ಬ್ರೇಕಿಂಗ್ ನ್ಯೂಸ್
21-10-24 05:07 pm Mangalore Correspondent ಕರಾವಳಿ
ಮಂಗಳೂರು, ಅ.21: ಕರ್ನಾಟಕದಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕರಾವಳಿ ಮೂಲದ ಮರಾಟಿಗರ ಸಂಘದ ವತಿಯಿಂದ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ನುಡಿಸಿರಿ ಸಭಾಂಗಣದಲ್ಲಿ ನ.9 ಮತ್ತು 10ರಂದು ಮರಾಟಿಗರ ಸಮಗ್ರ ಬಲವರ್ಧನೆ ಮತ್ತು ಪ್ರಗತಿಗಾಗಿ ”ಗದ್ದಿಗೆ“ ಮರಾಟಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರಾವಳಿ ಮರಾಠಿ ಸಮಾವೇಶದ ಅಧ್ಯಕ್ಷ, ಜಮ್ಮು ಕಾಶ್ಮೀರದಲ್ಲಿ ಐಎಎಸ್ ಅಧಿಕಾರಿಯಾಗಿರುವ ಉಡುಪಿ ಮೂಲದ ಹೆಚ್.ರಾಜೇಶ್ ಪ್ರಸಾದ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
22 ವರ್ಷಗಳ ಬಳಿಕ ಸಮಾವೇಶ ನಡೆಯಲಿದ್ದು ಶಿಕ್ಷಣ, ಸಂಘಟನೆ ಹಾಗೂ ಸ್ವಾಭಿಮಾನದ ಧ್ಯೇಯ ಘೋಷವನ್ನು ಹೊಂದಿದೆ. ಮೂಲತಃ ಮಹಾರಾಷ್ಟ್ರದಿಂದ ವಲಸೆ ಬಂದು ಕರ್ನಾಟಕದ ಗುಡ್ಡಗಾಡಿನಲ್ಲಿ ವಾಸಿಸುತ್ತಿರುವ ಈ ಸಮುದಾಯದ ಸುಮಾರು ಶೇಕಡ 80ರಷ್ಟು ಜನ ಇಂದಿಗೂ ಆರ್ಥಿಕವಾಗಿ ಹಿಂದುಳಿದಿದ್ದು ಎಸ್ಟಿ ಮೀಸಲಾತಿ ಇದ್ದರೂ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಲುವಾಗಿ, ಹಾಗೂ ನಮ್ಮ ಸಂಸ್ಕೃತಿ, ಆಚರಣೆಗಳನ್ನು ಅನಾವರಣ ಮಾಡುವ ಉದ್ದೇಶದಿಂದ ಸಮಾವೇಶವನ್ನು ಹಮ್ಮಿಕೊಂಡಿದ್ದು, ಸುಮಾರು 15ರಿಂದ 20 ಸಾವಿರ ಜನ ಭಾಗವಹಿಸುವವರಿದ್ದಾರೆ. ಸಮಾವೇಶದಲ್ಲಿ ಮರಾಟಿಗರ ವಿವಿಧ ಆಚಾರ-ವಿಚಾರ ಸಂಸ್ಕಾರಗಳನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಮೂರು ಗೋಷ್ಠಿಗಳು, ಉಪನ್ಯಾಸ ಹಾಗೂ ಸನ್ಮಾನ ಮತ್ತು ಸಾಧಕರನ್ನು ಪುರಸ್ಕರಿಸುವ ಕಾರ್ಯಕ್ರಮ ನಡೆಯಲಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾವೇಶವನ್ನು ಉದ್ಘಾಟಿಸಲಿದ್ದು, ನಮ್ಮ ಬಹು ನಿರೀಕ್ಷೆಯ “ಗದ್ದಿಗೆ” ಸ್ಮರಣ ಸಂಚಿಕೆಯನ್ನು ಡಾ.ಎಂ.ಮೋಹನ ಆಳ್ವರವರು ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಸಮಾಜದ ಶ್ರೇಷ್ಠ ಸಾಧನೆಯನ್ನು ಮಾಡಿರುವ ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕರವರನ್ನು ಸನ್ಮಾನ ಮಾಡಲಾಗುವುದು. ಮರಾಟಿಗರ ಅಹವಾಲುಗಳನ್ನು ನಮ್ಮ ಸಮಾವೇಶದ ಗೌರವಾಧ್ಯಕ್ಷ ಡಾ.ಕೆ.ಸುಂದರ್ ನಾಯ್ಕ್ ರವರು ಮುಖ್ಯಮಂತ್ರಿಗಳಿಗೆ ಅರ್ಪಿಸಲಿದ್ದಾರೆ. ಹಾಗೆಯೇ ರಾಷ್ಟ್ರ ಮಟ್ಟದಲ್ಲಿ ಸಾಧಿಸಿರುವ ಸಾಧನೆಯನ್ನು ಪರಿಗಣಿಸಿ ಸಮಾಜದ ಆನೇಕ ಸಾಧಕರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು ಎಂದರು.
ನ.9ರಂದು ಕರ್ನಾಟಕ ಮರಾಟಿ ಸಂಘ ಬೆಂಗಳೂರು ಇವರ ಸಹಕಾರದಿಂದ ಮರಾಟಿಗರಿಗಾಗಿ ಉದ್ಯೋಗ ಮೇಳ ಹಮ್ಮಿಕೊಂಡಿದ್ದು ಈಗಾಗಲೇ 1500ಕ್ಕೂ ಹೆಚ್ಚು ಮರಾಟಿ ಉದ್ಯೋಗಾಕಾಂಕ್ಷಿಗಳು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಸುಮಾರು 30ಕ್ಕೂ ಹೆಚ್ಚು ವಿವಿಧ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಬರುವ ದೂರದ ಊರಿನ ಮರಾಟ ಬಂಧುಗಳಿಗೆ ವಸತಿ ವ್ಯವಸ್ಥೆ ಮತ್ತು ಎಲ್ಲರಿಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗುವುದು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಎಂ. ಮೋಹನ್ ಆಳ್ವ, ಎನ್.ಎಸ್.ಮಂಜುನಾಥ್, ರತಿ ಪ್ರಭಾಕರ ನಾಯ್ಕ ಹಾಗೂ ಪ್ರವೀಣ್ ಕುಮಾರ್ ಮುಗುಳಿ ನಮ್ಮೊಂದಿಗೆ ಸಹಕರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಮುಖ್ಯ ಅತಿಥಿಗಳಾಗಿ ಶಾಸಕ ಉಮಾನಾಥ ಕೋಟ್ಯಾನ್, ಐವನ್ ಡಿ'ಸೋಜ, ಕೆ.ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ, ಶಶಿಧರ್ ಶೆಟ್ಟಿ ಬರೋಡಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ದ.ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಡಾ.ಎಂ. ಮೋಹನ್ ಆಳ್ವ, ಕೆನರಾ ಬ್ಯಾಂಕ್ ಜಿ.ಎಂ. ಶ್ರೀರಾಮ ನಾಯ್ಕ್, ದ.ಕ, ಉಡುಪಿ ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಮುಖಂಡರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಡಾ.ಕೆ.ಸುಂದರ್ ನಾಯ್ಕ್, ಕಾರ್ಯಾಧ್ಯಕ್ಷ ರಾಮಚಂದ್ರ ಕೆಂಬಾರೆ, ರತ್ನಾವತಿ, ಎನ್.ವಿಶ್ವನಾಥ ನಾಯ್ಕ್, ಮಹಾಲಿಂಗ ನಾಯ್ಕ್, ಗೌತಮ್ ಮತ್ತಿತರರು ಉಪಸ್ಥಿತರಿದ್ದರು.
Mangalore Alvas college Moodbidri to hold gadigey samavesha on November 9 and 10.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm