ಬ್ರೇಕಿಂಗ್ ನ್ಯೂಸ್
03-09-24 07:29 pm Mangalore Correspondent ಕರಾವಳಿ
ಉಳ್ಳಾಲ, ಸೆ.3: ಉಳ್ಳಾಲ ನಗರಸಭೆ ಮತ್ತು ಸೋಮೇಶ್ವರ ಪುರಸಭೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಅಧಿಕಾರದಲ್ಲಿದ್ದ ಪ್ರಸ್ತುತ ಉಳ್ಳಾಲ ನಗರಸಭೆಯ ಪ್ರಭಾರಿ ಪೌರಾಯುಕ್ತೆಯಾಗಿ ಝಂಡಾ ಊರಿದ್ದ ವಾಣಿ ಆಳ್ವರನ್ನ ದಿಢೀರನೇ ಎತ್ತಂಗಡಿ ಮಾಡಲಾಗಿದೆ.
ನಗರ ವ್ಯಾಪ್ತಿಯ ಮಂಚಿಲ ಎಂಬಲ್ಲಿನ ವಸತಿ ಮತ್ತು ವಾಣಿಜ್ಯ ಕಟ್ಟಡದಲ್ಲಿ ಸೆಟ್ ಬ್ಯಾಕ್ ಇಲ್ಲದ ತಕರಾರಿನ ವ್ಯಾಜ್ಯವು ಕಳೆದ ಒಂಭತ್ತು ವರುಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಈ ಮಧ್ಯೆ ವಾಣಿ ಆಳ್ವ ಅವರು ಕಳೆದ ಶನಿವಾರ ಯಾವುದೇ ನೋಟೀಸು ನೀಡದೆ ಪೊಲೀಸರು ಮತ್ತು ಅಧಿಕಾರಿಗಳನ್ನ ಬಳಸಿ ಕಟ್ಟಡವನ್ನ ಜಪ್ತಿಗೊಳಿಸಿ ದರ್ಪ ಮೆರೆದಿದ್ದು ಕಟ್ಟಡ ಮಾಲಕರು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಅಧಿಕಾರಿಣಿ ದರ್ಪ ಮೆರೆದ ವೀಡಿಯೋ ಚಿತ್ರಣವನ್ನು ಕಟ್ಟಡ ಮಾಲಕರು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆನ್ನಲಾಗಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ವಾಣಿ ಆಳ್ವರನ್ನ ಉಳ್ಳಾಲದ ಪ್ರಭಾರ ಪೌರಾಯುಕ್ತೆ ಸ್ಥಾನದಿಂದ ತೆರವುಗೊಳಿಸಿ, ಆ ಸ್ಥಾನಕ್ಕೆ ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮತ್ತಡಿ ಅವರನ್ನ ಮುಂದಿನ ಆದೇಶದ ವರೆಗೆ ಪ್ರಭಾರಿಯನ್ನಾಗಿ ನೇಮಕಗೊಳಿಸಿದ್ದಾರೆ.
ಮಂಗಳವಾರ ಮತ್ತಡಿ ಅವರು ನಗರಸಭೆಯ ಪ್ರಭಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ವೇಳೆ, ನಗರಸಭೆಯನ್ನು ಬಿಡಲೊಲ್ಲದ ವಾಣಿ ಅವರು ಬಿಕ್ಕಿ ಬಿಕ್ಕಿ ರೋದಿಸಿದ್ದಾರೆ.
ಉಳ್ಳಾಲ ಪುರಸಭೆಯಲ್ಲಿ ಸಮುದಾಯ ದರ್ಜೆಯ ಅಧಿಕಾರಿಯಾಗಿದ್ದ ವಾಣಿ ನಂತರ ಮುಖ್ಯಾಧಿಕಾರಿಯಾಗಿದ್ದರು. ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿದರೂ ಕೆಎಎಮ್ಎಸ್ ದರ್ಜೆಯ ಅಧಿಕಾರಿಗಳು ನಿಭಾಯಿಸುವ ಪೌರಾಯುಕ್ತ ಸ್ಥಾನವನ್ನು ಅವರೇ ತುಂಬಿದ್ದರು. ಉಳ್ಳಾಲ ನಗರಸಭೆಯಲ್ಲಿ ಎರಡನೇ ಬಾರಿ ಒಂದು ವರ್ಷ ಪ್ರಭಾರಿಯಾಗಿ ಕಾರ್ಯ ನಿರ್ವಹಣೆ ಮಾಡಿದ ಅವರು ಈಗ ಮತ್ತೆ ತನ್ನ ಮೂಲ ಕಾರ್ಯಕ್ಷೇತ್ರವಾದ ಮನಪಾ ಸುರತ್ಕಲ್ ಝೋನಲ್ ಗೆ ತೆರಳಿದ್ದಾರೆ.
ಉಳ್ಳವರಿಗೆ ನ್ಯಾಯ, ಇಲ್ಲದವರಿಗೆ ಅನ್ಯಾಯ
ಉಳ್ಳಾಲ ನಗರಸಭೆಯ ಆಡಳಿತ ಕಚೇರಿಯ ಮೂಗಿನ ನೇರದಲ್ಲಿರುವ ಹಾಲಿ ರಾಜ್ಯ ಸಚಿವನೋರ್ವನಿಗೆ ಸೇರಿದ ನರ್ಸಿಂಗ್ ಕಾಲೇಜಿನ ವಿಸ್ತರಿತ ಕಟ್ಟಡಕ್ಕೆ ಪರವಾನಿಗೆ ಇಲ್ಲವೆಂದು ಆರೋಪವಿದೆ. ಅಬ್ಬಕ್ಕ ಸರ್ಕಲ್ ನಲ್ಲಿ ತಲೆ ಎತ್ತಿರುವ ಮಾಜಿ ಎಮ್ಮೆಲ್ಸಿಗೆ ಸೇರಿದ ಬಹು ಮಹಡಿ ವಾಣಿಜ್ಯ ಕಟ್ಟಡದಲ್ಲಿ ಸೆಟ್ ಬ್ಯಾಕ್, ಪಾರ್ಕಿಂಗ್ ಇಲ್ಲದಿದ್ದರೂ ಇದರ ವಿರುದ್ಧ ಯಾವುದೇ ಕಠಿಣ ಕ್ರಮಗಳಿಲ್ಲ. ವಾಣಿ ಆಳ್ವ ಅವರು ಉಲ್ಲವರಿಗೆ ಒಂದು ನ್ಯಾಯ ಇಲ್ಲದವರಿಗೆ ಬರೀ ಅನ್ಯಾಯವನ್ನೇ ಎಸಗುತ್ತಿರುವ ಸಾಕಷ್ಟು ಆರೋಪಗಳು ಇದ್ದವು.
ಸ್ಥಳೀಯ ಕೌನ್ಸಿಲರ್ಗಳಿಗೆ ತಿಳಿಸದೆ ಎರಡು ಪೆಟ್ರೋಲ್ ಬಂಕ್ ಗಳಿಗೆ ಎನ್ಒಸಿ
ವರುಷದ ಹಿಂದೆ ವಾಣಿ ಅವರು ನಗರಸಭೆಗೆ ಮತ್ತೆ ಪ್ರಭಾರಿ ಪೌರಾಯುಕ್ತೆಯಾಗಿ ನಿಯೋಜನೆಗೊಂಡಿದ್ದರು. ಈ ಅವಧಿಯಲ್ಲಿ ನಗರಸಭೆಯಲ್ಲಿ ಅಧ್ಯಕ್ಷ- ಉಪಾಧ್ಯಕ್ಷರ ಆಡಳಿತ ಇರಲಿಲ್ಲ. ಮೊನ್ನೆ ಆಗಸ್ಟ್ 29 ರಂದು ನಗರಸಭೆಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದಿತ್ತು. ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯ ವಾರದ ಹಿಂದಷ್ಟೆ ಆಡಳಿತ ಕಾಂಗ್ರೆಸ್ ಪಕ್ಷದ ಉಳ್ಳಾಲ ಬೈಲಿನ ಎರಡು ಸ್ಥಳೀಯ ಕೌನ್ಸಿಲರ್ ಗಳ ಗಮನಕ್ಕೂ ಬಾರದೆ ಅವರ ವಾರ್ಡ್ ಗಳಲ್ಲಿ ಎರಡು ಪೆಟ್ರೋಲ್ ಬಂಕ್ ಗಳ ನಿರ್ಮಾಣಕ್ಕೆ ನಗರಸಭೆಯಿಂದ ಏಕಾಏಕಿ ಎನ್ಓಸಿ ನೀಡಲಾಗಿದೆ ಎನ್ನಲಾಗುತ್ತಿದೆ.
ಕಸ ವಿಲೇವಾರಿಯಲ್ಲೂ ಲಕ್ಷಾಂತರ ರೂಪಾಯಿ ಗೋಲ್ಮಾಲ್...?
ನಗರಸಭೆಯಲ್ಲಿ ಕಸ ವಿಲೇವಾರಿಗೆಂದು ಸರಕಾರಿ ವಾಹನಗಳಿದ್ದರೂ ವಾಣಿ ಅವರು ಕಸ ವಿಲೇವಾರಿ ನಡೆಸಲು ಪ್ರತ್ಯೇಕ ಖಾಸಗಿ ವಾಹನಕ್ಕೆ ತಿಂಗಳಿಗೆ ಮೂರೂವರೆ ಲಕ್ಷ ರೂಪಾಯಿಯ ಟೆಂಡರ್ ನೀಡಿದ್ದರಂತೆ. ಖಾಸಗಿ ಕಸ ವಿಲೇವಾರಿ ವಾಹನ ಚಾಲಕನಿಗೆ ನಗರಸಭೆಯಿಂದಲೇ ವೇತನ, ಇಂಧನ ಪೂರೈಸಿ ಲಕ್ಷಾಂತರ ರೂಪಾಯಿ ಗೋಲ್ ಮಾಲ್ ನಡೆಸಲಾಗುತ್ತಿತ್ತೆಂದು ಆಡಳಿತ ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯ ರವಿಚಂದ್ರ ಗಟ್ಟಿ ಆರೋಪಿಸಿದ್ದಾರೆ.
ನಗರಸಭೆಯಲ್ಲಿ ಇನ್ನಷ್ಟು ಭ್ರಷ್ಟ ಹೆಗ್ಗಣಗಳು ಅನೇಕ ವರುಷಗಳಿಂದ ಝಂಡಾ ಊರಿದ್ದು ಉಳ್ಳಾಲದಲ್ಲೇ ನಿವೃತ್ತಿ ಹೊಂದುವ ಯೋಜನೆ ಹಾಕಿದ್ದಾರೆ. ಇಂತಹ ಭ್ರಷ್ಟರನ್ನು ಉಳ್ಳಾಲದಿಂದ ಎತ್ತಂಗಡಿ ಮಾಡದಿದ್ದರೆ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲವೆಂದು ಉಳ್ಳಾಲದ ನಾಗರಿಕರು ಆಗ್ರಹಿಸಿದ್ದಾರೆ.
Mangalore Ullal Municipal Commissioner Vani Alva transferred.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 01:14 pm
Mangalore Correspondent
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm