ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದಿನಿಂದ ವಾರ್ಷಿಕ ಜಾತ್ರೆ ; ಸರ್ಪ ಸಂಸ್ಕಾರ ಇರಲ್ಲ

12-12-20 04:05 pm       Mangalore Correspondent   ಕರಾವಳಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.20ರಂದು ಚಂಪಾ ಷಷ್ಠಿ ಮಹಾರಥೋತ್ಸವ ನಡೆಯಲಿದೆ.

ಸುಬ್ರಹ್ಮಣ್ಯ, ಡಿ.12: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದಿನಿಂದ ವಾರ್ಷಿಕ ಜಾತ್ರೆ ಆರಂಭಗೊಂಡಿದ್ದು, ಡಿ.20ರಂದು ಚಂಪಾ ಷಷ್ಠಿ ಮಹಾರಥೋತ್ಸವ ನಡೆಯಲಿದೆ.

13ರಂದು ಶೇಷವಾಹನ ಯುಕ್ತ ಬಂಡಿ ಉತ್ಸವ, 14ರಂದು ಲಕ್ಷದೀಪೋತ್ಸವ, 15ರಂದು ಶೇಷ ವಾಹನೋತ್ಸವ, 16ರಂದು ಅಶ್ವ ವಾಹನೋತ್ಸವ, 17ರಂದು ಮಯೂರ ವಾಹನೋತ್ಸವ, 18ರಂದು ಚೌತಿ ಹೂವಿನ ತೇರಿನ ಉತ್ಸವ, 18ರಂದು ತೈಲಾಭ್ಯಂಜನ, ರಾತ್ರಿ ಪಂಚಮಿ ರಥೋತ್ಸವ, 21ರಂದು ಅವಭೃತೋತ್ಸವ, ನೌಕಾವಿಹಾರ ಜರಗಲಿದೆ. 26ರಂದು ಕೊಪ್ಪರಿಗೆ ಇಳಿಯುವುದರೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.

ಸರ್ಪ ಸಂಸ್ಕಾರ ಇರುವುದಿಲ್ಲ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.12ರಿಂದ 26ರ ವರೆಗೆ ಚಂಪಾಷಷ್ಠಿ ಉತ್ಸವ ಇರುವುದರಿಂದ ಈ ಸಮಯದಲ್ಲಿ ಸರ್ಪ ಸಂಸ್ಕಾರ ಇರುವುದಿಲ್ಲ. ಇತರೇ ಸೇವೆಗಳು ಎಂದಿನಂತೆ ನಡೆಯಲಿವೆ. ಚಂಪಾಷಷ್ಠಿ ದಿನ ನಾಗ ಪ್ರತಿಷ್ಠಾಪನೆ ಮತ್ತು ಆಶ್ಲೇಷ ಬಲಿ ಸೇವೆಗಳು ನಡೆಯುವುದಿಲ್ಲ