ಬ್ರೇಕಿಂಗ್ ನ್ಯೂಸ್
11-11-24 12:57 pm Udupi Correspondent ಕರಾವಳಿ
ಉಡುಪಿ, ನ.11: ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ವಿವಾದಕ್ಕೆ ಸಂಬಂಧಿಸಿ ಕಡೆಗೂ ನಕಲಿ ಮೂರ್ತಿ ತಯಾರಿಸಿದ ಶಿಲ್ಪಿ ಕೃಷ್ಣ ನಾಯಕ್ ಅವರನ್ನು ಬಂಧಿಸಲಾಗಿದೆ. ಉಡುಪಿ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಬೆನ್ನಲ್ಲೇ ಕಾರ್ಕಳ ನಗರ ಠಾಣೆ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೇಂದ್ರಾಡಳಿತ ಪ್ರದೇಶ ಮಾಹೆಯಲ್ಲಿ ಬಂಧಿಸಿದ್ದಾರೆ.
ಕಾರ್ಕಳ ಶಾಸಕ ಸುನಿಲ್ ಕುಮಾರ್ ಮುತುವರ್ಜಿಯಲ್ಲಿ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಿಸಲಾಗಿತ್ತು. 11 ಕೋಟಿ ವೆಚ್ಚದ ಯೋಜನೆಯಲ್ಲಿ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕಳೆದ ಅಸೆಂಬ್ಲಿ ಚುನಾವಣೆಗೂ ಮುನ್ನ ತರಾತುರಿಯಲ್ಲಿ ಥೀಮ್ ಪಾರ್ಕನ್ನು ಉದ್ಘಾಟನೆ ಮಾಡಲಾಗಿತ್ತು. ಶಾಸಕರ ಸೂಚನೆಯಂತೆ, ಉಡುಪಿ ನಿರ್ಮಿತಿ ಕೇಂದ್ರದವರು ಅರೆಬರೆ ಕಾಮಗಾರಿ ನಡೆಸಿ ಯೋಜನೆ ಲೋಕಾರ್ಪಣೆಗೆ ಬಿಟ್ಟು ಕೊಟ್ಟಿದ್ದರು.
ಉದ್ಘಾಟನೆಗೊಂಡ ಎರಡೇ ತಿಂಗಳಲ್ಲಿ ಥೀಮ್ ಪಾರ್ಕ್ ವಿವಾದಕ್ಕೀಡಾಗಿದ್ದು ನಕಲಿ ಪರಶುರಾಮನ ಮೂರ್ತಿಯೆಂದು ಗುಲ್ಲು ಎದ್ದಿತ್ತು. ಕಾಂಗ್ರೆಸ್ ಕಾರ್ಯಕರ್ತರು ಮೂರ್ತಿಯನ್ನು ಒಡೆದು ತೋರಿಸಿ, ಇದು ಕಂಚಿನದ್ದಲ್ಲ, ಫೈಬರ್ ಮೂರ್ತಿಯೆಂದು ವಿಡಿಯೋ ಮಾಡಿದ್ದು ಶಾಸಕ ಸುನಿಲ್ ಕುಮಾರ್ ಗೆ ಮಂಗಳಾರತಿ ಮಾಡಿದಂತಾಗಿತ್ತು. ಬಳಿಕ ಮೂರ್ತಿಯನ್ನು ಅರ್ಧಕ್ಕೆ ತೆರವುಗೊಳಿಸಿ, ಥೀಮ್ ಪಾರ್ಕ್ ಎಂಟ್ರಿಯನ್ನೇ ಸ್ಥಗಿತಗೊಳಿಸಲಾಗಿತ್ತು. ಬುಡದಲ್ಲಿ ಮಾತ್ರ ಉಳಿಸಿಕೊಂಡು ಮೇಲ್ಭಾಗದಲ್ಲಿ ಎಬ್ಬಿಸಿದ್ದು ಮೊದಲಿದ್ದ ಮೂರ್ತಿ ನಕಲಿ ಎನ್ನುವುದಕ್ಕೆ ಸಾಕ್ಷಿಯಾಗಿತ್ತು. ತೀವ್ರ ರಾಜಕೀಯ ಗೊಂದಲ ಎದ್ದಿದ್ದರೂ, ರಾಜ್ಯ ಕಾಂಗ್ರೆಸ್ ಸರಕಾರ ಪರಿಶೀಲನೆಗೆ ಮುಂದಾಗದೆ ಒಟ್ಟು ಘಟನೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಶಾಸಕ ಸುನಿಲ್ ಕುಮಾರ್ ಅವರನ್ನು ಪಾರು ಮಾಡುವ ಯತ್ನವೂ ನಡೆದಿತ್ತು. ಇದರಿಂದಾಗಿ ಕಾರ್ಕಳ ಕಾಂಗ್ರೆಸಿಗರ ಹೋರಾಟ ವ್ಯರ್ಥ ಪ್ರಲಾಪ ಎನ್ನುವಂತಾಗಿತ್ತು. ಈ ನಡುವೆ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಂದು ಪರಿಶೀಲನೆಯ ಭರವಸೆ ನೀಡಿದರೂ, ಯಾವುದೇ ಪರಿಣಾಮ ಬೀರಿರಲಿಲ್ಲ.
ಕೃಷ್ ಆರ್ಟ್ ಸಂಸ್ಥೆಯ ಶಿಲ್ಪಿ ಕೃಷ್ಣ ನಾಯಕ್ ಪರಶುರಾಮನ ಕಂಚಿನ ಮೂರ್ತಿ ತಯಾರಿಗೆಂದು ಉಡುಪಿ ನಿರ್ಮಿತಿ ಕೇಂದ್ರದಿಂದ 1.25 ಕೋಟಿ ರೂಪಾಯಿ ಹಣ ಪಡೆದುಕೊಂಡಿದ್ದರು ಎನ್ನಲಾಗಿದೆ. ಆದರೆ ಕಂಚಿನ ವಿಗ್ರಹ ತಯಾರಿಸದೆ ನಕಲಿ ಮೂರ್ತಿ ನಿರ್ಮಿಸಿಕೊಟ್ಟು ಸರಕಾರಕ್ಕೆ ವಂಚನೆ ಎಸಗಿದ್ದಾರೆಂದು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರಿಂದ ಪ್ರಕರಣ ಮೂಲ ಪಾತ್ರಧಾರಿ ಶಿಲ್ಪಿಯ ಕೊರಳು ಸುತ್ತಿಕೊಂಡಿದ್ದರಿಂದ, ಇದರಲ್ಲಿ ತನ್ನದೇನೂ ತಪ್ಪಿಲ್ಲ ಎಂದು ಹೈಕೋರ್ಟಿಗೆ ಅರ್ಜಿ ಸಲ್ಲಿಸಿ ಪ್ರಕರಣ ರದ್ದು ಪಡಿಸಲು ಮುಂದಾಗಿದ್ದರು. ಆದರೆ ಹೈಕೋರ್ಟ್ ಅರ್ಜಿ ವಜಾಗೊಳಿಸಿದ್ದಲ್ಲದೆ, ಕಂಚಿನ ಪ್ರತಿಮೆ ಅಲ್ಲ ಎಂದ ಮೇಲೆ ನೀವು ಹೇಗೆ ಮೂರ್ತಿ ನಿರ್ಮಿಸಿದ್ರಿ ಎನ್ನುವ ಬಗ್ಗೆ ತನಿಖೆ ಆಗಬೇಕಲ್ಲವೇ..? ಸರಕಾರದ ದುಡ್ಡು ಹೊಡೆದಿದ್ದಕ್ಕೆ ಯಾರು ಜವಾಬ್ದಾರಿ ಎಂದು ಪ್ರಶ್ನೆ ಮಾಡಿತ್ತು.
ಅ.21ರಂದು ಹೈಕೋರ್ಟ್ ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ನಿರೀಕ್ಷಣಾ ಜಾಮೀನು ಕೋರಿ ಶಿಲ್ಪಿ ಕೃಷ್ಣ ನಾಯಕ್, ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲಿಯೂ ಜಾಮೀನು ಸಿಗದ ಕಾರಣ ಕಾರ್ಕಳ ಪೊಲೀಸರು ಇದೀಗ ಶಿಲ್ಪಿಯನ್ನು ಬಂಧಿಸಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ನಡುವೆ, ಎಬ್ಬಿಸಲಾದ ಪರಶುರಾಮನ ವಿಗ್ರಹದ ಭಾಗಗಳನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆಯಲಾಗಿದ್ದು, ಅವನ್ನು ಕಾರ್ಕಳ ನಗರ ಠಾಣೆಯಲ್ಲಿ ಇರಿಸಲಾಗಿದೆ. ಸೊಂಟದ ಕೆಳಗಿನ ಭಾಗ ಥೀಮ್ ಪಾರ್ಕ್ ನಲ್ಲೇ ಇದ್ದರೆ, ಮೇಲ್ಭಾಗವನ್ನು ನಿರ್ಮಿತಿ ಕೇಂದ್ರದವರೇ ಕಾಮಗಾರಿ ಸಲುವಾಗಿ ಎಬ್ಬಿಸಿದ್ದರು. 2023ರ ಅ.13ರಂದು ರಾತ್ರೋರಾತ್ರಿ ಶಾಸಕ ಸುನಿಲ್ ಕುಮಾರ್ ಉಸ್ತುವಾರಿಯಲ್ಲೇ ಪೊಲೀಸರ ಸರ್ಪಗಾವಲಿನೊಂದಿಗೆ ವಿಗ್ರಹವನ್ನು ತೆರವು ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ನಕಲಿ ಮೂರ್ತಿ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿದ್ದು, ಇದೀಗ ಶಿಲ್ಪಿ ಬಂಧನ ಆಗುವುದರೊಂದಿಗೆ ಪೊಲೀಸರು ಸೂಕ್ತ ತನಿಖೆ ನಡೆಸಿದರೆ ಇದಕ್ಕೆಲ್ಲ ಉತ್ತರ ಸಿಗಬಹುದು.
Krishna Nayak, The sculptor of the controversial Parashurama statue which was installed in the Parashurama Theme Park at Bailur in Karkala, has been arrested in Kerala. The arrest followed the rejection of the bail petition of Nayak in the Udupi Additional District and Sessions Court.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm