ಬ್ರೇಕಿಂಗ್ ನ್ಯೂಸ್
06-09-24 11:26 am Mangalore Correspondent ಕರಾವಳಿ
ಮಂಗಳೂರು, ಸೆ.6: ಶಾಸಕ ವೇದವ್ಯಾಸ ಕಾಮತ್ ಸಂಕುಚಿತ ಭಾವನೆಯಿಂದ ಹೊರಗೆ ಬರಬೇಕು. ಕಾಂಗ್ರೆಸ್ ಯಾವತ್ತೂ ಗಣೇಶನ ಹಬ್ಬಕ್ಕೆ ಅಡ್ಡಿ ತಂದಿಲ್ಲ. ಪೊಲೀಸರು ಅನುಮತಿ ನೀಡುವಾಗ ಕಾರ್ಯಕ್ರಮದಲ್ಲಿ ಯಾರೆಲ್ಲ ಇರುತ್ತಾರೆ, ಯಾರು ಆಯೋಜಕರು ಇತ್ಯಾದಿ ಕೇಳುವುದು ಸಹಜ. ಇಂದಿನ ದಿನಮಾನದಲ್ಲಿ ಭದ್ರತಾ ಕಾರಣಕ್ಕೆ ಇದನ್ನು ಕೇಳುತ್ತಾರೆ. ಹಾಗೆಂದು, ಗಣೇಶನ ಹಬ್ಬಕ್ಕೂ ಕಾಂಗ್ರೆಸ್ ಸರಕಾರದ ವಿಘ್ನ ಎಂದು ಹುಯಿಲೆಬ್ಬಿಸುವುದು ಎಷ್ಟು ಸರಿ ಎಂದು ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ವೇದವ್ಯಾಸ ಕಾಮತ್ ಗಣೇಶೋತ್ಸವಕ್ಕೆ ಕಾಂಗ್ರೆಸ್ ಸರಕಾರದ ಅಡ್ಡಿ ಎಂಬ ಟೀಕೆಗೆ ತಿರುಗೇಟು ನೀಡಿದ್ದಾರೆ. ನಾವು ಕೂಡ ಹಿಂದುಗಳು, ಅದ್ದೂರಿಯಲ್ಲ, ಭಕ್ತಿಯಿಂದ ಗಣೇಶನ ಹಬ್ಬ ಮಾಡುತ್ತೇವೆ. ಶಿಸ್ತಿನಿಂದ ಮಾಡುತ್ತೇವೆ ಎಂದರು. ವೇದವ್ಯಾಸ ಕಾಮತ್ ಬಾಯಿ ಚಪಲಕ್ಕಾಗಿ ಉಸ್ತುವಾರಿ ಸಚಿವರನ್ನು ಟೀಕೆ ಮಾಡುತ್ತಿದ್ದಾರೆ. ನೀವು ಮಂಗಳೂರಿನ ಟ್ರಾಫಿಕ್ ಕಡಿಮೆ ಮಾಡಲು ಯಾವ ಒತ್ತು ನೀಡಿದ್ದೀರಿ. ವಿಧಾನಸಭೆಯಲ್ಲಿ ಎಷ್ಟು ಪ್ರಶ್ನೆ ಮಾಡಿದ್ದೀರಿ. ಸ್ಮಾರ್ಟ್ ಸಿಟಿ ಜೊತೆಗೆ ಎಷ್ಟು ಮೀಟಿಂಗ್ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಜನಾರ್ದನ ಪೂಜಾರಿಯವರ ವಿರೋಧ ಇದ್ದರೂ ಬಿಜೆಪಿ ಆಡಳಿತವೇ ಮಂಗಳೂರಿನಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಜಾರಿಗೆ ತಂದಿತ್ತು. ಆನಂತರ, ಪ್ರತಿ ಐದು ವರ್ಷಕ್ಕೊಮ್ಮೆ ತೆರಿಗೆ ಹೆಚ್ಚಿಸಿ ಹೊರೆ ಹೊರಿಸಿದೆ. ನೀರಿನ ದರವನ್ನು ಕಾಂಗ್ರೆಸ್ ಸರಕಾರ ಇದ್ದಾಗಿನ 24 ಸಾವಿರ ಲೀಟರಿಗೆ 65 ರೂ. ಇದ್ದುದನ್ನು ಈಗ 135 ರೂ.ಗೆ ಏರಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್ ಗೆ 74 ಡಾಲರ್ ಆಗಿದ್ದರೂ, ದೇಶದಲ್ಲಿ ದರ ಇಳಿಸದೆ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಮಂಗಳೂರು ವಿವಿಯ ಆರ್ಥಿಕ ನಷ್ಟದ ಬಗ್ಗೆ ಕೇಳಿದ ಪ್ರಶ್ನೆಗೆ, ಮಂಗಳೂರು ವಿವಿಯನ್ನು ಮತ್ತೆ ಮೇಲೆತ್ತಬೇಕು, ಮರಳಿ ಗತ ವೈಭವಕ್ಕೆ ತರಬೇಕು ಎನ್ನುವ ಕಾಳಜಿ ಇದೆ. ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ, ಕಳೆದ ಬಾರಿ ಆಗಿರುವ ಲೋಪಗಳಿಂದಾಗಿ ಆರ್ಥಿಕ ದುಸ್ಥಿತಿ ಬಂದಿದೆ. ಅದನ್ನು ಸರಿಪಡಿಸಲಾಗುವುದು ಎಂದಿದ್ದಾರೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಶಶಿಧರ್ ಹೆಗ್ಡೆ ಇದ್ದರು.
MLA Veda Vyasa Kamat should come out of narrow feeling. Congress has never obstructed the festival of Ganesha. When the police give permission, it is natural to ask who will be in the event, who is the organizer etc.
20-09-25 02:59 pm
HK News Desk
Cm Siddaramaiah, Caste Survey: ಜಾತಿ ಸಮೀಕ್ಷೆ ಮ...
19-09-25 10:04 pm
Caste survey: ಜಾತಿ ಸಮೀಕ್ಷೆಗೆ ಸರ್ಕಾರದ ಸಚಿವರಿಂದ...
19-09-25 02:16 pm
ಮೋಸದಿಂದಲೇ ಕಣ್ರೀ ಬಿಜೆಪಿ ಚುನಾವಣೆ ಗೆದ್ದಿದೆ! ರಾಹು...
19-09-25 09:45 am
ಬೆಂಗಳೂರು ಗಬ್ಬೆದ್ದು ನಾರುತ್ತಿದೆ, ರಾಜಧಾನಿ ಈಗ ಗುಂ...
19-09-25 09:42 am
20-09-25 11:42 am
HK News Desk
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
20-09-25 02:31 pm
Mangalore Correspondent
ಅಪಸ್ಮಾರ ಕಾಯಿಲೆ, ಕುಂಪಲದ ಹದಿಹರೆಯದ ಬ್ಯೂಟೀಷಿಯನ್ ಯ...
19-09-25 10:46 pm
ಕಟೀಲು ದೇಗುಲದಲ್ಲಿ ಸೇವಾ ದರ ಏಕಾಏಕಿ ದುಪ್ಪಟ್ಟು ; ಬ...
19-09-25 10:21 pm
ಧರ್ಮಸ್ಥಳ ಕೇಸ್ ; ಅನೇಕ ಶವಗಳನ್ನು ಹೂತಿದ್ದೆವು ಎಂದಿ...
19-09-25 09:59 pm
Kadri, Mangalore, Smart City: ‘ಸ್ಮಾರ್ಟ್ ಸಿಟಿ’...
19-09-25 07:53 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm