ಬ್ರೇಕಿಂಗ್ ನ್ಯೂಸ್
02-09-24 10:50 pm Mangalore Correspondent ಕರಾವಳಿ
ಮಂಗಳೂರು, ಸೆ.2: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಜನರನ್ನು ದೋಚಿದ್ದು ಬಿಟ್ಟರೆ ಬೇರೇನೂ ಕೆಲಸ ಮಾಡಿಲ್ಲ. ಮೇಯರ್ ಸುಧೀರ್ ಶೆಟ್ಟಿ ದುರಹಂಕಾರಿ ರೀತಿ ವರ್ತಿಸಿದ್ದಾರೆ. 1984ರಲ್ಲಿ ಪಾಲಿಕೆ ಸ್ಥಾಪನೆಯಾದಾಗಿನಿಂದ ಈವರೆಗೆ ಪ್ರತಿಪಕ್ಷಕ್ಕೆ ಮಾತನಾಡಲು ಬಿಡದ ನಿದರ್ಶನ ಇಲ್ಲ. ಮೊದಲ ಬಾರಿಗೆ ಪ್ರತಿಪಕ್ಷದ ಹಕ್ಕನ್ನು ಮೊಟಕುಗೊಳಿಸಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಮಹಾನಗರ ಪಾಲಿಕೆ ವಿಪಕ್ಷ ಕಾಂಗ್ರೆಸ್ ನಾಯಕ ಪ್ರವೀಣ್ ಚಂದ್ರ ಆಳ್ವ ಹೇಳಿದ್ದಾರೆ.
ಸುದ್ದಿಗೋಷ್ಟಿ ನಡೆಸಿದ ಅವರು, ಬಿಜೆಪಿ ಅವಧಿಯಲ್ಲಿ ಯಾವುದೇ ಜನೋಪಯೋಗಿ ಕೆಲಸ ಆಗಿಲ್ಲ. ಜನಸಾಮಾನ್ಯರು ಬಿಜೆಪಿ ಆಡಳಿತದಿಂದ ರೋಸಿ ಹೋಗಿದ್ದಾರೆ. ನೀರಿನ ಬಿಲ್ ದುಪ್ಪಟ್ಟು ಮಾಡಿದ್ದಾರೆ. ಸ್ಮಾರ್ಟ್ ಸಿಟಿಯಿಂದ ಒಂದು ಸಾವಿರ ಕೋಟಿ ಬಂದಿದ್ದರೂ, ಸರಿಯಾದ ಕೆಲಸವೇ ಆಗಿಲ್ಲ. ಪಾಲಿಕೆ ವ್ಯಾಪ್ತಿಯ ಸುರತ್ಕಲ್, ಕಂಕನಾಡಿ, ಹಂಪನಕಟ್ಟೆ ಮಾರ್ಕೆಟ್ ಕೆಲಸವೇ ಆಗಿಲ್ಲ. ಅರ್ಧಕ್ಕೆ ಉಳಿದು ಜನರು ಹಿಡಿಶಾಪ ಹಾಕುತ್ತಿದ್ದಾರೆ. ಇದಲ್ಲದೆ, ಉರ್ವಾ, ಕದ್ರಿ ಮಲ್ಲಿಕಟ್ಟೆಯಲ್ಲಿ ಮಾರುಕಟ್ಟೆ ಕಟ್ಟಡ ನಿರ್ಮಾಣಗೊಂಡು ರೆಡಿಯಾಗಿದ್ದರೂ, ವ್ಯಾಪಾರಿಗಳಿಗೆ ಹಸ್ತಾಂತರ ಆಗಿಲ್ಲ. ಮೇಯರ್ ಮತ್ತು ಬಿಜೆಪಿ ಆಡಳಿತದ ನಿರ್ಲಕ್ಷ್ಯದಿಂದಾಗಿ ಹಾಳಾಗುತ್ತಿರುವುದನ್ನು ನೋಡುತ್ತಿದ್ದೇವೆ ಎಂದು ವಾಗ್ದಾಳಿ ನಡೆಸಿದರು.
ಸ್ಮಾರ್ಟ್ ಸಿಟಿಯನ್ನು ಯಾವ ಉದ್ದೇಶಕ್ಕೆ ನೀಡಲಾಗಿತ್ತೋ ಅದನ್ನು ಮಾಡಿಯೇ ಇಲ್ಲ. ಇಡೀ ನಗರದಲ್ಲಿ ಯಾವ ಕೆಲಸ ಆಗಿದೆಯೆಂದು ಹುಡುಕಿದರೂ, ಒಂದು ಕೆಲಸ ಸಿಗಲ್ಲ. ರಿವರ್ ಫ್ರಂಟ್ ಯೋಜನೆಯ ನೂರು ಮೀಟರ್ ಉದ್ದಕ್ಕು ಕೆಲಸ ಆಗಿಲ್ಲ. ರಸ್ತೆಯ ಸ್ಥಿತಿ ಹದಗೆಟ್ಟು ಹೋಗಿದೆ. ದಿನಾ ಮಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ಮೇಯರ್ ಈ ಬಗ್ಗೆ ಮುತುವರ್ಜಿ ವಹಿಸಿಯೇ ಇಲ್ಲ. ಟ್ರಾಫಿಕ್ ನಿರ್ವಹಣೆ ಬಗ್ಗೆ ನಾವು ಸಲಹೆ ಮಾಡಿದರೂ, ಅದನ್ನು ಕೇಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ನಗರದಲ್ಲಿ ಇಷ್ಟೊಂದು ಅಪಾರ್ಟ್ಮೆಂಟ್ ಕಟ್ಟಡಗಳು ಬಂದಿದ್ದು ಅದಕ್ಕೆ ಪೂರಕವಾಗಿ ರಸ್ತೆ ಆಗಬೇಕಿತ್ತು. ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಪಾಲಿಕೆಯ ವಿರುದ್ಧವೇ ಬೆರಳು ತೋರಿಸುತ್ತಿದ್ದಾರೆ ಎಂದು ದೂರಿದರು.
ಸುಧೀರ್ ಶೆಟ್ಟಿ ಅವರದ್ದು ಕೊನೆಯ ಸಾಮಾನ್ಯ ಸಭೆಯಾಗಿದ್ದು, ತಮ್ಮ ಸಾಧನೆಯ ಬಗ್ಗೆ ಹೇಳಿಕೊಂಡ ಬಳಿಕ ಪ್ರತಿಪಕ್ಷದವರ ಮಾತನ್ನು ಕೇಳಬೇಕಲ್ಲ. ಇವರಿಗೆ ನಮ್ಮ ಮಾತನ್ನು ಕೇಳುವ ಶಕ್ತಿ ಇಲ್ಲದೆ, ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೋಗಿದ್ದಾರೆ. ಪಾಲಿಕೆಯ ಹಿರಿಯ ಸದಸ್ಯರಾದ ಸುಧೀರ್ ಶೆಟ್ಟಿ ಈ ರೀತಿಯ ನಡೆ ತೋರಿಸಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪಾಲಿಕೆಯಲ್ಲಿ ನಿವೃತ್ತರಾದ ಅಧಿಕಾರಿಗಳನ್ನೂ ಉಳಿಸಿಕೊಂಡಿದ್ದೀರಿ, ಕಾಂಗ್ರೆಸಿನ ಬೆಂಬಲವೂ ಇದೆ ಎಂದು ಆಕ್ಷೇಪಿಸಿದ್ದಕ್ಕೆ, ಸ್ಥಳೀಯ ಹತ್ತು ಪರ್ಸೆಂಟ್ ಅಧಿಕಾರಿಗಳು ಇದ್ದಾರೆ. ಹಿಂದೆ 50 ಪರ್ಸೆಂಟ್ ಸ್ಥಳೀಯರು ಇದ್ದರು. ಯಾರೇ ಅಧಿಕಾರಿ ಇದ್ದರೂ ಅವರನ್ನು ಕೆಲಸ ಮಾಡಿಸುವುದು ಆಡಳಿತ ಮಾಡೋರ ಜವಾಬ್ದಾರಿ. ಅದನ್ನು ಮಾಡದೇ ಇದ್ದರೆ ಹೇಗೆ ಎಂದು ಮಾಜಿ ಮೇಯರ್ ಶಶಿಧರ್ ಹೆಗ್ಡೆ ಪ್ರಶ್ನೆ ಮಾಡಿದರು. ಸುದ್ದಿಗೋಷ್ಟಿಯಲ್ಲಿ ನವೀನ್ ಡಿಸೋಜ, ಲ್ಯಾನ್ಸಿ, ಅಬ್ದುಲ್ ರವೂಫ್, ವಿನಯರಾಜ್, ಪ್ರಕಾಶ್ ಮತ್ತಿತರರು ಇದ್ದರು.
Mangalore Praveen Chandra Alva slams Mayor Sudheer Shetty for tiger operation. He has taken the life of so many poor shoop keepers he added.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 01:14 pm
Mangalore Correspondent
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm