ಬ್ರೇಕಿಂಗ್ ನ್ಯೂಸ್
03-09-24 09:00 pm Mangalore Correspondent ಕರಾವಳಿ
ಮಂಗಳೂರು, ಸೆ.3: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಒಟ್ಟು 42 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕ್ಯಾ.ಚೌಟ ಅವರು, ಕೇಂದ್ರ ಸರ್ಕಾರವು, ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ(CRIF) ಅಡಿ ಈ ಅನುದಾನ ನೀಡಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 74.30 ಕಿಲೋ ಮೀಟರ್ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಈ ಎಲ್ಲಾ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ 42 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ಇದೇ ವೇಳೆ ತಿಳಿಸಿದ್ದಾರೆ.
ಯಾವೆಲ್ಲ ರಸ್ತೆಗಳ ಅಭಿವೃದ್ಧಿಗೆ ಅನುದಾನ ಮಂಗಳೂರು ತಾಲೂಕು ವ್ಯಾಪ್ತಿಯ ಮಾಣಿ-ಉಳ್ಳಾಲ ರಾಜ್ಯ ಹೆದ್ದಾರಿಯಲ್ಲಿ 5.7 ಕಿ.ಮೀ ರಸ್ತೆ ನವೀಕರಣಕ್ಕೆ 3.42 ಕೋ.ರೂ., ಉಚ್ಚಿಲ- ದೇರಳಕಟ್ಟೆ ಜಿಲ್ಲಾ ರಸ್ತೆಯ 1 ಕಿ.ಮೀ. ನವೀಕರಣಕ್ಕೆ 60 ಲಕ್ಷ ರೂ., ಪೆರ್ಮನ್ನೂರು- ಪಾವೂರು ರಸ್ತೆ 1.1 ಕಿ.ಮೀ. ನವೀಕರಣಕ್ಕೆ 66 ಲಕ್ಷ ರೂ.,
ಕೋಟೆಕಾರು - ಪಾತೂರು 2.2 ಕಿ.ಮೀ ರಸ್ತೆಗೆ 1.32 ಕೋ.ರೂ ರಾಜ್ಯ ಹೆದ್ದಾರಿ 64ರ ಕಡೂರು- ಕಾಞಂಗಾಡ್ 2.25 ಕಿ.ಮೀ. ರಸ್ತೆಗೆ 1.35 ಕೋ.ರೂ., ಬಂಟ್ವಾಳ ವ್ಯಾಪ್ತಿಯಲ್ಲಿ ಸುರತ್ಕಲ್ -ಕಬಕ 3.33 ಕಿ.ಮೀ. ರಸ್ತೆ ಕಾಮಗಾರಿಗೆ 2 ಕೋ.ರೂ., ಪಾಣೆಮಂಗಳೂರು- ಪಾತೂರು 3.2 ಕಿ.ಮೀ ರಸ್ತೆಗೆ 1.92 ಕೋ.ರೂ., ಮಾರಿಪಳ್ಳ-ಕಲ್ಪನೆ 1.22 ಕಿ.ಮೀ. ರಸ್ತೆಗೆ 73 ಲ.ರೂ., ನಿಂತಿಕಲ್ಲು-ಬೆಳ್ಳಾರೆ- ನೆಟ್ಟಾರು 6.2 ಕಿ.ಮೀ. ರಸ್ತೆ ಮೇಲ್ದರ್ಜೆಗೇರಿಸಲು 3.72 ಕೋ.ರೂ., ಸುಳ್ಯ- ಪೈಚಾರು-ಬೆಳ್ಳಾರೆ 3.8 ಕಿಮೀ ರಸ್ತೆ ಮೇಲ್ದರ್ಜೆಗೇರಿಸಲು 2.28 ಕೋ.ರೂ. ಬಿಡುಗಡೆಯಾಗಿದೆ.
ರಾಜ್ಯ ಹೆದ್ದಾರಿ ಸುಬ್ರಹ್ಮಣ್ಯ- ಮಂಜೇಶ್ವರದ 5.2 ಕಿಮೀ ರಸ್ತೆಗೆ 3.12 ಕೋ.ರೂ., ಪುತ್ತೂರು ತಾಲೂಕಿನ ನಿಂತಿಕಲ್ಲು- ಬೆಳ್ಳಾರೆ-ನೆಟ್ಟಾರು-ಅಮ್ಚಿನಡ್ಕ- ಕಾವು-ಈಶ್ವರಮಂಗಲ- ಪಲ್ಲತ್ತಾರು ರಾಜ್ಯ ಹೆದ್ದಾರಿಯಿಂದ ಜಿಲ್ಲಾ ರಸ್ತೆಗೆ ಸಂಪರ್ಕದ 4.8 ಕಿ.ಮೀ ರಸ್ತೆ ಕಾಮಗಾರಿಗೆ 2.88 ಕೋ.ರೂ., ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ -ಉಪ್ಪಿನಂಗಡಿ 10 ಕಿಮೀ ರಸ್ತೆ ಕಾಮಗಾರಿಗಳಿಗೆ 6 ಕೋ.ರೂ., ಮಂಗಳೂರು ತಾಲೂಕಿನ ಪುನರೂರು- ಶಾಂತಿಪಲ್ಕೆ- ದಾಮಸ್ಕಟ್ಟೆಯ 11.7 ಕಿ.ಮೀ. ರಸ್ತೆ ನವೀಕರಣಕ್ಕೆ 6 ಕೋ.ರೂ., ಮಂಗಳೂರು ತಾಲೂಕಿನ ಭಟ್ರಕೆರೆ- ಕತ್ತಲ್ಸಾರ್ -ಕುಕ್ಕುದಕಟ್ಟೆ- ನೀರ್ಕೆರೆ- ತೋಡಾರು -ಮಾಸ್ತಿಕಟ್ಟೆ 6.1 ಕಿ.ಮೀ. ಜಿಲ್ಲಾ ರಸ್ತೆಗೆ 3 ಕೋ.ರೂ., ಸಂಪಿಗೆ- ಅಶ್ವಥಪುರ -ನೀರ್ಕೆರೆ - ಮಿಜಾರು 6.5ಕಿ.ಮೀ. ಜಿಲ್ಲಾ ರಸ್ತೆ ಅಭಿವೃದ್ದಿಗೆ 3 ಕೋ.ರೂ. ಬಿಡುಗಡೆ ಆಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Mangalore MP Captian Brijesh Chowta Releases rs 42 crores for road development.
23-09-26 11:02 pm
HK News Desk
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
ಸೆ.26ರಿಂದ ಸತತ 5 ದಿನ ಬ್ಯಾಂಕ್ಗಳು ಬಂದ್ ; ATM, U...
23-09-26 09:28 am
ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಡಿಕೆಶಿ ಸರ್ಕಾರ ! ಹ...
22-09-26 08:58 pm
23-09-26 04:21 pm
HK News Staffer
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
23-09-26 10:47 pm
HK News Desk
ಉತ್ತರಾಖಂಡದ ಯಮುನೋತ್ರಿಯಲ್ಲಿ ಕುಂಪಲದ ವ್ಯಕ್ತಿ ಹೃದಯ...
23-09-26 09:55 am
ಚಾರ್ಮಾಡಿ ಘಾಟ್ಗೆ ಅಭಿವೃದ್ಧಿಯ ಹೆಸರಿನಲ್ಲಿ ಕುತ್ತು...
23-09-26 09:30 am
ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್...
22-09-26 08:32 pm
ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾರ್ಪಣೆ ; ಡೀಮ್ಡ್ ವಿವ...
21-09-26 10:36 pm
24-09-26 11:10 am
HK News Staffer
bus fire, Greater Noida: ಚಲಿಸುತ್ತಿದ್ದ ಸ್ಲೀಪರ್...
24-09-26 10:09 am
ಶಿರ್ವದಲ್ಲಿ ಭಾರೀ ಪ್ರಮಾಣದ ಗಾಂಜಾ, ಡ್ರಗ್ಸ್ ವಶಕ್ಕೆ...
23-09-26 09:28 pm
ಕರ್ತವ್ಯ ಲೋಪ, ಲಂಚಬಾಕತನ, ಅನುಚಿತ ವರ್ತನೆ ಬಗ್ಗೆ ದೂ...
23-09-26 09:24 pm
ಶಾರ್ಜಾದಲ್ಲಿ ಆಲ್ವಿನ್ ಪ್ರಕಾಶ್ ಕುಂದರ್ ಬರ್ಬರ ಹತ್ಯ...
23-09-26 09:22 pm