ಬ್ರೇಕಿಂಗ್ ನ್ಯೂಸ್
06-09-24 07:06 pm Mangalore Correspondent ಕರಾವಳಿ
ಮಂಗಳೂರು, ಸೆ.6: ಪಿಲಿಕುಳ ನಿಸರ್ಗಧಾಮ ಮೂಲ್ಕಿ ಮೂಡುಬಿದ್ರೆ ಕ್ಷೇತ್ರ ವ್ಯಾಪ್ತಿಯಲ್ಲಿದ್ದು, ಅಲ್ಲಿ ಕಂಬಳ ನಡೆಸುವ ವಿಚಾರ ಪತ್ರಿಕೆ ನೋಡಿ ತನಗೆ ತಿಳಿಯಿತು. ಕಂಬಳ ನಡೆಸಲು ನಿರ್ಧರಿಸುವಾಗ, ಅದರ ಬಗ್ಗೆ ಸಭೆ ನಡೆಸುವಾಗ ಜಿಲ್ಲಾಡಳಿತದಿಂದ ನನ್ನ ಗಮನಕ್ಕೆ ತಂದಿಲ್ಲ. ಯಾವುದೇ ಸರಕಾರಿ ಕಾರ್ಯಕ್ರಮ ಆಗುವುದಿದ್ದರೂ, ಆಯಾ ಕ್ಷೇತ್ರದ ಶಾಸಕರೇ ಅಧ್ಯಕ್ಷತೆ ವಹಿಸಬೇಕು. ಆದರೆ ಜಿಲ್ಲಾಧಿಕಾರಿ ಉದ್ದೇಶಪೂರ್ವಕ ಎನ್ನುವಂತೆ ಪಿಲಿಕುಳದಲ್ಲಿ ಐದು ದಿನದ ಕಾರ್ಯಕ್ರಮ ಏರ್ಪಾಡು ಮಾಡುವಾಗ ನನ್ನ ಗಮನಕ್ಕೆ ತಾರದೆ ಅಗೌರವ ಸೂಚಿಸಿದ್ದಾರೆ ಎಂದು ಮೂಲ್ಕಿ ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಮೊನ್ನೆ ಸೆ.4ರಂದು ಪಿಲಿಕುಳ ಕಂಬಳ ನಡೆಸುವ ಬಗ್ಗೆ ಸಭೆ ಇದೆಯೆಂದು ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಎಂಎಲ್ಸಿ ಮಂಜುನಾಥ ಭಂಡಾರಿ ಫೋನ್ ಮಾಡಿದ್ದರು. ಆದರೆ, ಸರಕಾರಿ ಕಾರ್ಯಕ್ರಮದ ಬಗ್ಗೆ ನಿಮಗೆ ನಾನು ತಿಳಿಸಬೇಕು. ನನ್ನನ್ನು ನೀವು ಕರೆಯುವ ವಿಚಾರ ಬರಬಾರದಿತ್ತು. ಕಂಬಳದ ಬಗ್ಗೆ ಜಿಲ್ಲಾಡಳಿತ ನನ್ನ ಗಮನಕ್ಕೆ ಯಾಕೆ ತಂದಿಲ್ಲ ಎಂದು ಅವರಲ್ಲೂ ಪ್ರಶ್ನೆ ಮಾಡಿದ್ದೇನೆ. ಜಿಲ್ಲಾಧಿಕಾರಿ ನನ್ನ ಕ್ಷೇತ್ರದಲ್ಲಿ ಬಂದು ಯಾವುದೇ ಸಭೆ ನಡೆಸುವಾಗಲೂ ಸೌಜನ್ಯಕ್ಕೂ ಮಾಹಿತಿ ನೀಡುವುದಿಲ್ಲ. ಪ್ರೋಟೋಕಾಲ್ ಅನುಸರಣೆ ಮಾಡುವುದಿಲ್ಲ. ನನ್ನನ್ನು ಕೆಳಜಾತಿಯವನು ಎಂದೋ ಏನೋ ಉದ್ದೇಶಪೂರ್ವಕ ಕಡೆಗಣಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಕಾಂಗ್ರೆಸ್ ಏಜಂಟ್ ರೀತಿ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಈಗಾಗಲೇ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ವಿಧಾನಸಭೆ ಅಧ್ಯಕ್ಷರಿಗೂ ಪತ್ರ ಬರೆಯುತ್ತೇನೆ. ಮುಂದಿನ ಅಧಿವೇಶನದಲ್ಲಿ ಜಿಲ್ಲಾಧಿಕಾರಿ ವಿರುದ್ಧ ಹಕ್ಕುಚ್ಯುತಿ ಮಂಡಿಸುತ್ತೇನೆ. ಈ ಹಿಂದೆಯೂ ಜಿಲ್ಲಾಧಿಕಾರಿ ಇದೇ ರೀತಿ ವರ್ತಿಸಿದ್ದಾರೆ. ಮಳೆಹಾನಿ ಪೀಡಿತ ಪ್ರದೇಶಕ್ಕೆ ತೆರಳುವಾಗಲೂ ಶಾಸಕರ ಗಮನಕ್ಕೆ ತಂದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಭೇಟಿ ನೀಡುವಾಗಲೂ ನಮಗೆ ಮಾಹಿತಿ ನೀಡಿಲ್ಲ ಎಂದು ಉಮಾನಾಥ ಕೋಟ್ಯಾನ್ ಹೇಳಿದರು.
