ಬ್ರೇಕಿಂಗ್ ನ್ಯೂಸ್

Pejawar Seer, Caste Census: ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳಿಗೆ ಮಾತ್ರ ಮಾತನಾಡುವ ಹಕ್ಕಿರುವುದೇ ? ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಮಾತಿಗೆ ಪೇಜಾವರ ಸ್ವಾಮೀಜಿ ಕೌಂಟರ್    |    Mangalore News, Cyber Fraud: ಮಹಾರಾಷ್ಟ್ರದ ಎಸ್ಐ ಎಂದು ಹೇಳಿಕೊಂಡು ಕರೆ, ಮುಂಬೈನಲ್ಲಿ ಸಿಬಿಐ ಕೇಸು ದಾಖಲಾಗಿದ್ದಾಗಿ ನಂಬಿಸಿದ್ದ ವ್ಯಕ್ತಿ ; ತನಿಖೆ ನೆಪದಲ್ಲಿ ಅಪರಿಚಿತರ ಖಾತೆಗೆ 50 ಲಕ್ಷ ಹಣ ಕಳಿಸಿ ಖೋತಾ, ಮಂಗಳೂರಿನಲ್ಲಿ ಬೆನ್ನು ಬೆನ್ನಿಗೆ ಮೋಸದ ಪ್ರಕರಣ    |    Karkala Ajekar Murder case, Crime Udupi: ‘’ನಿನಗೆ ತಕ್ಕ ಶಾಸ್ತಿ ಆಗಲೇಬೇಕು, ಇಲ್ಲಾಂದ್ರೆ ಭಾವನಿಗೆ ಮೋಕ್ಷ ಸಿಗಲಿಕ್ಕಿಲ್ಲ..’’ ಧೂರ್ತ ತಂಗಿಯನ್ನು ವಿಚಾರಣೆ ನಡೆಸಿದ್ದ ಅಣ್ಣನ ಆಡಿಯೋ ವೈರಲ್, ಸೀರಿಯಲ್ ಕತೆ ಮೀರಿಸಿದ ಅಜೆಕಾರು ಕೊಲೆ ಪ್ರಕರಣ, ಆಸ್ಪತ್ರೆಯಲ್ಲಿದ್ದಾಗಲೇ ಕೊಲೆಗೆ ಸ್ಕೆಚ್ !    |   

Pejawar Seer, Caste Census: ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳಿಗೆ ಮಾತ್ರ ಮಾತನಾಡುವ ಹಕ್ಕಿರುವುದೇ ? ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಮಾತಿಗೆ ಪೇಜಾವರ ಸ್ವಾಮೀಜಿ ಕೌಂಟರ್

27-10-24 10:37 pm       Udupi Correspondent   ಕರಾವಳಿ

ಜಾತಿ ಗಣತಿ ವಿಚಾರದಲ್ಲಿ ಪುಡಿ ರಾಜಕಾರಣಿಯಾಗಿ ಮಾತಾಡ್ತಿದ್ದಾರೆ, ಕಾವಿ ಬಟ್ಟೆ ತೊಟ್ಟಿದನ್ನು ಕಳಚಲಿ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಅವರಿಗೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.

ಉಡುಪಿ, ಅ.27: ಜಾತಿ ಗಣತಿ ವಿಚಾರದಲ್ಲಿ ಪುಡಿ ರಾಜಕಾರಣಿಯಾಗಿ ಮಾತಾಡ್ತಿದ್ದಾರೆ, ಕಾವಿ ಬಟ್ಟೆ ತೊಟ್ಟಿದನ್ನು ಕಳಚಲಿ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಅವರಿಗೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.

ಕಾರ್ಯಕ್ರಮ ಒಂದರಲ್ಲಿ ಮಾತನಾಡುತ್ತಿದ್ದಾಗ ಈ ಮಾತು ಉಲ್ಲೇಖಿಸಿದ ಸ್ವಾಮೀಜಿ, ಜಾತ್ಯತೀತ ರಾಷ್ಟ್ರದಲ್ಲಿ ಜಾತಿ ಲೆಕ್ಕ ಯಾಕೆ ಬೇಕಾಗುತ್ತದೆ. ಒಂದೆಡೆ ಜಾತ್ಯತೀತರು ಎಂದು ಹೇಳುವುದು, ಇನ್ನೊಂದೆಡೆ ಅದನ್ನೇ ಎಲ್ಲ ವಲಯದಲ್ಲೂ ಪೋಷಿಸುತ್ತಿದ್ದಾರೆ. ಇದರ ಬಗ್ಗೆ ಲೋಕದ ವ್ಯವಸ್ಥೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದಾಗ, ಜಾತ್ಯತೀತ ವ್ಯವಸ್ಥೆಯಲ್ಲಿ ಜಾತಿ ಲೆಕ್ಕ ಯಾಕೆಂದು ಕೇಳಿದ್ದೇನೆ. ಇದರ ಹಿಂದಿನ ಲೆಕ್ಕ ಅರ್ಥವಾಗಿಲ್ಲ ಎಂದೂ ಹೇಳಿದ್ದೆ. ಹೀಗೆ ಹೇಳಿರುವುದು ತಪ್ಪಂತೆ, ಪುಡಿ ರಾಜಕಾರಣ ಮಾಡುತ್ತಿದ್ದೇನೆ ಎನ್ನುತ್ತಿದ್ದಾರೆ.

