ಬ್ರೇಕಿಂಗ್ ನ್ಯೂಸ್
12-09-24 08:24 pm Mangalore Correspondent ಕರಾವಳಿ
ಮಂಗಳೂರು, ಸೆ.12: ಮುಂದಿನ ವಾರ ಈದ್ ಮಿಲಾದ್ ಮೆರವಣಿಗೆ ನಡೆಸುವುದಕ್ಕೆ ರಾಜ್ಯದಲ್ಲಿ ಅವಕಾಶ ನೀಡಬಾರದು. ಈದ್ ಮಿಲಾದ್ ಮೆರವಣಿಗೆಯನ್ನು ರಸ್ತೆಯಲ್ಲಿ ಮಾಡುವಾಗ, ಒಂದ್ವೇಳೆ ಹಿಂದುಗಳು ಅವಕಾಶ ನೀಡದಿದ್ದರೆ ಜಿಹಾದಿಗಳ ಮೆರವಣಿಗೆ ನಡೆಯುವುದಕ್ಕೆ ಸಾಧ್ಯವಿಲ್ಲ. ಕಳೆದ ಬಾರಿ ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮೆರವಣಿಗೆ ವೇಳೆ ಗಲಭೆ ನಡೆಸಿದ್ದರು. ಈ ಬಾರಿಯೂ ರಾಜ್ಯದಲ್ಲಿ ಗಲಭೆ ಮರುಕಳಿಸುವ ಸಾಧ್ಯತೆಯಿದೆ. ಹೀಗಾಗಿ ಈ ಬಾರಿ ಈದ್ ಮೆರವಣಿಗೆ ನಡೆಸುವುದಕ್ಕೆ ರಾಜ್ಯ ಸರಕಾರ ಅವಕಾಶ ನೀಡಬಾರದು ಎಂದು ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಆಗ್ರಹಿಸಿದ್ದಾರೆ.
ಮಂಡ್ಯದ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ಕಲ್ಲು ತೂರಿ ಗಲಭೆ ನಡೆಸಿರುವುದನ್ನು ಖಂಡಿಸಿ ಮಂಗಳೂರಿನ ಮಲ್ಲಿಕಟ್ಟೆ ವೃತ್ತದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಈ ಬಾರಿ ಈದ್ ಮೆರವಣಿಗೆಯ ಮೇಲೆ ನಿರ್ಬಂಧ ಹೇರಬೇಕು, ಒಂದ್ವೇಳೆ ಮೆರವಣಿಗೆಗೆ ಅವಕಾಶ ಕೊಟ್ಟು ಹಿಂದುಗಳ ಮೇಲೆ ಹಲ್ಲೆ ಘಟನೆಗಳಾದಲ್ಲಿ ಅದಕ್ಕೆ ರಾಜ್ಯ ಸರಕಾರವೇ ಕಾರಣವಾಗುತ್ತದೆ ಎಂದು ಹೇಳಿದರು.
ನಾಗಮಂಗಲ ಗಲಭೆಯ ಹಿಂದೆ ಯಾರಿದ್ದಾರೆ, ಪಿಎಫ್ಐ ಸಂಘಟನೆಯ ಕೈವಾಡ ಇದೆಯೇ ಎನ್ನುವ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು. ಅಲ್ಲಿ ನೂರಾರು ಹಿಂದುಗಳ ಮೇಲೆ ಹಲ್ಲೆಯಾಗಿದೆ, ಹತ್ತಾರು ಅಂಗಡಿಗಳಿಗೆ ಬೆಂಕಿ ಕೊಟ್ಟಿದ್ದಾರೆ. ಸಾರ್ವಜನಿಕ ಆಸ್ತಿ ಮೇಲೆ ಹಾನಿ ಮಾಡಿದ್ದಾರೆ. ನಷ್ಟ ಆದವರಿಗೆ ಪರಿಹಾರ ನೀಡಬೇಕು. ಯಾರು ಮುಗ್ಧ ಅಮಾಯಕರ ಮೇಲೆ ಕೇಸು ಹಾಕಿದ್ದೀರಿ, ಅವರ ಮೇಲಿನ ಕೇಸನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ ಶರಣ್, ನಮಗೆ ರಾಜ್ಯ ಸರಕಾರ, ರಾಜ್ಯದ ಪೊಲೀಸರ ಮೇಲೆ ನಂಬಿಕೆ ಇಲ್ಲ. ಹಾಗಾಗಿ ನಮ್ಮ ಧಾರ್ಮಿಕ ಕಾರ್ಯಕ್ರಮಗಳಿಗೆ ರಕ್ಷಣೆ ನೀಡುವಂತೆ ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡುತ್ತೇವೆ. ಪೊಲೀಸರ ಬದಲು ಕೇಂದ್ರದ ಮಿಲಿಟರಿಯ ರಕ್ಷಣೆ ನೀಡಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
Don't give permission for Eid says Sharan Pumpwell, VHP in Mangalore. Says tense situations like Ragi gudda might re appear.
14-01-25 03:36 pm
HK News Desk
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ; ಬಿಹಾರ ಮೂಲದ ಆರೋಪ...
13-01-25 10:48 am
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
14-01-25 08:36 pm
Mangalore Correspondent
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
Bangalore Cow Incident: ಹಸುವಿನ ಕೆಚ್ಚಲು ಕೊಯ್ದ...
13-01-25 10:48 am
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm