ಬ್ರೇಕಿಂಗ್ ನ್ಯೂಸ್
24-09-24 10:31 pm Mangalore Correspondent ಕರಾವಳಿ
ಮಂಗಳೂರು, ಸೆ.24: ಸಿನಿಮಾ, ನಾಟಕಗಳಲ್ಲಿ ಪರಿಶಿಷ್ಟ ಜನಾಂಗದ ನಲಿಕೆಯವರು ಅನಾದಿ ಕಾಲದಿಂದಲೂ ಆರಾಧಿಸಿಕೊಂಡು ಬಂದಿರುವ ದೈವಾರಾಧನೆಯನ್ನು ತೋರಿಸಿ ಅವಮಾನಿಸುತ್ತಿದ್ದಾರೆ. ಇದರಿಂದ ದೈವಗಳಿಗೆ ಮತ್ತು ದೈವ ಕಟ್ಟುವವರಿಗೆ ಅಪಚಾರ ಮಾಡುತ್ತಿದ್ದಾರೆಂದು ಆರೋಪಿಸಿ ದೈವ ನರ್ತಕರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಮಂಗಳೂರು ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ.
ತುಳು ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ನೇತೃತ್ವದಲ್ಲಿ ಮಂಗಳೂರಿನ ಪಂಬದರ ಯಾನೆ ದೈವಾರಾಧಕರ ಸಮಾಜ ಸಂಘದಿಂದ ದೂರು ಸಲ್ಲಿಸಲಾಗಿದೆ. ದೈವಾರಾಧನೆ, ದೈವ ನರ್ತಕರಿಗೆ ಅವಮಾನ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.
ಇತ್ತೀಚೆಗೆ ಕಲ್ಜಿಗ ಎನ್ನುವ ಕನ್ನಡ ಸಿನಿಮಾದಲ್ಲಿ ದೈವದ ಪಾತ್ರವನ್ನು ಅನ್ಯರು ಮಾಡಿ, ಆರಾಧನಾ ಪದ್ಧತಿಗೆ ಅಪಚಾರ ಎಸಗಿದ್ದಾರೆ. ಇದಲ್ಲದೆ, ಈ ಸಿನಿಮಾದ ಸುದ್ದಿಗೋಷ್ಟಿಯಲ್ಲಿ ದೈವಾರಾಧಕರನ್ನು ವ್ಯಕ್ತಿಯೊಬ್ಬರು ತುಚ್ಛವಾಗಿ ನಿಂದಿಸಿ ಮಾತನಾಡಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ದೂರು ನೀಡಿದ್ದೇವೆ. ನಾಟಕ, ಸಿನಿಮಾದಲ್ಲಿ ತೋರಿಸುವ ಮೂಲಕ ದೈವ ನರ್ತನ ಸೇವೆ ಮಾಡುವ ಸಮುದಾಯದವರ ವಿರುದ್ಧ ತಪ್ಪು ಸಂದೇಶ ನೀಡುತ್ತಿದ್ದಾರೆ. ಇದನ್ನು ಮುಂದುವರಿಸದಂತೆ ತಡೆ ಹೇರುವಂತೆ ಜಿಲ್ಲಾಧಿಕಾರಿಗೆ ಆಗ್ರಹ ಮಾಡಿದ್ದೇವೆ ಎಂದು ದೈವಾರಾಧಕರು ಹೇಳಿದ್ದಾರೆ.
ದೈವಾರಾಧನೆ ಮತ್ತು ದೈವದ ಪಾತ್ರ ಮಾಡುವ ಹಿಂದುಳಿದ ವರ್ಗದ ಜನಾಂಗವನ್ನು ನಿಂದಿಸಿರುವವರ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಸಂಘದ ಸದಸ್ಯರು ಒತ್ತಾಯಿಸಿದ್ದಾರೆ.
Disrespect to Daiva in movies and drama, case filed to police commissioner in Mangalore
11-09-26 05:50 pm
HK News Staffer
ಬ್ಯಾಂಕ್ ಸಾಲಕ್ಕೆ ಸೀಜ್ ಆದ ಆಯುರ್ವೇದ ಕಾಲೇಜು ; 4.5...
11-09-26 02:59 pm
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
12-09-26 01:10 pm
HK News Staffer
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
12-09-26 03:09 pm
HK News Staffer
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
11-09-26 06:38 pm
HK News Staffer
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm