ಬ್ರೇಕಿಂಗ್ ನ್ಯೂಸ್
22-09-24 01:16 pm Mangalore Correspondent ಕರಾವಳಿ
ಮಂಗಳೂರು, ಸೆ.22: ರಾಜ್ಯದಲ್ಲಿನ್ನು ಹಿಂದೂ ಧಾರ್ಮಿಕ ಕಾರ್ಯಕ್ರಮಗಳಿಗೆ, ಮೆರವಣಿಗೆಗಳ ಸಂದರ್ಭದಲ್ಲಿ ಶ್ರೀರಾಮ ಸೇನೆಯಿಂದಲೇ ರಕ್ಷಣೆ ನೀಡಲಾಗುವುದು. ಶಸ್ತ್ರಸಜ್ಜಿತ ತಲವಾರು ಹಿಡಿದ 50 ಮಂದಿ ಶ್ರೀರಾಮಸೇನೆ ಕಾರ್ಯಕರ್ತರು ರಕ್ಷಣೆ ನೀಡುವ ಕೆಲಸ ಮಾಡಲಿದ್ದಾರೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲ್ಕರ್ಣಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಶ್ರೀರಾಮ ಸೇನೆ ಜಿಲ್ಲಾ ಸಮಾವೇಶದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇವತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಕೃಪೆಯಿಂದ ಜಹಾದಿ ಶಕ್ತಿಗಳು ಹದ್ದು ಮೀರುತ್ತಿವೆ. ಮುಸಲ್ಮಾನ ಪುಂಡರು ನಾಗಂಮಗಲ, ದಾವಣಗೆರೆಯಲ್ಲಿ ಗಣಪತಿ ಮೆರವಣಿಗೆ ಮೇಲೆ ಕಲ್ಲು ತೂರಿದ್ದಾರೆ. ಪೆಟ್ರೋಲ್ ಬಾಂಬ್ ಹಾಕುವಂತಹ ಮಟ್ಟಕ್ಕೆ ಬಂದು ನಿಂತಿದ್ದಾರೆ. ಇದಕ್ಕೆ ನೇರ ಕಾಂಗ್ರೆಸ್ ಸರಕಾರವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಂ ಗುಂಡಾಗಳು ಓಪನ್ ಆಗಿ ಹೇಳ್ತಿದ್ದಾರೆ, ಈಗ ಇರುವುದು ನಮ್ಮ ಸರಕಾರ ಅಂತ. ಇವರ ಉದ್ಧಟತನಕ್ಕೆ ರಾಜ್ಯ ಸರಕಾರ ಕಾರಣ. ರಾಜ್ಯ ಸರಕಾರ ಸಂಪೂರ್ಣವಾಗಿ ಅವರ ಜೊತೆಗೆ ನಿಂತಿದೆ. ಗೃಹ ಮಂತ್ರಿಗಳಿಗೆ ನಾಚಿಕೆ ಮಾನ ಮರ್ಯಾದೆ ಇದೆಯೋ ಗೊತ್ತಿಲ್ಲ. ನಾಗಮಂಗಲ ಘಟನೆ ಆಕಸ್ಮಿಕ ಘಟನೆ ಅಂತಾರೆ. ಗೃಹ ಮಂತ್ರಿ ಅಯೋಗ್ಯರು. ವ್ಯವಸ್ಥಿತವಾಗಿ ನಡೆಸಲಾದ ಗಲಭೆ ಆಕಸ್ಮಿಕ ಅಂತ ತೋರುತ್ತಿದೆಯಾ ? ಇದೇ ಮುಸ್ಲಿಂ ಗೂಂಡಾಗಳಿಗೆ ಪ್ರೇರಣೆ ಆಗುತ್ತಿದೆ. ಇದರ ಹಿಂದೆ ನಿಷೇಧಿತ ಪಿ ಎಫ್ ಐ ಸಂಘಟನೆ ಇದೆ. ಮೂರು ನಾಲ್ಕು ದಿನದ ಮುಂಚಿತವಾಗಿ ಅವರು ಬಂದು ನಾಗಮಂಗಲದಲ್ಲಿ ಇದ್ದರು. ಇವೆಲ್ಲದಕ್ಕೂ ಹೊಣೆ ಹೊತ್ತು ಗೃಹಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಮುಸ್ಲಿಂ ಗೂಂಡಾಗಳಿಗೆ ಹೇಳುತ್ತಿದ್ದೇನೆ, ಕೈಯಲ್ಲಿ ಕಲ್ಲು ಹಿಡಿಯಲು, ತಲವಾರು ಹಿಡಿಯಲು ಹಿಂದೂ ಸಮಾಜಕ್ಕೆ ಗೊತ್ತಿಲ್ಲ ಅಂದುಕೊಳ್ಳಬೇಡಿ. ಮುಂಬರುವ ಗಣೇಶನ ಮೆರವಣಿಗೆ ಸೇರಿದಂತೆ ಇನ್ನಿತರ ಹಿಂದೂ ಧಾರ್ಮಿಕ ಕಾರ್ಯಕ್ರಮ, ಮೆರವಣಿಗೆಯಲ್ಲಿ ನಾವೇ ರಕ್ಷಣೆ ನೀಡುತ್ತೇವೆ. ತಲವಾರು ಸಮೇತ 50 ಮಂದಿ ಶ್ರೀರಾಮಸೇನೆಯ ಕಾರ್ಯಕರ್ತರು ರಕ್ಷಣೆ ನೀಡಲಿದ್ದಾರೆ. ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ಸರಕಾರದಿಂದ ನಮಗೆ ರಕ್ಷಣೆ ಇಲ್ಲ ಅನ್ನೋದು ಸಾಬೀತಾಗಿದೆ. ಅದಕ್ಕಾಗಿ ನಾವೇ ರಕ್ಷಣೆಗೆ ಶಸ್ತ್ರ ಹಿಡಿಯುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Hindu activists will hold swords for Hindu programs for our own protection says Shri Ram sene Gangadhar Kulkarni in Mangalore.
19-09-25 10:04 pm
Bangalore Correspondent
Caste survey: ಜಾತಿ ಸಮೀಕ್ಷೆಗೆ ಸರ್ಕಾರದ ಸಚಿವರಿಂದ...
19-09-25 02:16 pm
ಮೋಸದಿಂದಲೇ ಕಣ್ರೀ ಬಿಜೆಪಿ ಚುನಾವಣೆ ಗೆದ್ದಿದೆ! ರಾಹು...
19-09-25 09:45 am
ಬೆಂಗಳೂರು ಗಬ್ಬೆದ್ದು ನಾರುತ್ತಿದೆ, ರಾಜಧಾನಿ ಈಗ ಗುಂ...
19-09-25 09:42 am
Traffic Violation, Bangalore: ರಾಜ್ಯದಲ್ಲಿ ಸಂಚಾ...
18-09-25 05:34 pm
19-09-25 05:45 pm
HK News Desk
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
19-09-25 10:46 pm
Mangalore Correspondent
ಕಟೀಲು ದೇಗುಲದಲ್ಲಿ ಸೇವಾ ದರ ಏಕಾಏಕಿ ದುಪ್ಪಟ್ಟು ; ಬ...
19-09-25 10:21 pm
ಧರ್ಮಸ್ಥಳ ಕೇಸ್ ; ಅನೇಕ ಶವಗಳನ್ನು ಹೂತಿದ್ದೆವು ಎಂದಿ...
19-09-25 09:59 pm
Kadri, Mangalore, Smart City: ‘ಸ್ಮಾರ್ಟ್ ಸಿಟಿ’...
19-09-25 07:53 pm
ಇನ್ಸ್ಟಾ ಗ್ರಾಂನಲ್ಲಿ ಪ್ರಚೋದನಕಾರಿ ಪೋಸ್ಟ್ ; ಆರೋಪಿ...
19-09-25 04:58 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm