ಬ್ರೇಕಿಂಗ್ ನ್ಯೂಸ್
11-12-20 01:18 pm Mangalore Correspondent ಕರಾವಳಿ
ಮಂಗಳೂರು, ಡಿ.11: ಕೆಎಸ್ಸಾರ್ಟಿಸಿ ಬಸ್ ನೌಕರರ ಮುಷ್ಕರದ ಬಿಸಿ ಕರಾವಳಿಗೆ ತಟ್ಟಿಲ್ಲ. ಮಂಗಳೂರು ಮತ್ತು ಉಡುಪಿಯಲ್ಲಿ ಬಸ್ ಸಂಚಾರ ಎಂದಿನಂತಿದ್ದು ಸಾರ್ವಜನಿಕರು ನಿರಾಳವಾಗಿದ್ದಾರೆ.
ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಎರಡು ದಿನಗಳಿಂದ ಸಿಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆ ವಿಧಾನಸೌಧಕ್ಕೆ ಮುತ್ತಿಗೆ ಯತ್ನ ನಡೆದಿತ್ತು. ಸರಕಾರ ಮಾತ್ರ, ಸಿಬಂದಿಯ ಬೇಡಿಕೆಯನ್ನು ಪರಿಗಣಿಸಿಲ್ಲ. ಸರಕಾರಕ್ಕೆ ಬಿಸಿ ಮುಟ್ಟಿಸಲು ಕಾರ್ಮಿಕರ ಯೂನಿಯನ್, ಇಂದು ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ. ಆದರೆ, ಇವತ್ತಿನ ಮುಷ್ಕರಕ್ಕೆ ಎಐಟಿಯುಸಿ ಬೆಂಬಲಿತರು ಬೆಂಬಲ ನೀಡಿಲ್ಲ. ಹೀಗಾಗಿ ಕರಾವಳಿಯಲ್ಲಿ ಬಹುತೇಕ ಸರಕಾರಿ ಬಸ್ ಗಳ ಸಂಚಾರ ಯಥಾಸ್ಥಿತಿ ಇದ್ದು ಸಿಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಮಂಗಳೂರು, ಪುತ್ತೂರು, ಧರ್ಮಸ್ಥಳ ಡಿಪೋದಿಂದ ಶುಕ್ರವಾರ ಬೆಳಗ್ಗೆಯಿಂದ ರಾಜ್ಯದ ವಿವಿಧ ಕಡೆಗಳಿಗೆ ಬಸ್ ಗಳು ಸಂಚಾರ ನಡೆಸುತ್ತಿವೆ. ಸಾರಿಗೆ ನೌಕರರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಕೆಎಸ್ ಆರ್ ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಉಳಿದಂತೆ ಉಡುಪಿ, ಕುಂದಾಪುರ ಕೇಂದ್ರಗಳಲ್ಲೂ ಬಸ್ ಸಂಚಾರ ವ್ಯತ್ಯಯ ಆಗಿಲ್ಲ. ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಮುಷ್ಕರಕ್ಕೆ ರೈತ ಸಂಘಟನೆಗಳು ಬೆಂಬಲಿಸಿದ್ದು ಬೆಂಗಳೂರಿನಲ್ಲಿ ಪ್ರತಿಭಟನೆಯಲ್ಲಿ ಹಾಜರಾಗಿದ್ದಾರೆ. ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಕೆಎಸ್ಸಾರ್ಟಿಸಿ ಅಧಿಕಾರಿಗಳು ಮತ್ತು ಸಿಬಂದಿ ಯೂನಿಯನ್ ಜೊತೆ ಮಾತುಕತೆ ನಡೆಸಿದ್ದಾರೆ. ಈಗಿನ ಸನ್ನಿವೇಶದಲ್ಲಿ ಆ ಬೇಡಿಕೆಯನ್ನು ಈಡೇರಿಸಲು ಆಗದು ಎಂದು ಹೇಳಿದ್ದಾರೆ.
ಗುರುವಾರ ಸಾವಿರಾರು ಸಂಖ್ಯೆಯಲ್ಲಿ ಬಸ್ ನೌಕರರು ವಿಧಾನಸೌಧ ಮುತ್ತಿಗೆಗೆ ಯತ್ನಿಸಿದ್ದರು. ಆದರೆ ಅವರನ್ನು ಅರ್ಧದಲ್ಲೇ ತಡೆದ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದರು. ಬಸ್ ಸಿಬಂದಿಯ ಮುಷ್ಕರದ ಮಾಹಿತಿ ಇಲ್ಲದೆ ಪ್ರಯಾಣಿಕರು ಕೆಲವು ಕಡೆ ಪರದಾಡುವ ಪರಿಸ್ಥಿತಿ ಹಲವೆಡೆ ಉಂಟಾಗಿದೆ.
Bus strike of KSRTC in Karnataka, Mangalore gets no support. Buses move as usual creating no impact.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm