ಬ್ರೇಕಿಂಗ್ ನ್ಯೂಸ್
20-09-24 11:08 pm Mangalore Correspondent ಕರಾವಳಿ
ಮಂಗಳೂರು, ಸೆ.20 : ಭಾಷೆ ಮತ್ತು ತಂತ್ರಜ್ಞಾನ ಇಂದಿನ ದಿನಗಳಲ್ಲಿ ಜೊತೆ ಜೊತೆಯಾಗಿ ನಡೆಯಬೇಕಿದೆ. ತಂತ್ರಜ್ಞಾನ ಬಳಕೆಯಿಂದ ಭಾಷೆಗಳ ಅಭಿವೃದ್ಧಿ ಸಾಧ್ಯವಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ಮತ್ತು ಹಳೇ ವಿದ್ಯಾರ್ಥಿ ಸಂಪರ್ಕ ನಿರ್ದೇಶಕ ಪ್ರಸನ್ನ ಕೈಲಾಜೆ ಹೇಳಿದರು.
ನಿಟ್ಟೆ ವಿಶ್ವವಿದ್ಯಾಲಯದ ಡಾ.ಕೆ.ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರ ಮತ್ತು ಯುನೈಟೆಡ್ ಕಿಂಗ್ಡಮ್‌ನ ಸ್ವಾನ್ಸಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾದ ಅನ್ಯೂಟ್ ಲ್ಯಾಂಗ್ವೇಜ್ ಟೆಕ್ನಾಲಜೀಸ್ ಇನ್ ತುಳು ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು. ತಂತ್ರಜ್ಞಾನದ ಮೂಲಕ ಭಾಷೆಯ ಬೆಳವಣಿಗೆಗೆ ಬೇಕಾದ ಹಲವು ಆಯಾಮಗಳ ಚರ್ಚೆಗೆ ಅನ್ಯೂಟ್ ಲ್ಯಾಂಗ್ವೇಜ್ ಟೆಕ್ನಾಲಜೀಸ್ ಇನ್ ತುಳು ಕಾರ್ಯಾಗಾರ ಸೂಕ್ತ ವೇದಿಕೆಯಾಗಿದೆ. ಭಾಷೆಗಳ ಬೆಳವಣಿಗೆಗೆ ಅಗತ್ಯವಿರುವ ಇಂತಹ ಸಂಶೋಧನಾ ಕಾರ್ಯಕ್ರಮಗಳನ್ನು ನಿಟ್ಟೆ ವಿಶ್ವವಿದ್ಯಾಲಯ ನಿರಂತರ ಪ್ರೋತ್ಸಾಹಿಸುತ್ತದೆ ಎಂದರು.
ತುಳು, ಕೊರಗ ಭಾಷೆ ಸಂಗ್ರಹ
ತಂತ್ರಜ್ಞಾನದ ಮೂಲಕ ತುಳು ಹಾಗೂ ಕೊರಗ ಭಾಷಾ ಸಂಗ್ರಹ ಈ ಅನ್ಯೂಟ್ ಲ್ಯಾಂಗ್ವೇಜ್ ಟೆಕ್ನಾಲಜೀಸ್ ಇನ್ ತುಳು ಕಾರ್ಯಾಗಾರದ ಮೂಲ ಉದ್ದೇಶ. ಸಂಶೋಧನಾ ಕ್ಷೇತ್ರದಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಶತಮಾನ ಮಿಕ್ಕಿದ ಇತಿಹಾಸ ಹೊಂದಿರುವ ಯುನೈಟೆಡ್ ಕಿಂಗ್ಡಮ್‌ನ ಸ್ವಾನ್ಸಿ ವಿಶ್ವವಿದ್ಯಾಲಯದ ಸಂಶೋಧಕರಾದ ಡಾ.ಥಾಮಸ್ ರೈಟ್ ಮೇರ್, ಪ್ರೊ.ಜೆನಿಫರ್ ಪಿಯರ್‌ಸನ್, ಡಾ.ಡ್ಯಾನಿ ಕೆ.ರಾಜು ಅವರನ್ನೊಳಗೊಂಡ ತಂಡ ತುಳು ಭಾಷೆಯ ಶಬ್ದಗಳನ್ನು ಮಾತಿನ ಮೂಲಕ ತಂತ್ರಜ್ಞಾನ ಬಳಸಿ ಸಂಗ್ರಹಿಸುವ ಯೋಜನೆಯನ್ನು ನಿಟ್ಟೆ ವಿಶ್ವವಿದ್ಯಾಲಯದ ಡಾ.ಕೆ.ಆರ್ ಶೆಟ್ಟಿ ತುಳು ಅಧ್ಯಯನ ಕೇಂದ್ರದ ಮೂಲಕ ಹಮ್ಮಿಕೊಂಡಿದೆ. ಮುಂದಿನ ದಿನಗಳಲ್ಲಿ ತುಳು ಭಾಷೆಯ ವಿಸ್ತಾರಕ್ಕೆ ಹಾಗೂ ಉಳಿವಿಗೆ ಈ ಯೋಜನೆ ಮಹತ್ತರ ಕೊಡುಗೆ ಸಲ್ಲಿಸಲಿದೆ.