ಹಾಗಾದರೆ, ಯಾವುದೇ ವಿಷಯದ ಬಗ್ಗೆ ಮಾತನಾಡಲು ರಾಜಕಾರಣಿಯೇ ಆಗಬೇಕೇ.. ಇದು ಪ್ರಜಾಪ್ರಭುತ್ವ ರಾಷ್ಟ್ರ ಹೌದೋ, ಅಲ್ಲವೋ ಹೇಳಿ. ಹೌದು ಎಂದಾದರೆ ದೇಶದ ಸಾಮಾನ್ಯ ಪ್ರಜೆಗೂ ತನ್ನ ಅಭಿಪ್ರಾಯ ಹೇಳುವ ಹಕ್ಕು ಇದೆ. ಕಾವಿ ತೆಗೆದಿಟ್ಟು ರಾಜಕಾರಣಕ್ಕೆ ಬರಲಿ, ಉತ್ತರ ಕೊಡುತ್ತೇನೆ ಎಂದರೆ, ಏನರ್ಥ. ಸಮಾಜದಲ್ಲಿ ರಾಜಕಾರಣಿಗಳಿಗೆ ಮಾತ್ರ ಮಾತನಾಡುವ ಹಕ್ಕು ಇರುವುದು. ಪ್ರಜೆಗಳಿಗೆ ಮಾತನಾಡಲು ಅವಕಾಶ ಇಲ್ಲವೆಂದು ಹೇಳಿಬಿಡಲಿ. ಪೀಠಾಧಿಪತಿಗೆ ಅಲ್ಲ, ಸಾಮಾನ್ಯ ನಾಗರಿಕನಿಗೂ ಮಾತನಾಡುವ ಹಕ್ಕು ಇದೆ. ದೇವರೇ ಅವರಿಗೂ ಸದ್ಬುದ್ಧಿ ಕೊಡಲಿ ಎಂದು ಹೇಳುತ್ತೇನೆ ಎಂಬುದಾಗಿ ವಿಶ್ವಪ್ರಸನ್ನ ತೀರ್ಥ ಹೇಳಿದ್ದಾರೆ.  

ವಾರದ ಹಿಂದೆ ಜಾತಿ ಗಣತಿ ವಿಚಾರದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಸ್ವಾಮೀಜಿ ಜಾತಿ ಗಣತಿ ಯಾಕೆ ಬೇಕೆಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ಮುಖಂಡ ಹರಿಪ್ರಸಾದ್, ಸ್ವಾಮೀಜಿ ತಮ್ಮ ಮಠದಲ್ಲೇ ಪಂಕ್ತಿ ಭೇದ ಮಾಡುವುದು, ಮಡೆಸ್ನಾನ ಮಾಡಿಸುವ ವಿಚಾರವನ್ನು ನೋಡಿಕೊಳ್ಳಲಿ. ಆಬಳಿಕ ಜಾತಿ ಗಣತಿ ಬಗ್ಗೆ ಹೇಳಲಿ. ಬಹಳಷ್ಟು ನಂಬಿಕೆ ಇಟ್ಟಿರುವ ಸ್ವಾಮೀಜಿ ಸ್ಥಾನದಲ್ಲಿರುವ ವ್ಯಕ್ತಿ ಪುಡಿ ರಾಜಕಾರಣಿ ರೀತಿ ಮಾತನಾಡಬಾರದು ಎಂದು ಕಿಡಿಕಾರಿದ್ದರು.

Expressing his dismay over recent comments made by a political leader regarding his views on the caste census, Sri Vishwaprasanna Teertha Swamiji of Pejawar Mutt questioned whether it is wrong to express one’s opinion in a democracy.