ಬ್ರೇಕಿಂಗ್ ನ್ಯೂಸ್
06-11-24 08:23 pm Mangalore Correspondent ಕರಾವಳಿ
ಮಂಗಳೂರು, ನ.6: ಬೆಳ್ತಂಗಡಿ ತಾಲೂಕಿನ ಸೌತಡ್ಕ ಬಯಲು ಗಣಪತಿ ದೇವಸ್ಥಾನದಲ್ಲಿ ಆಸ್ತಿ ವಿವಾದ ತಲೆದೋರಿದೆ. ದೇವಾಲಯದ ಉಪಯೋಗಕ್ಕಾಗಿ ಈ ಹಿಂದೆ ಭಕ್ತರ ದೇಣಿಗೆ ಹಣದಿಂದ ಖರೀದಿಸಲಾಗಿದ್ದ 3.46 ಎಕರೆ ಜಮೀನನ್ನು ಅಕ್ರಮವಾಗಿ ಖಾಸಗಿ ಟ್ರಸ್ಟ್ ಗಳಿಗೆ ಹಸ್ತಾಂತರ ಮಾಡಲಾಗಿದ್ದು, ಅದನ್ನು ಮರಳಿ ದೇವರ ಹೆಸರಲ್ಲೇ ನೋಂದಣಿ ಮಾಡಿಸಬೇಕು ಎಂದು ಆಗ್ರಹಿಸಿ ನ.11ರಿಂದ ಅನಿರ್ದಿಷ್ಟ ಧರಣಿ ನಡೆಸಲು ಸೌತಡ್ಕ ದೇವಸ್ಥಾನ ಸಂರಕ್ಷಣಾ ವೇದಿಕೆ ತೀರ್ಮಾನಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ವೇದಿಕೆ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ದೇವಾಲಯಕ್ಕಾಗಿ 2004ರಲ್ಲಿ ಭಕ್ತರ ದೇಣಿಗೆ ಹಣದಿಂದ 3.46 ಎಕರೆ ಜಾಗ ಖರೀದಿಸಲಾಗಿತ್ತು. ಅದರಲ್ಲಿ ದೇವಾಲಯದ ಸ್ವಂತ ಖರ್ಚಿನಿಂದಲೇ ವಾಣಿಜ್ಯ ಕಟ್ಟಡ, ವಸತಿ ಗೃಹ ನಿರ್ಮಾಣವಾಗಿದೆ. ಆದರೆ ಅದರ ಆದಾಯ ದೇವಾಲಯಕ್ಕೆ ಸಿಗದೆ ಖಾಸಗಿ ಟ್ರಸ್ಟ್ ಗೆ ಸಂದಾಯವಾಗುತ್ತಿದೆ. ಆ ಜಾಗವನ್ನು ಖಾಸಗಿ ಟ್ರಸ್ಟ್ ಒಂದಕ್ಕೆ ಹಸ್ತಾಂತರಿಸಿರುವುದು ಮುಜರಾಯಿ ದೇವಾಲಯಕ್ಕೆ ಅಪಚಾರ. ದೇವಸ್ಥಾನ ಮುಜರಾಯಿ ಇಲಾಖೆ ಅಧೀನದಲ್ಲಿದ್ದು, ಸರ್ಕಾರವು ಮಧ್ಯಪ್ರವೇಶಿಸಿ ಈ ಬಗ್ಗೆ ತನಿಖೆ ನಡೆಸಿ ದೇಗುಲದ ಆಸ್ತಿ ಮರಳಿ ಪಡೆಯುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಸೌತಡ್ಕ ಮಹಾಗಣಪತಿ ಬಯಲು ದೇಗುಲಕ್ಕೆ ಭಕ್ತರ ದಟ್ಟಣೆ ಹೆಚ್ಚಿದ ಹಿನ್ನೆಲೆಯಲ್ಲಿ 2004ರಲ್ಲಿ ದೇವಾಲಯ ಆಡಳಿತ ಮಂಡಳಿ ಸಭೆ ನಡೆಸಿ ಸಮೀಪದ ಲಭ್ಯ ಜಮೀನನ್ನು ಖರೀದಿಸುವ ತೀರ್ಮಾನ ಮಾಡಿತ್ತು. ದೇವಾಲಯ ಎದುರು ಭಾಗದಲ್ಲಿ ಸ್ಥಿರಾಸ್ತಿ ಹೊಂದಿದ್ದ ಮ್ಯಾಕ್ಸಿಂ ಥಾಮಸ್ ಲೋಬೊ ಎಂಬವರು ತಮ್ಮ 3.46 ಎಕರೆ ಜಮೀನು ಮಾರಾಟಕ್ಕೆ ಮುಂದೆ ಬಂದಿದ್ದರು. ಆದರೆ ದೇವಾಲಯದ ಖಜಾನೆಯಲ್ಲಿ ಸಾಕಷ್ಟು ಹಣ ಇಲ್ಲದ ಕಾರಣ ಆಗಿನ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದ ವಾಸುದೇವ ಶಬರಾಯ, ಸದಸ್ಯರಾದ ರಾಘವ ಕೆ. ಮತ್ತು ವಿಶ್ವನಾಥ ಕೆ. ಅವರ ಹೆಸರಿನಲ್ಲಿ ಪ್ರತ್ಯೇಕವಾಗಿ (1.23 ಎಕರೆ, 1.23 ಎಕರೆ ಮತ್ತು 1 ಎಕರೆಯಂತೆ ಭಾಗ ಮಾಡಿ) ಭೂಮಿ ನೋಂದಣಿ ಮಾಡಲಾಗಿತ್ತು.
ದೇವಾಲಯಕ್ಕೆ ಸಂಬಂಧಿಸಿದ ಸ್ಥಿರಾಸ್ತಿಯನ್ನು ಖಾಸಗಿ ವ್ಯಕ್ತಿಗಳ ಹೆಸರಲ್ಲಿ ನೋಂದಣಿ ಮಾಡಿದ್ದನ್ನು ಭಕ್ತರು ಪ್ರಶ್ನಿಸಿದ್ದರಿಂದ 2006ರಲ್ಲಿ ಈ ಮೂವರು ದೇವಾಲಯ ಹೆಸರಿನಲ್ಲಿ ದಾನಪತ್ರ ಮಾಡಲು ಮುಂದಾಗಿದ್ದರು. ಕೃಷಿ ಭೂಮಿಯನ್ನು ದೇಗುಲದ ಹೆಸರಲ್ಲಿ ನೋಂದಣಿಗೆ ಅವಕಾಶ ಇಲ್ಲ ಎಂದು ತಿಳಿದು ಆಡಳಿತ ಸಮಿತಿಯವರು ಸೇರಿ ‘ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್’ ರಚಿಸಿದ್ದರು. ಖರೀದಿ ಮಾಡಿದ ಜಾಗದಲ್ಲಿ ದೇವಾಲಯದ ಸ್ವಂತ ಖರ್ಚಿನಿಂದ ವಸತಿ ಗೃಹ, ವಾಣಿಜ್ಯ ಕಟ್ಟಡ, ರಬ್ಬರ್ ಕೃಷಿ ಮಾಡಲಾಗಿದ್ದು, ಅಂದಿನಿಂದ ಇದುವರೆಗೂ ಇದರ ಯಾವ ಆದಾಯವೂ ದೇವಾಲಯಕ್ಕೆ ಬರದೆ ಖಾಸಗಿ ಟ್ರಸ್ಟ್ ಸಂದಾಯವಾಗುತ್ತಿದೆ ಎಂದು ಸುಬ್ರಹ್ಮಣ್ಯ ಶಬರಾಯ ತಿಳಿಸಿದರು.