ಸ್ಥಳೀಯ ಭಾಷೆ, ಸಂಸ್ಕೃತಿಗಳ ದಾಖಲಿಕರಣ ಇಂದಿನ ಅಗತ್ಯಗಳಲ್ಲಿ ಒಂದು. ದಾಖಲಿಕರಣ ಕಾರ್ಯ ಮಾಡಲಾಗುತ್ತಿದೆ. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ, ಇಂಗ್ಲೆಂಡಿನ ಸ್ವಾನ್ಸಿ ಯುನಿವರ್ಸಿಟಿಯಂತಹ ಸಂಶೋಧನಾ ಸಂಸ್ಥೆಗಳ ಜತೆಗೆ ಸ್ಥಳೀಯ ಭಾಷೆ, ಸಂಸ್ಕೃತಿಗಳ ದಾಖಲೀಕರಣ ಹಾಗೂ ಬೆಳವಣಿಗೆಗೆ ಡಾ.ಕೆ.ಆರ್ ಶೆಟ್ಟಿ ತುಳು ಅಧ್ಯಯನ ಕೇಂದ್ರವು ಕೈಜೋಡಿಸಿ ಅಧ್ಯಯನ ಮುಂದುವರಿಸುತ್ತದೆ ಎಂದು ಡಾ.ಕೆ.ಆರ್ ಶೆಟ್ಟಿ ತುಳು ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ಸಾಯಿಗೀತಾ ತಿಳಿಸಿದ್ದಾರೆ.
ಸ್ವಾನ್ಸಿ ವಿಶ್ವವಿದ್ಯಾಲಯದ ಸಂಶೋಧಕರಾದ ಡಾ.ಥಾಮಸ್ ರೈಟ್ ಮೇರ್, ಪ್ರೊ.ಜೆನಿಫರ್ ಪಿಯರ್‌ಸನ್, ಡಾ.ಡ್ಯಾನಿ ಕೆ.ರಾಜು ಕಾರ್ಯಾಗಾರದ ಬಗ್ಗೆ ಮಾಹಿತಿ ವಿನಿಮಯ ನಡೆಸಿದರು. ಸಂಶೋಧನಾರ್ಥಿಗಳು, ಇಂಜಿನಿಯರ್‌ಗಳು, ಪತ್ರಕರ್ತರು, ಶಿಕ್ಷಕರು, ತಂತ್ರಜ್ಞರು ಸೇರಿರುವಂತೆ ವಿವಿಧ ವಯೋಮಾನ, ವಿವಿಧ ವೃತ್ತಿ ಹಾಗೂ ವಿವಿಧ ಅನುಭವದ ಹಿನ್ನೆಲೆಯ 15 ಮಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ವಿಜಯಲಕ್ಷ್ಮೀ ಕಟೀಲು ಪ್ರಾರ್ಥಿಸಿದರು. ಜ್ಯೋತಿ ಮಹಾದೇವ್ ಕಾರ್ಯಕ್ರಮ ನಿರೂಪಿಸಿದರು.
Workshop on 'New Language Technologies in Tulu' at Nitte Tulu Study Centre; Tulu, Koraga language collection in technology.
14-01-25 03:36 pm
HK News Desk
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ; ಬಿಹಾರ ಮೂಲದ ಆರೋಪ...
13-01-25 10:48 am
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
14-01-25 08:36 pm
Mangalore Correspondent
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
Bangalore Cow Incident: ಹಸುವಿನ ಕೆಚ್ಚಲು ಕೊಯ್ದ...
13-01-25 10:48 am
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm