ಬ್ರೇಕಿಂಗ್ ನ್ಯೂಸ್
02-11-24 05:35 pm Mangalore Correspondent ಕರಾವಳಿ
ಉಳ್ಳಾಲ, ನ.2: ಪೊಲೀಸ್ ಮತ್ತು ಪತ್ರಕರ್ತರು ವೃತ್ತಿಯಲ್ಲಿರುವಷ್ಟು ದಿನ ಮಾತ್ರವೇ ಸಮಾಜದಲ್ಲಿ ಅವರಿಗೆ ಗೌರವ ಸಿಗುತ್ತೆ. ಆದರೆ ಪತ್ರಕರ್ತ ಮನೋಹರ ಪ್ರಸಾದ್ ನಿಧನ ಹೊಂದಿದರೂ ಅವರನ್ನ ಸಂಸ್ಮರಣೆ ನಡೆಸಿರೋದು ನಿಜಕ್ಕೂ ಹೆಮ್ಮೆಯ ವಿಚಾರ. ಕವಿ, ಕಥೆಗಾರ, ನಟ, ನಿರೂಪಕನಾಗಿದ್ದ ಮನೋಹರ ಪ್ರಸಾದ್ ಅವರು ಕೇವಲ ಪತ್ರಕರ್ತರಲ್ಲದೆ ಜಿಲ್ಲೆಯಲ್ಲೇ ಓರ್ವ ಪ್ರಸಿದ್ಧ ಸೆಲೆಬ್ರಿಟಿಯಾಗಿ ಮಿಂಚಿದ್ದರು ಎಂದು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ, ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಅಭಿಪ್ರಾಯಪಟ್ಟರು.
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶುಕ್ರವಾರ ಕುತ್ತಾರುವಿನ ಖಾಸಗಿ ಸಭಾಂಗಣದಲ್ಲಿ ನಡೆದ ಪತ್ರಿಕಾರಂಗದ ಭೀಷ್ಮ ದಿ. ಮನೋಹರ ಪ್ರಸಾದ್ ಸಂಸ್ಮರಣೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಮನೋಹರ್ ಅವರು ಉತ್ತಮ ವರದಿಗಾರರಲ್ಲದೆ ಬಹುಮುಖ ಪ್ರತಿಭೆಯಾಗಿದ್ದು, ಕವಿ, ಕಥೆಗಾರರಾಗಿದ್ದರು. ಎಷ್ಟೇ ಪ್ರೇಕ್ಷಕರನ್ನೂ ಹಿಡಿದಿಟ್ಟು ಕೊಳ್ಳುವಂತಹ ಕಾರ್ಯಕ್ರಮ ನಿರೂಪಣೆ ಅವರದ್ದಾಗಿತ್ತು. ಒಳ್ಳೆಯ ಉಪನ್ಯಾಸಕರೂ ಆಗಿದ್ದ ಅವರು ಸಿನೆಮಾಗಳಲ್ಲೂ ನಟಿಸಿದಲ್ಲದೆ, ನಾಟಕ ಬರೆದು ಯಕ್ಷಗಾನಗಳಲ್ಲೂ ಅಭಿನಯಿಸಿದ್ದರು. ಸುಲಲಿತ, ಸ್ಪಷ್ಟವಾಗಿ ಮಾತನಾಡುತ್ತಿದ್ದ ಅವರು ಕನ್ನಡ ಭಾಷೆಗೆ ಅದ್ಭುತ ಕೊಡುಗೆ ನೀಡಿದ್ದಾರೆ. ಗತಿಸಿ ಹೋದ ಯಾವುದೇ ಘಟನೆಗಳ ದಿನಾಂಕ, ಇಸವಿಗಳನ್ನ ಅವರಲ್ಲಿ ಕೇಳಿದರೆ ಥಟ್ ಅಂತ ಹೇಳುವ ಅಗಾಧ ಸ್ಮರಣ ಶಕ್ತಿ ಹೊಂದಿದ್ದರು. ಪತ್ರಕರ್ತರ ಸೇವೆಯನ್ನೂ ಪರಿಗಣಿಸಿ ಸರಕಾರವು ಅಂತ್ಯ ಸಂಸ್ಕಾರದಲ್ಲಿ ಸರಕಾರಿ ಗೌರವ ಸಲ್ಲಿಸುತ್ತದೆ ಎಂಬುದಕ್ಕೆ ಮನೋಹರ್ ಪ್ರಸಾದ್ ಅವರೇ ನಿದರ್ಶನ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಕೇವಲ ಭಾಷೆಗೋಸ್ಕರ ದಿನಾಚರಣೆಗಳು ಆಗಬಾರದು. ಕನ್ನಡ ರಾಜ್ಯೋತ್ಸವ ಆಚರಣೆಗಳ ಮುಖೇನ ನಾಡಿನ ಸಂಸ್ಕೃತಿಯನ್ನ ನಿರಂತರವಾಗಿ ಎತ್ತಿ ಹಿಡಿಯಬೇಕಿದೆ. ಸಾಮಾಜಿಕ ಜಾಲತಾಣಗಳು ಹುಟ್ಟಿಕೊಳ್ಳುವ ಮೊದಲೇ ನಾಡಿನ ಸಂಸ್ಕೃತಿಯನ್ನ ಎಲ್ಲೆಡೆಗೆ ಪಸರಿಸುವ ಕಾರ್ಯವನ್ನ ಪತ್ರಕರ್ತರು ಮಾಡಿದ್ದಾರೆ. ಅದೆಷ್ಟೋ ಕಲಾವಿದರು, ಸಾಹಿತಿಗಳನ್ನ ಸಮಾಜಕ್ಕೆ ಪರಿಚಯಿಸಿದ ಕೀರ್ತಿ ಪತ್ರಕರ್ತ ಮನೋಹರ ಪ್ರಸಾದ್ ಅವರಿಗೆ ಸಲ್ಲುತ್ತದೆ ಎಂದರು.
ನಿವೃತ್ತ ಪತ್ರಕರ್ತ, ಸಾಹಿತಿ ಮಲಾರ್ ಜಯರಾಮ ರೈ, ಮಾಧ್ಯಮದ ಹಿರಿಯ ಛಾಯಾಗ್ರಾಹಕ ಜಯಂತ್ ಉಳ್ಳಾಲ್, ವೃತ್ತಿಪರ ಹಿರಿಯ ಛಾಯಾಗ್ರಾಹಕ ಜಾನ್ ಡಿಸೋಜ ಅವರನ್ನ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸ್ವಾಗತಾಧ್ಯಕ್ಷರು, ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷರಾದ ವಸಂತ್ ಎನ್.ಕೊಣಾಜೆ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಳ್ಳಾಲ ವಲಯದ ಉಪಾಧ್ಯಕ್ಷ ರಾಜೇಶ್ ಮುಖ್ಯ ಅತಿಥಿಗಳಾಗಿದ್ದರು. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷರಾದ ದಿನಕರ ಉಳ್ಳಾಲ್, ಗೌರವ ಉಪಾಧ್ಯಕ್ಷರಾದ ಸದಾನಂದ ಬಂಗೇರ, ಹೈದರ್ ಪರ್ತಿಪ್ಪಾಡಿ, ಉಪಾಧ್ಯಕ್ಷರಾದ ಆಲಿಯಬ್ಬ ಮತ್ತು ದೇವಕಿ ಉಳ್ಳಾಲ್, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Mangalore Journalist Manohar Prasad memorial program held at Ullal press club by abakka samiti.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 07:08 pm
Mangalore Correspondent
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm