮತ್ತಷ್ಟು ಹೆಸರು ತಂದುಕೊಟ್ಟಿತ್ತು. ಚೌಕ ಚಿತ್ರದ ನಿರ್ದೇಶನಕ್ಕಾಗಿ ಬೆಸ್ಟ್ ಡೈರೆಕ್ಟರ್ ಮತ್ತು ರಾಬರ್ಟ್ ಚಿತ್ರಕ್ಕಾಗಿ ಸೈಮಾ ಅವಾರ್ಡ್ ಸಿಕ್ಕಿತ್ತು. ಅಂದಹಾಗೆ, 29ರ ಹರೆಯದ ಸೋನಲ್ ಮತ್ತು 42ರ ತರುಣ್ ಸುಧೀರ್ ಜೋಡಿ ಹೊಸ ಇನ್ನಿಂಗ್ಸ್ ಶುರು ಮಾಡಿದೆ.
Grand Christian wedding of Sonal Monteiro and Director Tharun Sudhir in Mangalore, pictures go viral. The mass was held at Cordel church and reception at TMA Pai hall in city. Mangaluru girl Sonal Monteiro and director Tarun Sudhir tied the knot on Sunday, August 11, in the morning in Bengaluru.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm