ಬ್ರೇಕಿಂಗ್ ನ್ಯೂಸ್
22-10-24 07:28 pm Mangalore Correspondent ಕರಾವಳಿ
ಮಂಗಳೂರು, ಅ.22: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ವಿದ್ಯಾರ್ಥಿಗಳ ಕಲಿಕೆಗೂ ತೊಂದರೆಯಾಗಿದೆ. ಮಂಗಳೂರಿನ ಕಾರ್ ಸ್ಟ್ರೀಟ್ ಸೇರಿದಂತೆ ಜಿಲ್ಲೆಯ ನಾಲ್ಕು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಎಂಎಸ್ ಡಬ್ಲ್ಯು ದ್ವಿತೀಯ ವರ್ಷದ ಪದವಿ ಕಲಿಯುತ್ತಿರುವ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಕಲಿಯಲು ಅವಕಾಶ ಇಲ್ಲದ್ದನ್ನು ಖಂಡಿಸಿ ಪ್ರತಿಭಟನೆಯ ಹಾದಿ ತುಳಿದಿದ್ದಾರೆ.
ಕಾರ್ ಸ್ಟ್ರೀಟ್, ತೆಂಕನಿಡಿಯೂರು, ಬೆಳ್ಳಾರೆ ಮತ್ತು ವಿಟ್ಲ ಸರಕಾರಿ ಕಾಲೇಜುಗಳಲ್ಲಿ ಎಂಎಸ್ ಡಬ್ಲ್ಯು ಪದವಿ ಇದೆ. ಸುಮಾರು 60ರಿಂದ 70 ವಿದ್ಯಾರ್ಥಿಗಳು ಪದವಿ ಓದುತ್ತಿದ್ದು, ಈ ಬಾರಿಯ ಶೈಕ್ಷಣಿಕ ವರ್ಷ ಆರಂಭ ಆಗಿದ್ದರೂ ಕೆಲವು ವಿದ್ಯಾರ್ಥಿಗಳು ತರಗತಿಗೆ ಹಾಜರಾಗದೆ ಗೊಂದಲದಲ್ಲಿದ್ದಾರೆ. ಎರಡನೇ ವರ್ಷದ ಪದವಿಯಲ್ಲಿ ಇಲೆಕ್ಟಿವ್ ಪೇಪರ್ ಆಗಿ ಮೆಡಿಕಲ್ ಸೈಕಾಲಜಿ, ಎಚ್.ಆರ್ ಕಮ್ಯುನಿಕೇಶನ್, ಕಮ್ಯುನಿಟಿ ಡೆವಲಪ್ಮೆಂಟ್ ವಿಷಯದಲ್ಲಿ ಕಲಿಯುವುದಕ್ಕೆ ಅವಕಾಶ ಇದೆ. ಆದರೆ ಈಗ ಕಾಲೇಜಿನಲ್ಲಿ ಇದರಲ್ಲೊಂದನ್ನು ಕಲಿಯುವುದಕ್ಕೆ ಅವಕಾಶ ಕೊಡದೆ, ಮೆಡಿಕಲ್ ಮಾತ್ರ ಆಯ್ದುಕೊಳ್ಳಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಇದರಿಂದ ನಮಗೆ ಆಸಕ್ತಿ ಇಲ್ಲದಿದ್ದರೂ ಕಲಿಯಬೇಕಾದ ಅಡಕತ್ತರಿಯಲ್ಲಿ ಸಿಲುಕಿದ್ದೇವೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿ ಕರೆದು ಸರಕಾರ ಮತ್ತು ಸಾರ್ವಜನಿಕರ ಗಮನ ಸೆಳೆದಿರುವ ವಿದ್ಯಾರ್ಥಿಗಳು, ನಮಗೆ ಮೊದಲ ವರ್ಷದಲ್ಲಿ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ. ಕಳೆದ ವರ್ಷ ನಮ್ಮ ಕಾರ್ ಸ್ಟ್ರೀಟ್ ಕಾಲೇಜಿನಲ್ಲಿ ಆರು ಉಪನ್ಯಾಸಕರಿದ್ದರೆ, ಈ ಬಾರಿ ನಾಲ್ವರು ಮಾತ್ರ ಇದ್ದಾರೆ. ಉಪನ್ಯಾಸಕರ ಕೊರತೆ ನೆಪದಲ್ಲಿ ಎಚ್.ಆರ್ ಬಗ್ಗೆ ಆಯ್ದುಕೊಂಡಿರುವ ನಮ್ಮನ್ನು ಮೆಡಿಕಲ್ ಸೆಲೆಕ್ಟ್ ಮಾಡುವಂತೆ ಹೇಳುತ್ತಿದ್ದಾರೆ. ಎಚ್.ಆರ್, ಮೆಡಿಕಲ್ ಬೇರೆಯದೇ ಕ್ಷೇತ್ರವಾಗಿದ್ದು, ನಾವು ಒಂದು ಫೀಲ್ಡ್ ಆಯ್ದುಕೊಂಡು ಕಲಿಯಲು ಬಂದಿದ್ದೇವೆ. ಈಗ ಅರ್ಧದಲ್ಲಿ ಬಿಡುವುದಕ್ಕೂ ಆಗದೆ, ಮುಂದುವರಿಸುವುದಕ್ಕೂ ಆಗದೆ ಗೊಂದಲದಲ್ಲಿದ್ದೇವೆ ಎಂದು ಅಲವತ್ತುಕೊಂಡರು.
ಶಿಕ್ಷಣ ಇಲಾಖೆಯ ಅಧಿಕಾರಿಗಳ ಸೂಚನೆಯೆಂದು ಕಾಲೇಜಿನ ಪ್ರಿನ್ಸಿಪಾಲರು ಹೇಳಿದ್ದಾರೆ. ಸರಕಾರದ ಆದೇಶ ಇದೆಯೇ ಎಂದು ಕೇಳಿದರೆ, ಅದು ಇಲ್ಲ ಎನ್ನುತ್ತಿದ್ದಾರೆ. ಶಿಕ್ಷಣ ಅಧಿಕಾರಿಗಳ ಮೌಖಿಕ ಸೂಚನೆಯಂತೆ ಕಾಲೇಜಿನವರು ವಿದ್ಯಾರ್ಥಿಗಳಿಗೆ ತೊಂದರೆ ಕೊಡುತ್ತಿದ್ದಾರೆ. ಇದನ್ನು ಖಂಡಿಸಿ ಮಂಗಳೂರಿನ ಮಿನಿ ವಿಧಾನಸೌಧ ಮುಂಭಾಗದಲ್ಲಿ ಅ.23ರಂದು ಬೆಳಗ್ಗೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಂಎಸ್ ಡಬ್ಲ್ಯು ಪದವಿ ಹಳೆ ವಿದ್ಯಾರ್ಥಿ ನಿಖಿಲ್ ಹೇಳಿದ್ದಾರೆ. ಸರಕಾರಿ ಕಾಲೇಜುಗಳಲ್ಲಿ ಈ ಪದವಿಗೆ 7 ಸಾವಿರ ರೂ. ಫೀಸ್ ಇದ್ದರೆ, ಖಾಸಗಿ ಕಾಲೇಜುಗಳಲ್ಲಿ ಇದೇ ಪದವಿಗೆ 60 ಸಾವಿರ ಶುಲ್ಕ ತೆಗೆದುಕೊಳ್ಳುತ್ತಾರೆ. ಬಡ ವಿದ್ಯಾರ್ಥಿಗಳಿಗೆ ಕಲಿಯುವ ಅವಕಾಶವನ್ನು ಸರಕಾರಿ ಕಾಲೇಜುಗಳಲ್ಲಿ ನಿರಾಕರಿಸುವುದು ಸರಿಯಲ್ಲ ಎಂದವರು ಹೇಳಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಸ್ವಾತಿ, ಪ್ರವೀಣ, ದೀಕ್ಷಿತ, ಮೋಕ್ಷಿತ ಇದ್ದರು.
Lack of lecturers in government colleges in Mangalore, graduate students hold press meet in Mangalore.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm