ಬ್ರೇಕಿಂಗ್ ನ್ಯೂಸ್
07-11-24 07:27 pm Mangalore Correspondent ಕರಾವಳಿ
ಉಳ್ಳಾಲ, ನ.7: ಸಮಾಜದಿಂದ ಯಾವುದೇ ಪ್ರತಿಫಲ ನಿರೀಕ್ಷಿಸದೆ ಅಶಕ್ತ ವರ್ಗದವರ ಸೇವೆಯನ್ನು ನಡೆಸುತ್ತಾ ಬಂದಿರುವೆನು. ಅತ್ಯಂತ ಸರಳತೆಯಿಂದ ಬದುಕುವುದೇ ನನ್ನ ಜಿವನದ ಉದ್ದೇಶ. ಸಮಾಜದಲ್ಲಿ ಗುರುತಿಸಬೇಕೆಂಬ ಉದ್ದೇಶದಿಂದ ಯಾರಿಗೂ ಸಹಾಯ ಮಾಡಿಲ್ಲ. ಬಾಲ್ಯದಲ್ಲಿ ಅನುಭವಿಸಿದ ಸಂಕಷ್ಟದ ದಿನಗಳ ಅನುಭವಗಳೇ ಸಮಾಜ ಸೇವೆ ಮಾಡಲು ಪ್ರೇರೇಪಣೆ ನೀಡಿತು ಎಂದು ಅನಿವಾಸಿ ಭಾರತೀಯ, ಸಮಾಜ ಸೇವಕ ಪ್ರವೀಣ್ ಶೆಟ್ಟಿ ಪಿಲಾರು ಮೇಗಿನಮನೆ ಹೇಳಿದರು.
ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ನಡೆದ "ತಿಂಗಳ ಬೆಳಕು- ಸೌಹಾರ್ದ ದೀಪಾವಳಿ" ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಬಾಲ್ಯದ ಸಂಕಷ್ಟ ದಿನಗಳಲ್ಲಿ ಪೋಷಕರೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸುವುದರೊಂದಿಗೆ ಉದ್ಯೋಗವನ್ನೂ ಮಾಡಿದ್ದೇನೆ. ಅಂದು ಶ್ರಮ ಪಟ್ಟು ಬೆವರು ಹರಿಸಿದ ಪರಿಣಾಮ ಇಂದು ಈ ಹಂತಕ್ಕೆ ಬರಲು ಸಾಧ್ಯವಾಗಿದೆ. ಕೊರೊನಾ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಿ ಬಿಲ್ ಕಟ್ಟಲು ಸಾಧ್ಯವಾಗದವರು, ಊಟಕ್ಕೆ ರೇಷನ್ ಇಲ್ಲದೆ ಸಂಕಷ್ಟ ಪಡುತ್ತಿದ್ದವರ ಬಗ್ಗೆ ಉಳ್ಳಾಲದ ಪತ್ರಕರ್ತರೂ ನನಗೆ ಮಾಹಿತಿ ನೀಡಿದ್ದು ಅವರ ಮುಖೇನ ಅಶಕ್ತ ವರ್ಗದವರಿಗೆ ಸಹಾಯ ಮಾಡಿದ್ದೇನೆ. ಆಮೂಲಕ ನಾನು ಮಾಡಿರುವ ಸೇವೆಗೆ ಪತ್ರಕರ್ತರೂ ಸ್ಫೂರ್ತಿಯಾಗಿದ್ದಾರೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ ಹರೇಕಳ ಮಾತನಾಡಿ ನಂಬಿಕೆಯ ಕ್ರಿಯಾತ್ಮಕ ರೂಪವೇ ಆಚರಣೆಯಾಗಿದೆ. ನಂಬಿಕೆಯ ನೆಲೆಗಟ್ಟಿನಲ್ಲೇ ಹಬ್ಬಗಳ ಆಚರಣೆಗಳು ನೆಲೆನಿಂತಿದೆ. ಇಂದು ಸಮಾಜವು ಆಧುನಿಕವಾಗಿ ಬೆಳೆಯುತ್ತಿದ್ದರೂ, ಜನರಲ್ಲಿ ಆತ್ಮಜ್ಞಾನ ಅನ್ನುವಂತದ್ದು ಬೆಳೆದಿಲ್ಲ. ಕತ್ತಲೆಯಿಂದ ಬೆಳಕಿನ ಕಡೆಗೆ ಕೊಂಡೊಯ್ಯುವ ದೀಪಾವಳಿ ಹಬ್ಬದ ಆಚರಣೆಯಲ್ಲಿ ಪ್ರೆಸ್ ಕ್ಲಬ್ ವತಿಯಿಂದ ಸಾಧಕರನ್ನು ಗುರುತಿಸಿದ ಕಾರ್ಯವು ಸಂಸ್ಕಾರಯುತ ಕಾರ್ಯಕ್ರಮವಾಗಿದೆ ಎಂದರು.
ಹೊರನಾಡ ಕನ್ನಡಿಗ, ಸಮಾಜಸೇವಕ ಪ್ರವೀಣ್ ಶೆಟ್ಟಿ ಪಿಲಾರ್ ಮೇಗಿನ ಮನೆ, ಇಸ್ಮಾಯಿಲ್ ಕಣಂತೂರು ಬಾಳೆಪುಣಿ, ರೀಚಲ್ ಫೌಂಡೇಷನ್ ಸ್ಥಾಪಕಾಧ್ಯಕ್ಷ ಸಿರಿಲ್ ರಾಬರ್ಟ್ ಡಿಸೋಜ ಸೇರಿದಂತೆ ಮೂವರು ಸಾಧಕರನ್ನು ಉಳ್ಳಾಲ ಪ್ರೆಸ್ ಕ್ಲಬ್ ವತಿಯಿಂದ ಗೌರವಿಸಲಾಯಿತು.
ಸಮಾಜಸೇವೆಗೆ ನನ್ನ ತಾಯಿಯೇ ಪ್ರೇರಣೆ. ಗ್ರೂಪ್ ಡಿ ಸರಕಾರಿ ನೌಕರನಾಗಿದ್ದಾಗಲೇ ಬಹುಪಾಲು ಸಮಯವನ್ನ ಸಮಾಜಸೇವೆಗೆ ವ್ಯಯಿಸಿದ್ದೇನೆ. ಇದೀಗ ನಿವೃತ್ತನಾದ ನಂತರವೂ ಸಂಘಟನೆಗಳಲ್ಲಿ ತೊಡಗಿಸಿ ಅಶಕ್ತರ ಧ್ವನಿಯಾಗಲು ಬಯಸಿದ್ದೇನೆ. ಶಿವಾಜಿ ಫ್ರೆಂಡ್ಸ್ ಕ್ಲಬ್ ಸಂಘವು ನನ್ನ ಬೆನ್ನೆಲುಬಾಗಿ ನಿಂತು ಕಬಡ್ಡಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಯಿತು ಎಂದು ಸನ್ಮಾನಿತ ಸಮಾಜ ಸೇವಕ ಸಿರಿಲ್ ರಾಬರ್ಟ್ ಡಿಸೋಜ ಹೇಳಿದರು.
ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್.ಕೊಣಾಜೆ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಬಶೀರ್ ಕಲ್ಕಟ್ಟ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶಶಿಧರ್ ಪೊಯ್ಯತ್ತಬೈಲ್ ನಿರೂಪಿಸಿದರು. ಉಪಾಧ್ಯಕ್ಷ ದಿನೇಶ್ ನಾಯಕ್ ಪಿಲಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷ ಆರೀಫ್ ಯು.ಆರ್, ಕಾರ್ಯದರ್ಶಿ ಡಾ.ಸತೀಶ್ ಕೊಣಾಜೆ, ಪತ್ರಕರ್ತ ಸತೀಶ್ ಪುಂಡಿಕಾಯಿ ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯದರ್ಶಿ ವಜ್ರ ಗುಜರನ್ ವಂದಿಸಿದರು.
ಪತ್ರಕರ್ತರಾದ ಸುಪ್ರೀತ್ ಭಂಡಾರಿ, ಆಸೀಫ್ ಬಬ್ಬುಕಟ್ಟೆ, ಶಿವಶಂಕರ್ ಕಿದೂರು, ಮೋಹನ್ ಕುತ್ತಾರ್, ಅನ್ಸಾರ್ ಇನೋಳಿ, ಅಶ್ವಿನ್ ಕುತ್ತಾರು, ಗಂಗಾಧರ್ ನೀರಾರಿ ಮೊದಲಾದವರು ಉಪಸ್ಥಿತರಿದ್ದರು.
Mangalore Ullal press club celebrates deepavali, achievers faciliated. Importantly NRI social activist Praveen Shetty pilar was faciliated by Press Club members of Ullal.
07-11-24 06:49 pm
Bangalore Correspondent
Waqf bill, Hubballi, Farmers: ವಕ್ಫ್ ವಿವಾದಕ್ಕೆ...
07-11-24 06:17 pm
Karkala, Naxals: ರಾಜ್ಯದ ಮೊದಲ ನಕ್ಸಲ್ ಎನ್ಕೌಂಟರ್...
07-11-24 04:24 pm
Salman Khan, Haveri arrest, Death threat: ನಟ...
06-11-24 10:51 pm
BMTC bus conductor heart attack, video viral:...
06-11-24 09:31 pm
06-11-24 03:35 pm
HK News Desk
ತಮಿಳುನಾಡಿನಲ್ಲಿ ಇಡೀ ಗ್ರಾಮವನ್ನೇ ತನ್ನದೆಂದ ವಕ್ಫ್...
05-11-24 03:30 pm
Edneer Math Swamiji, Attack, Kasaragod: ಎಡನೀರ...
05-11-24 11:41 am
ಹೊಟ್ಟೆ ನೋವೆಂದು ಬಂದಿದ್ದ 15 ವರ್ಷದ ಬಾಲಕನ ಹೊಟ್ಟೆಯ...
04-11-24 03:28 pm
ನೀಲೇಶ್ವರ ಕಳಿಯಾಟ ಉತ್ಸವದಲ್ಲಿ ಸುಡುಮದ್ದು ಸ್ಫೋಟ ;...
04-11-24 12:55 pm
07-11-24 07:46 pm
Mangalore Correspondent
Ivan Dsouza Congress, Mangalore: ಮುಖ್ಯಮಂತ್ರಿ...
07-11-24 07:41 pm
Mangalore Ullal Press club, Deepavali: ಉಳ್ಳಾಲ...
07-11-24 07:27 pm
Modi, PM-Vidyalakshmi scheme, Brijesh Chowta:...
07-11-24 05:31 pm
Bantwal Mangalore Accident, girl dies: ಬಂಟ್ವಾ...
07-11-24 01:02 pm
06-11-24 09:11 pm
HK News Desk
Bangalore crime, Jayadeva Hospital: ಪ್ರತಿಷ್ಠಿ...
06-11-24 11:50 am
Lakshmi Hebbalkar, Somu, Belagavi Suicide; ಸಚ...
05-11-24 10:22 pm
Hassan Murder, police constable: ಹಾಸನ ; ಹಸೆಮಣ...
05-11-24 05:05 pm
Bantwal temple robbery, Mangalore crime; ಬಂಟ್...
05-11-24 12:50 pm