ಬ್ರೇಕಿಂಗ್ ನ್ಯೂಸ್
07-11-24 07:41 pm Mangalore Correspondent ಕರಾವಳಿ
ಮಂಗಳೂರು, ನ.7: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನೆಲದ ಕಾನೂನಿಗೆ ಗೌರವ ಕೊಟ್ಟು ಲೋಕಾಯುಕ್ತ ಸೂಚನೆಯಂತೆ ಕಚೇರಿಗೆ ತೆರಳಿ ಒಂದೂವರೆ ಗಂಟೆ ವಿಚಾರಣೆ ಎದುರಿಸಿದ್ದಾರೆ. ಆದರೆ, ಮುಖ್ಯಮಂತ್ರಿ ವಿಚಾರಣೆ ಎದುರಿಸಿ ಬಂದಿದ್ದನ್ನೇ ಬಿಜೆಪಿಯವರು ಗೇಲಿ ಮಾಡುತ್ತಿದ್ದಾರೆ, ಬಿಜೆಪಿ ನಾಯಕರ ಈ ರೀತಿಯ ನಡೆಯನ್ನು ಖಂಡಿಸುತ್ತೇನೆ. ಈ ಹಿಂದೆ ಹೈಕೋರ್ಟ್ ತೀರ್ಪಿನಂತೆ ವಿಚಾರಣೆ ಎದುರಿಸಲಿ ಎನ್ನುತ್ತಿದ್ದವರು ಈಗ ನಾಟಕ ಎನ್ನುತ್ತಿರುವುದೇಕೆ, ಇವರಿಗೆ ನಮ್ಮ ತನಿಖಾ ತಂಡಗಳ ಮೇಲೆ ನಂಬಿಕೆ ಇಲ್ಲವೇ ಎಂದು ಕಾಂಗ್ರೆಸ್ ಮುಖಂಡ ಎಂಎಲ್ಸಿ ಐವಾನ್ ಡಿಸೋಜ ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಈ ಹಿಂದೆ 2011ರಲ್ಲಿ ಯಡಿಯೂರಪ್ಪ ಲೋಕಾಯುಕ್ತ ಕೇಸು ಎದುರಿಸಿದಾಗ, ವಿಚಾರಣೆಗೆ ಹಾಜರಾಗಿಲ್ಲವೇ, ಅವರೇನಾದರೂ ರಾಜಿನಾಮೆ ಕೊಟ್ಟಿದ್ದರೇ. ಈಗ ಯಾಕೆ ಇವರು ರಾಜಿನಾಮೆ ಕೇಳುತ್ತಿದ್ದಾರೆ. ಮೊನ್ನೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಲೋಕಾಯುಕ್ತ ವಿಚಾರಣೆ ಎದುರಿಸಿಲ್ಲವೇ, ಅವರೇನಾದರೂ ರಾಜಿನಾಮೆ ಕೊಟ್ಟು ಹೋಗಿದ್ದರೇ ಎಂದು ಪ್ರಶ್ನೆ ಮಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮೇಲೆ 13 ಕೇಸು ದಾಖಲಾಗಿಲ್ಲವೇ, ಇವರು ಕೂಡ ವಿಚಾರಣೆ ಎದುರಿಸಲೇಬೇಕಲ್ವಾ.. ತಾವು ಸಾಚನಾಗಿ ತೋರಿಸಿ ಇನ್ನೊಬ್ಬರನ್ನು ಹೀಯಾಳಿಸುವುದು ಬಿಜೆಪಿಯವರ ಚಾಳಿ. ನೀವು ಎಷ್ಟು ಮಂದಿ ಮುಖ್ಯಮಂತ್ರಿಗಳನ್ನು ಜೈಲಿಗೆ ಕಳುಹಿಸಿಲ್ಲ. ಎಷ್ಟು ಮಂದಿ ಮುಖ್ಯಮಂತ್ರಿಗಳು ಜೈಲಿನಲ್ಲಿದ್ದುಕೊಂಡೇ ಅಧಿಕಾರ ನಡೆಸಿಲ್ಲ. ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟರೂ ಗಂಡಾಂತರದಿಂದ ತಪ್ಪಿಸಿಕೊಳ್ಳಲು ಆಗಲ್ಲ ಅಂತೀರಿ. ನಿಮಗೆ ಸಿಬಿಐ, ಇಡಿ ಬಗ್ಗೆ ಮಾತ್ರ ನಂಬಿಕೆಯೇ, ರಾಜ್ಯದ ತನಿಖಾ ತಂಡಗಳ ಬಗ್ಗೆ, ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ನಂಬಿಕೆ ಇಲ್ಲವೇ ಎಂದು ಪ್ರಶ್ನಿಸಿದರು.
ವಕ್ಫ್ ವಿಚಾರದಲ್ಲಿ ಅತಿಕ್ರಮಣ ಆಗಿರುವುದನ್ನು ಮರು ವಶ ಮಾಡುತ್ತೇವೆ ಎಂದು ಬಿಜೆಪಿಯವರು ತಮ್ಮ ಪ್ರಣಾಳಿಕೆಯಲ್ಲೇ ಹೇಳಿದ್ದರು ಎಂದು ಅದರ ಪ್ರತಿ ತೋರಿಸಿದ ಐವಾನ್ ಡಿಸೋಜ ಅವರಿಗೆ, ಅತಿಕ್ರಮಣವೇ ಹೌದಾಗಿದ್ದರೆ ರೈತರಿಗೆ ನೋಟಿಸ್ ಕೊಟ್ಟು ಹಿಂಪಡೆದಿದ್ದು ಯಾಕೆ ಎಂದು ಪತ್ರಕರ್ತರು ಪ್ರಶ್ನೆ ಮಾಡಿದರು. ಅದು ಸರಿ ಎಂದಾದ ಮೇಲೆ ಹಿಂಪಡೆಯುವ ಅಗತ್ಯ ಇಲ್ಲ ತಾನೇ.. ಈಗ ಅತಿಕ್ರಮಣ ಆಗಿರುವುದರಲ್ಲಿ ಬಹುಪಾಲು ಯಾರ ಕೈಯಲ್ಲಿದೆ, ಅವರಿಗೆಲ್ಲ ನೋಟಿಸ್ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು. ಅಲ್ಲದೆ, ಅನ್ವರ್ ಮಾಣಿಪ್ಪಾಡಿ ವರದಿ ಕೊಟ್ಟಿದ್ದನ್ನು ನೀವು ಜಾರಿಗೊಳಿಸುತ್ತೀರಾ ಎಂದು ಪ್ರಶ್ನಿಸಿದಾಗ, ಅದರ ಬಗ್ಗೆ ಪರಿಶೀಲನೆ ಮಾಡುತ್ತೇವೆ, ಬಿಜೆಪಿ ಸರಕಾರ ಇದ್ದಾಗಲೇ ಮಾಣಿಪ್ಪಾಡಿ ವರದಿಯನ್ನು ಸ್ವೀಕರಿಸಿರಲಿಲ್ಲ ಎಂದು ಡಿಸೋಜ ಹೇಳಿದರು.
ಪತ್ರಕರ್ತರ ಪ್ರಶ್ನೆಗೆ ಕಾಂಗ್ರೆಸ್ ನಾಯಕ ತಬ್ಬಿಬ್ಬು
ಇದಕ್ಕೂ ಮುನ್ನ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ಸುದ್ದಿಗೋಷ್ಠಿ ಕರೆದು ವಕ್ಫ್ ವಿಚಾರದಲ್ಲಿ ಬಿಜೆಪಿ ನಾಯಕರು ನಾಟಕ ಮಾಡುತ್ತಿದ್ದಾರೆ, ಬೊಮ್ಮಾಯಿ ಒಂದು ಕಡೆ ಊಪರ್ ವಾಲಾ ಸಾಕ್ಷಿಯಾಗಿ ವಕ್ಫ್ ಆಸ್ತಿ ಅತಿಕ್ರಮಣ ಮರು ವಶ ಮಾಡುತ್ತೇವೆ ಎಂದು ಹೇಳುತ್ತಾರೆ. ಅದೇ ಬಿಜೆಪಿ ಈಗ ಪ್ರತಿಭಟನೆ ಮಾಡಿ, ವಕ್ಫ್ ದೇಶಕ್ಕೆ ಮಾರಕ ಎನ್ನುತ್ತಿದ್ದಾರೆ ಎಂದು ಹೇಳಿದರು. ಅವರಿಗೂ ಪತ್ರಕರ್ತರು ಪ್ರಶ್ನೆಗಳನ್ನು ಹಾಕಿದರು. ವಕ್ಫ್ ಆಸ್ತಿ ಅತಿಕ್ರಮಣ ಎನ್ನುತ್ತೀರಿ, ಅದರಲ್ಲಿ ಅತಿ ಹೆಚ್ಚು ಕಾಂಗ್ರೆಸ್ ನಾಯಕರದ್ದೇ ಅತಿಕ್ರಮಣ ಇದೆಯಲ್ವಾ.. ಇದರ ಬಗ್ಗೆ ಕ್ರಮಕ್ಕೆ ಆಗ್ರಹ ಮಾಡುತ್ತೀರಾ.. ರಾಜ್ಯದಲ್ಲಿ ಒಂದು ಲಕ್ಷ ಎಕರೆಯಲ್ಲಿ 23 ಸಾವಿರ ಎಕ್ರೆ ಇದೆ ಅಂತೀರಿ, ಇದರ ಬಗ್ಗೆ ಸಮಗ್ರ ತನಿಖೆಗೆ ಯಾಕೆ ಒತ್ತಾಯ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಈ ವೇಳೆ, ಶಾಹುಲ್ ಹಮೀದ್ ಕೂಡ ತಬ್ಬಿಬ್ಬಾದರು. ಮಂಗಳೂರಿನಲ್ಲಿ ಎಷ್ಟು ವಕ್ಫ್ ಆಸ್ತಿ ಅತಿಕ್ರಮಣ ಆಗಿದೆ, ನಿಮಗೆ ಲೆಕ್ಕ ಇದೆಯೇ,, ಬಿಜೆಪಿ ನಾಯಕರ ಶಾಮೀಲಾತಿ ಇದ್ದರೂ ನೀವು ಯಾಕೆ ಸುಮ್ಮನಿದ್ದೀರಿ ಎಂದು ಪ್ರಶ್ನೆ ಎದುರಾಯ್ತು.
MLC Ivan D'Souza criticized the BJP for being an ineffective opposition in Karnataka, labelling their actions as disappointing holding press meet at congress office in Mangalore.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 04:38 pm
Mangalore Correspondent
India’s Largest Job Fair ‘Alva’s Pragati 2025...
26-07-25 11:37 am
Congress, Mangalore: ಸಿದ್ದರಾಮಯ್ಯ ಆಡಳಿತದಲ್ಲೇ ದ...
26-07-25 10:44 am
Dharmasthala Case, SIT Meeting, Anucheth, Jit...
25-07-25 08:25 pm
DIG Anucheth Mangalore, SIT Dharmasthala: ಎಸ್...
25-07-25 06:05 pm
24-07-25 10:38 pm
Bangalore Correspondent
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm
Udupi Police, Chaddi Gang: ಉಡುಪಿಗೆ ಎಂಟ್ರಿ ಕೊಟ...
23-07-25 11:36 am