Mangalore BJP meeting, Kota srinivas, Nalin: ಕೋಟ ಪರಿಷತ್ ಜಾಗಕ್ಕೆ ಬಿಜೆಪಿ ಅಭ್ಯರ್ಥಿ ಯಾರು? ಮಂಗಳೂರಿನಲ್ಲಿ ವೀಕ್ಷಕರಿಂದ ಅಭಿಪ್ರಾಯ ಸಂಗ್ರಹ ; ಶ್ಯಾಮಲಾ ಕುಂದರ್, ಪ್ರಮೋದ್ ಮಧ್ವರಾಜ್, ಸತೀಶ್ ಕುಂಪಲ, ನಳಿನ್ ಹೆಸರು ರೇಸಿನಲ್ಲಿ

05-09-24 09:52 pm       Mangalore Correspondent   ಕರಾವಳಿ

ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಬಿಜೆಪಿಯಿಂದ ಯಾರು ಅಭ್ಯರ್ಥಿ ಆಗಬೇಕು ಎನ್ನುವ ಬಗ್ಗೆ ಪಕ್ಷದ ಪ್ರಮುಖರಿಂದ ಅಭಿಪ್ರಾಯ ಕೇಳುವುದಕ್ಕಾಗಿ ಮಂಗಳೂರಿನಲ್ಲಿ ಪ್ರಮುಖರ ಸಭೆ ನಡೆದಿದೆ.

ಮಂಗಳೂರು, ಸೆ.5: ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಬಿಜೆಪಿಯಿಂದ ಯಾರು ಅಭ್ಯರ್ಥಿ ಆಗಬೇಕು ಎನ್ನುವ ಬಗ್ಗೆ ಪಕ್ಷದ ಪ್ರಮುಖರಿಂದ ಅಭಿಪ್ರಾಯ ಕೇಳುವುದಕ್ಕಾಗಿ ಮಂಗಳೂರಿನಲ್ಲಿ ಪ್ರಮುಖರ ಸಭೆ ನಡೆದಿದೆ. ರಾಜ್ಯ ಬಿಜೆಪಿಯಿಂದ ವೀಕ್ಷಕರಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಕಾರ್ಯದರ್ಶಿಗಳಾದ ಸುನಿಲ್ ಕುಮಾರ್, ಪ್ರೀತಂ ಗೌಡ ಆಗಮಿಸಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಬಿಜೆಪಿ ಪ್ರಮುಖರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಎರಡು ಜಿಲ್ಲೆಗಳ ವ್ಯಾಪ್ತಿಯ ಎಲ್ಲ ವಿಧಾನಸಭೆ ಕ್ಷೇತ್ರ ಸಮಿತಿ ಅಧ್ಯಕ್ಷರು, ಜಿಲ್ಲಾ ಕಾರ್ಯದರ್ಶಿಗಳು, ಜಿಲ್ಲಾಧ್ಯಕ್ಷರು, ಮಾಜಿ ಶಾಸಕರು, ಹಾಲಿ ಶಾಸಕರು, ಮಾಜಿ ಎಂಎಲ್ಸಿಗಳು ಸೇರಿದಂತೆ 60ಕ್ಕೂ ಹೆಚ್ಚು ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಜಿಲ್ಲಾ ಕಾರ್ಯದರ್ಶಿ ಕಿಶೋರ್ ಬೊಟ್ಯಾಡಿ, ಮಾಜಿ ಸಂಸದ ನಳಿನ್ ಕುಮಾರ್, ಉಡುಪಿಯಿಂದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಪಕ್ಷದ ದ.ಕ. ಜಿಲ್ಲಾ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಶ್ಯಾಮಲಾ ಕುಂದರ್ ಹೆಸರು ಸಭೆಯಲ್ಲಿ ಪ್ರಸ್ತಾಪ ಆಗಿದೆಯೆಂದು ತಿಳಿದುಬಂದಿದೆ.

Congress govt's intimidatory policy condemnable: BJP's Satish Kumpala |  udayavani

Udupi: Pramod Madhwaraj leaving Congress for BJP? Here's why it may happen  - Daijiworld.com

Mangalore Today

Kota Srinivas Poojari Archives - Star of Mysore

ಕೋಟ ಶ್ರೀನಿವಾಸ ಪೂಜಾರಿ ಬಿಲ್ಲವ ಸಮುದಾಯದ ವ್ಯಕ್ತಿಯಾಗಿದ್ದರಿಂದ ಅದೇ ಸಮುದಾಯಕ್ಕೆ ಕೊಡಬೇಕು ಎನ್ನುವ ಅಭಿಪ್ರಾಯ ಕೆಲವರಲ್ಲಿದೆ. ಇದೇ ನಿಲುವಿಗೆ ಅಂಟಿಕೊಂಡರೆ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಹರಿಕೃಷ್ಣ ಬಂಟ್ವಾಳ್ ಹೆಸರು ಮುನ್ನೆಲೆಗೆ ಬರಲಿದೆ. ಬಂಟ, ಬಿಲ್ಲವ ಬದಿಗಿಟ್ಟು ಸಣ್ಣ ಜಾತಿಗಳತ್ತ ಆದ್ಯತೆ ನೀಡಬೇಕು ಎನ್ನುವ ಪ್ರಸ್ತಾಪವೂ ಕೇಳಿಬಂದಿದೆ.  ಮೊಗವೀರ ಸಮುದಾಯದ ಪ್ರಮೋದ್ ಮಧ್ವರಾಜ್, ಕರಾವಳಿಯ ಸಣ್ಣ ಸಮುದಾಯ ಮಡಿವಾಳ ಜನಾಂಗಕ್ಕೆ ಸೇರಿದ ಶ್ಯಾಮಲಾ ಕುಂದರ್ ಒಬ್ಬರ ಹೆಸರು ಅಂತಿಮಗೊಳ್ಳುವ ಸಾಧ್ಯತೆಯಿದೆ. ಶ್ಯಾಮಲಾ ಕುಂದರ್ ದೀರ್ಘ ಕಾಲದಿಂದ ಪಕ್ಷದ ಕಾರ್ಯಕರ್ತೆಯಾಗಿದ್ದು ಕಳೆದ ಬಾರಿ ಕಾಪು ವಿಧಾನಸಭೆ ಕ್ಷೇತ್ರದಲ್ಲಿ ಶಾಸಕ ಸ್ಥಾನದ ಆಕಾಂಕ್ಷಿಯೂ ಆಗಿದ್ದರು. ಮಹಿಳಾ ಕೋಟಾದಡಿ ಟಿಕೆಟ್ ಗಿಟ್ಟಿಸಿದರೂ ಅಚ್ಚರಿಯಿಲ್ಲ ಎನ್ನುವ ಮಾತುಗಳಿವೆ.

ಕಾಂಗ್ರೆಸಿನಲ್ಲಿ ಯಾರು ಅಭ್ಯರ್ಥಿಯಾಗಲಿದ್ದಾರೆ ಎನ್ನುವ ವಿಚಾರವೂ ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಗಣನೆಗೆ ಬರಲಿದೆ. ಕಾಂಗ್ರೆಸ್ ಕಡೆಯಿಂದ ಹಣ ಸುರಿಯಬಲ್ಲ ಗಟ್ಟಿ ಕುಳವನ್ನು ಕಣಕ್ಕಿಳಿಸಿದಲ್ಲಿ ಬಿಜೆಪಿಯಿಂದಲೂ ಹಣಬಲ ಇರುವವರಿಗೆ ಆದ್ಯತೆ ಸಿಗಲಿದೆ. ಕಾಂಗ್ರೆಸ್ ಈವರೆಗೂ ಅಭ್ಯರ್ಥಿ ಬಗ್ಗೆ ಚಿಂತೆ ಮಾಡಿದಂತಿಲ್ಲ. ಇನ್ನೆರಡು ತಿಂಗಳಲ್ಲಿ ಸ್ಥಳೀಯಾಡಳಿತ ಕ್ಷೇತ್ರದಿಂದ ವಿಧಾನ ಪರಿಷತ್ತಿನ ಆಯ್ಕೆಗೆ ಚುನಾವಣೆ ನಡೆಯುವ ಸಾಧ್ಯತೆಯಿದೆ. ಸದ್ಯಕ್ಕೆ ಪುರಸಭೆ, ಪಟ್ಟಣ ಪಂಚಾಯತ್, ಕೆಲವು ನಗರಸಭೆಗಳು ಖಾಲಿ ಇರುವುದರಿಂದ ಗ್ರಾಮ ಪಂಚಾಯತ್ ಮತ್ತು ಪಾಲಿಕೆ ಸದಸ್ಯರಿಗೆ ಮತದಾನಕ್ಕೆ ಅವಕಾಶ ಇರುತ್ತದೆ. ಮೇಲ್ನೋಟಕ್ಕೆ ಬಿಜೆಪಿಯಿಂದ ಹೆಚ್ಚಿನ ಸದಸ್ಯರು ಇದ್ದರೂ, ಹಣಬಲದಿಂದ ಮತ ಖರೀದಿಗೆ ಅವಕಾಶ ಇರುವುದರಿಂದ ಅಳೆದು ತೂಗಿ ನೋಡುವ ಲೆಕ್ಕಾಚಾರವೂ ನಡೆದಿದೆ.

Karnataka BJP chief Nalin Kumar Kateel tests Covid positive again |  Karnataka BJP chief Nalin Kumar Kateel tests Covid positive again

ಈ ನಡುವೆ, ಮಾಜಿ ಸಂಸದ ನಳಿನ್ ಕುಮಾರ್ ಮತ್ತೆ ಸಕ್ರಿಯ ರಾಜಕಾರಣಕ್ಕೆ ಬರುವುದಕ್ಕಾಗಿ ಪ್ರಯತ್ನ ಆರಂಭಿಸಿದ್ದಾರೆ. ಇದಕ್ಕಾಗಿ ಕೋಟರಿಂದ ತೆರವಾಗುವ ಜಾಗಕ್ಕೆ ತನಗೇ ಆದ್ಯತೆ ಸಿಗಬೇಕೆಂದು ಲಾಬಿ ನಡೆಸಿದ್ದಾರೆ. ಆದರೆ, ಮತ್ತೊಬ್ಬ ಬಂಟ ಸಮುದಾಯದ ವ್ಯಕ್ತಿಗೆ ಸಿಗುವುದಾದರೆ ಅದು ಉಡುಪಿಯ ಉದಯಕುಮಾರ್ ಶೆಟ್ಟಿ ಪಾಲಾಗುವ ಸಾಧ್ಯತೆಯೇ ಹೆಚ್ಚು. ದೀರ್ಘ ಕಾಲದಿಂದ ಪಕ್ಷದ ನಿಷ್ಠಾವಂತ ವ್ಯಕ್ತಿಯಾಗಿರುವುದು ಮತ್ತು ರಾಜ್ಯ ಬಿಜೆಪಿಯ ವಿಜಯೇಂದ್ರ, ಯಡಿಯೂರಪ್ಪ ಜೊತೆಗೆ ಆರೆಸ್ಸೆಸ್ ಬೆಂಬಲವನ್ನೂ ಹೊಂದಿದ್ದಾರೆ. ನಳಿನ್ ಕುಮಾರ್ ಮೊನ್ನೆಯ ವರೆಗೂ ರಾಜ್ಯಾಧ್ಯಕ್ಷರಾಗಿದ್ದರು, ರಾಜ್ಯ ಬಿಜೆಪಿಗೆ ಅವರ ನಾಯಕತ್ವ ಅಗತ್ಯ ಇದೆ ಎನ್ನುವ ಛಾಯೆಯನ್ನು ಅವರ ಪರವಾದ ಬಣ ಕೇಂದ್ರ ಬಿಜೆಪಿ ಮುಂದಿಡಲು ಯಶಸ್ವಿಯಾದರೆ, ಸ್ಥಾನ ಗಿಟ್ಟಿಸಿಕೊಂಡರೂ ಅಚ್ಚರಿಯಿಲ್ಲ.

Who will replace vacant place of Kota Srinivas Poojary, names of satish Kumpala and Nalin kateel in race.