ಬ್ರೇಕಿಂಗ್ ನ್ಯೂಸ್
12-12-20 05:37 pm Mangalore Correspondent ಕರಾವಳಿ
ಮಂಗಳೂರು, ಡಿ.12: ತುಳುನಾಡಿನ ವೀರಪುರುಷರಾದ ಕೋಟಿ ಚೆನ್ನಯರ ಜನ್ಮಸ್ಥಾನ ಪಡುಮಲೆಯೇ ಹೊರತು ಗೆಜ್ಜೆಗಿರಿ ಅಲ್ಲ. ಗೆಜ್ಜೆಗಿರಿಯನ್ನು ಮೂಲಸ್ಥಾನ ಎಂದು ಬಿಂಬಿಸಿ ಕೆಲವರು ಗುಂಪು ಕಟ್ಟಿಕೊಂಡು ಬಿಲ್ಲವ ಸಮುದಾಯಕ್ಕೆ ಮೋಸ ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ಸಂಗ್ರಹಿಸಿ, ಯಾರದ್ದೋ ಹೊಟ್ಟೆ ತುಂಬಿಸಿದ್ದಾರೆ. ಮೂಲಸ್ಥಾನ ಕತ್ತಲಲ್ಲೇ ಇದ್ದು ಅದರ ನವೀಕರಣಕ್ಕೆ ಈಗ ಸಿದ್ಧತೆ ನಡೆಸಲಾಗುತ್ತಿದೆ ಎಂದು ಕೋಟಿ ಚೆನ್ನಯ ಜನ್ಮಸ್ಥಾನ ಜೀರ್ಣೋದ್ಧಾರ ಸಂಚಲನ ಸಮಿತಿಯ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಹರಿಕೃಷ್ಣ ಬಂಟ್ವಾಳ್, ಕೋಟಿ ಚೆನ್ನಯರ ಬಗ್ಗೆ ಜನಪದರ ಪಾರ್ದನದಲ್ಲಿ ಉಲ್ಲೇಖವಾಗಿರುವ ಅಂಶಗಳು, ಬ್ರಿಟಿಷರ ಕಾಲದಲ್ಲಿ ಆಗಸ್ಟ್ ಮೆನ್ನರ್, ಹರ್ಮನ್ ಮೊಗ್ಲಿಂಗ್ ಬರೆದಿರುವ ಕೃತಿಗಳು, 1937ರಲ್ಲಿ ಬರೆದ ಪಂಜೆ ಮಂಗೇಶರಾಯರ ಕೋಟಿ ಚೆನ್ನಯರ ಅಧ್ಯಯನ ಗ್ರಂಥ, 1983ರಲ್ಲಿ ಬನ್ನಂಜೆ ಬಾಬು ಅಮೀನ್ ಸಂಪಾದಕತ್ವದಲ್ಲಿ ಹೊರತಂದ ಕೋಟಿಚೆನ್ನಯರ ಕುರಿತ ಅಧ್ಯಯನ ಗ್ರಂಥ ಮುಂದಿಟ್ಟು ವಿವರಣೆ ನೀಡಿದರು.
ಇವೆಲ್ಲ ಕೃತಿಗಳಲ್ಲಿ ಕೋಟಿ ಚೆನ್ನಯರ ಜನ್ಮಸ್ಥಾನ ಪಡುಮಲೆ ಅಂತಲೇ ಇದೆ. ಎಲ್ಲಿಯೂ ಗೆಜ್ಜೆಗಿರಿಯಾಗಲೀ, ನಂದನಬಿತ್ತಿಲ್ ಆಗಲೀ ಉಲ್ಲೇಖ ಇಲ್ಲ. ಕೃತಿಗಳು ಮತ್ತು ತುಳು ಪಾರ್ದನಗಳಲ್ಲಿ ಉಲ್ಲೇಖವಾದಂತೆ ಪಡುಮಲೆಯಲ್ಲಿ ಈಗಲೂ ದೈಯಿ ಬೈದ್ಯತಿ ಸಮಾಧಿ ಸ್ಥಳ ಇದೆ. ಕೋಟಿ ಚೆನ್ನಯರ ಬದುಕಿ ಬಾಳಿರುವುದಕ್ಕೆ ಅನೇಕ ಉಲ್ಲೇಖಗಳಿವೆ. ಅವರು ಈಜಾಡುತ್ತಿದ್ದ ಕೆರೆ, ಕೃಷಿ ಮಾಡಿದ್ದ ಗದ್ದೆಗಳು, ಕುತಂತ್ರಿ ಮಂತ್ರಿ ಬುದ್ಯಂತನನ್ನು ಕೊಂದ ಜಾಗ, ದೈಯಿ ಬೈದೆತಿ ಹುಟ್ಟಿದ ಕೂವೆತ್ತೊಟ್ಟಿನ ಮನೆ, ಕೋಟಿ ಚೆನ್ನಯರ ಕಾಲದ ಪಡುಮಲೆಯ ಧರ್ಮಚಾವಡಿ, ಪಂಜದಲ್ಲಿ ಕಿನ್ನಿದಾರು- ಪಯ್ಯ ಬೈದ್ಯರ ಮನೆ, ಎಣ್ಮೂರಿನಲ್ಲಿರುವ ಕೋಟಿ ಚೆನ್ನಯರ ಸಮಾಧಿ ಹೀಗೆ ಎಲ್ಲವೂ ಅಲ್ಲೇ ಇವೆ ಎಂದು ಹೇಳಿದರು.
ಕೋಟಿ ಚೆನ್ನಯರು ಒಂದು ಸಮುದಾಯಕ್ಕೆ ಸೀಮಿತರಲ್ಲಿ. ಅವರ ಹೆಸರಲ್ಲಿ ತುಳುನಾಡಿನಲ್ಲಿ 150ಕ್ಕೂ ಹೆಚ್ಚು ಗರಡಿಗಳಿವೆ. ಬಂಟರು, ಜೈನರು, ಬಿಲ್ಲವರು ಹೀಗೆ ಎಲ್ಲ ಸಮುದಾಯದವರೂ ಗರಡಿಗಳನ್ನು ಹೊಂದಿದ್ದಾರೆ. ಕೋಟಿ ಚೆನ್ನಯರನ್ನು ಎಲ್ಲರೂ ಆರಾಧಿಸುತ್ತಾರೆ. ಈಗ ಜನ್ಮಸ್ಥಾನದ ಜಾಗ ಚಿತ್ರನಟ ವಿನೋದ್ ಆಳ್ವರಲ್ಲಿದ್ದು, ಉಚಿತವಾಗಿ ಕೊಡಲು ಮುಂದೆ ಬಂದಿದ್ದಾರೆ. ಹಾಗೆಯೇ ಎಣ್ಮೂರು ಸೇರಿ ಬೇರೆ ಬೇರೆ ಕಡೆ ಇರುವ ಕೋಟಿ ಚೆನ್ನಯರ ಗದ್ದೆ, ಸಮಾಧಿ ಸ್ಥಳಗಳು, ಕೆರೆ ಇರುವ ಜಾಗಗಳನ್ನು ಅಲ್ಲಿನ ಭೂಮಿ ಹಕ್ಕುದಾರರು ಉಚಿತವಾಗೇ ಕೊಡುತ್ತಿದ್ದಾರೆ. ಪಡುಮಲೆ ಕ್ಷೇತ್ರ ಮುಂದೆ ಶಬರಿಮಲೆಯ ರೀತಿ ಅಭಿವೃದ್ಧಿಯಾಗಿ ಬೆಳಗಬೇಕು. ಈ ದೇಶದ ಆಸ್ತಿಯಾಗಬೇಕು. ಅದಕ್ಕಾಗಿ ನಾವು ಟ್ರಸ್ಟ್ ಮಾಡಿ ಒಂದೊಂದೇ ಜಾಗವನ್ನು ಪಡೆಯುತ್ತಿದ್ದೇವೆ. ಜನವರಿ 14ರಂದು ಮೊದಲ ಬಾರಿಗೆ ಪೂಜೆ ಸಾಮುದಾಯಿಕವಾಗಿ ಪೂಜೆ ನಡೆಸುತ್ತೇವೆ ಎಂದು ಹೇಳಿದರು.
ಗೆಜ್ಜೆಗಿರಿ ಹೆಸರಲ್ಲಿ 13 ಕೋಟಿ ಹಗರಣ !
ಗೆಜ್ಜೆಗಿರಿ ನಂದನ್ ಬಿತ್ತಿಲ್ ಹೆಸರಲ್ಲಿ ಬಿಲ್ಲವ ಸಮಾಜದಲ್ಲಿ 13 ಕೋಟಿ ರೂಪಾಯಿ ಸಂಗ್ರಹ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಕನಿಷ್ಠ ಅಲ್ಲಿನ ತಳಪಾಯದ ಜಾಗವನ್ನೂ ಅವರ ಟ್ರಸ್ಟ್ ಗೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಶ್ರೀಧರ ಪೂಜಾರಿ ಎಂಬವರ ಹೆಸರಲ್ಲಿ ಗೆಜ್ಜೆಗಿರಿ ಕ್ಷೇತ್ರದ ಜಾಗ ಇದ್ದು, ಅಲ್ಲೀಗ ಅವರ ನಡುವಲ್ಲೇ ಜಗಳ ಶುರುವಾಗಿದೆ. ಕಂಕನಾಡಿಯ ಚಿತ್ತರಂಜನ್ ಪೂಜಾರಿ ಆರಂಭದಲ್ಲಿ ಅಧ್ಯಕ್ಷರಾಗಿದ್ದರು. ಸಮಿತಿ ಸದಸ್ಯರ ನಡುವಿನ ಕಲಹ ನೋಡಿ ಹೊರಬಂದಿದ್ದಾರೆ. ಗೆಜ್ಜೆಗಿರಿಯನ್ನು ಮೂಲಸ್ಥಾನ ಎಂದು ಬಿಂಬಿಸಿ ಬಿಲ್ಲವ ಸಮುದಾಯಕ್ಕೆ ಮತ್ತು ತುಳುವ ಸಮಾಜಕ್ಕೆ ಮೋಸ ಮಾಡಿದ್ದಾರೆ. 13 ಕೋಟಿ ಸಂಗ್ರಹ ಮಾಡಿದ್ದರೆ, ಅಷ್ಟು ಖರ್ಚು ಅಲ್ಲಿ ಆಗಿದೆಯೇ ಎಂಬುದನ್ನು ಯಾರಾದ್ರೂ ಇಂಜಿನಿಯರ್ ಹೇಳಲಿ. ಇದು ಕೋಟಿ ಚೆನ್ನಯರಿಗೆ ಮಾಡಿದ ಅವಮಾನ. ಕೋಟಿ ಚೆನ್ನಯರ ಹೆಸರಲ್ಲಿ ಕೆಲವರು ಸೇರಿಕೊಂಡು ಹಣ ಲೂಟಿ ಮಾಡಿದ್ದಾರೆ ಎಂದು ಹರಿಕೃಷ್ಣ ಬಂಟ್ವಾಳ್ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜನ್ಮಸ್ಥಾನ ಸಮಿತಿಯ ಗೌರವಾಧ್ಯಕ್ಷ ವಿನೋದ್ ಆಳ್ವ, ಮಾಜಿ ಶಾಸಕ ರುಕ್ಮಯ ಪೂಜಾರಿ, ವಿಜಯಕುಮಾರ್ ಸೊರಕೆ, ವೇದನಾಥ ಸುವರ್ಣ, ಶ್ರೀಧರ್ ಪಟ್ಲ, ಶೇಖರ್ ನಾರಾವಿ ಉಪಸ್ಥಿತರಿದ್ದರು.
Video:
BJP leader Harikrishna Bantwal's makes a statement over the birthplace of Koti-Chennayya, Harikrishna Bantwal on Saturday, December 12 said that the twin legendary heroes of Tulunadu Koti-Chennayya were born in Padumale, not in Gejjegiri.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm