ಬ್ರೇಕಿಂಗ್ ನ್ಯೂಸ್
06-09-24 01:06 pm Mangalore Correspondent ಕರಾವಳಿ
ಮಂಗಳೂರು, ಸೆ.6: ಬಿಜೆಪಿ ಸದಸ್ಯತ್ವ ಪಡೆದಿದ್ದಾರೆ ಎನ್ನಲಾದ ತುಳು ರಂಗಭೂಮಿ ಮತ್ತು ಹಿರಿಯ ಚಿತ್ರನಟ ದೇವದಾಸ್ ಕಾಪಿಕಾಡ್ ಅವರಿಗೆ ದುಬೈನಲ್ಲಿ ಬಾಯ್ಕಾಟ್ ಬಿಸಿ ತಟ್ಟಿದೆ. ಮಂಗಳೂರಿನಲ್ಲಿ ಎರಡು ದಿನಗಳ ಹಿಂದೆ ಕಾಪಿಕಾಡ್ ಮನೆಗೆ ಬಂದಿದ್ದ ಮಾಜಿ ಸಚಿವ ಡಿವಿ ಸದಾನಂದ ಗೌಡ ಮತ್ತು ಬಿಜೆಪಿ ಪ್ರಮುಖರು ದೇವದಾಸ್ ಕಾಪಿಕಾಡ್ ಬಿಜೆಪಿ ಸದಸ್ಯತ್ವ ಪಡೆದಿದ್ದಾರೆ ಎಂದು ಜಾಲತಾಣದಲ್ಲಿ ಹಾಕ್ಕೊಂಡಿದ್ದು ಈಗ ಅವರಿಗೆ ಮುಳುವಾಗಿದೆ.
ಸೆ.13 ಮತ್ತು 14ರಂದು ಸೌದಿ ಅರೇಬಿಯಾದಲ್ಲಿ ಕಾಪಿಕಾಡ್ ಶೋ ಎಂದು ಕಾರ್ಯಕ್ರಮ ನಿಗದಿಯಾಗಿದೆ. ಸೌದಿಯಲ್ಲಿರುವ ಮಂಗಳೂರು ಮೂಲದ ತುಳುವರು ಕಾಮೆಡಿ ಶೋ ಕಾರ್ಯಕ್ರಮ ಏರ್ಪಡಿಸಿದ್ದರು. ಇದರ ನಡುವಲ್ಲೇ ಚಿತ್ರನಟ ದೇವದಾಸ್ ಕಾಪಿಕಾಡ್ ಬಿಜೆಪಿ ಸೇರಿದ್ದಾರೆಂದು ಸುದ್ದಿ ಹಬ್ಬಿದ್ದು ಇದಕ್ಕೆ ವಿರೋಧ ವ್ಯಕ್ತವಾಗಿದೆ. ಬಿಜೆಪಿ ದೇಶಾದ್ಯಂತ ನಡೆಸುತ್ತಿರುವ ಸದಸ್ಯತ್ವ ಅಭಿಯಾನದ ಭಾಗವಾಗಿ ಡಿವಿ ಸದಾನಂದ ಗೌಡ ಮತ್ತು ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಬಿಜೆಪಿ ಪ್ರಮುಖರು ಮೊನ್ನೆ ಮಂಗಳೂರಿನ ಕೊಡಿಯಾಲಬೈಲಿನ ಕಾಪಿಕಾಡ್ ಮನೆಗೆ ತೆರಳಿ, ಮಿಸ್ಡ್ ಕಾಲ್ ಮೂಲಕ ಬಿಜೆಪಿ ಸದಸ್ಯತನ ಪಡೆಯುವಂತೆ ಮಾಡಿದ್ದರು. ಇದರ ಬಗ್ಗೆ ದಕ್ಷಿಣ ಕನ್ನಡ ಬಿಜೆಪಿ, ರಾಜ್ಯ ಬಿಜೆಪಿ ಮತ್ತು ಸದಾನಂದ ಗೌಡರ ಅಧಿಕೃತ ಫೇಸ್ಬುಕ್ ಪೇಜ್ ಗಳಲ್ಲಿ ಹಾಕಲಾಗಿತ್ತು.
ಇದರ ಬೆನ್ನಲ್ಲೇ ಕಾಪಿಕಾಡ್ ಶೋ ಬಾಯ್ಕಾಟ್ ಎಂಬ ಪೋಸ್ಟರ್ ಎದುರಾಗಿದ್ದು, ಸೌದಿಯ ಪ್ರೋಗ್ರಾಂ ವಿರುದ್ಧ ಕೆಲವರು ಆಕ್ರೋಶ ಹೊರಹಾಕಿದ್ದರು. ಸೌದಿಯಲ್ಲಿ ಮಂಗಳೂರು ಮೂಲದ ಮುಸ್ಲಿಮರೇ ಹೆಚ್ಚಿರುವುದರಿಂದ ಅವರೇ ಈ ಪೋಸ್ಟರ್ ಹಂಚಿಕೊಂಡಿದ್ದಾರೆಯೇ ಗೊತ್ತಿಲ್ಲ. ಅಲ್ಲದೆ, ಕಾರ್ಯಕ್ರಮ ಆಯೋಜಕರಲ್ಲಿ ಕೆಲವರು ಸ್ವತಃ ದೇವದಾಸ್ ಕಾಪಿಕಾಡ್ ಅವರಲ್ಲಿ ಸ್ಪಷ್ಟನೆ ಕೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೇವದಾಸ್ ಕಾಪಿಕಾಡ್ ಸ್ಪಷ್ಟನೆ ನೀಡುವ ರೀತಿ ಆಡಿಯೋ ಬಿಡುಗಡೆ ಮಾಡಿದ್ದಾರೆ. ನಾನು ಯಾವುದೇ ಪಕ್ಷದ ಸದಸ್ಯತ್ವ ಪಡೆದಿಲ್ಲ, ಬಿಜೆಪಿಯವರು ಹಂಚಿಕೊಂಡಿದ್ದಕ್ಕೂ ಅಲ್ಲಿ ಆಗಿದ್ದಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ.
ಸದಾನಂದ ಗೌಡರು ಮನೆಗೆ ಬರುತ್ತಾರೆ ಎಂದು ಬಿಜೆಪಿ ಕಡೆಯಿಂದ ಹೇಳಿದ್ದರು. ಹಾಗಾಗಿ, ಚಹಾದ ವ್ಯವಸ್ಥೆ ಮಾಡಿದ್ದೆ. ಬಂದವರು ಫೋಟೋ ತೆಗೆಸಿಕೊಂಡಿದ್ದಾರೆ. ಬೇರೇನೂ ಮಾಡಿಲ್ಲ. ನನ್ನ ಜೊತೆಗೆ ಖಾದರ್ ಭಾಯ್, ರಮಾನಾಥ ರೈ, ನಳಿನ್ ಕುಮಾರ್ ಎಲ್ಲರೂ ಚೆನ್ನಾಗಿಯೇ ಇದ್ದಾರೆ. ನನ್ನೊಂದಿಗೆ ಎಲ್ಲ ಪಕ್ಷದವರೂ ಇದ್ದಾರೆ. ಎಲ್ಲ ಮತೀಯರು ನನ್ನ ಆತ್ಮೀಯರಿದ್ದಾರೆ. ಸಾವಿರಾರು ಅಭಿಮಾನಿಗಳಿದ್ದಾರೆ. ಸಿನಿಮಾ ಕಲಾವಿದರಿಗೆ ಯಾವುದೇ ಪಕ್ಷ ಇಲ್ಲ. ನಾಳೆ ಖಾದರ್ ಸರ್ ಮನೆಗೆ ಬಂದರೂ ಸ್ವಾಗತಿಸುತ್ತೇನೆ ಎಂದು ದೇವದಾಸ್ ಕಾಪಿಕಾಡ್ ಸ್ಪಷ್ಟನೆ ರೂಪದಲ್ಲಿ ಆಡಿಯೋ ಹರಿಯಬಿಟ್ಟಿದ್ದಾರೆ. ಸೌದಿ ಪ್ರೋಗ್ರಾಮ್ ಕ್ಯಾನ್ಸಲ್ ಆಗಿದೆಯೇ ಎನ್ನುವ ಬಗ್ಗೆ ಮಾಹಿತಿಯಿಲ್ಲ. ಅಥವಾ ಬಾಯ್ಕಾಟ್ ಎನ್ನುವ ಪೋಸ್ಟರ್ ಕಿಡಿಗೇಡಿಗಳ ಕೃತ್ಯವೇ ಎನ್ನುವುದೂ ಗೊತ್ತಾಗಿಲ್ಲ. ಆದರೆ, ಬಿಜೆಪಿ ಸದಸ್ಯತ್ವ ವಿಚಾರ ವಿವಾದಕ್ಕೆಡೆ ಮಾಡಿದ್ದು ಕಲಾವಿದ ದೇವದಾಸ್ ಕಾಪಿಕಾಡ್ ಅವರಿಗೆ ಇರಿಸು ಮುರಿಸು ತಂದಿದ್ದಂತೂ ಸತ್ಯ.
Mangalore Tulu Actor Devadas Kapikad in trouble after joining BJP, Saudi Tulu prpgram boycott camping goes viral on social media.
20-09-25 02:59 pm
HK News Desk
Cm Siddaramaiah, Caste Survey: ಜಾತಿ ಸಮೀಕ್ಷೆ ಮ...
19-09-25 10:04 pm
Caste survey: ಜಾತಿ ಸಮೀಕ್ಷೆಗೆ ಸರ್ಕಾರದ ಸಚಿವರಿಂದ...
19-09-25 02:16 pm
ಮೋಸದಿಂದಲೇ ಕಣ್ರೀ ಬಿಜೆಪಿ ಚುನಾವಣೆ ಗೆದ್ದಿದೆ! ರಾಹು...
19-09-25 09:45 am
ಬೆಂಗಳೂರು ಗಬ್ಬೆದ್ದು ನಾರುತ್ತಿದೆ, ರಾಜಧಾನಿ ಈಗ ಗುಂ...
19-09-25 09:42 am
20-09-25 11:42 am
HK News Desk
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
20-09-25 02:31 pm
Mangalore Correspondent
ಅಪಸ್ಮಾರ ಕಾಯಿಲೆ, ಕುಂಪಲದ ಹದಿಹರೆಯದ ಬ್ಯೂಟೀಷಿಯನ್ ಯ...
19-09-25 10:46 pm
ಕಟೀಲು ದೇಗುಲದಲ್ಲಿ ಸೇವಾ ದರ ಏಕಾಏಕಿ ದುಪ್ಪಟ್ಟು ; ಬ...
19-09-25 10:21 pm
ಧರ್ಮಸ್ಥಳ ಕೇಸ್ ; ಅನೇಕ ಶವಗಳನ್ನು ಹೂತಿದ್ದೆವು ಎಂದಿ...
19-09-25 09:59 pm
Kadri, Mangalore, Smart City: ‘ಸ್ಮಾರ್ಟ್ ಸಿಟಿ’...
19-09-25 07:53 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm