ಬ್ರೇಕಿಂಗ್ ನ್ಯೂಸ್
01-11-24 08:17 pm Mangalore Correspondent ಕರಾವಳಿ
ಮಂಗಳೂರು, ನ.1: ಉಳ್ಳಾಲದ ವಿಶಿಷ್ಟ ಸಮಾಜ ಸೇವಕ ಬಾಬು ಪಿಲಾರ್ ಅವರನ್ನು ಕರ್ನಾಟಕ ಸುವರ್ಣ ಸಂಭ್ರಮ ಹೆಸರಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಗಾಗಿ ಬೆಂಗಳೂರಿಗೆ ಕರೆಸಿಕೊಂಡು ಅಧಿಕಾರಿಗಳು ಅವಮಾನಿಸಿದ್ದಾರೆ. ತಮ್ಮಷ್ಟಕ್ಕೇ ಕೆಲಸ ಮಾಡಿಕೊಂಡಿದ್ದ ಬಾಬು ಪಿಲಾರ್ ಅವರನ್ನು ಗುರುವಾರ ರಾತ್ರಿ ಬೆಂಗಳೂರಿನಿಂದ ಅಧಿಕಾರಿಗಳು ಫೋನ್ ಮಾಡಿ ಕರೆಸಿಕೊಂಡಿದ್ದರು. ಆದರೆ, ಕೊನೆಕ್ಷಣದಲ್ಲಿ ನಿಮ್ಮ ಹೆಸರು ಬದಲಾಗಿದೆ, ತಪ್ಪಾಗಿದೆ ಕ್ಷಮಿಸಿ ಎಂದು ಹೇಳಿ ಬೇರೆಯವರಿಗೆ ಪ್ರಶಸ್ತಿ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ರಾಜ್ಯದ ವಿವಿಧೆಡೆಯ ಸಾಧಕರನ್ನು ಕರೆಸಿ, ಕರ್ನಾಟಕ -50ರ ಸುವರ್ಣ ಸಂಭ್ರಮ ಎಂಬ ಹೆಸರಲ್ಲಿ ಪ್ರಶಸ್ತಿ ಕೊಡುವ ಸಮಾರಂಭ ಏರ್ಪಡಿಸಲಾಗಿತ್ತು. ನ.1ರ ಸಂಜೆ ವಿಧಾನಸೌಧ ಆವರಣದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ಬಾಬು ಪಿಲಾರ್ ಅವರು ಮಂಗಳೂರು ಹೊರವಲಯದ ತೊಕ್ಕೊಟ್ಟಿನಲ್ಲಿ ನಿಸ್ವಾರ್ಥವಾಗಿ ಸಾವಿರಾರು ಅನಾಥ ಮತ್ತು ಬಡವರ ಶವಗಳ ಅಂತ್ಯವಿಧಿ ನೆರವೇರಿಸುವ ಮೂಲಕ ತಮ್ಮಷ್ಟಕ್ಕೇ ಸಮಾಜ ಸೇವೆಯಲ್ಲಿ ತೊಡಗಿದ್ದರು. ಇವರನ್ನು ಗುರುತಿಸಿ ರಾಜ್ಯ ಮಟ್ಟದಲ್ಲಿ ಸುವರ್ಣ ಸಂಭ್ರಮ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಸ್ತುತ್ಯರ್ಹವೇ ಆಗಿತ್ತು.
ಗುರುವಾರ (ಅ.31) ರಾತ್ರಿ ಸ್ವತಃ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಯೆಂದು ನೀಲಮ್ಮ ಎಂಬವರು ಬೆಂಗಳೂರಿನಿಂದ ಫೋನ್ ಕರೆ ಮಾಡಿ ಬಾಬು ಪಿಲಾರ್ ಅವರನ್ನು ತುರ್ತಾಗಿ ಬೆಂಗಳೂರಿಗೆ ಬರುವಂತೆ ಆಹ್ವಾನ ನೀಡಿದ್ದರು. ಸರಿಯಾಗಿ ನೋಡಿಕೊಳ್ಳಿ, ನನ್ನದೇ ಹೆಸರು ಇದೆಯಲ್ವಾ ಎಂದು ಬಾಬು ಪಿಲಾರ್ ಮತ್ತೆ ಅಧಿಕಾರಿಯಲ್ಲಿ ಸ್ಪಷ್ಟನೆಯನ್ನೂ ಕೇಳಿದ್ದರು. ಆದರೆ, ನಿಮ್ಮದೇ ಹೆಸರು, ಬಾಬು ಕಿಲಾರ್ ಅಂತ ಲಿಸ್ಟಲ್ಲಿ ಬಂದಿದೆ ಎಂದು ಅಧಿಕಾರಿ ಮರುತ್ತರ ನೀಡಿದ್ದರು. ಅದರಂತೆ, 55ರ ವಯಸ್ಸಿನ ಬಾಬು ಪಿಲಾರ್ ಬೆಂಗಳೂರಿಗೆ ಬಸ್ ಹತ್ತಿದ್ದು, ವಿಧಾನಸೌಧ ಬಳಿಯಲ್ಲೇ ಇತರ ಪ್ರಶಸ್ತಿ ವಿಜೇತರಿಗೆ ಮಾಡಲಾಗಿದ್ದ ಕುಮಾರಕೃಪಾ ಸರಕಾರಿ ಅತಿಥಿ ಬಂಗಲೆಯಲ್ಲೇ ರೂಮ್ ಬುಕ್ ಮಾಡಿಕೊಟ್ಟಿದ್ದರು. ಮಧ್ಯಾಹ್ನ ಹೊತ್ತಿಗೆ ಬಾಬು ಪಿಲಾರ್ ಅವರಿಗೆ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರ ಪಿಎ ಕಿರಣ್ ಎಂಬವರು ಫೋನ್ ಮಾಡಿದ್ದು, ಬಾಬು ಕಿಲಾರ್ ಅಂತ ಬೇರೊಬ್ಬರು ವ್ಯಕ್ತಿ ಇದ್ದಾರೆ. ಮಂಡ್ಯ ಜಿಲ್ಲೆಯ ಕಿಲಾರದವರು. ಅಮೆರಿಕದಲ್ಲಿ ನೆಲೆಸಿದ್ದಾರೆ. ಅವರು ಪ್ರಶಸ್ತಿ ಪಡೆಯಲು ಬಂದಿದ್ದು ನಿಮ್ಮ ಹೆಸರು ತಪ್ಪಾಗಿ ಬಂದಿದೆ ಎಂದು ಹೇಳಿದ್ದಾರೆ.
ಇದರಿಂದ ಬಾಬು ಪಿಲಾರ್ ಅವರಿಗೆ ತೀವ್ರ ಬೇಸರವಾಗಿದ್ದು, ತನ್ನನ್ನು ಅಧಿಕಾರಿಗಳು ಯಾಕೆ ಕರೆದಿದ್ದಾರೆ. ನಾನೇನಾದರೂ ಇವರಲ್ಲಿ ಪ್ರಶಸ್ತಿ ಕೇಳಿಕೊಂಡು ಬಂದಿದ್ದೆನಾ ಎಂದು ಬೇಸರಿಸಿದ್ದಾರೆ. ಅಧಿಕಾರಿ ನೀಲಮ್ಮ ಅವರಲ್ಲಿ ಪ್ರತಿಕ್ರಿಯೆ ಕೇಳಿದಾಗ, ಅದು ಹೇಗೆ ಎಡವಟ್ಟು ಆಯ್ತು ಅನ್ನೋದು ಗೊತ್ತಿಲ್ಲ. ಈಗ ಅವಾರ್ಡ್ ಫಂಕ್ಷನ್ನಲ್ಲಿದ್ದೇನೆ. ಏನೋ ತಪ್ಪಾಗಿದೆ ಎಂದಿದ್ದಾರೆ. ಕಿರಣ್ ಅವರು ಫೋನ್ ಕರೆ ಸ್ವೀಕರಿಸಿಲ್ಲ. ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಗಳಲ್ಲಿ ಮಾಹಿತಿ ಕೇಳಿದಾಗ, ಬಾಬು ಪಿಲಾರ್ ಅವರನ್ನು ಕರೆಸಿಕೊಂಡಿದ್ದೇ ಗೊತ್ತಿಲ್ಲ. ನಮ್ಮ ಕಡೆಯಿಂದ ಇಲಾಖೆಯವರು ಮಾಹಿತಿ ಕೇಳಿಲ್ಲ. ನೇರವಾಗಿ ಫೋನ್ ಮಾಡಿ ಕರೆಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಶಸ್ತಿಗೆ ಬಾಬು ಪಿಲಾರ್ ಅವರನ್ನು ಆಯ್ಕೆಗೊಳಿಸಿ ಪಟ್ಟಿಯಲ್ಲಿ ಹೆಸರು ಬಂದಿತ್ತು. ಆದರೆ, ಅ.31ರ ರಾತ್ರಿ ಬೆಂಗಳೂರಿನಿಂದ ಬಾಬಣ್ಣರನ್ನು ಫೋನ್ ಮಾಡಿ ಕರೆಸಿದ್ದು ತಿಳಿಯುತ್ತಲೇ ಜಿಲ್ಲಾ ಪ್ರಶಸ್ತಿಯನ್ನು ಕ್ಯಾನ್ಸಲ್ ಮಾಡಲಾಗಿತ್ತು. ಉಳ್ಳಾಲ ಶಾಸಕ, ಸ್ಪೀಕರ್ ಯುಟಿ ಖಾದರ್ ಅವರ ಬೆಂಬಲಿಗರ ಕಡೆಯಿಂದಲೇ ಬಾಬು ಪಿಲಾರ್ ಹೆಸರು ರಾಜ್ಯಕ್ಕೆ ಹೋಗಿತ್ತೋ ಗೊತ್ತಿಲ್ಲ. ಬೆಂಗಳೂರಿನ ಅಧಿಕಾರಿಗಳಿಗೆ ಬಾಬು ಪಿಲಾರ್ ನಂಬರ್, ಪ್ರೊಫೈಲ್ ಹೇಗೆ ಸಿಕ್ಕಿತ್ತೋ ಅದೂ ತಿಳಿದಿಲ್ಲ. ಜಿಲ್ಲಾ ಪ್ರಶಸ್ತಿಗೆ ಶಿಫಾರಸು ಆಗಿದ್ದ ಹೆಸರು ರಾಜ್ಯಕ್ಕೆ ಹೋಗಿ ಎಡವಟ್ಟಾಗಿರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಒಬ್ಬ ನಿಸ್ವಾರ್ಥ ಸಮಾಜ ಸೇವಕನನ್ನು ಪ್ರಶಸ್ತಿ ಕೊಡುತ್ತೇವೆಂದು ಬೆಂಗಳೂರಿಗೆ ಕರೆಸಿ ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿಗಳು ಅವಮಾನಿಸಿದ್ದು ಮಾತ್ರ ಅಕ್ಷಮ್ಯ.
Government cancels to give Babu Pilar Karnataka Sambrama Award in Bangalore. Babu was recipient of state award in Bangalore. Babu Pilar was disappointed after his name was dropped out of list.
18-09-25 05:34 pm
Bangalore Correspondent
Ksrtc Bus, Driver, Heart Attack: ಬಸ್ ಓಡಿಸುವಾಗ...
17-09-25 06:02 pm
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
18-09-25 08:14 pm
HK News Desk
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
18-09-25 11:11 pm
Mangalore Correspondent
Mangalore, UT Khader: ಹಿಂದುಳಿದ ವರ್ಗಗಳ ಆಯೋಗ ಸ್...
18-09-25 09:12 pm
ಮಾಜಿ ಸೈನಿಕರಿಗೆ ಸರ್ಕಾರಿ ಸವಲತ್ತು ನೀಡದೆ ನಿರ್ಲಕ್ಷ...
18-09-25 09:09 pm
Banglegudde, Dharmasthala, SIT: ಬಂಗ್ಲೆಗುಡ್ಡೆ...
18-09-25 07:40 pm
Ajith Kumar Rai, Mangalore: ಬಂಟ- ನಾಡವರು ಒಂದೇ,...
18-09-25 06:11 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm