ಬ್ರೇಕಿಂಗ್ ನ್ಯೂಸ್
21-10-24 08:38 pm Mangalore Correspondent ಕರಾವಳಿ
ಮಂಗಳೂರು, ಅ.21: ಕೊಬ್ಬರಿ, ತೆಂಗಿನ ಕಾಯಿಗೆ ಈ ಬಾರಿ ಉತ್ತಮ ದರ ಸಿಗುವ ನಿರೀಕ್ಷೆ ಇದೆ. ದೀಪಾವಳಿ ನಂತರ ಇನ್ನೂ ಬೆಲೆ ಹೆಚ್ಚಲಿದ್ದು ತೆಂಗಿನ ಕಾಯಿ ಕೇಜಿಗೆ 60 ರಿಂದ 70 ರೂಪಾಯಿಗೆ ಏರಲಿದೆ. ಬೆಳೆಗಾರರು ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಬೆಲೆ ಪಡೆಯಲಿದ್ದಾರೆ ಎಂದು ದಕ್ಷಿಣ ಕನ್ನಡ ತೆಂಗು ಉತ್ಪಾದಕ ಮಾರಾಟ ಸಂಸ್ಥೆಯ ಅಧ್ಯಕ್ಷ ಕುಸುಮಾಧರ ಎಸ್.ಕೆ ತಿಳಿಸಿದ್ದಾರೆ.
ಈ ಬಾರಿ ಮಳೆ ಹೆಚ್ಚಿದ್ದರಿಂದ ತೆಂಗು ಕೃಷಿ ಇಳುವರಿಗೆ ದೊಡ್ಡ ಪೆಟ್ಟು ಬಿದ್ದಿದೆ. ಹೀಗಾಗಿ ಬೆಳೆಯೂ ಕಡಿಮೆಯಾಗಿದ್ದು ಇದರ ಪರಿಣಾಮ ಖಚಿತವಾಗಿ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದೆ. ಈಗಾಗಲೇ ಎಳನೀರಿಗೆ 60 ರೂ.ನಷ್ಟು ದರ ಏರಿದ್ದು ಬೆಳೆಗಾರರಿಂದ 40-50 ರೂ.ಗೆ ಖರೀದಿಯಾಗುತ್ತಿದೆ. ಇದರಿಂದಾಗಿ ಎಳನೀರನ್ನು ಕೂಡ ಹೆಚ್ಚಾಗಿ ರೈತರು ಮಾರಾಟ ಮಾಡುತ್ತಿದ್ದಾರೆ. ಅಧಿಕ ಪೋಷಕಾಂಶ ಇರುವ ಎಳನೀರಿಗೆ ದರ ಏರಿಕೆಯಾಗುತ್ತಿರುವುದು ಮತ್ತು ಎಳನೀರು ಮಾರಾಟಕ್ಕೆ ರೈತರು ಒಲವು ತೋರುತ್ತಿರುವುದು ಮಾರುಕಟ್ಟೆ ದೃಷ್ಟಿಯಿಂದ ಉತ್ತಮ ಲಕ್ಷಣ. ಇದು ತೆಂಗು ಕೃಷಿಯಲ್ಲಿ ಆಗಿರುವ ಉತ್ತಮ ಬೆಳವಣಿಗೆಯೂ ಹೌದು. ತೆಂಗು ಕೂಡ ಪರ್ಯಾಯ ಆಹಾರ ಬೆಳೆಯಾಗುತ್ತಿದ್ದು ಇದೆಲ್ಲದರ ಪರಿಣಾಮ ಕೃಷಿಕರ ಪಾಲಿಗೆ ಲಾಭದಾಯಕ ಆಗಲಿದೆ. ಇದರಿಂದ ತೆಂಗು ಮತ್ತು ಕೊಬ್ಬರಿ ಕೇಜಿಗೆ ಬೆಲೆ ಹೆಚ್ಚುವುದು ಖಚಿತ.
ದೀಪಾವಳಿ ನಂತರ ತೆಂಗಿನಕಾಯಿ ಕೆಜಿಗೆ 60ರಿಂದ 70 ರೂ.ನಷ್ಟು ಆಗುವ ಸಾಧ್ಯತೆಯಿದೆ. ಈಗಲೇ ಸಗಟು ಮಾರುಕಟ್ಟೆಯಲ್ಲಿ 55-60 ರು. ತೆಂಗಿನ ಕಾಯಿ ದರ ಇದೆ. ತೆಂಗು ಉತ್ಪಾದಕ ಸಂಸ್ಥೆಯಿಂದ ಬೆಳೆಗಾರರಿಂದ 40-45 ರೂ.ಗೆ ತೆಂಗಿನ ಕಾಯಿ ಖರೀದಿ ಮಾಡಲಾಗುತ್ತಿದೆ. ಈ ದರ ಖಚಿತವಾಗಿಯೂ ದೀಪಾವಳಿ ಬಳಿಕ ಹೆಚ್ಚಲಿದೆ. ಹೀಗಾಗಿ ತೆಂಗು ಬೆಳೆಗಾರರು ದುಡುಕದೆ ಉತ್ತಮ ಇಳುವರಿ ಬರುವ ವರೆಗೆ ತಾಳ್ಮೆ ವಹಿಸಬೇಕು. ತೆಂಗು ದರ ಏರಿಕೆಯಾದರೆ ಕೃಷಿಕರ ದೃಷ್ಠಿಯಿಂದ ಉತ್ತಮ ಬೆಳವಣಿಗೆ ಎಂದು ಕುಸುಮಾಧರ ಅವರು ಪ್ರಕಟಣೆಯಲ್ಲಿ ರೈತರಿಗೆ ಸಲಹೆ ಮಾಡಿದ್ದಾರೆ.
Coconut price to increase from 60 to 70 rupees per kg says Coconut Producers Association President Kusumadhar in Mangalore.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm