ಬ್ರೇಕಿಂಗ್ ನ್ಯೂಸ್
05-09-24 03:23 pm Mangalore Correspondent ಕರಾವಳಿ
ಮಂಗಳೂರು, ಸೆ.5: ಸಿನಿಮಾ ರಂಗದಲ್ಲಾದ ರೀತೊ ರಾಜಕೀಯ ಪಕ್ಷಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಆಗಿದ್ದರೆ ತನಿಖೆಯಾಗಬೇಕು. ತೊಂದರೆಗೀಡಾದ ಮಹಿಳೆಯರು ಹೊರಗೆ ಬಂದು ಪ್ರತಿಭಟಿಸಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ.ಮಂಜುಳಾ ಹೇಳಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಸದ್ದಿನ ಬೆನ್ನಲ್ಲೇ ರಾಜಕೀಯ ರಂಗದ ದೌರ್ಜನ್ಯಗಳ ಬಗ್ಗೆಯೂ ಆರೋಪ ಕೇಳಿಬಂದಿದ್ದು ಫೈರ್ ಎನ್ನುವ ಪ್ರಗತಿಪರ ಸಂಘಟನೆಯ ಸದಸ್ಯರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತನಿಖೆಗೆ ಆಗ್ರಹ ಮಾಡಿದ್ದರು. ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ವೇಳೆ ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಂಜುಳಾ, ಮಹಿಳೆ ಯಾರ ಸರಕೂ ಅಲ್ಲ, ಅವಳು ಸಮಾಜಕ್ಕೋಸ್ಕರ ದುಡೀಬೇಕು ಎಂದು ರಾಜಕೀಯ ಪಕ್ಷಕ್ಕೆ ಬರುತ್ತಾಳೆ. ಸಮಾಜಕ್ಕೋಸ್ಕರ ಆಡಳಿತದ ಭಾಗವಾಗಿ ಕೆಲಸ ಮಾಡಲು ರಾಜಕೀಯಕ್ಕೆ ಬರ್ತಾಳೆ. ಅಂಥ ಸಂದರ್ಭದಲ್ಲಿ ಅವಳ ಮೇಲೆ ದೌರ್ಜನ್ಯ ಆದರೆ ಮೊದಲು ಅದನ್ನ ಪ್ರತಿಭಟಿಸಬೇಕು. ಅದನ್ನ ಬಹಿರಂಗ ಮಾಡದೇ ಅನುಭವಿಸೋದು ಮಹಿಳೆ ತನಗೆ ತಾನು ಮಾಡಿಕೊಳ್ಳುವ ಅನ್ಯಾಯ ಎಂದು ಹೇಳಿದ್ದಾರೆ.
ರಾಜಕೀಯದಲ್ಲಿ ಇದ್ದರೂ ಇಂಥದ್ದನ್ನ ಹೊರಗೆ ತಂದರೆ ಮಾತ್ರ ಎಲ್ಲಾ ಪಕ್ಷಗಳು ಮಹಿಳೆಯರ ಸುರಕ್ಷತೆ ಬಗ್ಗೆ ಕ್ರಮ ವಹಿಸುತ್ತೆ. ಯಾವುದೇ ಪಕ್ಷ ಇದ್ದರೂ ಮಹಿಳೆಯರು ದೌರ್ಜನ್ಯದ ಬಗ್ಗೆ ಧ್ವನಿ ಎತ್ತಬೇಕು. ರಾಜಕಾರಣದಲ್ಲಿ ಲೈಂಗಿಕ ದೌರ್ಜನ್ಯ ಇದ್ದಲ್ಲಿ ಅದನ್ನು ಹೊರತಂದು ಹೋರಾಟ ಮಾಡಬೇಕು. ಒಂದು ರಾಜಕೀಯ ಪಕ್ಷ ಬೆಳೆಯುತ್ತಾ ಹೋದಂತೆ ಅದರಲ್ಲಿ ಎಲ್ಲಾ ರೀತಿಯ ಜನರೂ ಬರುತ್ತಾರೆ. ಇವೆಲ್ಲ ಹೊರಬಂದು ತನಿಖೆ ಆಗದಿದ್ದರೆ ಇಂಥವರ ಯಾವುದೇ ಅಟ್ಟಹಾಸ ನಿಲ್ಲೋದಿಲ್ಲ. ರಾಜಕೀಯ ಪಕ್ಷಗಳಲ್ಲಿ ಮಹಿಳಾ ದೌರ್ಜನ್ಯ ಆಗಿದ್ದರೆ ಆ ಪಕ್ಷವೂ ಕ್ರಮ ಕೈಗೊಳ್ಳಬೇಕು. ಅಂಥವರನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡಬೇಕೆಂದು ಆಗ್ರಹಿಸುತ್ತೇನೆ.
ಸಿನಿಮಾ ರಂಗದವರು ಈ ಬಗ್ಗೆ ತನಿಖೆ ಮಾಡಬೇಕೆಂದು ಮುಂದೆ ಬಂದಿರುವ ನಡೆಯನ್ನ ನಾನು ಸ್ವಾಗತ ಮಾಡ್ತೇನೆ. ಎಲ್ಲಾ ಕಡೆ ದುರ್ಯೋಧನರೂ ಇರ್ತಾರೆ, ದುಷ್ಯಾಸನರೂ ಇದ್ದಾರೆ. ಕನ್ನಡ ಚಿತ್ರರಂಗದ ವಿಚಾರದಲ್ಲಿ ಇನ್ನೂ ಹೆಚ್ಚು ಕಲಾವಿದರು ಇದಕ್ಕೆ ಸಹಿ ಮಾಡಬೇಕು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೇವಲ 153 ಕಲಾವಿದರು ಇರೋದಲ್ಲ, ಸಾಕಷ್ಟು ಕಲಾವಿದರು ಇದ್ದಾರೆ. ಇದಕ್ಕೆ ಒಂದು ಸಮಿತಿ ರಚನೆ ಮಾಡಬೇಕು, ಜೊತೆಗೆ ಕಾರ್ಯ ಸ್ಥಳ ಕಮಿಟಿ ಗಟ್ಟಿಯಾಗಿರಬೇಕು. ಕಾರ್ಯ ಸ್ಥಳ ಲೈಂಗಿಕ ದೌರ್ಜನ್ಯ ತಡೆ ಸಮಿತಿ ಇದನ್ನು ತನಿಖೆ ಮಾಡಬೇಕು. ಇಲ್ಲಿಯವರೆಗೂ ಹೆಣ್ಮಕ್ಕಳು ಅನುಭವಿಸಿದ್ದನ್ನ ಸಮಾಜದ ಮುಂದೆ ಬಹಿರಂಗಪಡಿಸಬೇಕು. ಹಾಲಿ ಹೈಕೋರ್ಟ್ ನ್ಯಾಯಾಧೀಶರ ಸುಪರ್ದಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಇದರ ಬಗ್ಗೆ ತನಿಖೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.
All sex scandals in politics should be investigated says BJP women morcha state president Manjula in mangalore.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 01:14 pm
Mangalore Correspondent
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm