ಗೋವು ಕೃಷಿಕರ ಜೀವನಾಡಿ, ಗೋಹತ್ಯೆ ಕಾನೂನು ವಿರೋಧಿಸುವವರು ಕೃಷಿಕರ ವಿರೋಧಿಗಳು

10-12-20 03:25 pm       Mangalore Correspondent   ಕರಾವಳಿ

ಸಿದ್ದರಾಮಯ್ಯ ಜಾತ್ಯತೀತ ನೆಪದಲ್ಲಿ ತುಷ್ಟೀಕರಣಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ. ಕೃಷಿಕನ ಬದುಕಿನ ಪರವಾಗಿ ನಾವು ಕಾನೂನು ತಂದಿದ್ದೇವೆ.

ಮಂಗಳೂರು, ಡಿ.10: ಗೋವು ಕೃಷಿಕರ ಪಾಲಿಗೆ ಜೀವನಾಡಿ. ಅಂಥ ಗೋವಿನ ರಕ್ಷಣೆಗಾಗಿ ಯಡಿಯೂರಪ್ಪ ಸರಕಾರ ಕಾನೂನು ತಂದಿದೆ. ಸಿದ್ದರಾಮಯ್ಯ ಜಾತ್ಯತೀತ ನೆಪದಲ್ಲಿ ತುಷ್ಟೀಕರಣಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ. ಕೃಷಿಕನ ಬದುಕಿನ ಪರವಾಗಿ ನಾವು ಕಾನೂನು ತಂದಿದ್ದೇವೆ. ಇದನ್ನು ವಿರೋಧಿಸುವುದಾದ್ರೆ ಸಿದ್ದರಾಮಯ್ಯ ಕೃಷಿಕರ ವಿರುದ್ಧ ಇದ್ದಾರೆ ಅಂತ ಆಗಿಲ್ಲವೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಪ್ರಶ್ನೆ ಮಾಡಿದ್ದಾರೆ. 

ಗೋಹತ್ಯೆ ನಿಷೇಧ ಕಾನೂನು ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಗೋಪೂಜೆ ನಡೆಸಲಾಯಿತು. ಗೋವಿಗೆ ನಳಿನ್ ಕುಮಾರ್ ಪೂಜೆ ನೆರವೇರಿಸಿದರು. 

ಬಳಿಕ ಮಾಧ್ಯಮಕ್ಕೆ ಹೇಳಿಕೆ ನೀಡಿದ ನಳಿನ್ ಕುಮಾರ್, ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ವಿಶೇಷ ಸ್ಥಾನವಿದೆ. ಪ್ರತಿ ಮನೆಯಲ್ಲಿ ಗೋವುಗಳಿದ್ದವು. ಅದನ್ನು ಭಾರತೀಯರೆಲ್ಲ ಪೂಜಿಸುತ್ತಿದ್ದರು. ದೇವತೆಯ ಸ್ಥಾನದಲ್ಲಿರುವ ಗೋವನ್ನು ರಕ್ಷಿಸಲು ಯಡಿಯೂರಪ್ಪ ಸರಕಾರ ಕಾನೂನು ತಂದಿದೆ. ಕಾನೂನು ತರುತ್ತೇವೆಂದು ಮೊದಲಿಂದಲೂ ಹೇಳಿಕೊಂಡು ಬರಲಾಗಿತ್ತು. ಯಡಿಯೂರಪ್ಪ ಈಗ ಮಾತು ಈಡೇರಿಸಿದ್ದಾರೆ. ಇದಕ್ಕಾಗಿ ಯಡಿಯೂರಪ್ಪ ಅವರನ್ನು ಅಭಿನಂದಿಸುತ್ತೇನೆ ಎಂದರು. 

ಸಿದ್ದರಾಮಯ್ಯ ಚರ್ಚೆ ಮಾಡಬೇಕಿತ್ತು ಎನ್ನಲು ಈ ಹಿಂದೆ ಮಸೂದೆ ತರುವಾಗ ಕಾಂಗ್ರೆಸ್ ಚರ್ಚೆ ಮಾಡಿತ್ತಾ..? ನಾವು ಸದನ ಸಮಿತಿಯಲ್ಲಿಟ್ಟು ಅನುಮೋದನೆ ಪಡೆದಿದ್ದೇವೆ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಗೋಹತ್ಯೆಯ ಪರವಾಗಿದೆ. ಆದ್ದರಿಂದ ರಾಜಕೀಯ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

Video: 

The Karnataka government on Wednesday passed a law to ban the slaughter of all kinds of cattle in the state, The Mangalore BJP leaders offered special puja to cows near BJP office in Mangalore.