ದೇವಾಲಯ ಜಾಗ ವಿದ್ಯಾಸಂಸ್ಥೆಗೆ
ಜಮೀನನ್ನು ತಮ್ಮ ಹೆಸರಿಗೆ ಮಾಡಿದ ಮೂವರ ಪೈಕಿ ವಾಸುದೇವ ಶಬರಾಯರು 2009ರಲ್ಲಿ ತೀರಿಕೊಂಡಿದ್ದರು. ಅವರು ಉಯಿಲು ಬರೆದಿಟ್ಟ ಪ್ರಕಾರ, ಅವರ ಹೆಸರಿನಲ್ಲಿದ್ದ 1.23 ಎಕರೆ ಜಮೀನು ‘ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್’ಗೆ ನೋಂದಣಿಯಾಗಿತ್ತು. ಈ ಪೈಕಿ ಉಳಿದ 1.23 ಎಕರೆಯನ್ನು ತನ್ನ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದ ರಾಘವ ಕೆ. ಎಂಬವರು ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಯ ಹೆಸರಿಗೆ ಆ ಜಮೀನನ್ನು ದಾನಪತ್ರದ ಮೂಲಕ ವರ್ಗಾಯಿಸಿದ್ದಾರೆ. ಉಳಿಕೆ ಒಂದು ಎಕರೆ ಜಾಗ ನೋಂದಣಿ ಮಾಡಿಕೊಂಡಿದ್ದ ವಿಶ್ವನಾಥ ಕೆ. ದೇವಾಲಯದ ಹೆಸರಿಗೆ ವರ್ಗಾಯಿಸಲು ಬದ್ಧರಿದ್ದಾರೆ. ಆದರೆ ಉಳಿದಿಬ್ಬರ ಹೆಸರಿನಲ್ಲಿದ್ದ 2.46 ಎಕರೆ ಜಮೀನು ಕೂಡ ದೇವಾಲಯ ಹೆಸರಿಗೆ ಬರಬೇಕು ಎಂದು ಶಬರಾಯ ಒತ್ತಾಯಿಸಿದರು.
ಸೌತಡ್ಕ ಕ್ಷೇತ್ರದ ಭಕ್ತರ ದೇಣಿಗೆಯ ಹಣದಲ್ಲಿ ಭೂಮಿ ಖರೀದಿಸಿ, ದೇಣಿಗೆಯಿಂದಲೇ ವಾಣಿಜ್ಯ ಕಟ್ಟಡ ನಿರ್ಮಾಣವಾಗಿದ್ದು, ಅದರ ಆದಾಯ ಮಾತ್ರ ಖಾಸಗಿ ಟ್ರಸ್ಟ್ ಗಳಿಗೆ ಸಂದಾಯವಾಗುತ್ತಿರುವುದು ಖಂಡನೀಯ. ದೇವಾಲಯ ಹಾಗೂ ಭಕ್ತರಿಗೆ ಈ ಮೂಲಕ ವಂಚನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ರಚಿಸಿ ಹೋರಾಟಕ್ಕೆ ಅಣಿಯಾಗಿದ್ದೇವೆ. ದೇವರ ಆಸ್ತಿ ದೇವರಿಗೇ ಸಲ್ಲಬೇಕು ಎಂಬುದಷ್ಟೇ ನಮ್ಮ ಆಗ್ರಹ ಎಂದು ಸುಬ್ರಹ್ಮಣ್ಯ ಶಬರಾಯ ಒತ್ತಾಯಿಸಿದರು. ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ಉಪಾಧ್ಯಕ್ಷ ಪ್ರಶಾಂತ್ ರೈ, ಪ್ರಧಾನ ಕಾರ್ಯದರ್ಶಿ ಶ್ಯಾಮರಾಜ್, ಖಜಾಂಚಿ ವಿಶ್ವನಾಥ, ಸದಸ್ಯ ಶ್ರೀವತ್ಸ ಇದ್ದರು.
Mangalore Property Dispute in Sowthadka Temple in Belthangady, protest on November 11. There is a property dispute in Southadka Bayalu Ganapati temple of Beltangady taluk. 3.46 acres of land, which was earlier purchased with the donations of devotees for the use of the temple
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 04:38 pm
Mangalore Correspondent
India’s Largest Job Fair ‘Alva’s Pragati 2025...
26-07-25 11:37 am
Congress, Mangalore: ಸಿದ್ದರಾಮಯ್ಯ ಆಡಳಿತದಲ್ಲೇ ದ...
26-07-25 10:44 am
Dharmasthala Case, SIT Meeting, Anucheth, Jit...
25-07-25 08:25 pm
DIG Anucheth Mangalore, SIT Dharmasthala: ಎಸ್...
25-07-25 06:05 pm
24-07-25 10:38 pm
Bangalore Correspondent
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm
Udupi Police, Chaddi Gang: ಉಡುಪಿಗೆ ಎಂಟ್ರಿ ಕೊಟ...
23-07-25 11:36 am