ಜಿಲ್ಲಾಧಿಕಾರಿಗೆ ಕಾಂಗ್ರೆಸಿಗರು ಇಷ್ಟ ಎಂದಾದರೆ, ತನ್ನ ಸ್ಥಾನ ತ್ಯಜಿಸಿ ಶಶಿಕಾಂತ್ ಸೆಂಥಿಲ್ ರೀತಿ ಕಾಂಗ್ರೆಸ್ ಸೇರಿಕೊಳ್ಳಲಿ. ಸೆಂಥಿಲ್ ಜಿಲ್ಲಾಧಿಕಾರಿಯಾಗಿದ್ದಾಗ ಒಂದು ದಿನವೂ ತಾನು ಕಾಂಗ್ರೆಸ್ ಪರವಾಗಿದ್ದೇನೆ ಎಂದು ತೋರಿಸಿಕೊಂಡಿಲ್ಲ. ಇವರು ಕಾಂಗ್ರೆಸಿಗರ ಕೆಲಸವನ್ನು ಮಾತ್ರ ಮಾಡುತ್ತಿದ್ದಾರೆ. ಹಿಂದೊಮ್ಮೆ ಇವರ ವಿರುದ್ಧ ಪ್ರತಿಭಟನೆ ಮಾಡಿ ಬಿಟ್ಟಿದ್ದೆವು. ಈ ಬಾರಿ ಗಣೇಶೋತ್ಸವ ಮುಗಿದ ಬೆನ್ನಲ್ಲೇ ದೊಡ್ಡ ಮಟ್ಟದಲ್ಲಿ ಹಗಲು ರಾತ್ರಿ ಪ್ರತಿಭಟನೆ ಮಾಡುತ್ತೇವೆ. ನಮಗೆ ಮಾಹಿತಿ ನೀಡದೆ ಪಿಲಿಕುಳ ಕಂಬಳ ಮಾಡೋದಿದ್ದರೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಇದ್ದರು.
Mangalore DC acts like agent of congress government slams umanath kotian holding press meet at BJP office.
15-01-26 05:56 pm
HK News Desk
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
15-01-26 12:14 pm
HK News Desk
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
15-01-26 10:24 pm
Mangalore Correspondent
ಗೋ ಸೇವೆಗೆ ಜನಸಾಮಾನ್ಯರು ಕೊಡುಗೆ ನೀಡಲು ವೇದಿಕೆ ; ಕ...
15-01-26 10:07 pm
ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಡಿಜಿ...
15-01-26 09:04 pm
ಮನರೇಗಾ ಜಾರಿಗೆ ಒತ್ತಾಯಿಸಿ ಸುಳ್ಯದಿಂದ ಮುಲ್ಕಿಗೆ ಪಾ...
15-01-26 08:12 pm
ಜ.18ರಂದು ಮಂಗಳೂರಿನಲ್ಲಿ ಪ್ರಪ್ರಥಮ ಜಾಗತಿಕ ಬಿಲ್ಲವರ...
15-01-26 04:01 pm
15-01-26 11:07 pm
Bangalore Correspondent
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm